ನಾವು ದೇವರ ವಿಗ್ರಹಗಳಿಗೆ ಸಲ್ಲಿಸುವ ಪೂಜೆ, ನಿಜವಾಗಿಯೂ ದೇವರಿಗೆ ತಲುಪುತ್ತದೆಯೇ? ಮಾರ್ಮಿಕ ಉತ್ತರ ಇಲ್ಲಿದೆ!

Concept of Image Worship: ತಕ್ಷಣ ಆ ಭಾವಚಿತ್ರವನ್ನು ಕೆಳಗಡೆ ಇಟ್ಟ ಸ್ವಾಮೀಜಿ ದಿವಾನನತ್ತ ತಿರುಗಿ "ಬಾ ಇಲ್ಲಿ, ಇಲ್ಲಿರುವ ನಿಮ್ಮ ಮಹಾರಾಜರ ಭಾವಚಿತ್ರದ ಮೇಲೆ ಉಗುಳು" ಎನ್ನುತ್ತಾರೆ. ತಕ್ಷಣವೇ ನಿಂತಲ್ಲೇ ಥರಗುಟ್ಟಿ ನಡುಗಿ ಹೋಗುತ್ತಾನೆ ಆ ದಿವಾನ. ತಕ್ಷಣ ಸ್ವಾಮೀಜಿ ಬನ್ನಿ ನಿಮ್ಮಲ್ಲಿ ಯಾರಾದರೂ ಸರಿ ನಿಮ್ಮ ರಾಜನ ಭಾವಚಿತ್ರದ ಮೇಲೆ ಉಗಿಯಬಹುದು. ಹೂಂ.. ಬನ್ನಿ... ಅಂದಾಗ ಸಭಿಕರೆಲ್ಲ ಹೆದರಿ ಹಿಂದಕ್ಕೆ ಸರಿಯುತ್ತಾರೆ.

ನಾವು ದೇವರ ವಿಗ್ರಹಗಳಿಗೆ ಸಲ್ಲಿಸುವ ಪೂಜೆ, ನಿಜವಾಗಿಯೂ ದೇವರಿಗೆ ತಲುಪುತ್ತದೆಯೇ? ಮಾರ್ಮಿಕ ಉತ್ತರ ಇಲ್ಲಿದೆ!
ನಾವು ದೇವರ ವಿಗ್ರಹಗಳಿಗೆ ಸಲ್ಲಿಸುವ ಪೂಜೆ, ನಿಜವಾಗಿಯೂ ದೇವರಿಗೆ ತಲುಪುತ್ತದೆಯೇ? ಮಾರ್ಮಿಕ ಉತ್ತರ ಇಲ್ಲಿದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 18, 2022 | 6:06 AM

ನಾವು ಕಲ್ಲಿನ ವಿಗ್ರಹಗಳಿಗೆ ಮತ್ತು ಭಾವಚಿತ್ರಗಳಿಗೆ ಪೂಜೆ ಮಾಡ್ತೀವಿ ಅಂತಾ ಬಹಳಷ್ಟು ಜನರು ಆಗಾಗಾ ಹಿಯಾಳಿಸುತ್ತಿರುತ್ತಾರೆ. ಜೊತೆಗೆ ಹೀಗೆ ಮಾಡುವುದರಿಂದ ನಾವು ಸಲ್ಲಿಸುವ ಪೂಜೆ ನಿಜವಾಗಿಯೂ ದೇವರಿಗೆ ತಲುಪುತ್ತದೆಯೇ? (Idol Worship) ಎಂದೂ ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಸೋದಾಹರಣ, ಮಾರ್ಮಿಕ ಉತ್ತರ ಇಲ್ಲಿದೆ. ಸ್ವಾಮಿ ವಿವೇಕಾನಂದರು (swami vivekananda) ಸನ್ಯಾಸಿಯಾಗಿ ದೇಶ ಸಂಚಾರ ಮಾಡುತ್ತಿರುವಾಗ ಮಂಗಳಸಿಂಗ್ ಎಂಬ ಮಹಾರಾಜ ಸ್ವಾಮೀಜಿಯನ್ನು ತನ್ನ ಆಸ್ಥಾನಕ್ಕೆ ಬರುವಂತೆ ಒಂದು ಆಮಂತ್ರಣ ಕೊಡುತ್ತಾನೆ. ಸ್ವಾಮೀಜಿ ಕೂಡ ಅವನ ಆಹ್ವಾನಕ್ಕೆ ಗೌರವ ಕೊಟ್ಟು ಆಸ್ಥಾನಕ್ಕೆ ಹೋಗುತ್ತಾರೆ (Concept of Image Worship).

ಮಹಾರಾಜ ವಿವೇಕಾನಂದರನ್ನು ಕುರಿತು “ಸ್ವಾಮೀಜಿ ನನಗೆ ಈ ಹಿಂದೂಗಳ ವಿಗ್ರಹ ಪೂಜೆ, ಮೂರ್ತಿ ಭಜನೆ, ದೇವರ ಭಾವಚಿತ್ರಕ್ಕೆ ಪೂಜೆ ಇಂತ ಪದ್ಧತಿಗಳಲ್ಲಿ ನಂಬಿಕೆಯಿಲ್ಲ. ಕಲ್ಲಿಗೆ ಪೂಜೆ ಮಾಡಿದರೆ ದೇವರಿಗೆ ಪೂಜೆ ಮಾಡಿದ ಹಾಗೆಯೇ ಅಂತಾರಲ್ಲ, ಇದನ್ನ ಹೇಗೆ ನಂಬುವುದು” ಅಂತಾ ಧಿಮಾಕಿನಿಂದ ಕೇಳುತ್ತಾನೆ. ಆಗ ಸ್ವಾಮೀಜಿ ಹೇಳುತ್ತಾರೆ.. “ನಿಮ್ಮ ಅಭಿಪ್ರಾಯದಲ್ಲಿ ತಪ್ಪೇನೂ ಇಲ್ಲ, ಮಹಾರಾಜ. ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳ ವ್ಯಕ್ತಪಡಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ ನಮ್ಮ ಹಿಂದೂ ಧರ್ಮ! ಅದರ ಪ್ರಕಾರ ಅವರವರ ಭಾವನೆಗಳಿಗೆ ತಕ್ಕಂತೆ ಪೂಜೆ ಮಾಡುತ್ತಾರೆ. ಹಾಗಂತ ಪೂಜೆ ಮಾಡದವರನ್ನು ಕೆಟ್ಟವರು ಅಂತ ಹೇಳೋದು ಕೂಡ ತಪ್ಪಾಗುತ್ತದೆ.

ಆಸ್ಥಾನದಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯ. ಏನಿದು ಸ್ವಾಮಿಗಳು ಮಹಾರಾಜನ ಅಭಿಪ್ರಾಯವನ್ನೇ ಸರಿ ಅಂತ ಹೇಳುತ್ತಿದ್ದಾರೆ. ಆಗ ಸ್ವಾಮೀಜಿ ಇನ್ನೂ ಮಾತು ಮುಗಿಸಿರಲಿಲ್ಲ. ತಕ್ಷಣ ಸ್ವಾಮೀಜಿ ಅಲ್ಲೇ ಇದ್ದ ಆ ಮಹಾರಾಜದ ಭಾವಚಿತ್ರ ತರಲು ಹೇಳುತ್ತಾರೆ. ಮಹಾರಾಜನ ಸಂಜ್ಞೆಯಂತೆ ದಿವಾನ ಆ ಭಾವಚಿತ್ರ ತಂದು ಸ್ವಾಮೀಜಿಗೆ ಕೊಡುತ್ತಾನೆ. ಮಹಾರಾಜ ಮಂಗಳಸಿಂಗ್ ಕುತೂಹಲದಿಂದ ಈ ಸನ್ಯಾಸಿ ಏನು ಮಾಡುತ್ತಾರೆ ಅಂತ ಯೋಚಿಸುತ್ತಿರುವಾಗಲೇ…

ತಕ್ಷಣ ಆ ಭಾವಚಿತ್ರವನ್ನು ಕೆಳಗಡೆ ಇಟ್ಟ ಸ್ವಾಮೀಜಿ ದಿವಾನನತ್ತ ತಿರುಗಿ “ಬಾ ಇಲ್ಲಿ, ಇಲ್ಲಿರುವ ನಿಮ್ಮ ಮಹಾರಾಜರ ಭಾವಚಿತ್ರದ ಮೇಲೆ ಉಗುಳು” ಎನ್ನುತ್ತಾರೆ. ತಕ್ಷಣವೇ ನಿಂತಲ್ಲೇ ಥರಗುಟ್ಟಿ ನಡುಗಿ ಹೋಗುತ್ತಾನೆ ಆ ದಿವಾನ. ತಕ್ಷಣ ಸ್ವಾಮೀಜಿ ಬನ್ನಿ ನಿಮ್ಮಲ್ಲಿ ಯಾರಾದರೂ ಸರಿ ನಿಮ್ಮ ರಾಜನ ಭಾವಚಿತ್ರದ ಮೇಲೆ ಉಗಿಯಬಹುದು. ಹೂಂ.. ಬನ್ನಿ… ಅಂದಾಗ ಸಭಿಕರೆಲ್ಲ ಹೆದರಿ ಹಿಂದಕ್ಕೆ ಸರಿಯುತ್ತಾರೆ.

