ಉತ್ತಮ ಸಂತಾನಕ್ಕಾಗಿ ಮಾಡಬೇಕಾದ ಮುಖ್ಯ ಕರ್ತವ್ಯಗಳೇನು?

ನಾವು ಅದೆಷ್ಟೋ ಕನಸು ಹೊತ್ತು ಒಂಭತ್ತು ತಿಂಗಳು ಹೊತ್ತು ಆಮೇಲೆ ಹೆತ್ತು ನಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗಾಗಿ ಅದೆಷ್ಟೋ ಕಷ್ಟಪಟ್ಟು ನಮಗಾಗದ ಹೆಚ್ಚಿನ ಸಾಧನೆ ಮಾಡಲಿ ಅಂತ ಹರಕೆ ಹೊತ್ತು ಕಾಯುತ್ತಿರುತ್ತೇವೆ.

ಉತ್ತಮ ಸಂತಾನಕ್ಕಾಗಿ ಮಾಡಬೇಕಾದ ಮುಖ್ಯ ಕರ್ತವ್ಯಗಳೇನು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 18, 2023 | 7:08 AM

ಹೆತ್ತವರಿಗೆ ಹೆಗ್ಗಣ ಮುದ್ದು ಎಂಬುದು ಗಾದೆ ಮಾತು. ಅದರಂತೆ ಜಗತ್ತಿನಲ್ಲಿ ಸ್ವಾಭಾವಿಕವಾಗಿ ಪ್ರತೀ ಪಾಲಕರಿಗೂ ತಮ್ಮ ಮಕ್ಕಳು ಏನೇ ಮಾಡಲಿ ಹೇಗೇ ಇರಲಿ ಅವರ ನಡೆಯೇ ಸರಿ ಅನಿಸುವುದೂ ಸಹಜ. ಇದರೊಂದಿಗೆ ಅಂತರಂಗದಲ್ಲಿ ತಮ್ಮ ಮಕ್ಕಳ ಉತ್ತಮ ಸ್ಥಿತಿಯ ಕುರಿತಾಗಿ ಮಹೋನ್ನತ ಕನಸುಗಳು ತಮ್ಮ ಎದೆಯ ಗೂಡಲ್ಲಿ ತುಂಬಿರುತ್ತವೆ. ಅದೆಷ್ಟೋ ಸಲ ನಮ್ಮ ನಿರೀಕ್ಷೆಗೆ ತಕ್ಕಂತೆ ಮಕ್ಕಳು ಇರುವುದೇ ಇಲ್ಲ. ಅವರು ಅವರದ್ದೇ ಸಾಧನೆಯಲ್ಲಿ ಇದ್ದುಬಿಡುತ್ತಾರೆ. ಇದರಿಂದ ಅಪಾಯವಿಲ್ಲ. ಆದರೆ ನಮ್ಮ ನಿರೀಕ್ಷೆಗೂ ಮೀರಿ ತಪ್ಪು ಹಾದಿ ಹಿಡಿದಾಗ ತುಂಬಾ ಸಂಕಟವಾಗುತ್ತದೆ . ನಾವು ಅದೆಷ್ಟೋ ಕನಸು ಹೊತ್ತು ಒಂಭತ್ತು ತಿಂಗಳು ಹೊತ್ತು ಆಮೇಲೆ ಹೆತ್ತು ನಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗಾಗಿ ಅದೆಷ್ಟೋ ಕಷ್ಟಪಟ್ಟು ನಮಗಾಗದ ಹೆಚ್ಚಿನ ಸಾಧನೆ ಮಾಡಲಿ ಅಂತ ಹರಕೆ ಹೊತ್ತು ಕಾಯುತ್ತಿರುತ್ತೇವೆ. ಆದರೆ ಅದರ ಫಲಿತಾಂಶ ವಿರುದ್ಧವಾದಾಗ ಭೂಮಿಯೇ ಕುಸಿದಂತೆ ಅನಿಸಿಬಿಡುತ್ತದೆ ಅಲ್ಲವೇ?

