ಭಾರತ ವಿರುದ್ಧದ ಏಕದಿನ ಸರಣಿಯನ್ನು ನ್ಯೂಜಿಲೆಂಡ್ 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ನ್ಯೂಜಿಲೆಂಡ್‌ನಲ್ಲಿ ಟಿ20 ನಂತರ ಏಕದಿನ ಸರಣಿ ಗೆಲ್ಲುವ ಭಾರತದ ಕನಸನ್ನು ಮಳೆ ಭಗ್ನಗೊಳಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರೈಸ್ಟ್‌ಚರ್ಚ್ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಸರಣಿಯಲ್ಲಿ ಸೋಲನ್ನು ತಪ್ಪಿಸುವ ಭಾರತದ ಆಸೆಯೂ ಅಂತ್ಯಗೊಂಡಿದೆ. ಮೊದಲ ಪಂದ್ಯವನ್ನು ಆತಿಥೇಯ ನ್ಯೂಜಿಲೆಂಡ್ 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು, ಆದರೆ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರಿಂದಾಗಿ ಭಾರತದ ಸರಣಿ ಗೆಲ್ಲುವ ಆಸೆಯೂ ಕೊನೆಗೊಂಡಿತು. ಮೂರನೇ ಏಕದಿನ ಪಂದ್ಯವೂ ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತು. ಆದರೆ ನಂತರ ಭಾರತ ಯಾವುದೇ ಅಡೆತಡೆಯಿಲ್ಲದೆ ಬ್ಯಾಟಿಂಗ್ ಮಾಡಿ ಆತಿಥೇಯರಿಗೆ 220 ರನ್‌ಗಳ ಗುರಿಯನ್ನು ನೀಡಿತು. ನ್ಯೂಜಿಲೆಂಡ್ ಕೂಡ 18 ಓವರ್‌ಗಳಿಗೆ ಬ್ಯಾಟಿಂಗ್ ಮಾಡಿತ್ತು, ಆದರೆ ಆ ಬಳಿಕ ಎಂಟ್ರಿಕೊಟ್ಟ ಮಳೆ ಮತ್ತೆ ಪಂದ್ಯ ಆರಂಭವಾಗಲೂ ಅವಕಾಶ ನೀಡಲಿಲ್ಲ.
ಮಳೆಯಿಂದಾಗಿ ಮೂರನೇ ಏಕದಿನ ಪಂದ್ಯ ರದ್ದುಗೊಂಡಿದ್ದು, ಇದರೊಂದಿಗೆ ಭಾರತ 0-1 ಅಂತರದಿಂದ ಸರಣಿಯನ್ನು ಕಳೆದುಕೊಂಡಿದೆ. ನ್ಯೂಜಿಲೆಂಡ್ ಸರಣಿಯನ್ನು 2-0 ಅಂತರದಲ್ಲಿ ಸೀಲ್ ಮಾಡುವ ಅವಕಾಶವನ್ನು ಹೊಂದಿತ್ತು. ಆದರೆ ಮಳೆ ಕಿವೀಸ್ ಗೆಲುವಿಗೆ ತಣ್ಣೀರೆರಚಿತು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಪಂದ್ಯ ಮಳೆಯಿಂದ ರದ್ದಾಗುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಸರಣಿಯಲ್ಲಿ 1-0ಯಿಂದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಸರಣಿ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.
18 ಓವರ್‌ಗಳ ನಂತರ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಗಿದೆ.
ಅಲೆನ್ ಅವರನ್ನು ಔಟ್ ಮಾಡುವ ಮೂಲಕ ಉಮ್ರಾನ್ ಮಲಿಕ್ ಕಾನ್ವೇ ಜೊತೆಗಿನ ಅವರ 97 ರನ್ ಜೊತೆಯಾಟವನ್ನು ಮುರಿದಿದ್ದಾರೆ. 57 ರನ್ ಗಳಿಸಿದ ಅಲೆನ್, ಸೂರ್ಯಕುಮಾರ್ ಯಾದವ್ಗೆ ಕ್ಯಾಚಿತ್ತು ಔಟಾದರು.
15 ಓವರ್‌ಗಳಲ್ಲಿ ನ್ಯೂಜಿಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 84 ರನ್ ಗಳಿಸಿದೆ. ಕಾನ್ವೆ 30 ಮತ್ತು ಅಲೆನ್ 45 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಜೊತೆಯಾಟವನ್ನು ಮುರಿಯುವಲ್ಲಿ ಭಾರತೀಯ ಬೌಲರ್‌ಗಳು ವಿಫಲರಾಗಿದ್ದಾರೆ.
