IND vs NZ: ಕೇವಲ ಒಂದು ಓವರ್​ ಫೀಲ್ಡಿಂಗ್ ಮಾಡಿ, 1 ಲಕ್ಷ ರೂ. ಪಡೆದ ಸ್ಯಾಂಟ್ನರ್..!

India vs New Zealand: ಈ ಬಾರಿ ಭಾರತದ ವಿರುದ್ದದ ಸರಣಿಯಲ್ಲಿ ನ್ಯೂಜಿಲೆಂಡ್ ಒಂದೇ ಒಂದು ಗೆಲುವು ಸಾಧಿಸಲಿಲ್ಲ ಎಂಬುದು ವಿಶೇಷ. ಟೆಸ್ಟ್​ ಸರಣಿಗೂ ಮೊದಲು ರೋಹಿತ್ ಶರ್ಮಾಅವರ ನಾಯಕತ್ವದಲ್ಲಿ 3 ಪಂದ್ಯಗಳ T20I ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿತ್ತು.

IND vs NZ: ಕೇವಲ ಒಂದು ಓವರ್​ ಫೀಲ್ಡಿಂಗ್ ಮಾಡಿ, 1 ಲಕ್ಷ ರೂ. ಪಡೆದ ಸ್ಯಾಂಟ್ನರ್..!
Mitchell Santner


ಭಾರತ-ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. 2 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 1-0 ಅಂತರದಿಂದ ಗೆದ್ದುಕೊಂಡಿದೆ. 2ನೇ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿ ಪಡೆದರೆ, ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ನ್ಯೂಜಿಲೆಂಡ್ ಆಟಗಾರ ಮಿಚೆಲ್ ಸ್ಯಾಂಟ್ನರ್​ಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ನೀಡಲಾಯಿತು. ಆದರೆ ಸ್ಯಾಂಟ್ನರ್ ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್​ ಭಾಗವಾಗಿರಲಿಲ್ಲ ಎಂಬುದು ವಿಶೇಷ.

ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಯಾಂಟ್ನರ್ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು. ಈ ವೇಳೆ ವಿಲಿಯಂ ಸೊಮರ್ವಿಲ್ಲೆ ಎಸೆದ 46ನೇ ಓವರ್​ನ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಹೊಡೆತವನ್ನು ಬಾರಿಸಿದ್ದರು. ಅತ್ತ ಮಿಡ್-ವಿಕೆಟ್‌ ಬೌಂಡರಿ ಲೈನ್​​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಸ್ಯಾಂಟ್ನರ್ ಅದ್ಧುತವಾಗಿ ಜಿಗಿದು ಚೆಂಡನ್ನು ತಡೆದರು. ಅತ್ಯುತ್ತಮ ಫೀಲ್ಡಿಂಗ್ ಮೂಲಕ ಸಿಕ್ಸ್​ ತಡೆದ 29 ವರ್ಷದ ಸ್ಯಾಂಟ್ನರ್ ಅವರ ಕ್ಷೇತ್ರರಕ್ಷಣೆ ನೋಡಿ ಪ್ರೇಕ್ಷಕರು ಕೂಡ ಚಪ್ಪಾಳೆ ತಟ್ಟಿದರು.

ಈ ಅದ್ಭುತ ಫೀಲ್ಡಿಂಗ್​ಗೆ ಇದೀಗ ಸ್ಯಾಂಟ್ನರ್​ ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಪ್ಲೇಯಿಂಗ್ ಇಲೆವೆನ್ ಭಾಗವಲ್ಲದಿದ್ದರೂ ಕೇವಲ ಒಂದು ಓವರ್ ಮೈದಾನದಲ್ಲಿದ್ದ ಸ್ಯಾಂಟ್ನರ್ ಅವರ ಫೀಲ್ಡಿಂಗ್​ಗೆ ‘ಬೆಸ್ಟ್ ಸೇವ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಲಭಿಸಿದೆ. ಅದರಂತೆ ಕೆಲ ಹೊತ್ತು ಮಾತ್ರ ಮೈದಾನದಲ್ಲಿ ಕಾಣಿಸಿಕೊಂಡು ಮಿಚೆಲ್ ಸ್ಯಾಂಟ್ನರ್ 1 ಲಕ್ಷ ರೂ. ಗೆದ್ದುಕೊಂಡಿದ್ದಾರೆ.

ಮಿಚೆಲ್ ಸ್ಯಾಂಟ್ನರ್ ಫೀಲ್ಡಿಂಗ್

ಟೀಮ್ ಇಂಡಿಯಾ ಪಾರುಪತ್ಯ:
ಈ ಬಾರಿ ಭಾರತದ ವಿರುದ್ದದ ಸರಣಿಯಲ್ಲಿ ನ್ಯೂಜಿಲೆಂಡ್ ಒಂದೇ ಒಂದು ಗೆಲುವು ಸಾಧಿಸಲಿಲ್ಲ ಎಂಬುದು ವಿಶೇಷ. ಟೆಸ್ಟ್​ ಸರಣಿಗೂ ಮೊದಲು ರೋಹಿತ್ ಶರ್ಮಾಅವರ ನಾಯಕತ್ವದಲ್ಲಿ 3 ಪಂದ್ಯಗಳ T20I ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿತ್ತು. ಇನ್ನು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

ಇದನ್ನೂ ಓದಿ: Aakash Chopra: ಚಹಲ್ ಬದಲಿಗೆ RCB ಇವರನ್ನು ಟಾರ್ಗೆಟ್ ಮಾಡಲಿದೆ..!

ಇದನ್ನೂ ಓದಿ: IPL 2022: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮತ್ತೆ ಬರ್ತಾರಂತೆ ABD

(IND vs NZ: Mitchell Santner wins Rs 1 lakh award despite not being in the playing XI)

Published On - 3:39 pm, Mon, 6 December 21

Click on your DTH Provider to Add TV9 Kannada