ತಕ್ಷಣ ದಿವಾನ ಹತ್ತಿರ ಬಂದು “ಏನು ಹೇಳ್ತೀದೀರಾ ಸ್ವಾಮಿ? ಇದು ನಮ್ಮ ಮಹಾರಾಜರ ಭಾವಚಿತ್ರ. ಅವರ ಮುಂದೆಯೇ ಇದರ ಮೇಲೆ ಉಗುಳಿ ಅಂತೀರಲ್ಲ ನಿಮಗೆಷ್ಟು ಧೈರ್ಯ???” ಎನ್ನುತ್ತಾನೆ. ಆಗ ಸ್ವಾಮೀಜಿ ಹೇಳುತ್ತಾರೆ “ನೋಡು ದಿವಾನ, ಈ ಭಾವಚಿತ್ರದಲ್ಲಿ ನಿಮ್ಮ ಮಹಾರಾಜರೇನು ಸಜೀವವಾಗಿ ಇಲ್ಲ. ಅವರೇನು ಇದರಲ್ಲಿ ಉಸಿರಾಡುತ್ತಿಲ್ಲ, ಈ ಚಿತ್ರದಲ್ಲಿ ಅವರ ದೇಹದ ಮಾಂಸ ಖಂಡಗಳು ಸಹ ಇಲ್ಲ. ಆದರೂ ನಾನು ಇದರ ಮೇಲೆ ಉಗಿ ಅಂದಾಗ ನೀವೆಲ್ಲಾ ಹೆದರಿಕೊಂಡಿರಿ. ಕಾರಣ ಇಷ್ಟೇ … ಈ ಭಾವಚಿತ್ರದಲ್ಲಿ ನಿಮ್ಮ ಮಹಾರಾಜ ಇಲ್ಲದಿದ್ದರೂ ಅವರ ಛಾಯೆಯನ್ನು ಇದರಲ್ಲಿ ಕಾಣುತ್ತಿದ್ದೀರ… ನಿಮ್ಮ ರಾಜನಿಗೆ ಎಷ್ಟು ಗೌರವ ಕೊಡ್ತೀರೊ ಅಷ್ಟೇ ಗೌರವ ಈ ಭಾವಚಿತ್ರಕ್ಕೂ ಕೊಡುತ್ತೀರ… ಒಂದು ಕಡೆಯಿಂದ ಈ ಚಿತ್ರ ನಿಮ್ಮ ಮಹಾರಾಜನದು ಅಲ್ಲದಿರಬಹುದು. ಆದರೆ, ನಿಮ್ಮೆಲ್ಲರ ಭಾವನೆಯಲ್ಲಿ ಈ ಚಿತ್ರ ನಿಮ್ಮ ಮಹರಾಜನೇ… ಎನ್ನುತ್ತಾರೆ.

ತಕ್ಷಣ ಮಂಗಳಸಿಂಗ್ ರಾಜನತ್ತ ತಿರುಗಿದ ಸ್ವಾಮೀಜಿ… ನೋಡು ಮಹಾರಾಜ ಪ್ರತಿಯೊಬ್ಬ ಹಿಂದೂವು ತನ್ನ ಅಂತರಂಗದಲ್ಲಿರುವ ದೇವರಿಗೆ ಕಲ್ಲಿನ ಮುಖಾಂತರವೋ ಅಥವಾ ಭಾವಚಿತ್ರದ ಮುಖಾಂತರವೋ ಒಂದು ರೂಪ ಕೊಟ್ಟು ಪೂಜೆ ಮಾಡುತ್ತಾರೆ … ಯಾವ ಹಿಂದೂವು ಕೂಡ ಓ ಕಲ್ಲೆ ನನಗೆ ಒಳ್ಳೆಯದು ಮಾಡು, ಓ ಭಾವಚಿತ್ರವೇ ನನಗೆ ಒಳ್ಳೆಯದು ಮಾಡು ಅನ್ನೋದಿಲ್ಲ… ಎದುರಿಗಿರುವ ದೇವರ ವಿಗ್ರಹ ಕಲ್ಲು ಅಂತ ಗೊತ್ತಿದ್ದರೂ ಸಹ ಅದರಲ್ಲಿ ದೇವರನ್ನು ಕಾಣುತ್ತಾ ತಮ್ಮ ಅಂತರಂಗವನ್ನು ಸಂತೋಷಪಡಿಸಿಕೊಳ್ಳುತ್ತಾರೆ… ನಮ್ಮ ಹಿಂದೂಗಳು!

ಹಿಂದುತ್ವದಲ್ಲಿ ಯಾರಿಗೂ ಹೀಗೆ ಪೂಜಿಸಬೇಕು ಎನ್ನುವ ಕಡ್ಡಾಯ ನಿಯಮವಿಲ್ಲ. ಅವರವರ ಧಾರ್ಮಿಕ ಆದರ್ಶಗಳಿಗೆ ತಕ್ಕಂತೆ ಪೂಜೆ ಮಾಡ್ತಾರೆ ಅಷ್ಟೇ… ಇಷ್ಟು ಹೇಳುವಾಗಲೇ ಮಂಗಳಸಿಂಗ್ ತನ್ನ ಸೋಲನ್ನು ಒಪ್ಪಿಕೊಂಡಿದ್ದ. ಯಾಕೆಂದರೆ, ವಿವೇಕಾನಂದರ ಮಾರ್ಮಿಕ ಸಮರ್ಥನೆ ಹಾಗಿತ್ತು! (ಬರಹ -ಸಂಪಿಗೆ ವಾಸುದೇವ)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್