10ನೇ ಓವರ್‌ನಲ್ಲಿ ಕಿವೀಸ್ ಬ್ಯಾಟ್ಸ್‌ಮನ್ ಒಟ್ಟು 4 ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 10 ಓವರ್‌ಗಳಲ್ಲಿ 59 ರನ್ ಗಳಿಸಿತು. ಈ ಓವರ್‌ನಲ್ಲಿ ಚಹರ್ 16 ರನ್ ಬಿಟ್ಟುಕೊಟ್ಟರು.
5 ಓವರ್‌ಗಳಲ್ಲಿ ನ್ಯೂಜಿಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ. ಫಿನ್ ಅಲೆನ್ 8 ಮತ್ತು ಕಾನ್ವೆ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ಇಲ್ಲಿ ಬಲಿಷ್ಠವಾಗುವ ಮುನ್ನ ಈ ಜೋಡಿಯನ್ನು ಮುರಿಯಬೇಕಿದೆ. ಆದರೂ ಇಲ್ಲಿಯವರೆಗೆ ಅರ್ಷದೀಪ್ ಮತ್ತು ಚಹಾರ್ ಅತ್ಯಂತ ಬಿಗಿಯಾಗಿ ಬೌಲಿಂಗ್ ಮಾಡಿದರು.
ಕಿವೀಸ್ ಬ್ಯಾಟಿಂಗ್ ಆರಂಭಿಸಿದೆ. ಅಲೆನ್ ಮತ್ತು ಕಾನ್ವೇ ಕ್ರೀಸ್‌ನಲ್ಲಿದ್ದಾರೆ. ಚಹರ್ ಮೊದಲ ಓವರ್‌ನಲ್ಲಿ ಕೇವಲ 2 ರನ್ ನೀಡಿದರು.
ಸುಂದರ್ ಅರ್ಧಶತಕ ಪೂರೈಸಿದ ಬಳಿಕ ಔಟಾದರು. ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಸುಂದರ್ 51 ರನ್‌ಗಳ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಭಾರತದ ಇನ್ನಿಂಗ್ಸ್ ಕೂಡ 47.3 ಓವರ್‌ಗಳಲ್ಲಿ 219 ರನ್‌ಗಳಿಗೆ ಅಂತ್ಯಗೊಂಡಿತು. ಇದರೊಂದಿಗೆ ಭಾರತ ನ್ಯೂಜಿಲೆಂಡ್‌ಗೆ 220 ರನ್‌ಗಳ ಗುರಿ ನೀಡಿತ್ತು
ಭಾರತದ 9 ವಿಕೆಟ್‌ಗಳು 213 ರನ್‌ಗಳಿಗೆ ಪತನಗೊಂಡಿವೆ. 47ನೇ ಓವರ್‌ನ ಎರಡನೇ ಎಸೆತದಲ್ಲಿ ಡ್ಯಾರೆಲ್ ಮಿಚೆಲ್ ಅರ್ಶ್‌ದೀಪ್ ಸಿಂಗ್ ಅವರನ್ನು ಎಲ್ ಬಿಡಬ್ಲ್ಯೂ ಔಟ್ ಮಾಡಿದರು. ಅರ್ಷದೀಪ್ 9 ರನ್ ಗಳಿಸಲಷ್ಟೇ ಶಕ್ತರಾದರು.
ಸುಂದರ್ ಒಂದು ತುದಿಯಿಂದ ರನ್ ಕಲೆಹಾಕುತ್ತಿದ್ದರೆ, ಚಾಹಲ್ ಇನ್ನೊಂದು ತುದಿಯನ್ನು ನಿಭಾಯಿಸಿದರು, ಆದರೆ ಸ್ಯಾಂಟ್ನರ್ 45ನೇ ಓವರ್ನ ಮೂರನೇ ಎಸೆತದಲ್ಲಿ ಈ ಜೊತೆಯಾಟವನ್ನು ಕೊನೆಗೊಳಿಸಿದ್ದಾರೆ. 201 ರನ್‌ಗಳಿಗೆ ಭಾರತಕ್ಕೆ 8ನೇ ಹೊಡೆತ ಬಿದ್ದಿದೆ.
45ನೇ ಓವರ್‌ನ ಮೊದಲ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಬೌಂಡರಿ ಬಾರಿಸಿದ್ದು, ಇದರೊಂದಿಗೆ ಭಾರತ 200 ರನ್ ಪೂರೈಸಿದೆ. ಸುಂದರ್ ಕೂಡ ಅರ್ಧಶತಕದ ಸಮೀಪದಲ್ಲಿದ್ದಾರೆ.
ಡ್ಯಾರೆಲ್ ಮಿಚೆಲ್ ಭಾರತಕ್ಕೆ 7ನೇ ಹೊಡೆತ ನೀಡಿದರು. 37ನೇ ಓವರ್ನ ಮೂರನೇ ಎಸೆತದಲ್ಲಿ ಮಿಚೆಲ್ ಅವರು ದೀಪಕ್ ಚಹಾರ್ ಅವರನ್ನು ಔಟ್ ಮಾಡಿದರು.
34ನೇ ಓವರ್‌ನಲ್ಲಿ ಟಿಮ್ ಸೌಥಿ ಅವರ ನಾಲ್ಕನೇ ಎಸೆತದಲ್ಲಿ ದೀಪಕ್ ಹೂಡಾ ಔಟಾದರು. ಭಾರತದ 6 ವಿಕೆಟ್‌ಗಳು 149 ರನ್‌ಗಳಿಗೆ ಪತನಗೊಂಡಿವೆ.
ಭಾರತ 30 ಓವರ್‌ಗಳಲ್ಲಿ 5 ವಿಕೆಟ್‌ಗೆ 135 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ 9 ಮತ್ತು ದೀಪಕ್ ಹೂಡಾ 6 ರನ್ ಗಳಿಸಿ ಆಡುತ್ತಿದ್ದಾರೆ.
26ನೇ ಓವರ್ನ ಮೂರನೇ ಎಸೆತದಲ್ಲಿ ಫರ್ಗುಸನ್ 49 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಅಯ್ಯರ್ ಅರ್ಧಶತಕ ವಂಚಿತರಾದರು.
ಭಾರತ 25 ಓವರ್‌ಗಳಲ್ಲಿ 4 ವಿಕೆಟ್‌ಗೆ 116 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 49 ರನ್ ಗಳಿಸಿ ಆಡುತಿದ್ದಾರೆ. ಮತ್ತು ಹೂಡಾ 1 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಈ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಔಟಾದರು.
23ನೇ ಓವರ್‌ನಲ್ಲಿ ಭಾರತದ 100 ರನ್‌ಗಳು ಪೂರ್ಣಗೊಂಡವು. ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿ ನಿಂತಿದ್ದಾರೆ. ಭಾರತ ಈಗ ತನ್ನ ಇನ್ನಿಂಗ್ಸ್‌ನ ವೇಗವನ್ನು ಹೆಚ್ಚಿಸಬೇಕಾಗಿದೆ
ರಿಷಬ್ ಪಂತ್ ಮತ್ತೆ ಬಿಗ್ ಸ್ಕೋರ್ ಮಾಡುವಲ್ಲಿ ವಿಫಲರಾಗಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲೂ ಕೇವಲ 10 ರನ್ ಗಳಿಸಿ ಪಂತ್ ಪೆವಿಲಿಯನ್ಗೆ ಮರಳಿದರು. ಡ್ಯಾರೆಲ್ ಮಿಚೆಲ್ ಎಸೆದ 21 ನೇ ಓವರ್ನ ಮೂರನೇ ಎಸೆತದಲ್ಲಿ ಪಂತ್ ಪುಲ್ ಶಾಟ್ ಆಡಿದರು. ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಗ್ಲೆನ್ ಫಿಲಿಪ್ಸ್‌ಗೆ ಕ್ಯಾಚ್ ಹೀಡಿದರು.
15 ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 14 ಮತ್ತು ರಿಷಬ್ ಪಂತ್ 4 ರನ್ ಗಳಿಸಿ ಆಡುತ್ತಿದ್ದಾರೆ.
13ನೇ ಓವರ್‌ನ ಕೊನೆಯ ಎಸೆತದಲ್ಲಿ ಧವನ್ ಬೌಲ್ಡ್ ಆದರು. 45 ಎಸೆತಗಳನ್ನು ಎದುರಿಸಿದ ಧವನ್ ಕೇವಲ 28 ರನ್ ಗಳಿಸಿದರು. ಭಾರತದ ನಾಯಕ ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.
12ನೇ ಓವರ್‌ನ ಎರಡನೇ ಎಸೆತದಲ್ಲಿ ಮಿಲ್ನೆ ಥರ್ಡ್ ಮ್ಯಾನ್‌ನಲ್ಲಿ ಅಯ್ಯರ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇದಾದ ನಂತರ ಅಯ್ಯರ್ ಅವರು ಓವರ್‌ನ ಕೊನೆಯ ಎಸೆತದಲ್ಲಿ ಅದ್ಭುತ ಬೌಂಡರಿ ಬಾರಿಸುವ ಮೂಲಕ ಭಾರತವನ್ನು 50 ರನ್ ದಾಟುವಂತೆ ಮಾಡಿದರು.
