Asia Cup Men’s Hockey 2022: ಏಷ್ಯಾ ಕಪ್ ಹಾಕಿಯಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿ

Asia Cup Men's Hockey 2022: ಏಷ್ಯಾ ಕಪ್ ಹಾಕಿಯಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿ
Asia Cup Men's Hockey 2022

Asia Cup Men's Hockey 2022: ಭಾರತ ಮತ್ತು ಪಾಕಿಸ್ತಾನ ಹೀರೋ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ತಲಾ 3 ಬಾರಿ ಜಯ ಸಾಧಿಸಿದೆ. ಭಾರತ 2003, 2007 ಮತ್ತು 2017ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.

TV9kannada Web Team

| Edited By: Zahir PY

Apr 28, 2022 | 7:28 PM

Asia Cup Men’s Hockey 2022:  ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗುತ್ತಿದೆ. ಆದರೆ ಈ ಬಾರಿ ಕ್ರಿಕೆಟ್​ನಲ್ಲಿ ಅಲ್ಲ ಎಂಬುದಷ್ಟೇ ವಿಶೇಷ. ಹೌದು, ಇಂಡೋನೇಷ್ಯಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ 2022 ರ ಮೊದಲ ಪಂದ್ಯದಲ್ಲೇ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಮೇ 23 ರಂದು ನಡೆಯಲಿರುವ ಈ ಪಂದ್ಯದ ಮೂಲಕ ಪೂಲ್ ಎ ನಲ್ಲಿರುವ ಉಭಯ ತಂಡಗಳು ಏಷ್ಯಾ ಕಪ್ ಅಭಿಯಾನ ಆರಂಭಿಸಲಿದೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಏಷ್ಯಾಕಪ್ ಹಾಕಿ ಟೂರ್ನಿ ಮಹತ್ವದ್ದಾಗಿದೆ. ಏಕೆಂದರೆ ಏಷ್ಯಾ ಕಪ್ ಗೆಲುವಿನ ಮೂಲಕ ಒಲಿಂಪಿಕ್ಸ್​ ಗೆಲುವಿನ ಲಯವನ್ನು ಮುಂದುವರೆಸುವ ಇರಾದೆಯಲ್ಲಿದ್ದೆ ಟೀಮ್ ಇಂಡಿಯಾ ಹಾಕಿ ಪಡೆ.

ಇನ್ನು ಪೂಲ್ ಎ ನಲ್ಲಿ ಭಾರತ-ಪಾಕಿಸ್ತಾನ ಹೊರತುಪಡಿಸಿ, ಜಪಾನ್ ಮತ್ತು ಆತಿಥೇಯ ಇಂಡೋನೇಷ್ಯಾ ತಂಡವಿದೆ. ಮತ್ತೊಂದೆಡೆ, ಮಲೇಷ್ಯಾ, ಕೊರಿಯಾ, ಒಮನ್ ಮತ್ತು ಬಾಂಗ್ಲಾದೇಶ ತಂಡಗಳನ್ನು ಪೂಲ್ ಬಿ ನಲ್ಲಿದೆ. ಒಟ್ಟು 8 ತಂಡಗಳು ಈ ಸೆಣಸಲಿದ್ದು, ಇದರಲ್ಲಿ ನಾಲ್ಕು ತಂಡಗಳು ಸೂಪರ್ 4 ಗೆ (ಸೆಮಿಫೈನಲ್) ಪ್ರವೇಶಿಸಲಿದೆ. ಅಂದರೆ ಎರಡೂ ಪೂಲ್​ಗಳಿಂದ ಎರಡು ತಂಡ ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಫೈನಲ್​ನಲ್ಲಿ ಮತ್ತೆ ಭಾರತ-ಪಾಕಿಸ್ತಾನ್ ಮುಖಾಮುಖಿಯಾದರೂ ಅಚ್ಚರಿಪಡಬೇಕಿಲ್ಲ.

ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ: ಭಾರತವು ಮೇ 23 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಎರಡನೇ ಪಂದ್ಯ ಮೇ 24ರಂದು ಜಪಾನ್ ವಿರುದ್ಧ ನಡೆಯಲಿದೆ. ಹಾಗೆಯೇ ಕೊನೆಯ ಪಂದ್ಯವನ್ನು ಆತಿಥೇಯ ಇಂಡೋನೇಷ್ಯಾ ವಿರುದ್ಧ ಮೇ 26 ರಂದು ಆಡಲಿದೆ.

8 ತಂಡಗಳ ಟೂರ್ನಿ: ಏಷ್ಯಾ ಕಪ್ ಹಾಕಿ ಟೂರ್ನಮೆಂಟ್‌ನ 11 ನೇ ಆವೃತ್ತಿಯು ಮೇ 23 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 1 ರಂದು ನಡೆಯಲಿದೆ. ಅಂದರೆ ಒಂದು ವಾರಗಳಲ್ಲಿ ಇಡೀ ಟೂರ್ನಿಯನ್ನು ಮುಗಿಸಲು ಏಷ್ಯಾನ್ ಹಾಕಿ ಫೆಡರೇಷನ್ ನಿರ್ಧರಿಸಿದೆ. ಹೀಗಾಗಿ ಅಲ್ಪಾವಧಿಯಲ್ಲಿ ಹೊಸ ಚಾಂಪಿಯನ್ ಹೊರಹೊಮ್ಮಲಿದೆ.

ಯಾರು ಚಾಂಪಿಯನ್​? ಭಾರತ ಮತ್ತು ಪಾಕಿಸ್ತಾನ ಹೀರೋ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ತಲಾ 3 ಬಾರಿ ಜಯ ಸಾಧಿಸಿದೆ. ಭಾರತ 2003, 2007 ಮತ್ತು 2017ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಹಾಗೆಯೇ ಪಾಕಿಸ್ತಾನ 1982, 1985 ಮತ್ತು 1989 ರಲ್ಲಿ ಗೆದ್ದಿದೆ. ಇನ್ನು ಏಷ್ಯಾಕಪ್​ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ದಕ್ಷಿಣ ಕೊರಿಯಾ ಇಲ್ಲಿಯವರೆಗೆ 4 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇಂಡೋನೇಷ್ಯಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಈ ಬಾರಿ ಯಾರು ಚಾಂಪಿಯನ್ ಆಗಲಿದ್ದಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

Follow us on

Related Stories

Most Read Stories

Click on your DTH Provider to Add TV9 Kannada