IPL 2021 PBKS vs RR Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ

ಐಪಿಎಲ್ 2021 ರ ಹರಾಜಿನಲ್ಲಿ ರಾಜಸ್ಥಾನ್​ ರಾಯಲ್ಸ್​ ಕ್ರಿಸ್ ಮೋರಿಸ್ ಮತ್ತು ಮುಸ್ತಾಫಿಜುರ್ ರಹಮಾನ್ ಅವರನ್ನು ಖರೀದಿಸಿದೆ. ಅಲ್ಲದೇ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್​ನಂತಹ ಇಬ್ಬರು ಗುಣಮಟ್ಟದ ಬ್ಯಾಟ್ಸ್‌ಮನ್‌ಗಳು ಮತ್ತು ಆಲ್‌ರೌಂಡರ್‌ಗಳು ಇದ್ದಾರೆ.

  • TV9 Web Team
  • Published On - 7:49 AM, 12 Apr 2021
IPL 2021 PBKS vs RR Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
ಸಂಜು ಸ್ಯಾಮ್ಸನ್, ಕೆ ಎಲ್ ರಾಹುಲ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುವ ಮೂಲಕ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್​ಆರ್​) ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಪ್ರಯಾಣವನ್ನು ಸೋಮವಾರ ಪ್ರಾರಂಭಿಸುತ್ತಿವೆ. ಈ ಬಾರಿ ಎರಡೂ ತಂಡಗಳು ಹೊಸತನವನ್ನು ಹೊಂದಿದ್ದು ಸಾಕಷ್ಟು ನಿರೀಕ್ಷೆಗಳೊಂದಿಗೆ ಸಿದ್ಧವಾಗಿ ಬಂದಿವೆ. ಈ ವರ್ಷ ಪಂಜಾಬಿಗಳು ತಂಡದ ಹೆಸರನ್ನೇ ಬದಲಾಯಿಸಿ ಹೊಸ ಹೆಸರಿನೊಂದಿಗೆ ಬಂದಿದ್ದರೆ, ರಾಜಸ್ಥಾನವು ಸಂಜು ಸ್ಯಾಮ್ಸನ್‌ನ ಮುಖಾಂತರ ಹೊಸ ನಾಯಕನನ್ನು ಹೊಂದಿದೆ.

ಕಳೆದ ಎರಡು ವರ್ಷಗಳಲ್ಲಿ ರಾಯಲ್ಸ್ ಆಗಾಗ್ಗೆ ನಾಯಕತ್ವದ ಬದಲಾವಣೆಯನ್ನು ಕಂಡಿದ್ದು, ಸ್ಟೀವ್ ಸ್ಮಿತ್ ಅವರು 2019 ರ ಮಧ್ಯ ಆವೃತ್ತಿಯಲ್ಲಿ ನಾಯಕತ್ವದ ಅಧಿಕಾರವನ್ನು ವಹಿಸಿಕೊಂಡರು ಆದರೆ, ಕಳೆದ ಆವೃತ್ತಿಯಲ್ಲಿ ಎಂಟನೇ ಸ್ಥಾನವನ್ನು ಗಳಿಸಿದ ನಂತರ, ಆರ್​ಆರ್​​ ಸ್ಮಿತ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿತು. ಆ ಮೂಲಕ ನಾಯಕತ್ವವನ್ನೂ ಹಸ್ತಾಂತರಿಸಿತು.

ಕ್ರಿಸ್ ಮೋರಿಸ್ ಮತ್ತು ಮುಸ್ತಾಫಿಜುರ್ ರಹಮಾನ್ ಸೇರ್ಪಡೆ
ಆದಾಗ್ಯೂ, ಐಪಿಎಲ್ 2021 ರ ಹರಾಜಿನಲ್ಲಿ ರಾಜಸ್ಥಾನ್​ ರಾಯಲ್ಸ್​ ಕ್ರಿಸ್ ಮೋರಿಸ್ ಮತ್ತು ಮುಸ್ತಾಫಿಜುರ್ ರಹಮಾನ್ ಅವರನ್ನು ಖರೀದಿಸಿದೆ. ಅಲ್ಲದೇ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್​ನಂತಹ ಇಬ್ಬರು ಗುಣಮಟ್ಟದ ಬ್ಯಾಟ್ಸ್‌ಮನ್‌ಗಳು ಮತ್ತು ಆಲ್‌ರೌಂಡರ್‌ಗಳು ಇದ್ದಾರೆ. ಅವರು ಈ ವರ್ಷದ ಐಪಿಎಲ್‌ನಲ್ಲೂ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಮೇಲ್ನೋಟಕ್ಕೆ ಪಂಜಾಬ್ ತಂಡ ಉತ್ತಮವಾಗಿ ಕಾಣುತ್ತಿದೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಮೊದಲ ಕೆಲವು ಪಂದ್ಯಗಳನ್ನು ಕಳೆದುಕೊಂಡಿತ್ತಾದರೂ ನಂತರ ರಾಹುಲ್ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದರು. ಐಪಿಎಲ್ 2020 ರಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಪಂಜಾಬ್‌ನ ಪರ 670 ರನ್ ಗಳಿಸಿದರು ಆದರೆ 129.34 ಸ್ಟ್ರೈಕ್ ದರದಲ್ಲಿ ಇದು ಅವರ ಇನ್ನಿಂಗ್ಸ್‌ನ ಪ್ರಭಾವವನ್ನು ಕಡಿಮೆ ಮಾಡಿತು. ಇವರೆಲ್ಲರ ಜೊತೆಗೆ ಭಾರತದ ಟಿ 20 ದೇಶೀಯ ಪಂದ್ಯಾವಳಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದ ತಮಿಳುನಾಡಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಶಾರುಖ್ ಖಾನ್ ಈ ಬಾರಿ ಪಂಜಾಬ್​ ಪರ ಆಡಲಿದ್ದಾರೆ ಎನ್ನುವುದು ಗಮನಾರ್ಹ.

ಪಿಬಿಕೆಎಸ್ ಮತ್ತು ಆರ್​ಆರ್ ನಡುವಿನ ಐಪಿಎಲ್‌ನ ನಾಲ್ಕನೇ ಪಂದ್ಯ ಯಾವಾಗ ನಡೆಯುತ್ತದೆ?
ಪಿಬಿಕೆಎಸ್ ಮತ್ತು ಆರ್​​ಆರ್​​ ನಡುವಿನ ಐಪಿಎಲ್ 2021 ರ ನಾಲ್ಕನೇ ಪಂದ್ಯವು 2021ರ ಏಪ್ರಿಲ್ 12 ರಂದು ನಡೆಯಲಿದೆ.

ಪಂದ್ಯ ನಡೆಯುವ ಸ್ಥಳ?
ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ. ಇದಲ್ಲದೆ, ನೀವು ಲೈವ್ ಮಾಹಿತಿಗಾಗಿ ಮತ್ತು ಓವರ್ ಟು ಓವರ್ ಅಪ್​ಡೆಟ್​ಗಾಗಿ ಟಿವಿ9 ಡಿಜಿಟಲ್ ಲೈವ್​ಬ್ಲಾಗ್​ ವೀಕ್ಷಿಸಿ.