ಚೆನ್ನೈ: ಭಾರತದ ನೆಲದಲ್ಲಿ ನಡೆಯುವ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಿಗಾಗಿ ಇಂಗ್ಲೆಂಡ್ ತಂಡ ಇಂದು ಚೆನ್ನೈಗೆ ತಲುಪಿತು. ಮೊದಲು, ಟೆಸ್ಟ್ನೊಂದಿಗೆ ಸರಣಿ ಪ್ರಾರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ವಿವಿಧ ತಂಡಗಳಾಗಿ ಚೆನ್ನೈಗೆ ಬಂದಿಳಿಯುತ್ತಿದ್ದಾರೆ. ಫೆಬ್ರವರಿ 5 ರಿಂದ ಉಭಯ ತಂಡಗಳ ನಡುವೆ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.
ಇದೇ ವೇಳೆ ಗೂಗಲ್ ಸಿಇಒ ಸುಂದರ್ ಪಿಚ್ಚೈ (Sundar Pichai) ಇಂಗ್ಲೆಂಡ್ ತಂಡದ ಆಟಗಾರರನ್ನು ಹೋಂ ಟೌನ್ಗೆ (Hometown) ಆಹ್ವಾನಿಸಿದ್ದಾರೆ. ಇದೊಂದು ಅದ್ಭುತ ಸರಣಿಯಾಗಲಿ ಎಂದು ಟ್ವೀಟ್ ಮೂಲಕ ಬಯಸಿದ್ದಾರೆ.
Welcome to my hometown @englandcricket wish was there for the game, should be a great series https://t.co/BNRDOQnnyO
— Sundar Pichai (@sundarpichai) January 27, 2021
ಭಾರತ ಮತ್ತು ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 5 ರಿಂದ ಪ್ರಾರಂಭವಾಗಲಿದೆ. ಕೊರೊನಾ ವೈರಸ್ ಕಾರಣದಿಂದಾಗಿ, ಈ ಸರಣಿಯನ್ನು ಕೇವಲ 2 ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸರಣಿಯ ಮೊದಲ ಎರಡು ಪಂದ್ಯಗಳು ಫೆಬ್ರವರಿ 5 ಮತ್ತು ಫೆಬ್ರವರಿ 13 ರಿಂದ ಚೆನ್ನೈನಲ್ಲಿ ನಡೆಯಲಿವೆ. ಮುಂದಿನ ಎರಡು ಪಂದ್ಯಗಳು ಫೆಬ್ರವರಿ 24 ಮತ್ತು ಮಾರ್ಚ್ 4 ರಿಂದ ಅಹಮದಾಬಾದ್ನ ಮೊಟೆರಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿವೆ. ಈ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದೆ.
6 ದಿನಗಳವರೆಗೆ ಕಡ್ಡಾಯ ಕ್ವಾರಂಟೈನ್..
ಸರಣಿಯ ಮೊದಲ ಎರಡು ಪಂದ್ಯಗಳಿಗೆ ಉಭಯ ತಂಡಗಳು ಚೆನ್ನೈ ತಲುಪಲಿವೆ. ಕೋವಿಡ್ ನಿಯಮಗಳ ಪ್ರಕಾರ, ಎರಡೂ ತಂಡಗಳು ನಗರಕ್ಕೆ ಆಗಮಿಸಿದಾಗ ಆರು ದಿನಗಳವರೆಗೆ ಕಟ್ಟುನಿಟ್ಟಿನ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡಗಳಿಗೆ ಐಷಾರಾಮಿ ಹೋಟೆಲ್ ಕಾಯ್ದಿರಿಸಿದ್ದು, ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಿದೆ.
ಆಟಗಾರರೊಂದಿಗೆ ಕುಟುಂಬದವರು ಜೊತೆಗಿರಬಹುದು..
