ಯಾವ ದಿಕ್ಕಿಗೆ ಯಾವ ಫೋಟೋಗಳನ್ನು ಹಾಕಬೇಕು? ಅದರಿಂದ ಸಿಗೋ ಫಲಗಳೇನು?

ಮನೆಯಲ್ಲಿ ದೇವರುಗಳ ಫೋಟೋ ಹಾಕಿದ್ರೆ, ಇಲ್ಲವೇ ಮೂರ್ತಿಗಳನ್ನು ಇಟ್ಟರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ಸುಖ-ಶಾಂತಿ ನೆಲೆಸಿರುತ್ತೆ ಎನ್ನಲಾಗುತ್ತೆ. ಹಾಗಾದ್ರೆ ಯಾವ ದೇವರ ಪೋಟೋಗಳನ್ನು ಯಾವ ದಿಕ್ಕಿಗೆ ಹಾಕಬೇಕು? ಅದರಿಂದ ಸಿಗೋ ಫಲಗಳೇನು ಇಲ್ಲಿ ತಿಳಿಯಿರಿ.

  • TV9 Web Team
  • Published On - 6:25 AM, 14 Apr 2021
ಯಾವ ದಿಕ್ಕಿಗೆ ಯಾವ ಫೋಟೋಗಳನ್ನು ಹಾಕಬೇಕು? ಅದರಿಂದ ಸಿಗೋ ಫಲಗಳೇನು?
ಯಾವ ದಿಕ್ಕಿಗೆ ಯಾವ ಫೋಟೋಗಳನ್ನು ಹಾಕಬೇಕು?

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಇಡುವ ಸಂಪ್ರದಾಯವಿದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು, ಮೂರ್ತಿಗಳನ್ನು ಇರಿಸಲಾಗುತ್ತೆ. ಇದು ವಾಸ್ತು ದೋಷವನ್ನು ನಿವಾರಣೆ ಮಾಡುತ್ತೆ ಎಂಬ ನಂಬಿಕೆ ಇದೆ. ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ದೇವರುಗಳ ಫೋಟೋ ಹಾಕಿದ್ರೆ, ಇಲ್ಲವೇ ಮೂರ್ತಿಗಳನ್ನು ಇಟ್ಟರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ಸುಖ-ಶಾಂತಿ ನೆಲೆಸಿರುತ್ತೆ ಎನ್ನಲಾಗುತ್ತೆ. ಹಾಗಾದ್ರೆ ಯಾವ ದೇವರ ಪೋಟೋಗಳನ್ನು ಯಾವ ದಿಕ್ಕಿಗೆ ಹಾಕಬೇಕು? ಅದರಿಂದ ಸಿಗೋ ಫಲಗಳೇನು ಇಲ್ಲಿ ತಿಳಿಯಿರಿ.

ದೇವರ ಫೋಟೋಗಳಿಂದ ಸಿಗೋ ಫಲ
-ವಿನಾಯಕನ ಫೋಟೋವನ್ನು ಮನೆಯ ಮುಂಬಾಗಿಲಿಗೆ ಹಾಕಬಹುದು.
-ಆಂಜನೇಯನ ಫೋಟೋವನ್ನು ಮನೆಯ ಹಿಂಬಾಗಿಲಿನಲ್ಲಿ ಹಾಕಬೇಕು.
-ಹನುಮಂತನ ಪ್ರತಿಮೆ ಹಾಗೂ ಫೋಟೋಗಳನ್ನು ಬೆಡ್ ರೂಂನಲ್ಲಿ ಇರಿಸಬೇಡಿ.
-ಮನೆಯ ಪವಿತ್ರ ಜಾಗ ಅಥವಾ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋ ಇರಲಿ. ವಾಸ್ತುಶಾಸ್ತ್ರದ ಪ್ರಕಾರ, ಹನುಮಂತನ ಮುಖ ದಕ್ಷಿಣ ದಿಕ್ಕಿಗೆ ಬರುವಂತೆ ಇಡಿ.
-ಹನುಮಂತ ತನ್ನ ಶಕ್ತಿಯನ್ನು ದಕ್ಷಿಣ ದಿಕ್ಕಿಗೆ ಪ್ರಯೋಗ ಮಾಡಿದ್ದ. ದಕ್ಷಿಣ ದಿಕ್ಕಿಗೆ ಫೋಟೋ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳ ಶಕ್ತಿ ಕಡಿಮೆಯಾಗುತ್ತೆ. ಸುಖ-ಶಾಂತಿ ನೆಲೆಸಿರುತ್ತದೆ.
-ಪಂಚಮುಖಿ ಹನುಮ, ಪರ್ವತ ಎತ್ತಿ ಹಿಡಿದ ಹನುಮಂತ ಹಾಗೂ ರಾಮನ ಭಜನೆ ಮಾಡುತ್ತಿರುವ ಹನುಮಂತನ ಫೋಟೋವನ್ನು ಮನೆಯಲ್ಲಿ ಹಾಕುವುದು ಒಳ್ಳೆಯದು.
-ಮರಣ ಹೊಂದಿದವರ ಫೋಟೋವನ್ನು ದೇವರ ಮನೆಯಲ್ಲಿ ನೇತು ಹಾಕಬಾರದು. ಇದರಿಂದ ನಕರಾತ್ಮಕ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ದೇವರ ಕೋಣೆ ಉತ್ತರ, ಪೂರ್ವ ದಿಕ್ಕಿನಲ್ಲಿದ್ದರೆ ಮರಣ ಹೊಂದಿದವರ ಫೋಟೋಗಳನ್ನು ಪೂರ್ವ ದಿಕ್ಕಿನಲ್ಲಿ ನೇತು ಹಾಕಬೇಕು.
-ಮನೆಯ ದಕ್ಷಿಣ ಹಾಗು ಪಶ್ಚಿಮ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಹಾಕಬಾರದು. ಇದು ನಿಮ್ಮ ಮನೆಯಲ್ಲಿರುವವರ ವೃತ್ತಿ ಜೀವನದ ಏಳಿಗೆಯನ್ನು ಕುಂಠಿತಗೊಳಿಸುತ್ತೆ.

ಇದು ಮನೆಯಲ್ಲಿ ದೇವರ ಫೋಟೋಗಳು ಮತ್ತು ಮೂರ್ತಿಗಳು, ಗತಿಸಿದ ಹಿರಿಯರ ಫೋಟೋಗಳನ್ನು ಹಾಕೋಕೆ ಇರುವ ನಿಯಮ. ಈ ನಿಯಮಗಳನ್ನು ಪಾಲಿಸಿದ್ರೆ ಸುಂದರ ಬದುಕು ನಮ್ಮದಾಗುತ್ತೆ.

ಇದನ್ನೂ ಓದಿ: ಬೆಳಗೆದ್ದು ಯಾರ ಮುಖವಾ ನಾನೂ ನೋಡಲಿ… ಬೆಳಗ್ ಬೆಳಗ್ಗೆ ಏನನ್ನು ನೋಡಬೇಕು? ಏನನ್ನು ನೋಡಬಾರದು?

(Which Direction to Hang Family And God Photos for Happy House)