You are FRAMED Washington Sundar! ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?

80ರ ದಶಕದ ಆಟವನ್ನು ನೆನಪಿಸುವಂತೆ ಮೊನ್ನೆ ವಾಷಿಂಗ್ಟನ್​ ಸುಂದರ್ ಅಂತಹುದೇ ಹುಕ್​ ಶಾಟ್​ ಎತ್ತಿ, ಚೆಂಡನ್ನು ಬೌಂಡರಿಯಾಚೆಗೆ ಅಟ್ಟಿದ್ದರು! Exactly ವಾಷಿಂಗ್ಟನ್​ ಸುಂದರ್ ಅವರ ಆ ಸುಂದರ ಹೊಡತದ ಭಂಗಿಯನ್ನೇ ಐಸಿಸಿ Exactly (ICC -International Cricket Council) ಫ್ರೇಂ ಮಾಡಿದೆ.

  • ಸಾಧು ಶ್ರೀನಾಥ್​
  • Published On - 11:19 AM, 20 Jan 2021
You are FRAMED Washington Sundar! ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?

ನಿನ್ನೆ ಬ್ರಿಸ್ಬೇನ್​ನ ಗಾಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತದ ಬ್ಲೂ ಬಾಯ್ಸ್​ ನಿಜಕ್ಕೂ ಅದ್ಭುತವಾಗಿ ಆಡಿದ್ದು, ತಮ್ಮ ಅಮೋಘ ಪ್ರದರ್ಶನಕ್ಕೆ ಇಡೀ ವಿಶ್ವವೇ ತಲೆದೂಗುವಂತೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿಯೂ ವಿಭಿನ್ನ ರೀತಿಯಲ್ಲಿ ಶಹಭಾಶ್ ಹುಡುಗರಾ! ಅಂದಿದೆ.

80ರ ದಶಕದಲ್ಲಿ ಕೆಲ ಆಲ್​ರೌಂಡರ್​ ಆಟಗಾರರು ಕ್ರಿಕೆಟ್​ ಆಟದಲ್ಲಿ ಹುಕ್​ ಶಾಟ್​​ ಬಾರಿಸುವುದನ್ನು ಒಂದು ಕಲೆಯಾಗಿಸಿಕೊಂಡಿದ್ದರು. ಕ್ರಿಕೆಟ್​ ಪ್ರೇಮಿಗಳಿಗೆ ಆ ಹುಕ್​ ಶಾಟ್​​ ನಯನ ಮನೋಹರವಾಗಿದ್ದವು. ಅದರಲ್ಲೂ ನಮ್ಮ ಕಪಿಲ್​ ದೇವ್​ ಸೇರಿದಂತೆ ಅಯಾನ್ ಬೋಥಾಂ, ರಿಚರ್ಡ್ಸ್​ ಹ್ಯಾಡ್ಲಿ, ನೆರೆಯ ಇಮ್ರಾನ್ ಖಾನ್​ ಮುಂತಾದ ಕೆಲ ಆಲ್​ರೌಂಡರ್​ ಆಟಗಾರರು ಹುಕ್​ ಶಾಟ್​​ ಮೂಲಕ ವಿಜೃಂಭಿಸುತ್ತಿದ್ದರು. ಅದಾದ ಮೇಲೆ ಅಲ್ಲೊಂದು ಇಲ್ಲೊಂದು ಎಂಬಂತೆ ಬ್ಯಾಟ್ಸ್​ಮನ್​ಗಳು ಹುಕ್​ ಶಾಟ್ ಗಳನ್ನು ತಮ್ಮ ಬ್ಯಾಟಿಂದ ಸಿಡಿಸುತ್ತಿದ್ದರು.

You are FRAMED Washington Sundar!

80ರ ದಶಕದ ಆಟವನ್ನು ನೆನಪಿಸುವಂತೆ ಮೊನ್ನೆ ವಾಷಿಂಗ್ಟನ್​ ಸುಂದರ್ ಅಂತಹುದೇ ಹುಕ್​ ಶಾಟ್​ ಎತ್ತಿ, ಚೆಂಡನ್ನು ಬೌಂಡರಿಯಾಚೆಗೆ ಅಟ್ಟಿದ್ದರು! Exactly ವಾಷಿಂಗ್ಟನ್​ ಸುಂದರ್ ಅವರ ಆ ಸುಂದರ ಹೊಡತದ ಭಂಗಿಯನ್ನೇ ಐಸಿಸಿ (ICC -International Cricket Council) ಫ್ರೇಂ ಮಾಡಿದೆ. ಅದಕ್ಕೊಂದು ಸುಂದರ ಚೌಕಟ್ಟನ್ನು ತೊಡಿಸಿ, ಯು ಆರ್​ ಫ್ರೇಮ್ಡ್​ ಮೈ ಬಾಯ್​ ಎಂದು ಆತನನ್ನು ಹುರಿದುಂಬಿಸಿದೆ.

ಆ ಚೌಕಟ್ಟಿಗೆ ಒಂದು ಸುಂದರ ಕ್ಯಾಪ್ಷನ್​ ಸಹ ನೀಡಿ.. ಹುಕ್​ ಶಾಟ್​​ ಭಂಗಿಯನ್ನು ಅದೊಂದು ಸುಂದರ ಪದ್ಯ (Poetry) ಎಂದು ಬಣ್ಣಿಸಿದೆ. POETRY IN MOTION ಎಂದಿದೆ. ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?

ಕಪಿಲ್​ ದೇವ್ ನಟರಾಜ ಶಾಟ್

ಕಾಂಗರೂಗಳ ಬಾಲ ಕಟ್; 4ನೇ ಟೆಸ್ಟ್​ ಗೆದ್ದುಬೀಗಿದ ಭಾರತ: ಸರಣಿಯೂ ಬ್ಲೂ ಬಾಯ್ಸ್​ ಮಡಿಲಿಗೆ!

ಮೂರು ದಶಕಗಳ ಬಳಿಕ ಗಾಬಾದಲ್ಲಿ ಗಾಬರಿಗೊಂಡ ಕಾಂಗರೂ ಪಡೆ.. ಗಾಬಾ ಹೆಸರು ಎಲ್ಲಿಂದ ಬಂತು?