ಟ್ವೀಟ್​ ಮಾಡಿ ಶುಭ ಕೋರಿದ ಪ್ರಧಾನಿ ಮೋದಿ: ಟೀಂ ಇಂಡಿಯಾಕ್ಕೆ 5 ಕೋಟಿ ಬಹುಮಾನ ಘೋಷಣೆ..

ಕಾಂಗರೂ ಪಡೆಯ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್​ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ.

  • TV9 Web Team
  • Published On - 13:52 PM, 19 Jan 2021
ಗೆಲುವಿನ ಸಂಭ್ರಾಮಚರಣೆ

ದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವಿಜಯ ಸಾಧಿಸಿರುವ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಈ ಸರಣಿಯಲ್ಲಿ ಭಾರತ ತಂಡದ ಆಟಗಾರರು ತೋರಿದ ಉತ್ಸಾಹ ಮತ್ತು ಗೆಲುವಿನೆಡೆಗೆ ಸಾಗಿದ ಪರಿ ನಿಜಕ್ಕೂ ಅಭಿನಂದನೀಯ ಎಂದು ಬಣ್ಣಿಸಿರುವ ಮೋದಿ, ಟ್ವೀಟ್​ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಟೀಂ ಇಂಡಿಯಾಕ್ಕೆ 5 ಕೋಟಿ ಬಹುಮಾನ ಘೋಷಣೆ..
ಕಾಂಗರೂ ಪಡೆ ವಿರುದ್ಧ ಸರಣಿ ಗೆದ್ದಿರುವ ಭಾರತ ಕ್ರಿಕೆಟ್​ ತಂಡಕ್ಕೆ ಬಿಸಿಸಿಐ ಭರ್ಜರಿ ಕೊಡುಗೆ ನೀಡಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಘೋಷಣೆ ಮಾಡಿದ್ದು, ಟೀಂ ಇಂಡಿಯಾಕ್ಕೆ ₹5 ಕೋಟಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಅವಮಾನಕ್ಕೆ ಗೆಲುವಿನ ಮೂಲಕ ತಿರುಗೇಟು: ಕೊಹ್ಲಿ
ಟೀಂ ಇಂಡಿಯಾದ ಐತಿಹಾಸಿಕ ಗೆಲುವಿಗೆ ವಿರಾಟ್​ ಕೊಹ್ಲಿ ಶುಭಾಶಯ ಸಲ್ಲಿಸಿದ್ದಾರೆ. ನಮ್ಮ ಪಾಲಿಗೆ ಇದೊಂದು ಅತ್ಯದ್ಭುತ ಗೆಲುವಾಗಿದೆ. ಅಡಿಲೇಡ್​ನಲ್ಲಿ ನಮ್ಮನ್ನು ಅವಮಾನಿಸಿದವರಿಗೆ ಇದು ತಕ್ಕ ತಿರುಗೇಟು ಎಂದು ಕೊಹ್ಲಿ ಟ್ವೀಟ್​ ಮಾಡಿದ್ದಾರೆ.