ಹುಣ್ಣಿಮೆಯ ಚಂದಿರನಿಗೂ, ಬಿದಿಗೆ ಚಂದ್ರನಿಗೂ ಇರುವ ತಾತ್ವಿಕ ವ್ಯತ್ಯಾಸಗಳೇನು? ಈ ಕುರಿತು ಸೀತಾಮಾತೆ ಏನೆಂದಿರುವಳು?
ಈಗ ಪ್ರಸ್ತುತ ಹುಣ್ಣಿಮೆಯ ಮಹತ್ವವನ್ನು ಅರಿಯುವ. ಸೂರ್ಯ ಮತ್ತು ಚಂದ್ರರು ಸರಿಯಾಗಿ ಒಂದು ತಿಂಗಳಿಗೊಮ್ಮೆ ಸರಿಯಾಗಿ ಒಂದೇ ಸಮಯದಲ್ಲಿ ಅಸ್ತ ಮತ್ತು ಉದಯವಾಗುತ್ತಾರೆ. ಆ ದಿನ ಚಂದಿರನು ಪೂರ್ಣವಾಗಿ ಗೋಚಾರಿಸುತ್ತಾನೆ .
ಕಾಲವನ್ನು ಧಾರ್ಮಿಕವಾಗಿ ಸಂವತ್ಸರ, ಅಯನ, ಋತು , ಮಾಸ , ಪಕ್ಷ ಎಂಬುದಾಗಿ ವಿಂಗಡಿಸಿದ್ದಾರೆ. ಎರಡು ಪಕ್ಷಗಳು ಸೇರಿ ಒಂದು ಮಾಸ. ಎರಡು ಮಾಸಕ್ಕೆ ಒಂದು. ಮೂರು ಋತುವಿಗೆ ಒಂದು ಅಯನ. ಎರಡು ಅಯನಕ್ಕೆ ಒಂದು ಸಂವತ್ಸರ ಈ ರೀತಿಯಾಗಿ ಕಾಲವನ್ನು ವಿಭಾಗಿಸಿ ನಮ್ಮ ಪೂರ್ವಿಕರು ನಮಗೆ ನೀಡಿದ್ದಾರೆ. ಸುಲಭವಾಗಿ ಹೇಳುವುದಾದರೆ ಒಂದು ಸಂವತ್ಸರದಲ್ಲಿ ದಕ್ಷಿಣ ಉತ್ತರ ಎಂಬ ಎರಡು ಅಯನಗಳು. ಆರು ಋತುಗಳು. ಹನ್ನೆರಡು ಮಾಸಗಳು. ಶುಕ್ಲ ಕ್ರಷ್ಣವೆಂಬ ಎರಡು ಪಕ್ಷಗಳು. ಇದೂ ಸನಾತನ ಧರ್ಮ ಸಮ್ಮತವಾದ ಕಾಲಮಾನ. ಸೂರ್ಯನನ್ನು ಆಧರಿಸಿ ಇದರ ಅವಧಿ ನಿರ್ಣಯಿಸಲಾಗುತ್ತದೆ. ಈಗ ಪ್ರಸ್ತುತ ಹುಣ್ಣಿಮೆಯ ಮಹತ್ವವನ್ನು ಅರಿಯುವ. ಸೂರ್ಯ ಮತ್ತು ಚಂದ್ರರು ಸರಿಯಾಗಿ ಒಂದು ತಿಂಗಳಿಗೊಮ್ಮೆ ಸರಿಯಾಗಿ ಒಂದೇ ಸಮಯದಲ್ಲಿ ಅಸ್ತ ಮತ್ತು ಉದಯವಾಗುತ್ತಾರೆ. ಆ ದಿನ ಚಂದಿರನು ಪೂರ್ಣವಾಗಿ ಗೋಚಾರಿಸುತ್ತಾನೆ. ಆ ದಿನಕ್ಕೆ ಪೂರ್ಣಿಮಾ ಅಥವಾ ಹುಣ್ಣಿಮೆ ಎಂದು ಕರೆಯುತ್ತಾರೆ. ಈ ದಿನದಂದು ಚಂದ್ರನು ತನ್ನ ಪೂರ್ಣ ಕಲೆಯಿಂದ ಕೂಡಿರುತ್ತಾನೆ. ಅದಕ್ಕೆ ಹುಣ್ಣಿಮೆ ಎನ್ನುವುದು ಅತ್ಯಂತ ಶುಭವೆಂದು ಅಭಿಪ್ರಾಯ.