ಆಟಗಾರರು ತಮ್ಮ ಕುಟುಂಬದ ಸದಸ್ಯರನ್ನು ಸಹ ತಮ್ಮೊಡನೆ ಇರಿಸಿಕೊಳ್ಳಲು ಸಹ ಅನುಮತಿಸಲಾಗಿದೆ. ಆದರೆ ವಿದೇಶಗಳಲ್ಲಿ ಈ ನಿಯಮಗಳ ಅನುಮತಿ ಬ್ರೇಕ್ ಹಾಕಿದ್ದಾರೆ. ಅಂದರೆ ಕ್ರಿಕೆಟಿಗರು ತಮ್ಮೊಡನೆ ತಮ್ಮ ಕುಟುಂಬಸ್ಥರನ್ನು ಜೊತೆಗಿರಿಸಿಕ್ಕೊಳ್ಳುವುದನ್ನು ವಿದೇಶಿ ಕ್ರಿಕೆಟ್ ಮಂಡಳಿಗಳು ನಿಷೇದಿಸಿವೆ. 6 ದಿನಗಳ ಕ್ವಾರಂಟೈನ್ ಸಮಯದಲ್ಲಿ ಯಾರೂ ಸಹ ತಮ್ಮ ಹೋಟೆಲ್ ಕೋಣೆಯ ಹೊರಗೆ ಹೆಜ್ಜೆ ಹಾಕಲು ಅನುಮತಿಯಿಲ್ಲವೆಂದು ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ತಂಡಗಳು ಫೆಬ್ರವರಿ 2, 3 ಮತ್ತು 4 ರಂದು ಮಾತ್ರ ತರಬೇತಿ ಮತ್ತು ಅಭ್ಯಾಸ ಪಂದ್ಯವನ್ನು ಆಡಲಿವೆ.
ಮೈದಾನ ಬಿಟ್ಟು ಬೇರೆ ಎಲ್ಲೂ ಹೊರಹೋಗುವ ಆಗಿಲ್ಲ..
ವರದಿಯ ಪ್ರಕಾರ, ತಮಿಳುನಾಡು ಕ್ರಿಕೆಟ್ ಸಂಘ (ಟಿಎನ್ಸಿಎ) ಆಟಗಾರರಿಗೆ ಈಜುಕೊಳವನ್ನು ಬಳಸಲು ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿ ಪಡೆದಿದೆ. ಆದಾಗ್ಯೂ, ಆರು ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ನಂತರವೇ ಇದನ್ನು ಬಳಸಬಹುದು. ಅಲ್ಲದೆ, ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೂ ಸಹ ಈ ನಿಯಾಮವಳಿಗಳು ಅನ್ವಯವಾಗಲಿವೆ. ಅಲ್ಲದೆ ಆಟಗಾರರು ಕ್ವಾರಂಟೈನ್ ಸಮಯದಲ್ಲಿ ಕೇವಲ ಹೋಟೆಲ್ನಿಂದ ಮೈದಾನಕ್ಕೆ ತೆರಳಿ ಅಲ್ಲಿ ಅಭ್ಯಾಸ ನಡೆಸಿ, ಅಲ್ಲಿಂದ ಹೋಟೆಲ್ಗೆ ಹಿಂತಿರುಗುವುದನ್ನು ಬಿಟ್ಟರೆ ಬೇರೆ ಯಾರಿಗೂ ಹೊರ ಹೋಗಲು ಅನುಮತಿಯಿಲ್ಲ.
ಪ್ರೇಕ್ಷಕರಿಗೆ ಅವಕಾಶವಿಲ್ಲ..
ಭಾರತ ಸರ್ಕಾರದ ಅನುಮತಿಯ ಹೊರತಾಗಿಯೂ, ಚೆನ್ನೈನಲ್ಲಿ ನಡೆಯುವ ಎರಡೂ ಪಂದ್ಯಗಳಿಗೆ ಪ್ರವಾಸಿಗರು ಕ್ರೀಡಾಂಗಣಕ್ಕೆ ಬರುವುದನ್ನು ಟಿಎನ್ಸಿಎ ನಿಷೇಧಿಸಿದೆ. ಹೊರಾಂಗಣ ಕ್ರೀಡೆಗಳಿಗೆ 50 ಪ್ರತಿಶತ ಪ್ರೇಕ್ಷಕರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ, ಅಹಮದಾಬಾದ್ ಟೆಸ್ಟ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಇಂಗ್ಲೆಂಡ್ನಿಂದ 32 ಸದಸ್ಯರ ತಂಡ ಬುಧವಾರ ಚೆನ್ನೈಗೆ ಆಗಮಿಸಲಿದೆ.
ಇಂಜುರಿ ಸಮಸ್ಯೆ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ರವೀಂದ್ರ ಜಡೇಜಾ ಔಟ್..!