AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಬಚ್ಚನ್​ನ ಬೇಗ ಔಟ್ ಮಾಡಿದ್ರೆ ಪಾಕಿಸ್ತಾನ್ ಗೆಲ್ಲುತ್ತೆ: ಶೊಯೆಬ್ ಅಖ್ತರ್

India vs Pakistan: ಈ ಬಾರಿಯ ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 6 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅಭಿಷೇಕ್ ಒಟ್ಟು 309 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಭಾರತದ ವಿರುದ್ಧ ಪಾಕಿಸ್ತಾನ್ ತಂಡ ಗೆಲ್ಲಬೇಕಿದ್ದರೆ ಅಭಿಷೇಕ್ ಶರ್ಮಾ ವಿಕೆಟ್ ನಿರ್ಣಾಯಕ ಎಂದು ಶೊಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಅಭಿಷೇಕ್ ಬಚ್ಚನ್​ನ ಬೇಗ ಔಟ್ ಮಾಡಿದ್ರೆ ಪಾಕಿಸ್ತಾನ್ ಗೆಲ್ಲುತ್ತೆ: ಶೊಯೆಬ್ ಅಖ್ತರ್
Abhishek Bachchan - Shoaib Akthar
ಝಾಹಿರ್ ಯೂಸುಫ್
|

Updated on:Sep 28, 2025 | 9:57 AM

Share

ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು (ಸೆ.28) ನಡೆಯಲಿರುವ ಏಷ್ಯಾಕಪ್ ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆಲ್ಲಬೇಕಿದ್ದರೆ ಅಭಿಷೇಕ್ ಬಚ್ಚಿನ್ ಅವರ ವಿಕೆಟ್ ಬೇಗನೆ ಪಡೆಯಬೇಕೆಂದು ಪಾಕ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೇಳಿದ್ದಾರೆ.

ಚಾನೆಲ್​ ಚರ್ಚೆಯೊಂದರಲ್ಲಿ ಕಾಣಿಸಿಕೊಂಡ ಶೊಯೆಬ್ ಅಖ್ತರ್, ಟೀಮ್ ಇಂಡಿಯಾದ ಯುವ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಅವರ ವಿಕೆಟ್ ಪಡೆಯಬೇಕೆಂದು ಹೇಳುವುದರ ಬದಲು ಬಾಲಿವುಡ್ ನಟ ಅಭಿಷೇಕ್ ಬಚ್ಚಿನ್ ವಿಕೆಟ್ ಕಬಳಿಸಬೇಕೆಂದು ಹೇಳಿದ್ದಾರೆ.

ಶೊಯೆಬ್ ಅಖ್ತರ್ ಅವರ ಈ ಪ್ರಮಾದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರೆಲ್ ಆಗಿದ್ದು, ಪಾಕಿಸ್ತಾನ್ ವೇಗಿಯನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಈ ಕಾಲೆಳೆಯುವಿಕೆಯಲ್ಲಿ ಖುದ್ದು ಅಭಿಷೇಕ್ ಬಚ್ಚಿನ್ ಕೂಡ ಕಾಣಿಸಿಕೊಂಡಿರುವುದು ವಿಶೇಷ.

ಅಖ್ತರ್ ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಅಭಿಷೇಕ್ ಬಚ್ಚನ್, ಸರ್, ಎಲ್ಲಾ ಗೌರವಗಳೊಂದಿಗೆ… ನಾನು ಉತ್ತಮ ಕ್ರಿಕೆಟ್ ಆಟಗಾರನಲ್ಲ. ಇದಗ್ಯೂ ಅವರು ನನ್ನನ್ನು ಬೇಗನೆ ಔಟ್ ಮಾಡಲಿದ್ದಾರೆ ಎಂದು ಭಾವಿಸಬೇಡಿ ಎಂದು ಟ್ರೋಲ್ ಮಾಡಿದ್ದಾರೆ. 

ಇದಕ್ಕೂ ಮುನ್ನ ಶೊಯೆಬ್ ಅಖ್ತರ್ ಭಾರತ ತಂಡದ ಅಹಂಕಾರವನ್ನು ಮುಗಿಸಬೇಕೆಂದು ಪಾಕಿಸ್ತಾನ್ ಆಟಗಾರರಿಗೆ ಖಡಕ್ ಸಂದೇಶ ರವಾನಿಸಿದ್ದರು. ಭಾನುವಾರ ಪಾಕಿಸ್ತಾನ್ ತಂಡ ಭಾರತದ ಅಹಂಕಾರವನ್ನು ಮುಗಿಸಬೇಕು. ಪಾಕಿಸ್ತಾನ್ ಕೂಡ ಅದೇ ಮನೋಭಾವದಿಂದ ಕಣಕ್ಕಿಳಿಯುವುದನ್ನು ಎದುರು ನೋಡುತ್ತೇನೆ. ನಿಮ್ಮೊಡನೆ ಆಡಿದ್ರೆ, ನೀವು ಏನು ಮಾಡಬಲ್ಲಿರಿ ಎಂಬುದನ್ನು ಭಾರತಕ್ಕೆ ತೋರಿಸಿ ಎಂದು ಶೊಯೆಬ್ ಅಖ್ತರ್ ಪಾಕಿಸ್ತಾನ್ ತಂಡವನ್ನು ಹುರಿದುಂಬಿಸಿದ್ದರು.

ಶೊಯೆಬ್ ಅಖ್ತರ್ ಹೀಗೆ ಹೇಳಲು ಮುಖ್ಯ ಕಾರಣ ಇತ್ತೀಚೆಗೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೀಡಿದ ಹೇಳಿಕೆ. ಪಾಕಿಸ್ತಾನ್ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್  ಪಾಕ್ ತಂಡವನ್ನು ಇನ್ಮುಂದೆ ನಮ್ಮ ಪ್ರಬಲ ಪ್ರತಿಸ್ಪರ್ಧಿ ಎಂದು ಬಿಂಬಿಸಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದ್ದರು.

ಭಾರತ ತಂಡವು ಪಾಕ್ ವಿರುದ್ಧ ಏಕಪಕ್ಷೀಯವಾಗಿ ಪಂದ್ಯ ಗೆಲ್ಲುತ್ತಿದೆ. ಇಲ್ಲಿ ಪ್ರತಿಸ್ಪರ್ಧೆ ಅಥವಾ ಪೈಪೋಟಿ ಎಂಬುದೇ ಇಲ್ಲ. ಪ್ರತಿ ಸಲ ಏಕಪಕ್ಷೀಯವಾಗಿ ನಾವೇ ಗೆಲ್ಲುತ್ತಿರುವಾಗ, ಪೈಪೋಟಿಯ ಮಾತೇ ಬರಲ್ಲ. ಹೀಗಾಗಿ ನೀವೆಲ್ಲರೂ ಈ ‘ಪೈಪೋಟಿ’ಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದರು.

ಒಂದು ತಂಡವು ಪರಸ್ಪರ 15 ಅಥವಾ 20 ಪಂದ್ಯಗಳನ್ನು ಆಡಿದರೆ, ಅದರಲ್ಲಿ ಉಭಯ ತಂಡಗಳು ಸ್ 7-7 ಅಥವಾ 8-7 ಪಂದ್ಯಗಳನ್ನು ಗೆದ್ದರೆ ಮಾತ್ರ ಅದನ್ನು ಪೈಪೋಟಿ ಎಂದು ಕರೆಯಲಾಗುತ್ತದೆ. ಆದರೆ ನನ್ನ ಊಹೆ ಪ್ರಕಾರ ನಾವು ಪಾಕಿಸ್ತಾನ್ ವಿರುದ್ಧ 13-0, 10-1 ಅಂತರದಿಂದ ಮೇಲುಗೈ ಹೊಂದಿದ್ದೇವೆ.

ಇದನ್ನೂ ಓದಿ: IND vs PAK: ಫೈನಲ್ ಪಂದ್ಯದ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ್

ಹೀಗಾಗಿ ಭಾರತಕ್ಕೆ ಪಾಕಿಸ್ತಾನ್ ಸಾಟಿಯೇ ಅಲ್ಲ. ಇದೇ ಕಾರಣದಿಂದ ಇನ್ಮುಂದೆ ಉಭಯ ತಂಡಗಳ ಪಂದ್ಯವನ್ನು ಪೈಪೋಟಿ ಎಂದು ಬಿಂಬಿಸದಿರಿ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮನವಿ ಮಾಡಿದ್ದರು. ಇದೇ ಕಾರಣದಿಂದಾಗಿ ಶೊಯೆಬ್ ಅಖ್ತರ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಬಗ್ಗು ಬಡಿದು ಅವರ ಅಹಂಕಾರವನ್ನು ಕೊನೆಗಾಣಿಸಬೇಕೆಂದು ಪಾಕ್ ಆಟಗಾರರಿಗೆ ಸಂದೇಶ ರವಾನಿಸಿದ್ದರು.

Published On - 9:54 am, Sun, 28 September 25