ಶುಕ್ಲ ಪಕ್ಷದ ಆರಂಭ ಅಮಾವಾಸ್ಯೆಯ ಮರುದಿನ / ನಂತರ ಬರುವ ಮೊದಲದಿನ. ಹುಣ್ಣಿಮೆಯ ಮರುದಿನ ಕೃಷ್ಣಪಕ್ಷದ ಆರಂಭ. ಶುಕ್ಲಪಕ್ಷದಲ್ಲಿ ಚಂದ್ರನು ವ್ರದ್ಧಿಯನ್ನು ಹೊಂದಿದರೆ.. ಕೃಷ್ಣಪಕ್ಷದಲ್ಲಿ ಕ್ಷೀಣತೆಯನ್ನು ಹೊಂದುತ್ತಾನೆ. ಈ ಕಾಲಮಾನದ ಸ್ಥೂಲ ಪರಿಚಯ. ರಾಮಾಯಣದಲ್ಲಿ ಸೀತೆಯ ಅಪಹರಣ ನಂತರದ ಒಂದು ಪ್ರಕರಣ. ಸೀತೆಯನ್ನು ರಾವಣನು ಪ್ರಶ್ನಿಸುತ್ತಾನೆ ಎಲೈ ಸೀತೆಯೇ ನನಗೂ ರಾಮನಿಗೂ ಏನು ತಾನೇ ವೆತ್ಯಾಸವಿದೆ? ಪರಾಕ್ರಮದಲ್ಲಿ, ವಿದ್ಯೆಯಲ್ಲಿ, ಸಂಪತ್ತಲ್ಲಿ, ಶೌರ್ಯದಲ್ಲಿ, ಕೀರ್ತಿಯಲ್ಲಿ ಏನು ಕಡಿಮೆ ಇದೆ ನನಗೆ ರಾಮನಗಿಂತ? ಸರಿಯಾಗಿ ನೋಡಿದರೆ ನಾನೇ ರಾಮನಿಗಿಂತ ಉತ್ತಮನು ಎಂದು ಹೇಳುತ್ತಾನೆ.
ಇದನ್ನು ಓದಿ:Spiritual: ಪಿತೃಪಕ್ಷದಲ್ಲಿ ಸಂತಾನವಾದರೇ ದೋಷವಿದೆಯೇ ? ಪಿತೃಪಕ್ಷದಲ್ಲಿ ಸ್ವಪ್ನದಲ್ಲಿ ಪಿತೃ ದರ್ಶನವಾದರೆ ಏನು ಫಲ ?
ಆಗ ಸೀತಾಮಾತೆಯು ಕೊಡುವ ಉತ್ತರ ಅತ್ಯಂತ ಅದ್ಭುತವಾದದ್ದು. ಸೀತೆಮ್ಮ ಹೇಳುತ್ತಾಳೆ ನೀನು ಹೇಳಿದ್ದು ನಿಜವಾಗಿಯೂ ಸರಿಯಾಗಿದೆ. ರಾಮನು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ. ನೀನಾದರೋ ಹುಣ್ಣಿಮೆಯ ಚಂದಿರನಂತೆ ಎಂದು. ಸೀತೆಯ ಮನಸ್ಸು ಬದಲಾಗುತ್ತಿದೆ ಎಂದು ರಾವಣನು ಭ್ರಮೆಗೊಳ್ಳುತ್ತಾನೆ. ಆದರೆ ಇಲ್ಲಿ ತಾತ್ವಿಕ ಮರ್ಮ ಬೇರೆಯೇ ಇದೆ. ಮೇಲ್ನೋಟಕ್ಕೆ ಇಲ್ಲಿ ಹುಣ್ಣಿಮೆ ಉತ್ತಮದಂತೆ ಕಾಣುತ್ತದೆ. ವಾಸ್ತವವಾಗಿ ದಿನಗಣನೆಯಲ್ಲಿ ಉತ್ತಮವೂ ಹೌದು. ಆದರೆ ಸೀತೆಯ ಪ್ರಕಾರ ವಿಚಾರ ಬೇರೆಯೇ ಇದೆ. ಅದೇನೆಂದರೆ ಹುಣ್ಣಿಮೆಯ ನಂತರ ಚಂದ್ರನ ಕಲೆ ಕ್ಷೀಣಿಸುತ್ತಾ ಹೋಗುತ್ತದೆ. ಅಂತಯೇ ರಾವಣನ ಅವಸ್ಥೆ ಎಂಬುದನ್ನು ಸೀತೆಯು ಸೂಚ್ಯವಾಗಿ ನೀನು ಹುಣ್ಣಿಮೆ ಚಂದಿರನಂತೆ ಎನ್ನುತ್ತಾಳೆ. ಆದರೆ ರಾಮನನ್ನು ಶುಕ್ಲಪಕ್ಷದ ಬಿದಿಗೆ ಚಂದಿರ ಅನ್ನುತ್ತಾಳೆ. ತಾತ್ಪರ್ಯವೆಂದರೆ ಮುಂದಿನ ದಿನಗಳಲ್ಲಿ ವೃದ್ಧಿಯೆಂಬುದು. ಈ ರೀತಿಯಾದ ಸೂಕ್ಷ್ಮಾಂಶಗಳು ಪುರಾಣದಿಂದ ಕಲಿಯುವುದು ಬಹಳಾ ಇದೆ. ಆದ್ದರಿಂದ ಪುರಾಣವನ್ನು ಹಿರಿಯರು ಮಿತ್ರಸಮ್ಮಿತೆ ಎಂದಿರುವರು.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Tue, 24 January 23