ಮೊದಲ ಪವರ್‌ಪ್ಲೇ ಹೆನ್ರಿಯ ಮೇಡನ್‌ನೊಂದಿಗೆ ಕೊನೆಗೊಂಡಿದೆ. ಭಾರತ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 43 ರನ್ ಗಳಿಸಿದೆ. ಧವನ್ 25 ಮತ್ತು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಆಡುತ್ತಿದ್ದಾರೆ.
9ನೇ ಓವರ್‌ನಲ್ಲಿ ಮಿಲ್ನೆ ಅವರ ಮೊದಲ 2 ಎಸೆತಗಳಲ್ಲಿ ಸತತ 2 ಬೌಂಡರಿ ಬಾರಿಸಿದ ಗಿಲ್ ಮುಂದಿನ ಎಸೆತದಲ್ಲಿ ಔಟಾದರು. ಸ್ಯಾಂಟ್ನರ್ ಗಿಲ್ ಅವರ ಅದ್ಭುತ ಕ್ಯಾಚ್ ಪಡೆದರು. ಗಿಲ್ 22 ಎಸೆತಗಳಲ್ಲಿ 13 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ನಾಯಕ ಧವನ್ ಭಾರತದ ಇನ್ನಿಂಗ್ಸ್‌ನ ವೇಗವನ್ನು ಹೆಚ್ಚಿಸಲು ಪ್ರಾರಂಭಿಸಿದ್ದಾರೆ. ಧವನ್ ಹೆನ್ರಿ ಎಸೆತಗಳಲ್ಲಿ 2 ಬೌಂಡರಿ ಬಾರಿಸಿದರು.
ಆರನೇ ಓವರ್‌ನಲ್ಲಿ ಶುಭಮನ್ ಗಿಲ್ ಖಾತೆ ತೆರೆದರು. ಮ್ಯಾಟ್ ಹೆನ್ರಿ ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ ಗಿಲ್ ತಮ್ಮ ಮೊದಲ ರನ್ ಸೇರಿಸಿದರು. 12 ಎಸೆತಗಳ ಬಳಿಕ ಅವರ ಖಾತೆಗೆ ರನ್ ಸೇರಿಸಿತು.
5 ಓವರ್‌ಗಳು ಮುಗಿದಿದ್ದು, ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ. ಧವನ್ 15 ರನ್ ಗಳಿಸಿ ಆಡುತ್ತಿದ್ದಾರೆ. ಆದರೆ 8 ಎಸೆತಗಳನ್ನು ಎದುರಿಸಿರುವ ಗಿಲ್ ಇನ್ನೂ ಖಾತೆ ತೆರೆದಿಲ್ಲ
ಮೂರನೇ ಓವರ್‌ನಲ್ಲಿ ಟಿಮ್ ಸೌಥಿ ಅವರ ನಾಲ್ಕನೇ ಎಸೆತದಲ್ಲಿ ಧವನ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು.
ಎರಡನೇ ಓವರ್ ಎಸೆದ ಹೆನ್ರಿ ಎಸೆತದಲ್ಲಿ ಧವನ್ ಬೌಂಡರಿ ಬಾರಿಸಿದರು. ಭಾರತದ ಸ್ಕೋರ್ 2 ಓವರ್‌ಗಳಲ್ಲಿ 7 ರನ್ ಆಗಿದೆ. ಆದರೆ ಗಿಲ್ ಇನ್ನೂ ಖಾತೆ ತೆರೆಯಲು ಸಾಧ್ಯವಾಗಿಲ್ಲ
ಶುಭಮನ್ ಗಿಲ್ ಮತ್ತು ಶಿಖರ್ ಧವನ್ ಭಾರತದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಟಿಮ್ ಸೌಥಿ ಮೊದಲ ಓವರ್ ಬೌಲಿಂಗ್ ಮಾಡಿ ಕೇವಲ 1 ರನ್ ಬಿಟ್ಟುಕೊಟ್ಟರು.
ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್.
ನ್ಯೂಜಿಲೆಂಡ್ ಸತತ ಮೂರನೇ ಬಾರಿಗೆ ಟಾಸ್ ಗೆದ್ದುಕೊಂಡಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
Published On - Nov 30,2022 6:47 AM