IPL 2021 SRH vs RCB Match 6 live streaming: ಆರ್​ಸಿಬಿ vs ಎಸ್​ಆರ್​ಹೆಚ್ ನಡುವೆ ಪಂದ್ಯ ಎಲ್ಲಿ ಮತ್ತು ಯಾವಾಗ? ಉಳಿದೆಲ್ಲ ಮಾಹಿತಿ ಇಲ್ಲಿದೆ

ಆರ್​ಸಿಬಿ ತಂಡದ ಮೂಲಗಳ ಪ್ರಕಾರ ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ ಬುಧವಾರದ ಪಂದ್ಯಕ್ಕೆ ಲಭ್ಯರಿದ್ದಾರೆ. ಇದೇ ತಂಡದ ಡೇನಿಯಲ್ ಸ್ಯಾಮ್ಸ್ ಕೊವಿಡ್ ಸೋಂಕಿಗೊಳಗಾಗಿದ್ದು ಆಯ್ಕೆಗೆ ಲಭ್ಯರಿರುವುದಿಲ್ಲ. ಹೈದರಾಬಾದ ತಂಡಕ್ಕೆ ಗಾಯಾಳುಗಳ ಸಮಸ್ಯೆ ಇಲ್ಲ.

  • TV9 Web Team
  • Published On - 7:24 AM, 14 Apr 2021
IPL 2021 SRH vs RCB Match 6 live streaming: ಆರ್​ಸಿಬಿ vs ಎಸ್​ಆರ್​ಹೆಚ್ ನಡುವೆ ಪಂದ್ಯ ಎಲ್ಲಿ ಮತ್ತು ಯಾವಾಗ? ಉಳಿದೆಲ್ಲ ಮಾಹಿತಿ ಇಲ್ಲಿದೆ
ಡೇವಿಡ್​ ವಾರ್ನರ್ ಮತ್ತು ವಿರಾಟ್​ ಕೊಹ್ಲಿ

ಚೆನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂಡಿಯನ್​ ಪ್ರಿಮೀಯರ್​ ಲೀಗ್ 14ನೇ ಆವೃತ್ತಿಯ ಆರನೇ ಪಂದ್ಯ ಬುಧವಾರ ಚೆನೈನ ಎಮ್​ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡು ತಂಡಗಳಿಗೂ ಇದು ಈ ಆವೃತ್ತಿಯ ಎರಡನೇ ಪಂದ್ಯ. ಚೆನೈನ ಪಿಚ್​ ಸಾಂಪ್ರದಾಯಿಕವಾಗಿ ಸ್ಪಿನ್ನರ್​ಗಳಿಗೆ ನೆರವಾಗವುದರಿಂದ ಆರ್​ಸಿಬಿ ಮತ್ತು ಎಸ್​ಆರ್​ಎಚ್ ತಂಡದ ಸ್ಪಿನ್ನರ್​ಗಳು ಪಿಚ್​ನ ನೆರವು ಪಡೆಯಲಿದ್ದಾರೆ. ಹಾಗೆ ನೋಡಿದರೆ ಎರಡೂ ತಂಡಗಳಲ್ಲಿ ಉತ್ತಮ ಸ್ಪಿನರ್​ಗಳಿದ್ದಾರೆ. ವಿರಾಟ್ ಕೊಹ್ಲಿ ಪಡೆಯಲ್ಲಿ ಯುಜ್ವೇಂದ್ರ ಚಹಲ್, ವಾಷಿಂಗ್ಷನ್ ಸುಂದರ್ ಮತ್ತು ಅಡಂ ಜಂಪಾ ಮೊದಲಾದವರಿದ್ದರೆ, ಹೈದರಾಬಾದ್ ಟೀಮಿನಲ್ಲಿ ರಶೀದ್ ಖಾನ್, ಮೊಹಮ್ಮದ್​ ನಬಿ ಇದ್ದಾರೆ.

ಈ ಎರಡು ತಂಡಗಳ ನಡುವೆ ಇದುವರೆಗೆ ನಡೆದಿರುವ ಪಂದ್ಯಗಳ ಬಗ್ಗೆ ಒಂದಿಷ್ಟು ಕ್ಲುಪ್ತ ಮಾಹಿತಿ ಇಲ್ಲಿದೆ.

ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ

ಚಿದಂಬರಂ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಗಳ ಸರಾಸರಿ ಮೊತ್ತ 163 ಆಗಿದೆ.

ಚೇಸ್ ಮಾಡುವ ಸಂದರ್ಭಗಳಲ್ಲಿ ಯಶಸ್ಸಿನ ದಾಖಲೆ

ಈ ಮೈದಾನದಲ್ಲಿ ಚೇಸ್ ಮಾಡುವ ತಂಡಗಳ ಯಶಸ್ಸಿನ ಪ್ರಮಾಣ ಶೇಕಡಾ 53.7 ರಷ್ಟಿದೆ

ಎಸ್​ಆರ್​ಹೆಚ್ ಮತ್ತು ಆರ್​ಸಿಬಿ ಮುಖಾಮುಖಿ ಸೆಣಸು
ಐಪಿಎಲ್​ನಲ್ಲಿ ದಕ್ಷಿಣ ಭಾರತದ ಈ ಎರಡು ತಂಡಗಳ ನಡುವೆ 18 ಬಾರಿ ಸೆಣಸಾಟ ನಡೆದಿದೆ, ಅವುಗಳಲ್ಲಿ ಹೈದರಾಬಾದ 10 ಬಾರಿ ಗೆದ್ದರೆ ಬೆಂಗಳೂರು 7 ಬಾರಿ ಗೆಲುವು ಕಂಡಿದೆ. ಒಮ್ಮೆ ಫಲಿತಾಂಶ ಬಂದಿಲ್ಲ. 2020ರ ಐಪಿಎಲ್​​ನಲ್ಲಿ ಇವೆರಡು ತಂಡಗಳು ಮೂರು ಬಾರಿ ಸೆಣಸಿದವು. ಒಮ್ಮೆ ವಿರಾಟ್​ ಕೊಹ್ಲಿ ಪಡೆ ಗೆದ್ದರೆ ಎರಡು ಬಾರಿ ವಾರ್ನರ್ ತಂಡ ಯಶ ಸಾಧಿಸಿತು.

ಗರಿಷ್ಠ ಮತ್ತು ಕನಿಷ್ಠ ಸ್ಕೊರ್​ಗಳು
ಆರ್​ಸಿಬಿ ಗರಿಷ್ಠ ಸ್ಕೋರ್ 227 ಮತ್ತು ಕನಿಷ್ಠ ಸ್ಕೋರ್ 113 ಆಗಿದೆ, ಹೈದರಾಬಾದ್ ಟೀಮಿನ ಗರಿಷ್ಠ ಸ್ಕೋರ್ 231 ಮತ್ತು ಅತ್ಯಂತ ಕಡಿಮೆ ಮೊತ್ತ 135 ಆಗಿದೆ.

ಹೈದರಾಬಾದ್ ಮತ್ತು ಬೆಂಗಳೂರು ತಂಡಗಳ ಗಾಯಾಳುಗಳು ಮತ್ತು ಅವರ ಲಭ್ಯತೆ
ಆರ್​ಸಿಬಿ ತಂಡದ ಮೂಲಗಳ ಪ್ರಕಾರ ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ ಬುಧವಾರದ ಪಂದ್ಯಕ್ಕೆ ಲಭ್ಯರಿದ್ದಾರೆ. ಇದೇ ತಂಡದ ಡೇನಿಯಲ್ ಸ್ಯಾಮ್ಸ್ ಕೊವಿಡ್ ಸೋಂಕಿಗೊಳಗಾಗಿದ್ದು ಆಯ್ಕೆಗೆ ಲಭ್ಯರಿರುವುದಿಲ್ಲ. ಹೈದರಾಬಾದ್​ ತಂಡಕ್ಕೆ ಗಾಯಾಳುಗಳ ಸಮಸ್ಯೆ ಇಲ್ಲ.

ವಿರಾಟ್​ ಕೊಹ್ಲಿ ಮತ್ತು ಡೇವಿಡ್ ವಾರ್ನರ್​ ತಂಡಗಳ ನಡುವೆ ಮಹತ್ವದ ಪಂದ್ಯ ಬುಧವಾರದಂದು ಎಲ್ಲಿ ನಡೆಯಲಿದೆ?
ಈ ಪಂದ್ಯ ಚೆನೈನ ಎಮ್ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ ಅಂತ ನಿಮಗೆ ಗೊತ್ತಿರಬಹುದು
ಸಂಜೆ ಎಂದಿನಂತೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಸದರಿ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ. ಇದಲ್ಲದೆ, ನೀವು ಲೈವ್ ಮಾಹಿತಿಗಾಗಿ ಮತ್ತು ಓವರ್ ಟು ಓವರ್ ಅಪ್​ಡೆಟ್​ಗಾಗಿ ಟಿವಿ9 ಡಿಜಿಟಲ್ ಲೈವ್​ಬ್ಲಾಗ್​ ವೀಕ್ಷಿಸಬಹುದು

ಸಂಭಾವ್ಯ ತಂಡಗಳು:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್​ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಎ ಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​ವೆಲ್​, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್ ಮತ್ತು ಶಾಹ್​ಬಾಜ್ ಅಹ್ಮದ್.

ಸನ್​ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ, ಜಾನಿ ಬೇರ್​ಸ್ಟೋ, ಮನೀಶ್​ ಪಾಂಡೆ, ಅಬ್ದುಲ್ ಸಮದ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಸಂದೀಪ್ ಶರ್ಮ

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ 350 ಸಿಕ್ಸರ್ ಬಾರಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್