India vs New Zealand, WTC Final 2021, Day 2: ಮತ್ತೆ ಮುನಿಸಿಕೊಂಡ ಹವಾಮಾನ; ಎರಡನೇ ದಿನದಾಟ ಸ್ಥಗಿತ!

India vs New Zealand: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್​ಗೆ ಇದು ನಾಯಕರಾಗಿ ಮೊದಲ ಟೆಸ್ಟ್ ಚಾಂಪಿಯನ್​ಶಿಪ್ ಪಂದ್ಯವಾಗಿದೆ. ಇಂದಿನ ಆಟ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

India vs New Zealand, WTC Final 2021, Day 2: ಮತ್ತೆ ಮುನಿಸಿಕೊಂಡ ಹವಾಮಾನ; ಎರಡನೇ ದಿನದಾಟ ಸ್ಥಗಿತ!
ಸೌಥಾಂಪ್ಟನ್ ಮೈದಾನ

ಸೌಥಾಂಪ್ಟನ್:  ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡದ ನಡುವಿನ ಐಸಿಸಿ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಬ್ಯಾಡ್ ಲೈಟ್ ಕಾರಣದಿಂದ ಪಂದ್ಯ ಸ್ಥಗಿತಗೊಂಡಿದೆ. ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯಕ್ಕೆ ಹವಾಮಾನ ಸೂಕ್ತವಾಗಿ ಸಹಕರಿಸುವಂತೆ ಕಾಣುತ್ತಿಲ್ಲ. ಮತ್ತೆ ಮತ್ತೆ ಹವಾಮಾನ ಪಂದ್ಯದ ಮೇಲೆ ಮುನಿಸಿಕೊಂಡಂತಿದೆ. ನಿನ್ನೆ ಮಳೆಯಿಂದಾಗಿ ಪಂದ್ಯವೇ ಆರಂಭವಾಗಿರಲಿಲ್ಲ. ಇಂದು ಮೂರು ಬಾರಿ ಬ್ಯಾಡ್ ಲೈಟ್​ನಿಂದ ಪಂದ್ಯ ಸ್ಥಗಿತಗೊಳ್ಳುವಂತಾಗಿದೆ.

ಇದಕ್ಕೂ ಮೊದಲು, ನ್ಯೂಜಿಲೆಂಡ್ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿದೆ. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ತೊಡಗಿದೆ. ಮೊದಲ ಎರಡು ವಿಕೆಟ್ ಪತನದ ಬಳಿಕ, ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 100 ರನ್ ಗಡಿ ದಾಟಿ ಭಾರತ ಆಟವಾಡುತ್ತಿದೆ. ಕೊಹ್ಲಿ ಅರ್ಧಶತಕದ ಅಂಚಿನಲ್ಲಿದ್ದಾರೆ.  ರಹಾನೆ ನಾಯಕನ ಜೊತೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಪಂದ್ಯದ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ಓದಿರಿ.

LIVE Cricket Score & Updates

The liveblog has ended.
 • 19 Jun 2021 22:58 PM (IST)

  ಎರಡನೇ ದಿನದಾಟ ಮುಕ್ತಾಯ

  ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಎರಡನೇ ದಿನದಾಟ ಬ್ಯಾಡ್ ಲೈಟ್ ಕಾರಣದಿಂದ ಮುಕ್ತಾಯಗೊಂಡಿದೆ. ಮೂರನೇ ದಿನದಾಟಕ್ಕೆ ಸ್ಟಂಪ್ಸ್ ಕಾಯ್ದಿರಿಸಲಾಗಿದೆ. ಹವಾಮಾನ ಸೂಕ್ತವಾಗಿ ಸಹಕರಿಸದ ಕಾರಣ ಇಂದೂ ಕೂಡ ಒಂದೆರಡು ಬಾರಿ ಪಂದ್ಯ ಸ್ಥಗಿತಗೊಂಡಿತ್ತು. ಬ್ಯಾಡ್ ಲೈಟ್ ಕಾರಣದಿಂದ ಮೂರು ಬಾರಿ ಪಂದ್ಯ ನಿಲ್ಲಿಸಲಾಗಿತ್ತು. ದಿನದಾಟದ ಅಂತ್ಯಕ್ಕೆ ಭಾರತ ತಂಡ 146 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ವಿರಾಟ್ ಕೊಹ್ಲಿ 124 ಬಾಲ್​ಗೆ 44 ರನ್ ಹಾಗೂ ಅಜಿಂಕ್ಯಾ ರಹಾನೆ 79 ಬಾಲ್​ಗೆ 29 ರನ್ ದಾಖಲಿಸಿದ್ಧಾರೆ. ನ್ಯೂಜಿಲ್ಯಾಂಡ್ 64.4 ಓವರ್ ಬೌಲಿಂಗ್ ಮಾಡಿದೆ.

