ಇನ್ಮುಂದೆ ಕ್ರಿಕೆಟ್​ನಲ್ಲಿ ಬೌನ್ಸರ್​ ಬ್ಯಾನ್​?: ಮಹತ್ವದ ವರದಿ ನೀಡಿದ ತಜ್ಞರ ತಂಡ

ತಲೆಯ ರಕ್ಷಣೆಗೆ ಹೆಲ್ಮೆಟ್​ ಹಾಕಿಕೊಳ್ಳಲಾಗುತ್ತದೆ. ಆದರೆ, ಕೆಲವೊಮ್ಮೆ ಬೌನ್ಸರ್​ನಿಂದ ತಲೆಗೆ ಬೀಳುವ ಏಟು ಬಲವಾಗಿರುತ್ತದೆ. ಇದು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರಬಹುದು ಎಂಬುದು ತಜ್ಞರ ಮಾತು.

ಇನ್ಮುಂದೆ ಕ್ರಿಕೆಟ್​ನಲ್ಲಿ ಬೌನ್ಸರ್​ ಬ್ಯಾನ್​?: ಮಹತ್ವದ ವರದಿ ನೀಡಿದ ತಜ್ಞರ ತಂಡ
ಸಾಂದರ್ಭಿಕ ಚಿತ್ರ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 25, 2021 | 4:15 PM

ಲಂಡನ್: ಬೌಲರ್​ ಎಸೆಯುವ ಬೌನ್ಸರ್ ಬ್ಯಾಟ್ಸ್​​ಮನ್​ ತಲೆಗೆ ಬಿದ್ದು ಗಂಭೀರ ಗಾಯಗಳಾದ ಉದಾಹರಣೆ ಸಾಕಷ್ಟಿದೆ. ಹೀಗಾಗಿ, ಅಂಡರ್​-18 ಕ್ರಿಕೆಟ್​ನಲ್ಲಿ ಬೌನ್ಸರ್​ ನಿಷೇಧ ಮಾಡಲು ಇಂಗ್ಲೆಂಡ್​ ತಜ್ಞರ ಸಮಿತಿ ಸರ್ಕಾರಕ್ಕೆ ಸೂಚಿಸಿದೆ.

ಯುವ ಪೀಳಿಗೆಯು ಮಿದುಳಿನ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈ ಅವಧಿಯಲ್ಲಿ ತಲೆಗೆ ಏಟು ಬಿದ್ದರೆ ಮಿದುಳಿಗೆ ಹೆಚ್ಚು ಸಮಸ್ಯೆ ಉಂಟಾಗಬಹುದು. ಹೀಗಾಗಿ, 18 ವರ್ಷದೊಳಗಿನವರ ಕ್ರಿಕೆಟ್​ ಮ್ಯಾಚ್​ನಲ್ಲಿ ಬೌನ್ಸರ್​ ನಿಷೇಧ ಮಾಡಬೇಕು. ಈ ಮೂಲಕ, ಆಟಗಾರರಿಗೆ ಮುಂದಾಗುವ ತೊಂದರೆ ತಡೆಗಟ್ಟಬೇಕು ಎಂದು ತಜ್ಞರು ಕೋರಿದ್ದಾರೆ.

ತಲೆಯ ರಕ್ಷಣೆಗೆ ಹೆಲ್ಮೆಟ್​ ಹಾಕಿಕೊಳ್ಳಲಾಗುತ್ತದೆ. ಆದರೆ, ಕೆಲವೊಮ್ಮೆ ಬೌನ್ಸರ್​ನಿಂದ ತಲೆಗೆ ಬೀಳುವ ಏಟು ಬಲವಾಗಿರುತ್ತದೆ. ಇದು ನೇರವಾಗಿ ಮಿದುಳಿನ ಮೇಲೆ ಪರಿಣಾಮ ಬೀರಬಹುದು ಎಂಬುದು ತಜ್ಞರ ಮಾತು.

20 ವರ್ಷದವರೆಗೂ ಮಿದುಳು ಬೆಳವಣಿಗೆ ಕಾಣುತ್ತಿರುತ್ತದೆ. ಈ ಅವಧಿಯಲ್ಲಿ ಮಿದುಳಿಗೆ ಸಣ್ಣ ತೊಂದರೆ ಉಂಟಾದರೂ ಅದರ ಪರಿಣಾಮ ತುಂಬಾ ದೊಡ್ಡದು. ಹೀಗಾಗಿ, ಕ್ರಿಕೆಟ್​ ಆಟಗಾರರ ಭವಿಷ್ಯದ ದೃಷ್ಟಿಯಲ್ಲಿ ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ತಜ್ಞರು.

ಈಗಾಗಲೇ ಈ ಬಗ್ಗೆ ಲಂಡನ್​ ಸರ್ಕಾರಕ್ಕೆ ತಜ್ಞರು ಈ ಬಗ್ಗೆ ವರದಿ ನೀಡಿದ್ದಾರೆ. ಒಂದೊಮ್ಮೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದರೆ, ಈ ಬಗ್ಗೆ ಅವರು ಐಸಿಸಿ ಜತೆ ಚರ್ಚೆ ಮಾಡಿ ನಿಯಮ ಜಾರಿಗೆ ತರಲು ಒತ್ತಡ ಹೇರಬಹುದು.

India vs Australia Test Series 2020: ಶಮಿಗೆ ಮೂಳೆ ಮುರಿತ, ಮಿಕ್ಕಿದ ಮೂರು ಟೆಸ್ಟ್​ಗಳಿಂದ ಹೊರಗೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada