ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕ ಹೋರಾಟದೊಂದಿಗೆ ಡ್ರಾನಲ್ಲಿ ಅಂತ್ಯಗೊಂಡಿದೆ. ಟೀಮ್ ಇಂಡಿಯಾ ನೀಡಿದ 284 ರನ್ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿತು. 86ನೇ ಓವರ್ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 147 ರನ್ಗಳಿಸಿತ್ತು. ಈ ಹಂತದಲ್ಲಿ ಭಾರತ ತಂಡವು ಬಹುತೇಕ ಮೇಲುಗೈ ಸಾಧಿಸಿತ್ತು. ಆದರೆ 8ನೇ ಕ್ರಮಾಂಕದಲ್ಲಿ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ ಏಕಾಂಗಿ ಹೋರಾಟ ನಡೆಸಿದರು. ಇದಾಗ್ಯೂ ಅಂತಿಮ 8 ಓವರ್ ವೇಳೆಗೆ ಟೀಮ್ ಇಂಡಿಯಾ ಗೆಲುವಿಗೆ ಕೇವಲ 1 ವಿಕೆಟ್ ಅವಶ್ಯಕತೆಯಿತ್ತು. ಆದರೆ ಈ ಹಂತದಲ್ಲಿ ಅಂಪೈರ್ ನಡೆಯುವ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ರೋಚಕಘಟ್ಟದತ್ತ ಸಾಗಿದ ಪಂದ್ಯ ನಡುವೆ ಅಂಪೈರ್ ನಿತಿನ್ ಮೆನನ್ ಹಲವು ಬಾರಿ ಮಧ್ಯ ಪ್ರವೇಶಿಸಿದ್ದರು. ಪಂದ್ಯದ ನಡುವೆ ಸೂರ್ಯನ ಬೆಳಕನ್ನು ಪರೀಶಿಸಲು ಹಲವು ಬಾರಿ ಲೈಟ್ ಮೀಟರ್ ಮೊರೆ ಹೋಗಿದ್ದರು. ಅದಲ್ಲೂ ನ್ಯೂಜಿಲೆಂಡ್ನ ಎರಡನೇ ಇನಿಂಗ್ಸ್ನ 95 ನೇ ಓವರ್ನ ಅಂತ್ಯದ ವೇಳೆ ಅಂಪೈರ್ ಲೈಟ್ ಮೀಟರ್ ಹೊರತೆಗೆದಿದ್ದು ಟೀಮ್ ಇಂಡಿಯಾ ಆಟಗಾರರ ಕೆಂಗಣ್ಣಿಗೆ ಗುರಿಯಾಯಿತು. ಏಕೆಂದರೆ ಭಾರತೀಯ ಆಟಗಾರರು ಸೂರ್ಯನ ಬೆಳಕಿದೆ ಎಂದು ವಾದಿಸುತ್ತಿದ್ದರು. ಇದಾದ ನಂತರ ಬಳಿಕ ಟೀಮ್ ಇಂಡಿಯಾ 3 ಓವರ್ ಬೌಲ್ ಮಾಡಿದ್ದರು. ಆದರೆ 98 ಓವರ್ಗಳ ಅಂತ್ಯದಲ್ಲಿ ಅಂಪೈರ್ ಮೆನನ್ ಕಿವೀಸ್ ಬ್ಯಾಟರುಗಳೊಂದಿಗೆ ಮಾತುಕತೆಗೆ ಮುಂದಾದರು. ಆ ಬಳಿಕ ಟೀಮ್ ಇಂಡಿಯಾ ಆಟಗಾರರೊಂದಿಗೆ ಚರ್ಚಿಸಿದರು. ಆದರೆ ಅಂಪೈರ್ ನಡೆಗೆ ಟೀಮ್ ಇಂಡಿಯಾ ಆಟಗಾರರಲ್ಲಿ ಅಸಮಾಧಾನವಿತ್ತು. ಆ ಬಳಿಕ ಮಂದ ಬೆಳಕಿನ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಿದ್ದರು.
ಇತ್ತ ಅಂಪೈರ್ ಪದೇ ಪದೇ ಲೈಟ್ ಮೀಟರ್ ಹೊರತೆಗೆಯುತ್ತಿರುವುದನ್ನು ಕಂಡು ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಗಳು ಕೋಪಗೊಂಡಿದ್ದರು. ಅಷ್ಟೇ ಅಲ್ಲದೆ ಇದೀಗ ಅಂಪೈರ್ ನಿತಿನ್ ಮೆನನ್ ಆಟಗಾರರು ಮಂದಬೆಳಕಿನ ಬಗ್ಗೆ ದೂರು ನೀಡುವ ಮೊದಲೇ ಲೈಟ್ ಮೀಟರ್ ಹೊರತೆಗೆದು ಪಂದ್ಯ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಇದಕ್ಕೂ ಮುನ್ನ ನಿತಿನ್ ಮೆನನ್ ಹಾಗೂ ಟೀಮ್ ಇಂಡಿಯಾ ಸ್ಪಿನ್ನರ್ ಅಶ್ವಿನ್ ನಡುವೆ ವಾಗ್ವಾದ ನಡೆದಿತ್ತು. ಬೌಲಿಂಗ್ ಲೈನ್ ವಿಚಾರವಾಗಿ ಅಶ್ವಿನ್ ಅಂಪೈರ್ ನಡೆಗೆ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಕೋಚ್ ರಾಹುಲ್ ದ್ರಾವಿಡ್ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದರು. ಇದೀಗ ಮಂದಬೆಳಕಿನ ಸೂಚನೆ ನೀಡಲು ನಿತಿನ್ ಮೆನನ್ ಬೇಗನೆ ಲೈಟ್ ಮೀಟರ್ ಹೊರತೆಗೆದಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಭಾರತ-ನ್ಯೂಜಿಲೆಂಡ್ ನಡುವಣ ರೋಚಕ ಹೋರಾಟದಲ್ಲಿ ಟೆಸ್ಟ್ ಪಂದ್ಯವೊಂದು ಗೆದ್ದಿದೆ ಎಂದೇ ಹೇಳಬಹುದು.
ಇದನ್ನೂ ಓದಿ: IPL 2022: ಐಪಿಎಲ್ನ 5 ತಂಡಗಳಿಗೆ ಹೊಸ ನಾಯಕ..?
ಇದನ್ನೂ ಓದಿ: Moto G31: 50 ಮೆಗಾಪಿಕ್ಸೆಲ್ ಕ್ಯಾಮೆರಾ: ಕಡಿಮೆ ಬೆಲೆಯ ಹೊಸ ಸ್ಮಾರ್ಟ್ಫೋನ್ ಮೊಟೊ ಜಿ31
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ ಈ 10 ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ..!
(IND vs NZ: Umpire Nitin Menon Get all the Limelight)