 • 19 Jun 2021 21:35 PM (IST)

  ಮೂರನೇ ಬಾರಿಗೆ ಬ್ಯಾಡ್ ಲೈಟ್ ಅಡ್ಡಿ

  ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯಕ್ಕೆ ಹವಾಮಾನ ಮತ್ತೆ ತೊಡಕುಂಟುಮಾಡಿದೆ. ಮೂರನೇ ಬಾರಿಗೆ ಬ್ಯಾಡ್ ಲೈಟ್​ನಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ತಂಡದ ಮೊತ್ತ 64.4 ಓವರ್​ಗೆ 3 ವಿಕೆಟ್ ಕಳೆದುಕೊಂಡು 146 ರನ್ ಆಗಿದೆ. ಕೊಹ್ಲಿ ಹಾಗೂ ರಹಾನೆ ಬ್ಯಾಟಿಂಗ್ ಮಾಡುತ್ತಿದ್ಧಾರೆ. ಎರಡನೇ ವಿಕೆಟ್ ಪತನದ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆಯ ನಾಯಕ-ಉಪನಾಯಕ ಜೋಡಿ 50 ರನ್​ಗಳ ಜೊತೆಯಾಟ ನೀಡಿದೆ.

 • 19 Jun 2021 21:19 PM (IST)

  ಭಾರತ 141-3 (63 ಓವರ್)

  ಎರಡನೇ ಬಾರಿಗೆ ಬ್ಯಾಡ್ ಲೈಟ್​ನಿಂದ ಸ್ಥಗಿತಗೊಂಡಿದ್ದ ಪಂದ್ಯ ಈಗ ಮತ್ತೆ ಆರಂಭವಾಗಿದೆ. ಮುರನೇ ಸೆಷನ್​ನಲ್ಲಿ ಭಾರತದ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಡುತ್ತಿದ್ದಾರೆ. ಕೊಹ್ಲಿ 40 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ. ಅಜಿಂಕ್ಯ ರಹಾನೆ 28 ರನ್ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ಧಾರೆ.

 • 19 Jun 2021 20:50 PM (IST)

  ಮತ್ತೆ ಬ್ಯಾಡ್ ಲೈಟ್ ಅಡ್ಡಿ; ಪಂದ್ಯ ಸ್ಥಗಿತ

  ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಮತ್ತೆ ಬ್ಯಾಡ್ ಲೈಟ್ ಅಡ್ಡಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಹವಾಮಾನ ಯಾಕೋ ಸರಿಯಾಗಿ ಸ್ಪಂದಿಸುವಂತೆ ಕಾಣಿಸುತ್ತಿಲ್ಲ. ನಿನ್ನೆ ಮಳೆಯಿಂದಾಗಿ ಪಂದ್ಯವನ್ನೇ ಆರಂಭವಾಗದಂತೆ ಆಗಿತ್ತು. ಇಂದು ಬ್ಯಾಡ್ ಲೈಟ್​ನಿಂದ ಇದೀಗ ಎರಡನೇ ಬಾರಿಗೆ ಮ್ಯಾಚ್ ಸ್ಥಗಿತಗೊಂಡಿದೆ.

 • 19 Jun 2021 20:30 PM (IST)

  ಮೂರನೇ ಸೆಷನ್ ಆರಂಭವಾಗಿದೆ

  ಭಾರತ ಹಾಗೂ ನ್ಯೂಜಿಲ್ಯಾಂಡ್​ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೂರನೇ ಸೆಷನ್ ಆರಂಭವಾಗಿದ. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡದ ಮೊತ್ತ 58 ಓವರ್​ಗೆ 3 ವಿಕೆಟ್ ಕಳೆದುಕೊಂಡು 134 ರನ್ ದಾಖಲಿಸಿದೆ.

  ಚಹಾ ವಿರಾಮದ ಬಳಿಕ ಬ್ಯಾಡ್ ಲೈಟ್​ನಿಂದಾಗಿ ಪಂದ್ಯ ಸ್ವಲ್ಪ ತಡವಾಗಿ ಆರಂಭವಾಗಿದೆ.

 • 19 Jun 2021 20:12 PM (IST)

  ಬ್ಯಾಡ್ ಲೈಟ್ ಅಡ್ಡಿ

  ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯಕ್ಕೆ ಹವಾಮಾನದ ಅಸಹಕಾರ ಇಂದೂ ಮುಂದುವರಿದಿದೆ. ಬ್ಯಾಡ್ ಲೈಟ್​ನಿಂದ ಇಂದೂ ಕೂಡ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಚಹಾ ವಿರಾಮ ಘೋಷಿಸಿದ ಬಳಿಕ ಪಂದ್ಯ ಮತ್ತೆ ಆರಂಭವಾಗಿಲ್ಲ.

 • 19 Jun 2021 19:54 PM (IST)

  ಚಹಾಚ ವಿರಾಮದ ವೇಳೆ ಭಾರತ 120-3 (55.3 ಓವರ್)

  ಭಾರತ ತಂಡ 2.16 ಸರಾಸರಿ ರನ್​ ಗತಿಯಲ್ಲಿ 3 ವಿಕೆಟ್ ಕಳೆದುಕೊಂಡು 120 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ 94 ಬಾಲ್​ಗೆ 35 ಹಾಗೂ ಅಜಿಂಕ್ಯ ರಹಾನೆ 54 ಬಾಲ್​ಗೆ 13 ರನ್ ಗಳಿಸಿದ್ದಾರೆ.

 • 19 Jun 2021 19:38 PM (IST)

  ಭಾರತ 118-3 (54 ಓವರ್)

  ಭಾರತ ತಂಡ 54 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿದೆ. ವಿರಾಟ್ ಕೊಹ್ಲಿ 35 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದಾರೆ. ಅಜಿಂಕ್ಯ ರಹಾನೆ 12 ರನ್ ಗಳಿಸಿ ಕೊಹ್ಲಿಗೆ ಉತ್ತಮ ಸಾತ್ ನೀಡಿದ್ದಾರೆ.

 • 19 Jun 2021 19:21 PM (IST)

  ಶತಕ ಪೂರೈಸಿದ ಭಾರತ

  ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ 100 ರನ್​ ಗಡಿ ದಾಟಿದೆ. ವಿರಾಟ್ ಕೊಹ್ಲಿ 27 ಹಾಗೂ ಅಜಿಂಕ್ಯ ರಹಾನೆ 8 ರನ್ ಗಳಿಸಿ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಮೊದಲ ಸೆಷನ್​ನಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಭಾರತ, ಎರಡನೇ ಸೆಷನ್​ನಲ್ಲಿ ನಾಯಕ- ಉಪನಾಯಕ ಜೋಡಿಯಿಂದ ನಿಧಾನಗತಿಯ ಆಟ ಕಂಡಿದೆ. ಇದೀಗ, 50 ಓವರ್​ಗಳ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 106 ರನ್ ದಾಖಲಿಸಿದೆ.

 • 19 Jun 2021 19:03 PM (IST)

  ಭಾರತ 95-3 (45 ಓವರ್)

  ಸೌಥಾಂಪ್ಟನ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡದ ಮೊತ್ತ 45 ಓವರ್​ಗಳಿಗೆ 3 ವಿಕೆಟ್ ಕಳೆದುಕೊಂಡು 95 ರನ್ ಆಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕೊಹ್ಲಿ 69 ಬಾಲ್​ಗೆ 20 ಹಾಗೂ ರಹಾನೆ 15 ಬಾಲ್​ಗೆ 4 ರನ್ ಗಳಿಸಿದ್ದಾರೆ.

  ಭಾರತ- ನ್ಯೂಜಿಲ್ಯಾಂಡ್ ಪಂದ್ಯದ ವೇಳೆ ಭಾರತದ ಕ್ರಿಕೆಟ್ ಅಭಿಮಾನಿಯೊಬ್ಬ ಕಂಡುಬಂದಿದ್ದು ಹೀಗೆ..

 • 19 Jun 2021 18:35 PM (IST)

  ಚೇತೇಶ್ವರ ಪೂಜಾರ ಔಟ್

  img

  ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಂದ್ಯದ ಎರಡನೇ ದಿನದಾಟ ನಡೆಯುತ್ತಿದೆ. ಭಾರತ ತಂಡ ಮೊದಲೆರಡು ವಿಕೆಟ್ ಕಳೆದುಕೊಂಡಿದ್ದರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ಕ್ರಿಕೆಟ್​ನ ಭರವಸೆಯ ಆಟಗಾರ ಚೇತೇಶ್ವರ ಪೂಜಾರ ಜೊತೆಗೆ ಉತ್ತಮ ಆಟ ಪ್ರದರ್ಶಿಸುತ್ತಿತ್ತು. ಈ ಮಧ್ಯೆ, ಚೇತೇಶ್ವರ ಪೂಜಾರ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಟ್ರೆಂಟ್ ಬೋಲ್ಟ್ ಬೌಲಿಂಗ್​ಗೆ ಪೂಜಾರ ಎಲ್​ಬಿಡಬ್ಲ್ಯು ಆಗಿ ನಿರ್ಗಮಿಸಿದ್ದಾರೆ. ಪೂಜಾರ 54 ಬಾಲ್ ಎದುರಿಸಿ 8 ರನ್ ಗಳಿಸಿ ನಿರ್ಗಮಿಸಿದ್ದಾರೆ. ನಾಯಕ ಕೊಹ್ಲಿಗೆ ಈಗ ಉಪನಾಯಕ ಅಜಿಂಕ್ಯ ರಹಾನೆ ಜೊತೆಯಾಗಿದ್ದಾರೆ. ಭಾರತ ತಂಡದ ಮೊತ್ತ 41 ಓವರ್​ಗೆ 91-3 ಆಗಿದೆ.

 • 19 Jun 2021 18:32 PM (IST)

  ಭಾರತ 87-2 (40 ಓವರ್)

  ಭಾರತದ ತಂಡ 40 ಓವರ್​ಗೆ 2 ವಿಕೆಟ್ ಕಳೆದುಕೊಂಡು 87 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ 55 ಬಾಲ್​ಗೆ 16 ರನ್ ಕಲೆಹಾಕಿದ್ದಾರೆ. ಚೇತೇಶ್ವರ ಪೂಜಾರ 53 ಬಾಲ್​ಗೆ 8 ರನ್ ದಾಖಲಿಸಿದ್ದಾರೆ. ಮೊದಲೆರಡು ವಿಕೆಟ್ ಪತನದ ಬಳಿಕ ನಿಧಾನಗತಿಯ ಆಟದತ್ತ ಭಾರತ ಒಲವು ತೋರಿದೆ. ವಿಕೆಟ್ ಉಳಿಸಿಕೊಂಡು, ರನ್ ಪೇರಿಸುವ ಮನಮಾಡಿದೆ. ಮೊದಲನೇ ದಿನವಾದ ನಿನ್ನೆ ಮಳೆಯ ಕಾರಣದಿಂದ ಪಂದ್ಯವೇ ರದ್ದಾಗಿತ್ತು. ಇಂದು ಮಳೆಯಿಂದಾಗಿ ಯಾವುದೇ ತೊಂದರೆ ಉಂಟಾಗಿಲ್ಲ. ಎರಡನೇ ದಿನದ ಆಟಕ್ಕೆ ಮಳೆ ಅಡ್ಡಿಯಾಗಿಲ್ಲ.

 • 19 Jun 2021 18:14 PM (IST)

  ಚೇತೇಶ್ವರ ಪೂಜಾರ ಬೌಂಡರಿ ಆಟ

  img

  ಚೇತೇಶ್ವರ ಪೂಜಾರ 2 ಬೌಂಡರಿ ಬಾರಿಸಿದ್ದಾರೆ. ಆ ಮೂಲಕ, 42 ಬಾಲ್​ಗೆ 8 ರನ್ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ 42 ಬಾಲ್​ಗೆ 7 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡದ ಮೊತ್ತ 36 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 78 ರನ್ ಆಗಿದೆ. ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಕೈಲ್ ಜಾಮಿಸನ್, ಗ್ರಾಂಡ್​ಹೊಮ್, ವಾಗ್ನರ್ ಬೌಲಿಂಗ್ ಮಾಡಿದ್ದಾರೆ. ಜಾಮಿಸನ್ ಹಾಗೂ ವಾಗ್ನರ್ ತಲಾ 1 ವಿಕೆಟ್ ಪಡೆದಿದ್ದಾರೆ.

 • 19 Jun 2021 18:01 PM (IST)

  ಭಾರತ 70-2 (32 ಓವರ್)

  ಮೊದಲ ಸೆಷನ್ ಬಳಿಕ ಭಾರತ ಮತ್ತೆ ಬ್ಯಾಟಿಂಗ್ ಆರಂಭಿಸಿದೆ. ನಾಯಕ ವಿರಾಟ್ ಕೊಹ್ಲಿ 7 (30) ಹಾಗೂ ಚೇತೇಶ್ವರ್ ಪೂಜಾರ 0 (30) ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಜಿಂಕ್ಯಾ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ ಇನ್ನು ಬ್ಯಾಟಿಂಗ್ ಮಾಡಲು ಬಾಕಿ ಇದ್ದಾರೆ. ನ್ಯೂಜಿಲ್ಯಾಂಡ್ ತಂಡ ವಿಕೆಟ್ ಕಬಳಿಸುವ ಪ್ರಯತ್ನ ನಡೆಸುತ್ತಿದೆ.

 • 19 Jun 2021 17:08 PM (IST)

  ಲಂಚ್ ಬ್ರೇಕ್ ವೇಳೆಗೆ ಭಾರತ 69-2 (28 ಓವರ್)

  ಭಾರತ ತಂಡ ಮೊದಲ ಸೆಷನ್​ನಲ್ಲಿ, ಊಟದ ವಿರಾಮಕ್ಕೂ ಮೊದಲು 28 ಓವರ್​ಗಳನ್ನು ಆಡಿ 69 ರನ್ ದಾಖಲಿಸಿದೆ. ಆದರೆ, ಆರಂಭಿಕರಾಗಿ ಕಣಕ್ಕಿಳಿದ ಇಬ್ಬರ ವಿಕೆಟ್​ನ್ನೂ ಕಳೆದುಕೊಂಡಿದೆ. ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಜೊತೆಯಾಟ ಅರ್ಧಶತಕದ ಆರಂಭ ನೀಡಿತ್ತು. ಇಬ್ಬರೂ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಆಡುತ್ತಿದ್ದಾರೆ. ಕೊಹ್ಲಿ 12 ಬಾಲ್​ಗೆ 6 ಹಾಗೂ ಪೂಜಾರ 24 ಬಾಲ್​ಗೆ ರನ್ ಗಳಿಸದೆ ಕ್ರೀಸ್ ಕಾಯ್ದುಕೊಂಡಿದ್ಧಾರೆ.

  ರೋಹಿತ್ ಶರ್ಮಾ- ಶುಬ್​ಮನ್ ಗಿಲ್ ಆರಂಭಿಕ ಜೊತೆಯಾಟಕ್ಕೆ ಬ್ರೇಕ್

 • 19 Jun 2021 16:54 PM (IST)

  ಭಾರತಕ್ಕೆ ಮತ್ತೊಂದು ಆಘಾತ; ಗಿಲ್ ಔಟ್

  img

  ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ, ಶುಬ್​ಮನ್ ಗಿಲ್ ಕೂಡ ಔಟ್ ಆಗಿದ್ಧಾರೆ. 64 ಬಾಲ್​ಗೆ 28 ರನ್ ಗಳಿಸಿ, ವಾಗ್ನರ್ ಬಾಲ್​ಗೆ ವಾಟ್ಲಿಂಗ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕ್ರೀಸ್​ಗೆ ಇಳಿದಿದ್ದಾರೆ. ಚೇತೇಶ್ವರ್ ಪೂಜಾರ ಕೂಡ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡದ ಮೊತ್ತ 26 ಓವರ್​ಗೆ 63 ರನ್​ ಆಗಿದ್ದು 2 ವಿಕೆಟ್ ಕಳೆದುಕೊಂಡಿದ್ದಾರೆ.

 • 19 Jun 2021 16:33 PM (IST)

  ರೋಹಿತ್ ಶರ್ಮಾ ಔಟ್!

  ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಆಘಾತ ಎದುರಾಗಿದೆ. ಅರ್ಧಶತಕದ ಜೊತೆಯಾಟ ನೀಡಿದ್ದ ಶುಬ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜೋಡಿ ಬೇರ್ಪಟ್ಟಿದೆ. 68 ಬಾಲ್​ಗೆ 34 ರನ್ ಗಳಿಸಿ ಉತ್ತಮ ಆಟ ಆಡುತ್ತಿದ್ದ ರೋಹಿತ್ ಶರ್ಮಾ, ಕೈಲ್ ಜಾಮಿಸನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಸೌಥಿಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದ್ದಾರೆ. ರೋಹಿತ್ ಶರ್ಮಾ 6 ಬೌಂಡರಿ ಸಿಡಿಸಿದ್ದರು. ಇದೀಗ ಚೇತೇಶ್ವರ ಪೂಜಾರ ಕ್ರೀಸ್​ಗೆ ಇಳಿದಿದ್ದಾರೆ.

 • 19 Jun 2021 16:23 PM (IST)

  ಭಾರತ 53-0 (18 ಓವರ್)

  ಬ್ಯಾಟಿಂಗ್ ಆರಂಭಿಸಿದ ಭಾರತ 18 ಓವರ್​ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 53 ರನ್ ದಾಖಲಿಸಿದೆ. ರೋಹಿತ್ ಶರ್ಮಾ 62 ಬಾಲ್​ಗೆ 29 ಹಾಗೂ ಶುಬ್​ಮನ್ ಗಿಲ್ 46 ಬಾಲ್​ಗೆ 23 ರನ್ ಗಳಿಸಿ ಆಡುತ್ತಿದ್ದಾರೆ. ತಂಡದ ಪರವಾಗಿ ಒಟ್ಟು 8 ಬೌಂಡರಿಗಳು ದಾಖಲಾಗಿದೆ. ಯಾವುದೇ ಸಿಕ್ಸರ್ ಚಿಮ್ಮಿಲ್ಲ. ನ್ಯೂಜಿಲ್ಯಾಂಡ್ ಭಾರತದ ಮೊದಲ ವಿಕೆಟ್ ಕಸಿಯುಲು ಪ್ರಯತ್ನಿಸುತ್ತಿದೆ. 17ನೇ ಓವರ್​ನ ಕೊನೆಯ ಬಾಲ್​ನಲ್ಲಿ ರೋಹಿತ್ ಶರ್ಮಾ ಎಲ್​ಬಿಡಬ್ಲ್ಯುಗೆ ಕೋರಲಾಗಿತ್ತು. ಆದರೆ ಅದು ನಾಟೌಟ್ ಆಗಿದೆ.

 • 19 Jun 2021 16:19 PM (IST)

  ಅರ್ಧಶತಕ ಪೂರೈಸಿದ ಭಾರತ

  ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಅರ್ಧಶತಕ ಪೂರೈಸಿದೆ. 17.1 ನೇ ಬಾಲ್​ಗೆ ಬೌಂಡರಿ ಬಾರಿಸುವ ಮೂಲಕ, ರೋಹಿತ್ ಶರ್ಮಾ ಭಾರತವನ್ನು 50 ರನ್ ಗಡಿ ದಾಟಿಸಿದ್ದಾರೆ. ತಂಡದ ಮೊತ್ತ ಈಗ 17.1 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 53 ರನ್ ದಾಖಲಾಗಿದೆ. ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಕಣದಲ್ಲಿದ್ದಾರೆ.

 • 19 Jun 2021 15:57 PM (IST)

  ಭಾರತ 41-0 (12 ಓವರ್)

  ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 12 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 41 ರನ್ ದಾಖಲಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಆಟವಾಡುತ್ತಿದ್ದಾರೆ. 10 ಓವರ್​ಗಳನ್ನು ಬೋಲ್ಟ್ ಹಾಗೂ ಸೌಥಿ ಬೌಲಿಂಗ್ ಮಾಡಿದ ಬಳಿಕ, ಕೈಲ್ ಜಾಮಿಸನ್ ಬೌಲಿಂಗ್​ಗೆ ಇಳಿದಿದ್ದಾರೆ. ಭಾರತಕ್ಕೆ ಉತ್ತಮ ಆಟದ ಆರಂಭ ದೊರಕಿದೆ.

 • 19 Jun 2021 15:43 PM (IST)

  ಭಾರತ 36-0 (9 ಓವರ್)

  9 ಓವರ್​ಗಳ ಅಂತ್ಯಕ್ಕೆ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 36 ರನ್ ದಾಖಲಿಸಿದೆ. ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟ್ರೆಂಟ್ ಬೋಲ್ಟ್ ಹಾಗೂ ಟಿಮ್ ಸೌಥಿ ಬೌಲಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಬೌಲಿಂಗ್​ನಲ್ಲೂ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಅಷ್ಟೂ ಓವರ್​​ಗಳನ್ನು ಇಬ್ಬರೇ ಬೌಲ್ ಮಾಡಿದ್ದಾರೆ. ರೋಹಿತ್ ಶರ್ಮಾ 3 ಬೌಂಡರಿ ಮತ್ತು ಶುಬ್​ಮನ್ ಗಿಲ್ 1 ಬೌಂಡರಿ ಬಾರಿಸಿದ್ದಾರೆ.

 • 19 Jun 2021 15:28 PM (IST)

  ಟೀಂ ಇಂಡಿಯಾದಿಂದ ಮಿಲ್ಖಾ ಸಿಂಗ್ ಸ್ಮರಣೆ

  ಇಂದು ನಿಧನರಾದ ಭಾರತದ ಕ್ರೀಡಾಲೋಕದ ದಂತಕಥೆ ಮಿಲ್ಖಾ ಸಿಂಗ್ ಸ್ಮರಣಾರ್ಥವಾಗಿ ಭಾರತ ತಂಡ ಕಪ್ಪು ಬ್ಯಾಂಡ್ ಧರಿಸಿ ಆಟ ಆಡುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಮಿಲ್ಖಾ ಸಿಂಗ್​ಗೆ ಶ್ರದ್ಧಾಂಜಲಿ ಸಲ್ಲಿಸಿದೆ.

