IND vs NZ, 1st ODI: ಭಾರತಕ್ಕೆ ನಂ.1 ಪಟ್ಟಕ್ಕೇರುವ ಅವಕಾಶ; ಮೊದಲ ಏಕದಿನ ಪಂದ್ಯಕ್ಕೆ ಮಳೆಕಾಟ..?

IND vs NZ, 1st ODI: ನಾಳೆಯಿಂದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಆರಂಭವಾಗಲಿದ್ದು, ನಾಳೆ ಬೆಳಗ್ಗೆ ಏಳು ಗಂಟೆಗೆ ಮೊದಲ ಪಂದ್ಯ ಆಕ್ಲೆಂಡ್ ಮೈದಾನದಲ್ಲಿ ನಡೆಯಲಿದೆ.

IND vs NZ, 1st ODI: ಭಾರತಕ್ಕೆ ನಂ.1 ಪಟ್ಟಕ್ಕೇರುವ ಅವಕಾಶ; ಮೊದಲ ಏಕದಿನ ಪಂದ್ಯಕ್ಕೆ ಮಳೆಕಾಟ..?
IND vs NZ
TV9kannada Web Team

| Edited By: pruthvi Shankar

Nov 24, 2022 | 4:56 PM

ನ್ಯೂಜಿಲೆಂಡ್ ಪ್ರವಾಸದಲ್ಲಿ ಈಗಾಗಲೇ ಟಿ20 ಸರಣಿಯನ್ನು ಆಡಿ ಮುಗಿಸಿರುವ ಟೀಂ ಇಂಡಿಯಾ (India vs New Zealand) ಶುಕ್ರವಾರದಿಂದ ಏಕದಿನ ಸರಣಿಗಾಗಿ ಕಣಕ್ಕಿಳಿಯಲಿದೆ. ಆದರೆ ಟಿ20 ಸರಣಿಗೆ ವಿಲನ್ ಆದಂತೆ ಏಕದಿನ ಸರಣಿಗೂ ಮಳೆ ಕಾಟ ಕೊಡಲಿದೆಯೇ ಎಂಬುದು ಅಭಿಮಾನಿಗಳ ಮನದಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಟಿ20 ಸರಣಿಯಲ್ಲಿ ತನ್ನ ಹಸ್ತಕ್ಷೇಪ ಮಾಡಿದ ವರುಣ ರಾಯ ಮೊದಲ ಟಿ20 ಪಂದ್ಯದಲ್ಲಿ ಒಂದೇ ಒಂದು ಚೆಂಡನ್ನು ಎಸೆಯದಂತೆ ಮಾಡಿದ. ಆದರೆ ಎರಡನೇ ಟಿ20 ಪಂದ್ಯದಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಮಳೆ ಪಂದ್ಯ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಹಾರ್ದಿಕ್ ಪಡೆ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತ್ತು. ಆದ್ದರಿಂದ 3ನೇ ಟಿ20 ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳಿದ್ದವು. ಆದರೆ 3ನೇ ಪಂದ್ಯದ ಮೇಲೆ ತನ್ನ ವಕ್ರದೃಷ್ಟಿ ಬೀರಿದ ಮಳೆರಾಯ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಂತೆ ಮಾಡಿದ್ದ.

ಮೊದಲ ಪಂದ್ಯ ಆಕ್ಲೆಂಡ್ ಮೈದಾನದಲ್ಲಿ ನಡೆಯಲಿದೆ

ಈಗ ನಾಳೆಯಿಂದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಆರಂಭವಾಗಲಿದ್ದು, ನಾಳೆ ಬೆಳಗ್ಗೆ ಏಳು ಗಂಟೆಗೆ ಮೊದಲ ಪಂದ್ಯ ಆಕ್ಲೆಂಡ್ ಮೈದಾನದಲ್ಲಿ ನಡೆಯಲಿದೆ. ಸದ್ಯ ನ್ಯೂಜಿಲೆಂಡ್‌ನ ಹಲವೆಡೆ ಮಳೆಯಾಗುತ್ತಿದೆ. ನಾಳಿನ ಪಂದ್ಯದಲ್ಲಿ ಮಳೆ ಬರಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಹವಾಮಾನ ಇಲಾಖೆ ನಾಳಿನ ಪಂದ್ಯಕ್ಕೆ ಸ್ಪಷ್ಟ ಹವಾಮಾನವನ್ನು ಪ್ರಕಟಿಸಿದೆ. ಹೀಗಾಗಿ ನಾಳೆ ಇಡೀ ಪಂದ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್ ಬಳಿಕ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಟೀಂ ಇಂಡಿಯಾ ನಾಯಕತ್ವವನ್ನು ಧವನ್​ಗೆ ನೀಡಲಾಗಿದ್ದು, ಹಲವು ಯುವ ಪ್ರತಿಭೆಗಳು ತಂಡದಲ್ಲಿ ಸ್ಥಾನ ಪಡೆಯಲ್ಲಿವೆ. ಹೀಗಾಗಿ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಭಾರತಕ್ಕೆ ನಂ.1 ಆಗುವ ಅವಕಾಶ

ಇನ್ನು ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾಕ್ಕೆ ಮೊದಲನೇ ಸ್ಥಾನಕ್ಕೇರುವ ಅವಕಾಶವಿದ್ದು, ಇದಕ್ಕಾಗಿ 3 ಪಂದ್ಯಗಳ ಈ ಏಕದಿನ ಸರಣಿಯನ್ನು ಧವನ್ ಪಡೆ ಗೆಲ್ಲಲೇಬೇಕಿದೆ. ಸದ್ಯ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಮೂರು ಪಂದ್ಯಗಳಲ್ಲಿ ಮಣಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ 6 ಅಂಕಗಳನ್ನು ಕಲೆಹಾಕುವುದರೊಂದಿಗೆ ಒಟ್ಟು 118 ರೇಟಿಂಗ್ ಪಾಯಿಂಟ್​ಗಳೊಂದಿಗೆ ಮೊದಲನೇ ಸ್ಥಾನಕ್ಕೆ ಏರಲಿದೆ.

ಏಕದಿನ ಸರಣಿಗೆ ಟೀಂ ಇಂಡಿಯಾ

ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್. ಅರ್ಷದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada