Asian Youth Boxing Championships: ಏಷ್ಯನ್ ಯೂತ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 6 ಚಿನ್ನದ ಪದಕ

ಕಳೆದ ಬಾರಿ ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ನಡೆದ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಐದು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿತ್ತು.

Asian Youth Boxing Championships: ಏಷ್ಯನ್ ಯೂತ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 6 ಚಿನ್ನದ ಪದಕ
Asian Youth Boxing Championships

ದುಬೈನಲ್ಲಿ ನಡೆದ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಬಾಕ್ಸರ್​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಚಾಂಪಿಯನ್‌ಶಿಪ್‌ನ 10 ನೇ ದಿನದಂದು ಯೂತ್ ಬಾಕ್ಸಿಂಗ್​ ವಿಭಾಗದಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಈ ವಿಭಾಗದಲ್ಲಿ ಭಾರತ ಇದುವರೆಗೆ ಒಟ್ಟು ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ತನ್ನದಾಗಿಸಿದೆ. ಮೊದಲು ಜೂನಿಯರ್ ವಿಭಾಗದಲ್ಲಿ ಭಾರತದ ಬಾಕ್ಸರ್​ಗಳು ಅತ್ಯುತ್ತಮ ಪ್ರದರ್ಶನದೊಂದಿಗೆ ಅಭಿಯಾನ ಆರಂಭಿಸಿತು. ಈ ವಿಭಾಗದಲ್ಲಿ ಭಾರತವು ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದಿದ್ದು, ಅದರಲ್ಲಿ ಆರು ಪದಕಗಳು ಬಾಲಕಿಯರು ಪಡೆದರೆ ಮತ್ತು ಎರಡು ಪದಕ ಹುಡುಗರ ವಿಭಾಗದಿಂದ ಲಭಿಸಿದೆ.

ಚಿನ್ನದ ಪದಕ ವಿಜೇತರು:
ಪ್ರೀತಿ ದಹಿಯಾ (60 ಕೆಜಿ), ಸ್ನೇಹ ಕುಮಾರಿ (66 ಕೆಜಿ), ಖುಷಿ (75 ಕೆಜಿ) ಮತ್ತು ನೇಹಾ (54 ಕೆಜಿ) ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಕೋವಿಡ್ -19 ರ ಕಾರಣದಿಂದಾಗಿ ಪ್ರಯಾಣದ ನಿರ್ಬಂಧಗಳಿಂದಾಗಿ ಅನೇಕ ರಾಷ್ಟ್ರಗಳು ಈ ಸ್ಪರ್ಧೆಯಲ್ಲಿ ತಮ್ಮ ಆಟಗಾರರನ್ನು ಕಣಕ್ಕಿಳಿಸಿಲ್ಲ. ವಿಶೇಷವಾಗಿ ಮಹಿಳಾ ವಿಭಾಗದಲ್ಲಿ ಈ ಬಾರಿ ಕಡಿಮೆ ಸರ್ಧಾಳುಗಳು ಕಾಣಿಸಿಕೊಂಡಿದ್ದರು.

ಇದರಿಂದಾಗಿ ಭಾರತದ 10 ಮಹಿಳಾ ಬಾಕ್ಸರ್​ಗಳಲ್ಲಿ ಆರು ಮಂದಿ ಫೈನಲ್​ ಪ್ರವೇಶಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಪ್ರೀತಿ ದಹಿಯಾ 3-2 ಅಂತರದಲ್ಲಿ ಕಜಕಿಸ್ತಾನದ ಜುಲ್ದಿಜ್ ಶೇಕ್ಮೆಟೋವಾ ಅವರನ್ನು ಸೋಲಿಸಿದರೆ, ಸ್ನೇಹಾ ಯುಎಇಯ ರಹಮಾ ಖಲ್ಫಾನ್ ಅಲ್ಮುರ್ಷಿದಿಯನ್ನು ಸೋಲಿಸಿದರು. ಖುಷಿ ಕಜಕಿಸ್ತಾನದ ದಾನಾ ದಿದೆಯನ್ನು 3-0 ಅಂತರದಿಂದ ಪರಾಜಯಗೊಳಿಸಿದರು.

