ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಡಿವಿಲಿಯರ್ಸ್ ಅವರನ್ನು ಅಭಿಮಾನಿಗಳು ದಕ್ಷಿಣ ಆಫ್ರಿಕಾ ಜರ್ಸಿಯಲ್ಲಿ ನೋಡಬಹುದು; ಗ್ರೇಮ್ ಸ್ಮಿತ್

ಟಿ 20 ಸರಣಿಯಲ್ಲಿ ಅಭಿಮಾನಿಗಳು ಮತ್ತೆ ಎಬಿ ಯನ್ನು ದಕ್ಷಿಣ ಆಫ್ರಿಕಾ ಜರ್ಸಿಯಲ್ಲಿ ನೋಡಬಹುದು ಎಂದು ಹೇಳಿದರು.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಡಿವಿಲಿಯರ್ಸ್ ಅವರನ್ನು ಅಭಿಮಾನಿಗಳು ದಕ್ಷಿಣ ಆಫ್ರಿಕಾ ಜರ್ಸಿಯಲ್ಲಿ ನೋಡಬಹುದು; ಗ್ರೇಮ್ ಸ್ಮಿತ್
ಎಬಿ ಡಿವಿಲಿಯರ್ಸ್

ಟಿ 20 ವಿಷಯಕ್ಕೆ ಬಂದರೆ, ಎಬಿ ಡಿವಿಲಿಯರ್ಸ್ ಹೊರತುಪಡಿಸಿ ಈ ಚುಟುಕು ಸಮರವನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ. ನಾಲ್ಕು ದಿಕ್ಕುಗಳಿಗೂ ಬಾಲಿನ ದರ್ಶನ ಮಾಡಿಸುವ ಬ್ಯಾಟ್ಸ್‌ಮನ್. ಅದಕ್ಕಾಗಿಯೇ ಜಗತ್ತು ಅವರನ್ನು ಮಿಸ್ಟರ್ 360 ಡಿಗ್ರಿ ಎಂದು ಕರೆಯುತ್ತದೆ. ಎಬಿಡಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದರು, ಆದರೆ 2018 ರಲ್ಲಿ ಹಠಾತ್ ನಿವೃತ್ತಿ ಹೊಂದಿದ ನಂತರ, ಅವರು ಐಪಿಎಲ್​ನಲ್ಲಿ ಬಾರಿ ಮನ್ನಣೆ ಪಡೆದರು. ಆದರೆ, ಈಗ ಮತ್ತೊಮ್ಮೆ ಸ್ಫೋಟಕ ಬ್ಯಾಟ್ಸ್‌ಮನ್‌ನನ್ನು ಕ್ರಿಕೆಟ್​ ಅಭಿಮಾನಿಗಳು ರಾಷ್ಟ್ರೀಯ ತಂಡದಲ್ಲಿ ನೋಡಲು ಬಯಸುತ್ತಿದ್ದಾರೆ.

ಎಬಿ ಡಿವಿಲಿಯರ್ಸ್ ಹಿಂದಿರುಗುವ ಸೂಚನೆ ನೀಡಿದರು
2018 ರಲ್ಲಿ 15 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್ ಆಡಿದ ನಂತರ ನಿವೃತ್ತರಾದ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಅಂತರರಾಷ್ಟ್ರೀಯ ಪಿಚ್‌ಗೆ ಇಳಿಯಬಹುದು. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ದೇಶಕ ಗ್ರೇಮ್ ಸ್ಮಿತ್ ನೀಡಿದ್ದಾರೆ. ಆದರೆ, ಈ ಸೂಚನೆಯನ್ನು ಕಳೆದ ತಿಂಗಳು ಹೆಡ್ ಕೋಚ್ ಮಾರ್ಕ್ ಬೌಚರ್ ಕೂಡ ನೀಡಿದ್ದರು. ಟಿ 20 ವಿಶ್ವಕಪ್‌ಗೆ ಎಬಿ ಡಿವಿಲಿಯರ್ಸ್ ಹಿಂದಿರುಗುವ ಸೂಚನೆ ನೀಡಿದರು. 37 ವರ್ಷದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸ್ವತಃ ಐಪಿಎಲ್ 2021 ರ ಪೋಸ್ಟ್‌ಮ್ಯಾಚ್ ಪ್ರಸ್ತುತಿಯಲ್ಲಿ, ದಕ್ಷಿಣ ಆಫ್ರಿಕಾ ಪರ ಮತ್ತೊಮ್ಮೆ ಆಡುವುದು ಒಳ್ಳೆಯದು ಎಂದು ಹೇಳಿದರು. ಕಳೆದ ವರ್ಷ ನಾನು ಮಾರ್ಕ್ ಬೌಚರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದಲ್ಲದೆ ದೇಶದ ಪರ ಕ್ರಿಕೆಟ್​ ಆಡುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದರು.

ಬೌಚರ್ ನಂತರ ಸ್ಮಿತ್ ಅಭಿಪ್ರಾಯ
ಮಾರ್ಕ್ ಬೌಚರ್ ಹೇಳಿಕೆ ನೀಡಿದ ಒಂದು ತಿಂಗಳ ನಂತರ, ಗ್ರೇಮ್ ಸ್ಮಿತ್ ಎಬಿ ಡಿವಿಲಿಯರ್ಸ್ ಹಿಂದಿರುಗುವ ಬಗ್ಗೆ ಸುಳಿವು ನೀಡಿದ್ದಾರೆ. ಎಬಿ ಡಿವಿಲಿಯರ್ಸ್ ಅವರಲ್ಲದೆ, ಇಮ್ರಾನ್ ತಾಹಿರ್ ಮತ್ತು ಕ್ರಿಸ್ ಮೋರಿಸ್ ಹಿಂದಿರುಗುವ ಬಗ್ಗೆಯೂ ಅವರು ಸುಳಿವು ನೀಡಿದರು. ಈ ಆಟಗಾರರು ಮರಳುವ ಮೂಲಕ ದಕ್ಷಿಣ ಆಫ್ರಿಕಾದ ತಂಡವು ಬಲಗೊಳ್ಳುತ್ತದೆ ಎಂದು ಸ್ಮಿತ್​ ಹೇಳಿದರು.

ಎಬಿಯವರನ್ನು ದಕ್ಷಿಣ ಆಫ್ರಿಕಾದ ಜರ್ಸಿಯಲ್ಲಿ ಕಾಣಬಹುದು
ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾದ ಯೋಜನೆಗಳನ್ನು ಪ್ರಕಟಿಸುತ್ತಿದ್ದಾಗ ಸ್ಮಿತ್, ಎಬಿ ಡಿವಿಲಿಯರ್ಸ್ ಪುನರಾಗಮನದ ಬಗ್ಗೆ ಮಾತನಾಡಿದರು. 2 ಟೆಸ್ಟ್ ಮತ್ತು 5 ಟಿ 20 ಸರಣಿಗಳಿಗಾಗಿ ದಕ್ಷಿಣ ಆಫ್ರಿಕಾ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಬೇಕಾಗಿದೆ. ಇದನ್ನು ಘೋಷಿಸಿದ ಸ್ಮಿತ್, ಟಿ 20 ಸರಣಿಯಲ್ಲಿ ಅಭಿಮಾನಿಗಳು ಮತ್ತೆ ಎಬಿ ಯನ್ನು ದಕ್ಷಿಣ ಆಫ್ರಿಕಾ ಜರ್ಸಿಯಲ್ಲಿ ನೋಡಬಹುದು ಎಂದು ಹೇಳಿದರು.

ಇದನ್ನೂ ಓದಿ:IPL 2021: ಎಬಿಡಿ ಆರ್ಸಿಬಿ ಆಸ್ತಿ.. ಪಡಿಕ್ಕಲ್ ಯಾರನ್ನ ಹೆಚ್ಚಾಗಿ ಇಷ್ಟಪಡ್ತಾನೋ ಗೊತ್ತಿಲ್ಲ, ಆದ್ರೆ ನಿನ್ನನ್ನ ಮಾತ್ರ ಇಷ್ಟಪಡೋದಿಲ್ಲ: ಕೊಹ್ಲಿ