ಹಾಗಾದರೆ ಇದಕ್ಕೆ ಕಾರಣವೇನು ? ನಮ್ಮ ಸಂತಾನದ ಸಫಲತೆ ಹೇಗೆ ಸಾಧ್ಯ? ನಿಜವಾಗಿಯೂ ಇದರ ಸಾರ್ಥಕ್ಯ ಹೊಂದುವ ಕೀಲಿ ಕೈ ನಮ್ಮಲ್ಲೇ ಇದೆಯಾ? ಎಂಬ ಮನದಾಳದ ಪ್ರಶ್ನೆಗೆ ಉತ್ತರ ಇಲ್ಲಿದೆ. ಒಂದು ಭೂಮಿ ನಮ್ಮ ಬಳಿ ಇದೆ ಅಂತ ಗ್ರಹಿಸಿಕೊಳ್ಳಿ. ಆ ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದು ಫಸಲು ಪಡೆಯ ಬೇಕು ಎಂದು ಯೋಚಿಸಿದಾಗ ನಾವು ಮೊದಲಿಗೆ ಭೂಮಿಗೆ ಸಂಸ್ಕಾರವನ್ನು ಮಾಡುತ್ತೇವೆ. ಮಣ್ಣು ಸುಡುವುದು ಇತ್ಯಾದಿ ಮಾಡುತ್ತೇವೆ. ಆಮೇಲೆ ನಾವು ಬೆಳೆವ ಬೆಳೆಗೆ ಯೋಗ್ಯ ಕಾಲ ಯಾವುದು ಎಂಬುದನ್ನು ಸರಿಯಾಗಿ ಮನದಟ್ಟು ಮಾಡಿಕೊಂಡು ಆ ಸಮಯದಲ್ಲಿ ಭೂಮಿ ಪೂಜೆಯನ್ನು ಮಾಡಿಕೊಂಡು ಉತ್ತಮ ಮುಹೂರ್ತವನ್ನು ಗೊತ್ತು ಮಾಡಿ ಹಿರಿಯರ ಆಶೀರ್ವಾದ ಪಡೆದು ಬಿತ್ತನೆ ಅಥವಾ ಸಸಿನಡುವಿಕೆಯನ್ನು ಮಾಡುತ್ತೇವೆ ಅಲ್ಲವೇ?

ಇದನ್ನೂ ಓದಿ:Hanuman chalisa: ಹನುಮಾನ್‌ ಚಾಲೀಸಾ ಪಠಿಸುವ ಸರಿಯಾದ ವಿಧಾನ ಯಾವುದು? ಹನುಮಾನ್‌ ಚಾಲೀಸಾ ಕನ್ನಡದಲ್ಲಿ

ಅಷ್ಟೇ ಸಾಕಾ? ಆಮೇಲೆ ಕಾಲ ಕಾಲಕ್ಕೆ ನೀರು ಗೊಬ್ಬರ ನೀಡಬೇಕು. ಹಾಗೆಯೇ ಕಳೆ ಕೀಳಬೇಕು ಅದರೊಂದಿಗೆ ಉಪದ್ರವಿಸುವ ಪ್ರಾಣಿ ಪಕ್ಷಿಗಳಿಂದ ರಕ್ಷಿಸಿಕೊಳ್ಳಬೇಕು. ಹೀಗೆ ಹಲವು ಪರಿಶ್ರಮಗಳು ನಡೆದ ಮೇಲೆ ಕಾಲಾನಂತರ ಫಸಲು ಸಿಗುತ್ತದೆ. ಅಷ್ಟೇ ಅಲ್ಲ ಅದನ್ನು ಕಳ್ಳ ಕಾಕರಿಂದ ರಕ್ಷಿಸಿ ಉತ್ತಮ ರೀತಿಯಲ್ಲಿ ಸಂಸ್ಕರಿಸಿ ಅದರ ಉಪಯೋಗ ಪಡೆಯುತ್ತೇವೆ ಅಲ್ಲವೇ ?

ಈ ಮೇಲಿನ ಘಟನೆಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ. ಈಗ ಯೋಚಿಸಿ ಕ್ಷೇತ್ರವೆಂದರೆ ಸ್ತ್ರೀ ಅದರಲ್ಲಿ ವಂಶಬೆಳಗಲು ಸಂತಾನಕ್ಕಾಗಿ ಬೀಜವಪನ ಮಾಡುವವನು ಪುರುಷ. ಹೇಗೆ ಭೂಮಿಯಲ್ಲಿ ಉತ್ತಮವಾದ್ದನ್ನು ಪಡೆಯಲು ಭೂಮಿಗೆ ಸಂಸ್ಕಾರವಾಗಬೇಕೋ ಅದೇ ರೀತಿ ಧರ್ಮಶಾಸ್ತ್ರ ರೀತ್ಯಾ ಸ್ತ್ರೀಗೂ ಮಾಡಬೇಕಾದ ಸಂಸ್ಕಾರಗಳಿವೆ. ವಿವಾಹೋತ್ತರದಲ್ಲಿ ಸ್ತ್ರೀಯು ಋತುಮತಿಯಾದ ನಂತರ ಋತುಶಾಂತಿ ಎಂಬ ಸಂಸ್ಕಾರವನ್ನು ಸ್ತ್ರೀಗೆ ಮಾಡಿಸಬೇಕು. ಹಾಗೇಯೇ ಅದೇದಿನ ಉತ್ತಮ ಗರ್ಭ ಆಗಬೇಕು ಎಂಬ ಕಾರಣಕ್ಕಾಗಿ ಗರ್ಭಾಧಾನದ ಕುರಿತಾಗಿ ಶಾಂತಿಯನ್ನು ಮಾಡಿಕೊಂಡು ಕನಿಷ್ಠ ಐದು ಜನ ಮುತ್ತೈದೆಯರಿಗೆ ಮಡಿಲುತುಂಬಿಸಬೆಕು. ಆಮೇಲೆ ಆ ಮುತ್ತೈದೆಯರು ತಮ್ಮ ಮಡಿಲಿಂದ ಒಂದೊಂದು ಹಿಡಿ ಅಕ್ಕಿಯನ್ನು ಈ ವಿವಾಹಿತ ಕನ್ಯೆಯ ಮಡಿಲಿಗೆ ಹಾಕಬೇಕು. ಆ ಅಕ್ಕಿಯಿಂದ ಅನ್ನ ಮತ್ತು ಸಿಹಿಯನ್ನು ಮಾಡಿಕೊಂಡು ಅವರಿಬ್ಬರೇ ಅದನ್ನು ಉಣ್ಣಬೇಕು. ಆಮೇಲೆ ಉತ್ತಮ ಸಂತಾನವಾಗಬೇಕು ಎಂದು ಸಂಕಲ್ಪಿಸಿಕೊಂಡು ಕುಲದೇವರನ್ನು ಪ್ರಾರ್ಥಿಸಿ ಸತಿಪತಿಯರು ಸೇರಿದಾಗ ನಮ್ಮ ವಂಶಬೆಳಗುವ ಸಂತಾನ ಅಂಕುರವಾಗುವುದು.

ಇದೊರೊಂದಿಗೆ ಈ ಗರ್ಭಧರಿಸಿದ ನಂತರ ಆದಷ್ಟೂ ಮಧುಮಾಂಸಗಳ ನಿಷೇಧವಿದ್ದಷ್ಟು ಒಳ್ಳೆಯದು. ಸಾತ್ವಿಕ ಆಹಾರದ ಸೇವೆನೆ ಮಾಡುತ್ತಿದ್ದರೆ ಗರ್ಭಸ್ಥ ಶಿಶುವೂ ಕುಶಲವಾಗಿ ಬೆಳೆಯುವುದು. ಅದರೊಂದಿಗೆ ಪತಿಯಾದವನು ಧರ್ಮಚಿಂತನೆ ದಾನ ಇತ್ಯಾದಿ ಮಾಡುತ್ತಿರಬೇಕು. ಈ ಒಂಭತ್ತು ತಿಂಗಳು ನಾವು ಎಷ್ಟು ಸತ್ಕಾರಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಯೇ ಮಾಡುತ್ತೇವೋ ಅಷ್ಟು ಉತ್ತಮ ಸಂತಾನ ನಮಗಾಗುವುದು.

ಅಸೂಯೆ ಮೋಹ ಇತ್ಯಾದಿಗಳನ್ನು ಮನದಲ್ಲಿ ತುಂಬಿಕೊಳ್ಳುತ್ತಾ ಹೋದರೆ ಪುರಾಣಗಳಲ್ಲಿ ನೋಡಿದಂತೆ ವಂಶದ ನಾಶಕ್ಕೆ ಕಾರಣವಾಗುವ ಸಂತಾನವನ್ನು ಹೊಂದುವ ಸ್ಥಿತಿ ಬಂದೀತು. ಆದಕಾರಣ ಇಳಿವಯಸ್ಸಿನ ನೆಮ್ಮದಿಗಾಗಿ ಯೌವನದಲ್ಲಿ ಕೆಲವು ಕಾಲವಾದರೂ ಸಂಸ್ಕಾರಯುತರಾಗಿ ಸದಾಚಾರ ಶೀಲರಾಗಿ ಇರೋಣ ಅಲ್ಲವೇ? ಇದರಿಂದ ನಮ್ಮ ಮಕ್ಕಳಿಗೂ ವಂಶಕ್ಕೂ ಜಗತ್ತಿಗೂ ಕ್ಷೇಮವಾಗುವುದು. ಉದಾಹರಣೆಗೆ ಪಾಂಡವರನ್ನು ನೋಡಿ.

ಡಾ.ಗೌರಿ ಕೇಶವಕಿರಣ.ಬಿ

ಧಾರ್ಮಿಕ ಚಿಂತಕರು

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