IPL 2021: ನಿಮಗೆ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಲಾಗುವುದಿಲ್ಲ! ಐಪಿಎಲ್ ಮುಗಿಯುವ ತನಕ ಭಾರತದಲ್ಲೇ ಇರಿ; ಕ್ರಿಕಿಟ್ ಆಸ್ಟ್ರೇಲಿಯಾ

IPL 2021: ಐಪಿಎಲ್ ಮುಗಿದ ನಂತರ ಕೊರೊನಾ ಹೆಚ್ಚಿರುವ ಭಾರತದಿಂದ ತನ್ನ ಆಟಗಾರರನ್ನು ಮನೆಗೆ ಕರೆತರಲು ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡುವ ಯಾವುದೇ ಯೋಜನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೊಂದಿಲ್ಲ

  • TV9 Web Team
  • Published On - 18:21 PM, 3 May 2021
IPL 2021: ನಿಮಗೆ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಲಾಗುವುದಿಲ್ಲ! ಐಪಿಎಲ್ ಮುಗಿಯುವ ತನಕ ಭಾರತದಲ್ಲೇ ಇರಿ; ಕ್ರಿಕಿಟ್ ಆಸ್ಟ್ರೇಲಿಯಾ
ನಿಕ್ ಹಾಕ್ಲೆ

ಐಪಿಎಲ್ ಮುಗಿದ ನಂತರ ಕೊರೊನಾ ಹೆಚ್ಚಿರುವ ಭಾರತದಿಂದ ತನ್ನ ಆಟಗಾರರನ್ನು ಮನೆಗೆ ಕರೆತರಲು ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡುವ ಯಾವುದೇ ಯೋಜನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೊಂದಿಲ್ಲ ಎಂದು ಅದರ ಮುಖ್ಯಸ್ಥ ನಿಕ್ ಹಾಕ್ಲೆ ಸೋಮವಾರ ಹೇಳಿದ್ದಾರೆ. ಐಪಿಎಲ್ ಬಯೋ-ಬಬಲ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ಸುರಕ್ಷಿತವಾಗಿದ್ದಾರೆ ಎಂದು ಹಾಕ್ಲೆ ಹೇಳಿದರು. ಆದರೆ ಇಬ್ಬರು ಕೆಕೆಆರ್ ಆಟಗಾರರು ಕೊರೊನಾಗೆ ತುತ್ತಾಗಿದ್ದಾರೆ ಎಂಬುದು ತಿಳಿಯುವ ಮೊದಲೇ ಅವರ ಅಭಿಪ್ರಾಯಗಳು ಬಂದಿದ್ದು, ಸೋಮವಾರ ಆರ್‌ಸಿಬಿ ವಿರುದ್ಧದ ಫ್ರ್ಯಾಂಚೈಸ್ ಪಂದ್ಯವನ್ನು ಮುಂದೂಡಲಾಗಿದೆ.

ಕ್ರಿಸ್ ಲಿನ್ ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೋರಿದ್ದರು
ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್​ಗೆ ಕೊರೊನಾ ತಗುಲಿದೆ ಎಂಬುದನ್ನು ಬಹಿರಂಗಪಡಿಸಿರುವುದು ಈಗ ವರದಿಯಾಗಿದೆ. ಮೇ 30 ರಂದು ಪಂದ್ಯಾವಳಿ ಮುಕ್ತಾಯಗೊಂಡ ನಂತರ ಆಸ್ಟ್ರೇಲಿಯಾ ಆಟಗಾರರಿಗೆ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡುವಂತೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೋರಿದ್ದರು.

ನಾವು ಆಸ್ಟ್ರೇಲಿಯಾದ ಕ್ರಿಕೆಟಿಗರ ಸಂಘದೊಂದಿಗೆ, ಆಟಗಾರರೊಂದಿಗೆ ಮತ್ತು ಬಿಸಿಸಿಐ ಜೊತೆ ನಿಕಟವಾಗಿ ಸಂಪರ್ಕದಲ್ಲಿದ್ದೇನೆ. ಅಲ್ಲಿನ ನಮ್ಮ ಆಟಗಾರರಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ನಾವು ಅಲ್ಲಿನ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರು ಸಾಮಾನ್ಯವಾಗಿ ಉತ್ತಮ ಉತ್ಸಾಹದಲ್ಲಿದ್ದಾರೆ. ಬಿಸಿಸಿಐ ಮಾಡಿರುವ ಬಯೋ ಬಬಲ್​ ನಿಯಮದಡಿಯಲ್ಲಿ ಅವರು ಸುರಕ್ಷಿತವಾಗಿದ್ದಾರೆ. ಜೊತೆಗೆ ಆಸಿಸ್ ಆಟಗಾರರು ಸಹ ಐಪಿಎಲ್​ ಆಟವನ್ನು ಮುಗಿಸುವ ತವಕದಲ್ಲಿದ್ದಾರೆ ಎಂದರು.

ಪಂದ್ಯಾವಳಿ ಮೇ 30 ರಳೊಗೆ ಮುಗಿಯುವುದಿಲ್ಲ
ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಆದರೆ ತಕ್ಷಣವೇ ಆಗುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಹೇಳಿದರು. ಪಂದ್ಯಾವಳಿ ಮೇ 30 ರಳೊಗೆ ಮುಗಿಯುವುದಿಲ್ಲ, ಆದ್ದರಿಂದ ಸದ್ಯಕ್ಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಪಂದ್ಯಾವಳಿಯು ಅಂತ್ಯಕ್ಕೆ ಹತ್ತಿರವಾಗುತ್ತಿದ್ದಂತೆ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂದು ನಾವು ನೋಡಬೇಕಾಗಿದೆ ಎಂದರು.

ಆಸ್ಟ್ರೇಲಿಯಾ ಸರ್ಕಾರ ಇತ್ತೀಚೆಗೆ ತನ್ನ ನಾಗರಿಕರನ್ನು ಭಾರತದಿಂದ ಹಿಂತಿರುಗುವುದನ್ನು ನಿಷೇಧಿಸಿತು, ಭಾರತದಲ್ಲಿ ಕೊರೊನಾ ಎರಡನೇ ಅಲೆ ಎಬ್ಬಿಸಿರುವ ಬಿರುಗಾಳಿಯಿಂದಾಗಿ ಆಸ್ಟ್ರೇಲಿಯಾ ಈ ತೀರ್ಮಾನ ತೆಗೆದುಕೊಂಡಿದೆ. ಆಸ್ಟ್ರೇಲಿಯಾದ ಆಡಮ್ ಜಂಪಾ, ಆಂಡ್ರ್ಯೂ ಟೈ ಮತ್ತು ಕೇನ್ ರಿಚರ್ಡ್ಸನ್ ಕೂಡ ಐಪಿಎಲ್ ನ ಭಾಗವಾಗಿದ್ದರು ಆದರೆ ನಿಷೇಧ ಘೋಷಣೆಯ ಮೊದಲು ಅವರು ಭಾರತದಿಂದ ತಾಯ್ನಾಡಿಗೆ ವಾಪಾಸ್ಸಾದರು. ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಲೀಗ್‌ನಲ್ಲಿ ಪ್ರಸ್ತುತ ಮತ್ತು ಮಾಜಿ ಆಟಗಾರರನ್ನು ಹೊಂದಿದ್ದು, ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌
ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಸ್ಟೀವ್ ಸ್ಮಿತ್ ಮುಂತಾದವರು ಆಟಗಾರರಾಗಿ ಸ್ಪರ್ಧಿಸುತ್ತಿದ್ದರೆ, ಮಾಜಿ ನಾಯಕ ರಿಕಿ ಪಾಂಟಿಂಗ್ ಕರ್ತವ್ಯದಲ್ಲಿರುವ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ಜೂನ್ 18 ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಭಾರತೀಯ ಮತ್ತು ನ್ಯೂಜಿಲೆಂಡ್ ಆಟಗಾರರೊಂದಿಗೆ ಆಸ್ಟ್ರೇಲಿಯಾ ಆಟಗಾರರು ಯುಕೆಗೆ ಪ್ರಯಾಣಿಸುವುದಕ್ಕೆ ಮನಸ್ಸಿಲ್ಲ ಎಂದು ಮ್ಯಾಕ್ಸ್‌ವೆಲ್ ಇತ್ತೀಚೆಗೆ ಹೇಳಿದ್ದರು.