ಕೊಲ್ಕತ್ತಾ ಸೋಲಿನ ಬಗ್ಗೆ ಶಾರುಕ್ ಖಾನ್ ಟ್ವೀಟ್; ಆಟದ ಅಂತ್ಯದವರೆಗೂ ಏನನ್ನೂ ಹೇಳಲಾಗದು ಎಂದ ಆ್ಯಂಡ್ರೂ ರಸೆಲ್

ಶಾರುಕ್ ಖಾನ್ ಟ್ವೀಟ್​ಗೆ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಆಟಗಾರ ಆ್ಯಂಡ್ರೂ ರಸೆಲ್ ಪ್ರತಿಕ್ರಿಯಿಸಿದ್ದಾರೆ. ‘ಹೌದು, ನಾನು ಅವರ ಅಭಿಪ್ರಾಯವನ್ನು ಬೆಂಬಲಿಸುತ್ತೇನೆ. ಆದರೆ ಅಂತಿಮವಾಗಿ ಅದು ಕ್ರಿಕೆಟ್. ಆಟ ಮುಗಿಯುವವರೆಗೂ ಯಾವುದೂ ಹೀಗೇ ಎಂದು ಹೇಳಲಾಗುವುದಿಲ್ಲ’ ಎಂದು ಆ್ಯಂಡ್ರೂ ರಸೆಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

  • TV9 Web Team
  • Published On - 23:31 PM, 14 Apr 2021
ಕೊಲ್ಕತ್ತಾ ಸೋಲಿನ ಬಗ್ಗೆ ಶಾರುಕ್ ಖಾನ್ ಟ್ವೀಟ್; ಆಟದ ಅಂತ್ಯದವರೆಗೂ ಏನನ್ನೂ ಹೇಳಲಾಗದು ಎಂದ ಆ್ಯಂಡ್ರೂ ರಸೆಲ್
ಆಂಡ್ರೆ ರಸ್ಸೆಲ್

ಗೆಲುವಿನ ಸನಿಹದಲ್ಲಿದ್ದರೂ 10 ರನ್​ಗಳಿಂದ ಮುಂಬೈ ಇಂಡಿಯನ್ಸ್​ ವಿರುದ್ಧ ಪಂದ್ಯದಲ್ಲಿ ಸೋಲನುಭವಿಸಿದ್ದಕ್ಕಾಗಿ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಸಹ ಮಾಲೀಕ ಶಾರುಕ್ ಖಾನ್ ಟ್ವಿಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು,  ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದರು.

ಶಾರುಕ್ ಖಾನ್ ಟ್ವೀಟ್​ಗೆ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಆಟಗಾರ ಆ್ಯಂಡ್ರೂ ರಸೆಲ್ ಪ್ರತಿಕ್ರಿಯಿಸಿದ್ದಾರೆ. ‘ಹೌದು, ನಾನು ಅವರ ಅಭಿಪ್ರಾಯವನ್ನು ಬೆಂಬಲಿಸುತ್ತೇನೆ. ಆದರೆ ಅಂತಿಮವಾಗಿ ಅದು ಕ್ರಿಕೆಟ್. ಆಟ ಮುಗಿಯುವವರೆಗೂ ಯಾವುದೂ ಹೀಗೇ ಎಂದು ಹೇಳಲಾಗುವುದಿಲ್ಲ’ ಎಂದು ಆ್ಯಂಡ್ರೂ ರಸೆಲ್ ಹೇಳಿದ್ದಾರೆ.

ಕೊಲ್ಕತ್ತಾ ಪರ ಆರಂಭಿಕರಾದ ನಿತೀಶ್ ರಾಣಾ 57 (47) ಹಾಗೂ ಶುಬ್​ಮನ್ ಗಿಲ್ 33 (24) ದಾಖಲಿಸಿದ್ದರು. ಉಳಿದಂತೆ ಮಧ್ಯಮ ಕ್ರಮಾಂಕ ತಕ್ಷಣಕ್ಕೆ ಕುಸಿತ ಕಂಡು ಹೀನಾಯ ಸೋಲು ಕಾಣುವಂತಾಗಿದೆ. ಮುಂಬೈ ಪರ ರಾಹುಲ್ ಚಹರ್ 4 ಓವರ್ ಗೆ 27 ರನ್ ನೀಡಿ, 4 ವಿಕೆಟ್ ಕಬಳಿಸಿದ್ದಾರೆ. ಬೋಲ್ಟ್ 2 ವಿಕೆಟ್ ಪಡೆದಿದ್ದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್​ಗೆ 153 ಮೊತ್ತದ ಟಾರ್ಗೆಟ್  ನೀಡಿತ್ತು. ಕೋಲ್ಕತ್ತಾ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರು. ರಸ್ಸೆಲ್ 2 ಓವರ್ ಬೌಲ್ ಮಾಡಿ 15 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದ್ದರು. ಕಮಿನ್ಸ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದರು.

ಮುಂಬೈ ಪರ ಸೂರ್ಯಕುಮಾರ್ ಯಾದವ್ 56 (36) ಹಾಗೂ ನಾಯಕ ರೋಹಿತ್ ಶರ್ಮಾ 43 (32) ಹೊರತುಪಡಿಸಿ ಉಳಿದೆಲ್ಲರೂ ಎರಡಂಕಿ ದಾಟಲು ಪರದಾಡಿದ್ದರು. ಜಾನ್ಸೆನ್, ಬುಮ್ರಾ, ಬೋಲ್ಟ್ ಡಕ್​ಗೆ ಔಟ್ ಆಗಿದ್ದರು. ಮುಂಬೈ ದಾಂಡಿಗ ಸಮೂಹ ಪೆವಿಲಿಯನ್ ಪರೇಡ್ ನಡೆಸಿ ಕೊಲ್ಕತ್ತಾಗೆ ಕಡಿಮೆ ಮೊತ್ತದ ಟಾರ್ಗೆಟ್ ನೀಡಿತ್ತು. ಆದರೂ ಕೊಲ್ಕತ್ತಾ ನೈಟ್ ರೈಡರ್ಸ್ 10 ರನ್​ಗಳ ಸೋಲು ಕಂಡಿತ್ತು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಹೋಟೆಲ್ ಮಾಲೀಕನ ಆರ್​ಸಿಬಿ ಅಭಿಮಾನ; ರಾಯಲ್ ಚಾಲೆಂಜರ್ಸ್​ಗೆ ವಿಭಿನ್ನ ರೀತಿಯ ಬೆಂಬಲ

SRH vs RCB Live Score, IPL 2021: ವಾರ್ನರ್- ಪಾಂಡೆ ಜುಗಲ್​ಬಂದಿ; ವಿಕೆಟ್ ಪಡೆಯುವ ಒತ್ತಡದಲ್ಲಿ ಆರ್​ಸಿಬಿ ಬೌಲರ್​ಗಳು

(Andre Russel reacts Shahrukh Khan tweets on disappointment)