ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ವಿಶಿಷ್ಟ ಪೋಸ್ಟ್ಗಳನ್ನು ಹಂಚಿಕೊಳ್ಳುವುದರೊಂದಿಗೆ ಅಭಿಮಾನಿಗಳನ್ನು ಸದಾ ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದೆ.
ಈಗ ಇದೆ ರೀತಿಯ ಕೆಲಸಕ್ಕೆ ಕೈ ಹಾಕಿರುವ ಐಸಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ, ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಮೈದಾನದಲ್ಲಿ ಬ್ಯಾಟ್ ಮಾಡುತ್ತಿರುವ ಒಂದು ಚಿತ್ರವನ್ನು ಎರಡು ಬಗೆಯಲ್ಲಿ ತೋರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ನಗೆಗಡಲಲ್ಲಿ ತೇಲಾಡುವಂತೆ ಮಾಡಿದೆ.
ಐಸಿಸಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ, ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಕರಾಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡಾ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾದರು. ಹೀಗೆ ಔಟಾದ ಹಸನ್ ಅಲಿ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಐಸಿಸಿ, ಒಂದೇ ಚಿತ್ರವನ್ನು 2 ಆಯಾಮಗಳಲ್ಲಿ ತೋರಿಸುವ ಮೂಲಕ ನೆಟ್ಟಿಗರಿಗೆ ತಮಾಷೆಯ ಕಚಗುಳಿ ನೀಡಿದೆ.
ಐಸಿಸಿ ಹಂಚಿಕೊಂಡಿರುವ ಚಿತ್ರದಲ್ಲಿ ಮೊದಲನೇ ಆಯಾಮ, ಹಸನ್ ಅಲಿ ದಕ್ಷಿಣ ಆಫ್ರಿಕಾ ತಂಡದ ವೇಗಿ ರಬಾಡ ಎಸೆದ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಹಾಗೇ ಭಾಸವಾಗುವಂತೆ ಆ ಚಿತ್ರವನ್ನು ಜೂಮ್ ಮಾಡಿ ತೋರಿಸಿದೆ. ಹಾಗೇ ಅದೇ ಚಿತ್ರವನ್ನು ಜೂಮ್ ಔಟ್ ಮಾಡಿ ಅಲ್ಲಿ ನಡೆದಿರುವ ವಾಸ್ತವತೆಯನ್ನೂ ತೋರಿಸಿದೆ! ಅಷ್ಟಕ್ಕೂ ಅಲ್ಲಿ ನಡೆದಿರುವ ವಾಸ್ತವತೆಯೆಂದರೆ ರಬಾಡ ಎಸೆದ ಬಾಲ್ನಲ್ಲಿ ಹಸನ್ ಅಲಿ, ಕ್ಲೀನ್ ಬೌಲ್ಡ್ ಆಗಿದ್ದಾರೆ!
ಈ ಚಿತ್ರವನ್ನು ಎರಡು ಆಯಾಮಗಳಲ್ಲಿ ತೋರಿಸಿರುವ ಐಸಿಸಿ, ಆ ಪೋಸ್ಟ್ಗೆ, “ನಿಮ್ಮ ಪ್ರೊಫೈಲ್ ಪಿಕ್ಚರ್ ವರ್ಸಸ್ ಫುಲ್ ಪಿಕ್ಚರ್” ಎಂಬ ಶೀರ್ಷಿಕೆ ನೀಡಿದೆ. ಐಸಿಸಿಯ ಈ ತಮಾಷೆಯ ಪೋಸ್ಟ್ ಈಗ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಕಾಮೆಂಟ್ಗಳು ಬರುತ್ತಿವೆ.
ಐಸಿಸಿ ಯ ಈ ನಡೆಯನ್ನು ಖಂಡಿಸಿರುವ ಕೆಲ ನೆಟ್ಟಿಗರು, ಇದು (ಐಸಿಸಿ) ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಲ್ಲ. ಬದಲಿಗೆ ಇಂಡಿಯನ್ ಕ್ರಿಕೆಟ್ ಕೌನ್ಸಿಲ್ ಎಂದಿದ್ದಾರೆ. ಇನ್ನೂ ಕೆಲವರು, ಐಸಿಸಿ ಟ್ವಿಟರ್ ಖಾತೆಯ ನಿರ್ವಾಹಕ ಭಾರತೀಯನಿರಬೇಕು. ಅದಕ್ಕೆ ಈ ರೀತಿಯ ಪೋಸ್ಟ್ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಈ ಪೋಸ್ಟ್ ಭರಪೂರ ಮನರಂಜನೆ ನೀಡುತ್ತಿದೆ.
Your profile picture vs the full picture 😄#PAKvSA pic.twitter.com/jMw1niI0co
— ICC (@ICC) January 28, 2021
When admin is an Indian..😂😂 https://t.co/gRgh6gOMk0
— Divya Mohan (@itsdivyam10) January 28, 2021
ICC: Indian Cricket Council https://t.co/pITolA0jx8
— Salman Sabir (@realSalmanSabir) January 28, 2021
Wonder if the admin controlling @ICC is an Indian 😂😂😂 https://t.co/CO0UR6CsGh
— Sridatta Satuluri (@SRSat1998) January 28, 2021