ಲಂಡನ್: ಬೌಲರ್ ಎಸೆಯುವ ಬೌನ್ಸರ್ ಬ್ಯಾಟ್ಸ್ಮನ್ ತಲೆಗೆ ಬಿದ್ದು ಗಂಭೀರ ಗಾಯಗಳಾದ ಉದಾಹರಣೆ ಸಾಕಷ್ಟಿದೆ. ಹೀಗಾಗಿ, ಅಂಡರ್-18 ಕ್ರಿಕೆಟ್ನಲ್ಲಿ ಬೌನ್ಸರ್ ನಿಷೇಧ ಮಾಡಲು ಇಂಗ್ಲೆಂಡ್ ತಜ್ಞರ ಸಮಿತಿ ಸರ್ಕಾರಕ್ಕೆ ಸೂಚಿಸಿದೆ.
ಯುವ ಪೀಳಿಗೆಯು ಮಿದುಳಿನ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈ ಅವಧಿಯಲ್ಲಿ ತಲೆಗೆ ಏಟು ಬಿದ್ದರೆ ಮಿದುಳಿಗೆ ಹೆಚ್ಚು ಸಮಸ್ಯೆ ಉಂಟಾಗಬಹುದು. ಹೀಗಾಗಿ, 18 ವರ್ಷದೊಳಗಿನವರ ಕ್ರಿಕೆಟ್ ಮ್ಯಾಚ್ನಲ್ಲಿ ಬೌನ್ಸರ್ ನಿಷೇಧ ಮಾಡಬೇಕು. ಈ ಮೂಲಕ, ಆಟಗಾರರಿಗೆ ಮುಂದಾಗುವ ತೊಂದರೆ ತಡೆಗಟ್ಟಬೇಕು ಎಂದು ತಜ್ಞರು ಕೋರಿದ್ದಾರೆ.
ತಲೆಯ ರಕ್ಷಣೆಗೆ ಹೆಲ್ಮೆಟ್ ಹಾಕಿಕೊಳ್ಳಲಾಗುತ್ತದೆ. ಆದರೆ, ಕೆಲವೊಮ್ಮೆ ಬೌನ್ಸರ್ನಿಂದ ತಲೆಗೆ ಬೀಳುವ ಏಟು ಬಲವಾಗಿರುತ್ತದೆ. ಇದು ನೇರವಾಗಿ ಮಿದುಳಿನ ಮೇಲೆ ಪರಿಣಾಮ ಬೀರಬಹುದು ಎಂಬುದು ತಜ್ಞರ ಮಾತು.
20 ವರ್ಷದವರೆಗೂ ಮಿದುಳು ಬೆಳವಣಿಗೆ ಕಾಣುತ್ತಿರುತ್ತದೆ. ಈ ಅವಧಿಯಲ್ಲಿ ಮಿದುಳಿಗೆ ಸಣ್ಣ ತೊಂದರೆ ಉಂಟಾದರೂ ಅದರ ಪರಿಣಾಮ ತುಂಬಾ ದೊಡ್ಡದು. ಹೀಗಾಗಿ, ಕ್ರಿಕೆಟ್ ಆಟಗಾರರ ಭವಿಷ್ಯದ ದೃಷ್ಟಿಯಲ್ಲಿ ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ತಜ್ಞರು.
ಈಗಾಗಲೇ ಈ ಬಗ್ಗೆ ಲಂಡನ್ ಸರ್ಕಾರಕ್ಕೆ ತಜ್ಞರು ಈ ಬಗ್ಗೆ ವರದಿ ನೀಡಿದ್ದಾರೆ. ಒಂದೊಮ್ಮೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದರೆ, ಈ ಬಗ್ಗೆ ಅವರು ಐಸಿಸಿ ಜತೆ ಚರ್ಚೆ ಮಾಡಿ ನಿಯಮ ಜಾರಿಗೆ ತರಲು ಒತ್ತಡ ಹೇರಬಹುದು.
India vs Australia Test Series 2020: ಶಮಿಗೆ ಮೂಳೆ ಮುರಿತ, ಮಿಕ್ಕಿದ ಮೂರು ಟೆಸ್ಟ್ಗಳಿಂದ ಹೊರಗೆ