IPL 2021: ಫುಲ್​ ಜೋಶ್​ನಲ್ಲಿರುವ ಆರ್​ಸಿಬಿ ಮತ್ತು ಗಾಯಗೊಂಡ ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು

ಈ ಹಿಂದೆ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತಿದ್ದ ನಮ್ಮ ಆರ್​ಸಿಬಿ ತಂಡ ಈ ಬಾರಿ ಫುಲ್​ ಜೋಶ್​ನಲ್ಲಿದ್ದು, ಸನ್​ರೈಸರ್ಸ್​ ವಿರುದ್ಧ ಸೇಡು ಸೀರಿಕೊಳ್ಳಲು ತವಕಿಸುತ್ತಿದೆ. ಇಂದು ಬುಧವಾರ ರಾತ್ರಿ ಚೆನ್ನೈನಲ್ಲಿ ಎರಡೂ ತಂಡಗಳು ಪರಸ್ಪರ ಸೆಣಸಲಿವೆ.

  • TV9 Web Team
  • Published On - 16:43 PM, 14 Apr 2021
IPL 2021: ಫುಲ್​ ಜೋಶ್​ನಲ್ಲಿರುವ ಆರ್​ಸಿಬಿ ಮತ್ತು ಗಾಯಗೊಂಡ ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು
ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು

ಹಾಲಿ IPL 2021 ಆವೃತ್ತಿಯ 6ನೇ ಪಂದ್ಯ ಇಂದು ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ. IPL 2021ರ ಮೊದಲ ಪಂದ್ಯದಲ್ಲೇ ನಮ್ಮದೇ ಹೆಮ್ಮೆಯ ಆರ್​ಸಿಬಿ ತಂಡ ಬಲಾಢ್ಯ ಮುಂಬೈಗೆ ಕೊನೆಯ ಎಸೆತದಲ್ಲಿ ಮಣ್ಣುಮುಕ್ಕಿಸಿ, ಶುಭಾರಂಭ ಮಾಡಿದೆ. ಅದೇ ಸನ್​ರೈಸರ್ಸ್​ ಹೈದರಾಬಾದ್ ತಂಡವು ಕೋಲ್ಕತಾ ನೈಟ್​ ರೈಡರ್ಸ್​ ವಿರುದ್ಧ 10 ರನ್​ಗಳ ಸೋಲುಂಡಿತ್ತು. ಸತತವಾಗಿ ಮತ್ತೊಂದು ಪಂದ್ಯ ಗೆಲ್ಲುವ ತವಕದಲ್ಲಿರುವ ಆರ್​ಸಿಬಿ ತಂಡ ಅಂಕ ಪಟ್ಟಿಯಲ್ಲಿ ಮೇಲೇರುವ ಗುರಿಹೊಂದಿದೆ. ಅದೇ ಸನ್​ರೈಸರ್ಸ್​ ಹೈದರಾಬಾದ್ ತಂಡವು ಗೆಲುವು ಸಾಧಿಸಿ, ಅಂಕದ ಖಾತೆ ತೆರೆಯುವ ಉಮೇದಿಯಲ್ಲಿದೆ.

ಹಾಗೆ ನೋಡಿದರೆ ಆರ್​ಸಿಬಿ ತಂಡಕ್ಕೆ ಸನ್​ರೈಸರ್ಸ್​ ಹೈದರಾಬಾದ್ ಅಂದ್ರೆ ಸಿಂಹಸ್ವಪ್ನ. IPL 2016 ರ ಆವೃತ್ತಿಯಲ್ಲಿ ಫೈನಲ್ಸ್​​ನಲ್ಲಿ ಆರ್​ಸಿಬಿ ತಂಡವು ಸನ್​ರೈಸರ್ಸ್​ ಹೈದರಾಬಾದ್ ಎದುರು ಮಂಡಿಯೂರಿತ್ತು. ಮತ್ತೆ, ಕಳೆದ ಸೀಸನ್​ನಲ್ಲಿಯೂ ಎಲಿಮೇನಟರ್​​ ಹಂತದಲ್ಲಿ ಇದೇ ಸನ್​ರೈಸರ್ಸ್​ ಹೈದರಾಬಾದ್ ತಂಡವು ಅಮೋಘ ಪ್ರದರ್ಶನ ನೀಡಿ, ಆರ್​ಸಿಬಿ ತಂಡವನ್ನು ಪಂದ್ಯಾವಳಿಯಿಂದ ಹೊರಕ್ಕೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಪಂದ್ಯದದಲ್ಲಿ ಕ್ರಿಕೆಟ್​ ಪ್ರೇಮಿಗಳು ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ತುಲನಾತ್ಮಕವಾಗಿ ನೋಡಿದಾಗ…

