ಮೈದಾನದಲ್ಲಿ ತಲೆಕೆಳಗಾಗಿ ನಡೆದು ಅಭಿಮಾನಿಗಳನ್ನು ರಂಜಿಸಿದ ಬೆನ್​ ಸ್ಟೋಕ್ಸ್​! ವಿಡಿಯೋ ವೈರಲ್​

Ind vs Eng, 2nd Test Day 3 | Ben Stokes | ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೈದಾನದಲ್ಲಿ ಸರ್ಕಸ್​ ಮಾಡಿದ್ದಾರೆ! ತಲೆಕೆಳಗಾಗಿ ನಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  • TV9 Web Team
  • Published On - 14:12 PM, 15 Feb 2021
ಮೈದಾನದಲ್ಲಿ ತಲೆಕೆಳಗಾಗಿ ನಡೆದು ಅಭಿಮಾನಿಗಳನ್ನು ರಂಜಿಸಿದ ಬೆನ್​ ಸ್ಟೋಕ್ಸ್​! ವಿಡಿಯೋ ವೈರಲ್​
ತಲೆಕೆಳಗಾಗಿ ನಡೆದ ಬೆನ್​ ಸ್ಟೋಕ್ಸ್​

ಕೆಲ ಆಟಗಾರರು ಮೈದಾನದಲ್ಲಿದ್ದಾಗ ಕುಚೇಷ್ಟೆ ಮಾಡುತ್ತಿರುತ್ತಾರೆ. ಮೈದಾನದಲ್ಲಿ ಮೊಳಗುವ ಹಾಡಿಗೆ ಒಮ್ಮೊಮ್ಮೆ ಡ್ಯಾನ್ಸ್​ ಮಾಡಿದ್ದು ಉಂಟು. ಅಭಿಮಾನಿಗಳನ್ನು ರಂಜಿಸಲು ನೃತ್ಯ ಮಾಡಿದ ಉದಾಹರಣೆಯೂ ಇದೆ. ಅದೇ ರೀತಿ, ಭಾರತ-ಇಂಗ್ಲೆಂಡ್​ ನಡುವಣ ಎರಡನೇ ಟೆಸ್ಟ್​​ನ ಮೂರನೇ ದಿನದಾಟದಂದು ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೈದಾನದಲ್ಲಿ ಸರ್ಕಸ್​ ಮಾಡಿದ್ದಾರೆ! ತಲೆಕೆಳಗಾಗಿ ನಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೂರನೇ ದಿನದಾಟದಲ್ಲಿ ಭಾರತ ಆರು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು. ಈ ವೇಳೆ ನಾಯಕ ವಿರಾಟ್​ ಕೊಹ್ಲಿ ಹಾಗೂ ಆರ್​. ಅಶ್ವಿನ್​ ಎಚ್ಚರಿಕೆಯ ಆಟಕ್ಕೆ ಮುಂದಾದಾದರು. ಕೊಹ್ಲಿ ವಿಕೆಟ್​ ತೆಗೆಯಲು ಬೌಲರ್​ಗಳು ಹೆಣಗಾಡಿದರು. ಈ ವೇಳೆ, ಬೆನ್​ ಸ್ಟೋಕ್ಸ್​ ಏಕಾಏಕಿ ಮೈದಾನದಲ್ಲಿ ತಲೆಕೆಳಗಾಗಿ ನಡೆದಿದ್ದಾರೆ. ಅವರು ಹೀಗೆ ಉಲ್ಟಾ ನಡೆಯುತ್ತಿದ್ದಂತೆ, ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.

ಸ್ಟೋಕ್ಸ್ ಭೂತೋಚ್ಚಾಟಕ ಮೂಡ್‌ಗೆ ಹೋಗಿದ್ದಾರೆ. ಬಹುಶಃ ಪಿಚ್‌ನಲ್ಲಿರುವ ರಾಕ್ಷಸರನ್ನು ಹೆದರಿಸಲು ಅವರು ಪ್ರಯತ್ನಿಸಿರಬಹುದು ಎಂದು ಅಭಿಮಾನಿಗಳು ಟೀಕಿಸಿದ್ದಾರೆ.


ಕೊಹ್ಲಿ-ಅಶ್ವಿನ್​ ಎಚ್ಚರಿಕೆಯ ಆಟದಿಂದ ಟೀಂ ಇಂಡಿಯಾ 400+ ರನ್​ಗಳ ಲೀಡ್​ ಕಂಡುಕೊಂಡಿದೆ. ಇನ್ನೂ ಎರಡು ದಿನಗಳು ಬಾಕಿ ಇದೆ.