Shivratri 2022; ಶಿವರಾತ್ರಿಯಂದು ಭೇಟಿ ನೀಡಲು ಸೂಕ್ತವಾದ ಬೆಂಗಳೂರಿನ ಶಿವನ ದೇವಸ್ಥಾನಗಳು
TV9 Web | Updated By: ಆಯೇಷಾ ಬಾನು
Updated on:
Feb 28, 2022 | 6:30 AM
ದೇವರ ದೇವ ಮಹಾದೇವ. ಕೈಲಾಸವಾಸಿ, ಸಂಕಟ ಹರ ಶಿವನಿಗೆ ಶಿವರಾತ್ರಿ(Shivratri) ಅತ್ಯಂತ ಪ್ರಿಯವಾದ ದಿನ. ಶಿವಪುರಾಣದ ಪ್ರಕಾರ ಶಿವರಾತ್ರಿಯಂದು ಶಿವನನ್ನು ಪೂಜಿಸುವ ಭಕ್ತರಿಗೆ ಶಿವ ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನಲಾಗಿದೆ. ಅಲ್ಲದೆ ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವೂ ಕೂಡ ಶಿವರಾತ್ರಿಯಂದೇ ಬರುತ್ತದೆ. ಹೀಗಾಗಿ ಶಿವರಾತ್ರಿಯ ವಿಶೇಷ ದಿನದಂದು ಶಿವನ ದೇವಸ್ಥಾನಗಳಿಗೆ(Lord Shiva Temples) ಭೇಟಿ ನೀಡಿ ಶಿವನ ಕೃಪೆಗೆ ಪಾತ್ರರಾಗಲು ಇಲ್ಲಿವೆ ಕೆಲವು ಬೆಂಗಳೂರಿನ ಪ್ರಸಿದ್ಧ ಶಿವ ದೇವಾಲಯಗಳು.
1 / 8
ಹಲಸೂರು ಸೋಮೇಶ್ವರ ದೇವಸ್ಥಾನ(Halasuru Someshwara Temple) ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿರುವ ಹಾಗೂ ಚೋಳರ ಕಾಲದಲ್ಲಿ ನಿರ್ಮಾಣವಾದ ಹಲಸೂರಿನ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಶಿವರಾತ್ರಿ ಉತ್ತಮ ಸಮಯ. ಇದು ಶಿವನಿಗೆ ಸಮರ್ಪಿಸಲಾಗಿರುವ ದೇವಸ್ಥಾನವಾಗಿದ್ದು ಗಣೇಶ, ನಾಗದೇವರು ಸೇರಿದಂತೆ ಇತರೆ ದೇವರುಗಳ ದರ್ಶನ ಮಾಡಬಹುದು. ಶಿವರಾತ್ರಿಯಂದು ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗುತ್ತೆ.
2 / 8
ಗವಿ ಗಂಗಾಧರೇಶ್ವರ ದೇವಸ್ಥಾನ(Gavi Gangadhareshwara Temple) ಗವಿ ಗಂಗಾಧರೇಶ್ವರ ಗವಿಪುರಂನಲ್ಲಿರುವ ಪುರಾತನ ಗುಹಾ ದೇವಾಲಯವಾಗಿದೆ. ಇದು ಶಿವನಿಗೆ ಅರ್ಪಿತವಾದ ದೇವಾಲಯವಾಗಿದ್ದು ಮಕರ ಸಂಕ್ರಾಂತಿ ಹಬ್ಬದ ಸಂಜೆ, ಸೂರ್ಯನ ಬೆಳಕು ನಂದಿ ಪ್ರತಿಮೆಯ ಕೊಂಬಿನ ಮೂಲಕ ಹಾದು ನೇರವಾಗಿ ಲಿಂಗದ ಮೇಲೆ ಬೀಳುತ್ತದೆ. ಈ ಚಮತ್ಕಾರವು ಪ್ರತಿ ವರ್ಷ ಹಬ್ಬದ ದಿನದಂದು ನಡೆಯುತ್ತದೆ. ಶಿವರಾತ್ರಿಯಂದು ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
3 / 8
ಕೆಂಪ್‌ಫೋರ್ಟ್ ಶಿವ ದೇವಾಲಯ(Kempfort Shiva Temple) ಕೆಂಪ್‌ಫೋರ್ಟ್ ಶಿವ ದೇವಾಲಯ ಅಥವಾ ಶಿವೋಹಂ ಶಿವ ದೇವಸ್ಥಾನ 65 ಅಡಿ ಎತ್ತರದ 65 ಅಡಿ ಎತ್ತರದ ಶಿವನ ಮೂರ್ತಿಯಿದೆ. ಈ ಪ್ರತಿಮೆ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಇಲ್ಲಿ ದೊಡ್ಡ ಗಣೇಶನ ವಿಗ್ರಹ ಮತ್ತು ಜ್ಯೋತಿರ್ಲಿಂಗಗಳ ಮಾದರಿಗಳನ್ನು ಸಹ ಇದೆ. ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಇದು ಶಿವರಾತ್ರಿಯಂದು ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಒಂದಾಗಿದೆ.
4 / 8
ದ್ವಾದಶ ಜ್ಯೋತಿರ್ಲಿಂಗ ದೇವಾಲಯ(Sri Dwadasha Jyotirlinga Shiva Temple) ಬೆಂಗಳೂರಿನ ಶ್ರೀನಿವಾಸಪುರದ ಬಳಿ ಓಂಕಾರೇಶ್ವರ ಗುಡ್ಡದಲ್ಲಿ ಈ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಶಿವರಾತ್ರಿಯಂದು ಭೇಟಿ ನೀಡಿ ಮಹಾದೇವನ ದರ್ಶನ ಪಡೆದು ಬರಲು ಉತ್ತಮ ಸ್ಥಳವಾಗಿದೆ. ಇಲ್ಲಿ, ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗ ದೇವಾಲಯಗಳ ಮಾದರಿಯನ್ನು ಹೊಂದಿದೆ. ಇಲ್ಲಿ 12 ಜ್ಯೋತಿರ್ಲಿಂಗ ಹಾಗೂ ಓಂಕಾರೇಶ್ವರ ಜ್ಯೋತಿರ್ಲಿಂಗವಿದೆ.
5 / 8
ಕಾಡು ಮಲ್ಲೇಶ್ವರ ದೇವಾಲಯ(Kadu Malleshwara Temple): ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯ ಸುಮಾರು ಕ್ರಿ.ಶ 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ ಪ್ರಸಿದ್ಧ. ಇದು ಉದ್ಭವ ಲಿಂಗ. ಇಲ್ಲಿ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ, ಅರುಣಾಚಲೇಶ್ವರ, ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ. ನಂದೀಶ್ವರ ತೀರ್ಥ ಈ ದೇವಾಲಯದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ನಂದಿ ಪ್ರತಿಮೆಯ ಬಾಯಿಯಿಂದ ನೀರು ನಿರಂತರವಾಗಿ ಹರಿದು ಲಿಂಗದ ಮೇಲೆ ಬೀಳುತ್ತದೆ. ಈ ನೀರು ವೃಷಭಾವತಿ ನದಿಯ ಮೂಲ ಎಂಬ ನಂಬಿಕೆಯೂ ಇದೆ.
6 / 8
ಬೇಗೂರು ನಾಗನಾಥೇಶ್ವರ ದೇವಾಲಯ(Begur Naganatheshwara Temple): ಪಂಚ ಲಿಂಗೇಶ್ವರ ಎಂದೂ ಕರೆಯಲ್ಪಡುವ ಬೇಗೂರು ನಾಗನಾಥೇಶ್ವರ ದೇವಾಲಯ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ (ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ) ಬೇಗೂರು ಎಂಬ ಹಳ್ಳಿಯಲ್ಲಿದೆ. ಇದನ್ನು ಸುಮಾರು 1300 ವರ್ಷಗಳಷ್ಟು ಪುರಾತನವಾದದ್ದು. ಚೋಳ ವಂಶದ ಮೊದಲನೇಯ ಕುಲಾತುಂಗ ರಾಜಾ ಹಾಗು ತಲಕಾಡ್ ಗಂಗಾ ವಂಶದ ರಾಜಸಿಂಹನಂದಿ ಈ ದೇವಸ್ಥಾನವನ್ನು ಕಟ್ಟಿಸಿದರು. ವಿಶೇಷವೆಂದರೆ ಇಲ್ಲಿ ಪಂಚ ಲಿಂಗಗಳಿವೆ. ಹೀಗಾಗಿ ಇದನ್ನು ಪಂಚಲಿಂಗೇಶ್ವರ ದೇವಾಲಯ ಎಂತಲೂ ಕರೆಯಲಾಗುತ್ತದೆ.
7 / 8
ಕೋಟೆ ಜಲಕಂಠೇಶ್ವರ ದೇವಸ್ಥಾನ(Kote Shree Jalakanteshwara Swamy Temple) ಕೋಟೆ ಜಲಕಂಠೇಶ್ವರ ದೇವಾಲಯ ಚೋಳ ರಾಜವಂಶಕ್ಕೆ ಸೇರಿದ ಬೆಂಗಳೂರಿನ ಮತ್ತೊಂದು ದೇವಾಲಯವಾಗಿದೆ. ಇದು ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಇದೆ. ಈ ದೇವಾಲಯವು ಜಲಕಂಠೇಶ್ವರ, ಪಾರ್ವತಿ ಸೇರಿದಂತೆ 3 ಗರ್ಭಗುಡಿಗಳನ್ನು ಹೊಂದಿದೆ.
8 / 8
ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನ(Dharmagiri Manjunatha Swamy Temple) ಈ ದೇವಸ್ಥಾನವನ್ನು ಹೆಚ್ಚಾಗಿ ಕನ್ನಡ ಧಾರಾವಾಹಿಗಳಲ್ಲಿ ಶೂಟಿಂಗ್ಗಾಗಿ ಬಳಸಿಕೊಳ್ಳಲಾಗುತ್ತೆ. ಧರ್ಮಗಿರಿ ದೇವಸ್ಥಾನವು ಬನಶಂಕರಿ ಬಿಡಿಎಯಲ್ಲಿದೆ. ಇಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತೆ.