Vibhuvana Sankashti Chaturthi 2023: ವಿಭುವನ ಸಂಕಷ್ಟ ಚತುರ್ಥಿ ಯಾವಾಗ? ಸಮಯ, ಆಚರಣೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ವಿಭುವನ ಸಂಕಷ್ಟಿ ಹಿಂದೂಗಳಿಗೆ ಮಹತ್ವದ ದಿನ. ಏಕೆಂದರೆ ಈ ಸಂಕಷ್ಟ ಚತುರ್ಥಿಯು ಅಧಿಕ ಮಾಸದಲ್ಲಿ ಮಾತ್ರ ಬರುವುದರಿಂದ ಇದನ್ನು ಪ್ರತೀ ಮೂರು ವರ್ಷಗಳಿಗೊಮ್ಮೆ ಆಚರಣೆ ಮಾಡಲಾಗುತ್ತದೆ. ಈ ಸಂಕಷ್ಟ ಚತುರ್ಥಿಯ ಮಹತ್ವವೇನು? ಯಾವ ರೀತಿಯಲ್ಲಿ ಆಚರಿಸಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಭುವನ ಸಂಕಷ್ಟ ಚತುರ್ಥಿಯೂ (Vibhuvana Sankashti Chaturthi) ಹಿಂದೂಗಳಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಅಧಿಕ ಮಾಸದಲ್ಲಿ ಮಾತ್ರ ಬರುವಂತದ್ದು. ಹಾಗಾಗಿ ಪ್ರತೀ ಸಂಕಷ್ಟ ಚತುರ್ಥಿಗೆ ತನ್ನದೇ ಆದ ಮಹತ್ವವಿದೆ. ಆಗಸ್ಟ್ ತಿಂಗಳಲ್ಲಿ, ಅಧಿಕ ಶ್ರಾವಣ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು (4 ನೇ ದಿನ) ಅಂದರೆ ಆಗಸ್ಟ್ 4, 2023 ರಂದು ವಿಭುವನ್ ಅಥವಾ ವಿಭುವನ ಸಂಕಷ್ಟಿ ಚತುರ್ಥಿಯನ್ನು ಆಚರಿಸಲಾಗುವುದು.
ದಿನಾಂಕ ಮತ್ತು ಸಮಯ
ಆಗಸ್ಟ್ 4ರ ಮಧ್ಯಾಹ್ನ 12:45ಕ್ಕೆ ಸರಿಯಾಗಿ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ. ಆಗಸ್ಟ್ 5 ರಂದು ಬೆಳಿಗ್ಗೆ 09:39 ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ. ಆಗಸ್ಟ್ 4 ರ ಸಂಕಷ್ಟಿ ದಿನದಂದು 09:20 ರ ರಾತ್ರಿ ಚಂದ್ರೋದಯವಾಗುತ್ತದೆ. ಆಗಸ್ಟ್ 5 ರಂದು ಹೆಚ್ಚು ಮೂಹೂರ್ತ ಇಲ್ಲವಾದ್ದರಿಂದ ಆಗಸ್ಟ್ 4 ರಂದು ಈ ದಿನವನ್ನು ಆಚರಿಸಬೇಕಾಗಿದೆ.
2023ರ ವಿಭುವನ ಸಂಕಷ್ಟ ಚತುರ್ಥಿ ಮಹತ್ವ:
ಹಿಂದೂ ಹಬ್ಬಗಳಲ್ಲಿ ಸಂಕಷ್ಟ ಚತುರ್ಥಿಗೆ ಹೆಚ್ಚಿನ ಮಹತ್ವವಿದೆ. ಈ ದಿನ ಉಪವಾಸ ಮಾಡಿ ಭಕ್ತಿಯಿಂದ ಗಣೇಶನನ್ನು ಆರಾಧಿಸಲಾಗುತ್ತದೆ. ಪ್ರತಿ ಹಿಂದೂ ಕ್ಯಾಲೆಂಡರ್ನಲ್ಲಿ, ತಿಂಗಳಲ್ಲಿ ಎರಡು ಚತುರ್ಥಿ ತಿಥಿಗಳಿವೆ. ಕೃಷ್ಣ ಪಕ್ಷದ ಹುಣ್ಣಿಮೆಯ ನಂತರದ ತಿಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ ಮತ್ತು ಶುಕ್ಲ ಪಕ್ಷದ ಅಮಾವಾಸ್ಯೆಯ ನಂತರದ ತಿಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಕಷ್ಟಿ ಪದವು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿದೆ, ಇದರರ್ಥ ಕಷ್ಟದ ಸಮಯದಿಂದ ಮುಕ್ತಿ ಪಡೆಯುವುದು ಎಂದರ್ಥ. ಹಾಗಾಗಿ ಪ್ರತೀ ಚತುರ್ಥಿಗೆ ತನ್ನದೇ ಆದ ನಿರ್ದಿಷ್ಟ ಹೆಸರುಗಳಿವೆ. ವಿಭುವನ ಸಂಕಷ್ಟ ಚತುರ್ಥಿಯು ಅಧಿಕ ಮಾಸದಲ್ಲಿ ಬರುವುದರಿಂದ ಇದು ಪ್ರತೀ ಮೂರು ವರ್ಷಗಳಿಗೊಮ್ಮೆಆಚರಣೆ ಮಾಡಲಾಗುತ್ತದೆ. ಆ ದಿನ ವಿಭುವನ ಪಾಲಕ ಮಹಾ ಗಣಪತಿಯನ್ನು ಪೂಜಿಸಿದಲ್ಲಿ ನಿಮ್ಮ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಅತ್ಯಂತ ಮಂಗಳಕರ ವಿನಾಯಕ ಸಂಕಷ್ಟಿ ಚತುರ್ಥಿ 2023: ದಿನಾಂಕ, ಶುಭ ಮುಹೂರ್ತ, ಮಹತ್ವ, ಪೂಜೆ ವಿಧಿ
ವಿಭುವನ ಸಂಕಷ್ಟ ಚತುರ್ಥಿಯ ಪೂಜಾ ಆಚರಣೆಗಳು:
ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ಪೂಜಾ ಕೊಠಡಿ ಮತ್ತು ಪೂಜೆ ನಡೆಯುವ ಪ್ರದೇಶವನ್ನು ಸ್ವಚ್ಛಗೊಳಿಸಿ. ಒಂದು ಮರದ ಹಲಗೆಯ ಮೇಲೆ ಗಣೇಶನ ವಿಗ್ರಹ ಇಲ್ಲವಾದಲ್ಲಿ ಫೋಟೋ ಇಟ್ಟು ಪೂಜೆ ಮಾಡಿ. ವಿಗ್ರಹ ಇದ್ದಲ್ಲಿ ಗಣೇಶನನ್ನು ಹಳದಿ ಬಟ್ಟೆ, ಹೂ ಮತ್ತು ದುರ್ವಾ ಅಥವಾ ದುರ್ವೆ ಹುಲ್ಲಿನಿಂದ ಅಲಂಕರಿಸಿ. ನೆನಪಿಟ್ಟುಕೊಳ್ಳಿ ಈ ದುರ್ವಾ ಹುಲ್ಲನ್ನು ಅರ್ಪಿಸಲು ಎಂದಿಗೂ ಮರೆಯಬಾರದು ಏಕೆಂದರೆ ಇದು ಗಣೇಶನ ನೆಚ್ಚಿನ ವಸ್ತು. ಬಳಿಕ ತುಪ್ಪದ ದೀಪ ಹಚ್ಚಿ ಧೂಪದ್ರವ್ಯಗಳಿಂದಮನೆಯನ್ನು ಬೆಳಗಿಸಿ, ಲಡ್ಡು, ಮೋದಕ್, ಬಾಳೆಹಣ್ಣು ಅಥವಾ ಗಣೇಶನಿಗೆ ಪ್ರೀಯವಾದ ಸಿಹಿ ತಿನಿಸನ್ನು ಅರ್ಪಿಸಿ. ನಂತರ ಭಕ್ತಿಯಿಂದ ಮಂತ್ರ ಪಠಿಸಿ. ರಾತ್ರಿ ಉಪವಾಸವನ್ನು ಮುರಿಯುವ ಮೊದಲು ಚಂದ್ರನಿಗೆ ಅರ್ಘ್ಯ ಅಥವಾ ನೀರನ್ನು ಅರ್ಪಿಸಿ. ಬಳಿಕ ಆಹಾರ ಸೇವಿಸಿ.
ಯಾವ ಮಂತ್ರ ಪಠಿಸಬೇಕು:
1. ಓಂ ಗಣಪತಯೇ ನಮಃ
2. ಓಂ ಗಣೇಶಾಯ ನಮಃ
3. ಓಂ ಏಕ್ದಂತಯೇ ವಿದ್ಮಾಹೆ, ವಕ್ರತುಂಡೇಯೇ ಧೀಮಾಹಿ, ತನ್ನೋ ದಂತಿ ಪ್ರಚೋದ್ಯತ್
ಇದಲ್ಲದೆ ನೀವು ಬೇರೆ ಗಣೇಶನಿಗೆ ಸಂಬಂಧಪಟ್ಟ ಮಂತ್ರವನ್ನೂ ಪಠಿಸಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