ವಿಶ್ವಾಮಿತ್ರ ಮತ್ತು ವಿಶಾಲ್ ಚಿನ್ನ ಗೆದ್ದರು:
ಪುರುಷರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತರಾದ ವಿಶ್ವಾಮಿತ್ರಾ ಚೋಂಗ್‌ಥಮ್ (51 ಕೆಜಿ) ಮತ್ತು ವಿಶಾಲ್ (80 ಕೆಜಿ) ಚಿನ್ನದ ಪದಕಗಳನ್ನು ಗೆದ್ದರು. ಮಹಿಳೆಯರಲ್ಲಿ ಪ್ರೀತಿ (57 ಕೆಜಿ), ಖುಷಿ (63 ಕೆಜಿ), ತನಿಷಾ ಸಂಧು (81 ಕೆಜಿ), ನಿವೇದಿತಾ (48 ಕೆಜಿ), ತಮನ್ನಾ (50 ಕೆಜಿ) ಮತ್ತು ಸಿಮ್ರಾನ್ (52 ಕೆಜಿ) ಬೆಳ್ಳಿ ಪದಕಗಳನ್ನು ಪಡೆದರು. ಪುರುಷರ ವಿಭಾಗದಲ್ಲಿ ವಿಶ್ವನಾಥ ಸುರೇಶ್ (48 ಕೆಜಿ), ವಂಶಮಾನ್ (63.5 ಕೆಜಿ) ಮತ್ತು ಜೈದೀಪ್ ರಾವತ್ (71 ಕೆಜಿ) ಬೆಳ್ಳಿ ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಮುಗಿಸಿದರು.

ಇನ್ನು ಐದು ಭಾರತೀಯ ಬಾಕ್ಸರ್‌ಗಳು ಯೂತ್ ಚಾಂಪಿಯನ್​ಶಿಪ್​ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಗೆದ್ದಿದ್ದರು. ಪುರುಷರ ವಿಭಾಗದಲ್ಲಿ ದಕ್ಷ (67 ಕೆಜಿ), ದೀಪಕ್ (75 ಕೆಜಿ), ಅಭಿಮನ್ಯು (92 ಕೆಜಿ) ಮತ್ತು ಅಮನ್ ಸಿಂಗ್ ಬಿಶ್ತ್ (92 ಕೆಜಿಗಿಂತ ಹೆಚ್ಚು), ಮಹಿಳೆಯರ ವಿಭಾಗದಲ್ಲಿ ಲಶು ಯಾದವ್ (70 ಕೆಜಿ) ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ಬಾರಿ ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ನಡೆದ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಐದು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿತ್ತು. ಯುವ ವಿಭಾಗದಲ್ಲಿ, ಚಿನ್ನದ ಪದಕ ವಿಜೇತರಿಗೆ USD 6,000, ಬೆಳ್ಳಿ ಪದಕ ವಿಜೇತರಿಗೆ USD 3,000 ಮತ್ತು ಕಂಚಿನ ಪದಕ ವಿಜೇತರಿಗೆ USD 1,500 ನೀಡಲಾಯಿತು. ಭಾರತ ಈ ಮೊದಲು ಜೂನಿಯರ್ ವಿಭಾಗದಲ್ಲಿ ಎಂಟು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದಿತ್ತು. ಈ ಬಾರಿ ಯೂತ್ ಹಾಗೂ ಜೂನಿಯರ್ ವಿಭಾಗಗಳ ಚಾಂಪಿಯನ್​ಶಿಪ್​ ಅನ್ನು ಜೊತೆಯಾಗಿ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

ಇದನ್ನೂ ಓದಿ: ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ

ಇದನ್ನೂ ಓದಿ: ವಿದೇಶಿ ತಂಡದ ನಾಯಕತ್ವನ್ನು ತ್ಯಜಿಸಿ ಭಾರತದಲ್ಲಿ ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರ

(Asian Youth Boxing Championships Indians add 6 more gold medals)

Read Full Article

Click on your DTH Provider to Add TV9 Kannada