IPL 2021 RCB vs MI Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ

IPL 2021: ರೋಹಿತ್ ಶರ್ಮಾ ನೇತೃತ್ವದ ಎಂಐ ಸತತ ಮೂರನೇ ಐಪಿಎಲ್ ಪ್ರಶಸ್ತಿ ಮತ್ತು ಒಟ್ಟಾರೆ ಆರನೇ ಐಪಿಎಲ್​ ಕಿರೀಟವನ್ನ ತೋಡುವ ಗುರಿ ಹೊಂದಿದ್ದರೆ, ಕೊಹ್ಲಿ ನೇತೃತ್ವದ ಆರ್‌ಸಿಬಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.

  • TV9 Web Team
  • Published On - 7:10 AM, 9 Apr 2021
IPL 2021 RCB vs MI Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

IPL 2021 RCB vs MI Live Streaming: ಏಪ್ರಿಲ್ 9 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಎಂಐ ಸತತ ಮೂರನೇ ಐಪಿಎಲ್ ಪ್ರಶಸ್ತಿ ಮತ್ತು ಒಟ್ಟಾರೆ ಆರನೇ ಐಪಿಎಲ್​ ಕಿರೀಟವನ್ನ ತೋಡುವ ಗುರಿ ಹೊಂದಿದ್ದರೆ, ಕೊಹ್ಲಿ ನೇತೃತ್ವದ ಆರ್‌ಸಿಬಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.

ಮುಂಬೈ ಇಂಡಿಯನ್ಸ್ ತಂಡವೂ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿ ಕಾಣುತ್ತಿದೆ. ಅಲ್ಲದೆ ಟೀಂ ಇಂಡಿಯಾದಲ್ಲಿ ಅಬ್ಬರಿಸಿದ ಹಲವು ಆಟಗಾರರು ಮುಂಬೈ ತಂಡದಲ್ಲಿರುವುದು ಮುಂಬೈ ತಂಡದ ಬಲವಾಗಿದೆ. ಆದಾಗ್ಯೂ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಹೊಸ ನೇಮಕಾತಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ತಂಡವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2021 ಪಂದ್ಯದ ಎಲ್ಲಾ ವಿವರಗಳು ಇಲ್ಲಿವೆ.

ಎಂಐ ಮತ್ತು ಆರ್‌ಸಿಬಿ ನಡುವೆ ಐಪಿಎಲ್ 2021 ಆರಂಭಿಕ ಪಂದ್ಯ ಯಾವಾಗ?
ಎಂಐ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯ ಏಪ್ರಿಲ್ 9 ರಂದು ನಡೆಯಲಿದೆ.

ಪಂದ್ಯ ಆರಂಭವಾಗುವ ಸಮಯ?
ಎಂಐ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯವು ಸಂಜೆ 07:30 ಕ್ಕೆ ಪ್ರಾರಂಭವಾಗಲಿದೆ. ಟಾಸ್ 07:00 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತವೆ?
ಎಂಐ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.

ಲೈವ್ ಸ್ಟ್ರೀಮಿಂಗ್ ಅನ್ನು ನಾನು ಹೇಗೆ ನೋಡುವುದು?
ಎಂಐ ಮತ್ತು ಆರ್‌ಸಿಬಿ ಪಂದ್ಯದ ನಡುವಿನ ಐಪಿಎಲ್ 2021 ಆರಂಭಿಕ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ. ಜೊತೆಗೆ ಟಿವಿ9 ಡಿಜಿಟಲ್ ಲೈವ್​ ಅಪ್​ಡೆಟ್​ನಲ್ಲಿ ನೀವು ಲೈವ್ ಸ್ಕೋರ್‌ ಮತ್ತು ನವೀಕರಣಗಳನ್ನು ಸಹ ಕಾಣಬಹುದಾಗಿದೆ.

ಪೂರ್ಣ ತಂಡಗಳು
ಮುಂಬೈ ಇಂಡಿಯನ್ಸ್ (ಎಂಐ): ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ರಿಸ್ ಲಿನ್, ಅನ್ಮೊಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್, ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶಮ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಮತ್ತು ಅರ್ಜುನ್ ತೆಂಡೂಲ್ಕರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನವದೀಪ್ ಸೈನಿ, ಕೇನ್ ರಿಚರ್ಡ್‌ಸನ್, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ದೇವದತ್ ಪಡಿಕಲ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜಾಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ಸಚಿನ್ ಬೇಬಿ, ಗ್ಲೆನ್ ಮ್ಯಾಕ್ಸ್ ವೆಲ್.

ಇದನ್ನೂ ಓದಿ:IPL 2021: ನಾಳಿನ ಪಂದ್ಯದಲ್ಲಿ ಮುಂಬೈ ಎದುರು ಗೆದ್ದು ಬೀಗಲಿದೆ ಆರ್​ಸಿಬಿ! ಇದು ಅಂಕಿ- ಅಂಶಗಳು ನುಡಿದಿರುವ ಭವಿಷ್ಯ

(RCB vs MI Live Streaming when and where to watch online free in Kannada 9th April 2021)