ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ಪರಸ್ಪರ ವಾಗ್ವಾದ

ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ಪರಸ್ಪರ ವಾಗ್ವಾದ

ಜೋಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ಆಟಗಾರರು ಮೈದಾನದಲ್ಲೇ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದಾರೆ. ಆಲ್​ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ವೇಗಿ ಸ್ಟುವರ್ಟ್ ಬ್ರಾಡ್, ವಿರಾಮ ವೇಳ ಜಗಳವಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಜಗಳಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದಿಲ್ಲ. ಪೀಟರ್ ಸಿಡಲ್ ನಿವೃತ್ತಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ಆಸಿಸ್ ವೇಗಿ, ಪೀಟಲ್ ಸಿಡಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2008ರಲ್ಲಿ ಭಾರತ ವಿರುದ್ಧದ ಟೆಸ್ಟ್ ಮೂಲಕ ಪೀಟರ್, ಅಂತಾರಾಷ್ಟ್ರೀಯ […]

sadhu srinath

|

Dec 30, 2019 | 8:13 AM

ಜೋಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ಆಟಗಾರರು ಮೈದಾನದಲ್ಲೇ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದಾರೆ. ಆಲ್​ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ವೇಗಿ ಸ್ಟುವರ್ಟ್ ಬ್ರಾಡ್, ವಿರಾಮ ವೇಳ ಜಗಳವಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಜಗಳಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದಿಲ್ಲ.

ಪೀಟರ್ ಸಿಡಲ್ ನಿವೃತ್ತಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ಆಸಿಸ್ ವೇಗಿ, ಪೀಟಲ್ ಸಿಡಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2008ರಲ್ಲಿ ಭಾರತ ವಿರುದ್ಧದ ಟೆಸ್ಟ್ ಮೂಲಕ ಪೀಟರ್, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿಕೊಟ್ಟಿದ್ರು. ಆದ್ರೆ, ಸಿಡಲ್ ದೇಸಿ ಕ್ರಿಕೆಟ್​ನಲ್ಲಿ ಮುಂದುವರೆಯೋದಾಗಿ ತಿಳಿಸಿದ್ದಾರೆ.

ಟೀಕೆಗೆ ಗುರಿಯಾದ ಶಿವಂ-ಐಯ್ಯರ್: ಮುಂಬೈ ತಂಡದ ಶಿವಂ ದುಬೆ ಹಾಗೂ ಶ್ರೇಯಸ್ ಐಯ್ಯರ್, ದಿಗ್ಗಜ ಕ್ರಿಕೆಟಿಗ ಟೀಕೆಗೆ ಗುರಿಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ 5-6ದಿನ ಸಮಯ ಇತ್ತು. ಆದ್ರೂ ದುಬೆ-ಐಯ್ಯರ್ ಮುಂಬೈ ತಂಡವನ್ನ ಸೇರಿಕೊಂಡಿದ್ದಿಲ್ಲ. ಇಬ್ಬರು ತಂಡದಲ್ಲಿ ಆಡಿದ್ರೆ, ರೈಲ್ವೇಸ್ ವಿರುದ್ಧ ಮುಂಬೈ ಸೋಲುಕಾಣ್ತಿರಲಿಲ್ಲ ಅಂತ ಆರೋಪಿಸಲಾಗ್ತಿದೆ.

ಆಸ್ಟ್ರೇಲಿಯಾಗೆ ಗೆಲುವು: ಮೆಲ್ಬರ್ನ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನಲ್ಲೂ ಆಸ್ಟ್ರೇಲಿಯಾ 247ರನ್​ಗಳ ಗೆಲುವು ಸಾಧಿಸಿದೆ. 487ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್, 240ರನ್​ಗೆ ಆಲೌಟ್ ಆಯ್ತು. ನ್ಯೂಜಿಲೆಂಡ್ ಪರ ಟಾಮ್ ಬ್ಲೆಂಡೆಲ್ 121ರನ್ ಗಳಿಸಿದ್ರು. ನಾಥನ್ ಲಿಯಾನ್ 4ವಿಕೆಟ್ ಪಡೆದು ಮಿಂಚಿದ್ರು.

Follow us on

Related Stories

Most Read Stories

Click on your DTH Provider to Add TV9 Kannada