ಕಂಬಳ ವೀರನ ‘ಮಿಂಚಿನ ಓಟ’.. SAI ಸಂಪರ್ಕಕ್ಕೆ ಸೂಚಿಸಿದ ಕೇಂದ್ರ ಕ್ರೀಡಾ ಸಚಿವ

ದೆಹಲಿ: ಕರ್ನಾಟಕದ ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳ ಕ್ರೀಡೆಯಲ್ಲಿ ಮಿಂಚಿನ ವೇಗದಲ್ಲಿ ಕೋಣ ಓಡಿಸುವ ಮೂಲಕ ದಕ್ಷಿಣ ಕನ್ನಡದ ಶ್ರೀನಿವಾಸಗೌಡ‌‌ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದಾರೆ. ಈ ಮೂಲಕ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್​ ದಾಖಲೆಗಳನ್ನು ಮುರಿದಿದ್ದಾರೆ.

ಇದನ್ನೂ ಓದಿ: ಜಗತ್ತಿನ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ!

ಇದೀಗ ಕಂಬಳ ಓಟಗಾರ ಶ್ರೀನಿವಾಸಗೌಡ‌ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗಮನ ಸೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿರಣ್ ರಿಜಿಜು, ಶ್ರೀನಿವಾಸಗೌಡಗೆ ಕ್ರೀಡಾ ಪ್ರಾಧಿಕಾರದ ಕೋಚ್​ಗಳಿಂದ ಕೋಚಿಂಗ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಒಲಿಂಪಿಕ್ ಕ್ರೀಡೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ದೇಶದಲ್ಲಿ ಪ್ರತಿಭಾವಂತರು ಅವಕಾಶ ಸಿಗದೇ ವಂಚಿತರಾಗಬಾರದು. ಹೀಗಾಗಿ ಶ್ರೀನಿವಾಸಗೌಡ ಸಾಮರ್ಥ್ಯ ಪರೀಕ್ಷೆಗೆ ಕೇಂದ್ರ ಕ್ರೀಡಾ ಇಲಾಖೆ ಮುಂದಾಗಿದೆ.

ಶ್ರೀನಿವಾಸ ಗೌಡರನ್ನು ಸಂಪರ್ಕಿಸಿದ SAI ಅಧಿಕಾರಿಗಳು:
ಉನ್ನತ ರಾಷ್ಟ್ರೀಯ ತರಬೇತುದಾರರು ಶ್ರೀನಿವಾಸ ಗೌಡರ ಸಾಮರ್ಥ್ಯ ಪರೀಕ್ಷೆ ನಡೆಸಲಿದ್ದಾರೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ, ಭರವಸೆ ನೀಡುತ್ತಿದ್ದಂತೆ ಶ್ರೀನಿವಾಸ ಗೌಡ ಅವರಿಗೆ ರೈಲ್ವೇ ಟಿಕೆಟ್ ಕೂಡಾ ಬುಕ್ ಮಾಡಲಾಗಿದೆ, ಸೋಮವಾರ ಅವರು ಸಾಯಿ ಕೇಂದ್ರವನ್ನು ತಲುಪಲಿದ್ದಾರೆ ಎಂದು ಮೂಲಗಳು ಹೇಳಿವೆ.

ಟ್ವೀಟ್ ಮೂಲಕ ಶ್ರೀನಿವಾಸ ಗೌಡ ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವರ ಗಮನಕ್ಕೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ತಂದಿದ್ದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!