  ಇದೀಗ ಭಾರತ ತಂಡದ ಮೊತ್ತ 6 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ. ಭಾರತದ ಪರವಾಗಿ ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 19 Jun 2021 15:18 PM (IST)

  ಭಾರತ 8-0 (3 ಓವರ್)

  ಟಾಸ್ ಸೋತ ಭಾರತ ತಂಡ ಬ್ಯಾಟಿಂಗ್ ಆರಂಭಿಸಿದೆ. ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೂರನೇ ಓವರ್ ಅಂತ್ಯಕ್ಕೆ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ, 8 ರನ್ ಕಲೆಹಾಕಿದೆ. ಟಿಮ್ ಸೌಥಿ ಹಾಗೂ ಟ್ರೆಂಟ್ ಬೋಲ್ಟ್ ಬೌಲಿಂಗ್ ಮಾಡುತ್ತಿದ್ದಾರೆ. ಶುಬ್​ಮನ್ ಗಿಲ್ ರನ್ ಖಾತೆ ತೆರೆದಿಲ್ಲ. ರೋಹಿತ್ ಶರ್ಮಾ 8 ರನ್ ಗಳಿಸಿ ಕ್ರೀಸ್​ನಲ್ಲಿ ಇದ್ದಾರೆ. ಯಾವುದೇ ಬೌಂಡರಿ, ಸಿಕ್ಸರ್ ಈ ವರೆಗೆ ದಾಖಲಾಗಿಲ್ಲ.

 • 19 Jun 2021 15:00 PM (IST)

  ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್

  ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿದೆ:
  ಟಾಮ್ ಲತಮ್, ಡೆವನ್ ಕಾನ್ವೆ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟಯ್ಲರ್, ಹೆನ್ರಿ ನಿಕೊಲಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಕೊಲಿನ್ ಡೆ ಗ್ರಾಂಡ್​ಹೊಮ್, ಕೈಲ್ ಜಾಮಿಸನ್, ನೀಲ್ ವಾಗ್ನರ್, ಟಿಮ್ ಸೌಥಿ, ಟ್ರೆಂಟ್ ಬೋಲ್ಟ್

 • 19 Jun 2021 14:57 PM (IST)

  ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿದೆ

  ಭಾರತ ತಂಡ ಮೊದಲು ಘೋಷಿಸಿದ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ತಂಡದ ವಿವರ ಇಲ್ಲಿದೆ:
  ರೋಹಿತ್ ಶರ್ಮಾ, ಶುಬ್​ಮನ್ ಗಿಲ್, ವಿರಾಟ್ ಕೊಹ್ಲಿ (ನಾಯಕ), ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮದ್ ಶಮಿ.

 • 19 Jun 2021 14:49 PM (IST)

  ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ

  ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

 • 19 Jun 2021 14:40 PM (IST)

  ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಇಲ್ಲಿದೆ

  ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಂಪೂರ್ಣ ಲೈವ್ ಮಾಹಿತಿಗಳು ಇಲ್ಲಿ ನಿಮಗೆ ಲಭ್ಯವಿರುತ್ತದೆ. ಪಂದ್ಯದ ಕುತೂಹಲವನ್ನು ಅಕ್ಷರಗಳಲ್ಲಿ ನೀವು ಆಸ್ವಾದಿಸಬಹುದು. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ- ನ್ಯೂಜಿಲೆಂಡ್ ತಂಡಗಳು ಕಣಕ್ಕಿಳಿದಿದ್ದು. ಯಾರು ಗೆಲ್ಲುತ್ಥಾರೆ, ಪಂದ್ಯದಲ್ಲಿ ಏನೇನು ದಾಖಲೆ, ಬೆಳವಣಿಗೆಗಳು ಆಗುತ್ತವೆ ಎಂದು ಇಲ್ಲಿ ಮಾಹಿತಿ ಪಡೆಯಬಹುದು. ಟಿವಿ9 ಡಿಜಿಟಲ್​ನಲ್ಲಿ ಕ್ರಿಕೆಟ್​ಗಾಗಿ ವಿಶೇಷ ಪುಟ ತೆರೆಯಲಾಗಿದೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಹಲವು ವಿಶೇಷ ಮಾಹಿತಿಗಳನ್ನು ಓದಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ: ಟಿವಿ9 ಡಿಜಿಟಲ್- ಕ್ರಿಕೆಟ್