ವಿರಾಟ್​ ಕೊಹ್ಲಿ ವರ್ಸಸ್ ಭುವನೇಶ್ವರ್​ ಕುಮಾರ್: ನಮ್ಮ ಅಧಿನಾಯಕ, ಆರ್​ಸಿಬಿ ಕಪ್ತಾನ ವಿರಾಟ್​ ಕೊಹ್ಲಿ ಇದುವರೆಗೂ ಭುವನೇಶ್ವರ್​ ಕುಮಾರ್ ತಮ್ಮತ್ತ ಎಸೆದಿರುವ 54 ಬಾಲ್​ಗಳಲ್ಲಿ 64 ರನ್​ಗಳನ್ನು ಗಳಿಸಿದ್ದಾರೆ. ಇದೇ ವೇಳೆ, ಭುವನೇಶ್ವರ್​ ಕುಮಾರ್ ಅವರು ಎರಡು ಬಾರಿ ವಿರಾಟ್​ ಕೊಹ್ಲಿ ವಿಕೆಟ್​ ಕೆಡವಿದ್ದಾರೆ. ಪವರ್​ಪ್ಲೇ ನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ಬತ್ತಳಿಕೆಯಲ್ಲಿ ಏನೆಲ್ಲ ಆಸ್ತ್ರಗಳನ್ನು ಪ್ರಯೋಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಭುವನೇಶ್ವರ್​ ಕುಮಾರ್ ನಿಧಾನಗತಿಯ ಬಾಲ್​ಗಳನ್ನು ಎಸೆಯುವುದರಲ್ಲಿ ನಿಷ್ಣಾತರು. ಅದು ವಿರಾಟ್​ ಕೊಹ್ಲಿಗೆ ನುಂಗಲಾರದ ತುತ್ತಾಗಲಿದೆ. ಮೊನ್ನೆಯ ಮೊದಲ ಪಂದ್ಯದಲ್ಲಿ ಅದಾಗಲೇ ಜಸ್ಪ್ರೀತ್​ ಬುಮ್ರಾ ಎಸೆದ ಇಂತಹುದೇ ಸ್ಲೋ ಬಾಲ್​ಗೆ ವಿರಾಟ್​ ಕೊಹ್ಲಿ ಎಲ್​ಬಿಡಬ್ಲ್ಯು ಆಗಿದ್ದರು. ಇದೀಗ ಆರ್​ಸಿಬಿ ತಂಡ ಮೊದಲ ಬ್ಯಾಟ್​ ಮಾಡಿದ್ದೇ ಆದರೆ ವಿರಾಟ್​ ಕೊಹ್ಲಿ ಇಂತಹ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪವರ್​ಪ್ಲೇನಲ್ಲಿ ಹೆಚ್ಚು ಹೆಚ್ಚು ರನ್​ಗಳಿಸಲು ವಿರಾಟ್​ ಸಜ್ಜಾಗಿರಬೇಕು.

IPL Stats: ವಿರಾಟ್​ ಕೊಹ್ಲಿ ವರ್ಸಸ್ ಭುವನೇಶ್ವರ್​ ಕುಮಾರ್
ವಿರಾಟ್​ ಕೊಹ್ಲಿ: ಇನ್ನಿಂಗ್ಸ್​- 185, ರನ್​ – 5911, ಸರಾಸರಿ – 130.63
ಭುವನೇಶ್ವರ್​ ಕುಮಾರ್: ಮ್ಯಾಚ್​ಗಳು – 122, ವಿಕೆಟ್​ಗಳು – 137, ಸರಾಸರಿ – 24.07, ಎಕಾನಮಿ – 7.27

ರಶೀದ್​ ಖಾನ್​ ವರ್ಸಸ್​ ಎಬಿ ಡಿ ವಿಲಿಯರ್ಸ್: ಇದು ನಿಜಕ್ಕೂ ಇಂದಿನ ಪಂದ್ಯದ ಕುತೂಹಲಕಾರಿ ಕಾಳಗವೆನಿಸಲಿದೆ. ಕೆಕೆಆರ್​ ವಿರುದ್ಧ ರಶೀದ್​ ಖಾನ್​ ಲಯಕ್ಕೆ ಮರಳಿದ್ದರೆ ಕ್ರಿಕೆಟ್​ ಮಾಂತ್ರಿಕ ಎಬಿ ಡಿ ವಿಲಿಯರ್ಸ್ ಮುಂಬೈ ಇಂಡಿಯನ್ಸ್​ ವಿರುದ್ಧ ಅದಾಗಲೇ ತಮ್ಮ ವಿರಾಟ ರೂಪ ತೋರಿಸಿ, ಈ ಸೀಸನ್​ನಲ್ಲಿಯೂ ನಾನು ಎಂದಿನಂತೆ ಬ್ಯಾಟ್​ ಬೀಸಲು ಸಿದ್ಧನಿದ್ದೇನೆ ಎಂದು ಘೋಷಿಸಿದ್ದಾರೆ. ಒಬ್ಬರೂ ಪರಸ್ಪರ ಕಾದಾಡಲು ಸಜ್ಜಾಗಿದ್ದಾರೆ.

ಚೆನ್ನೈ ಅಂಕಣ ಸ್ಪಿನ್ನರ್​ಗಳಿಗೆ ಹೇಳಿಮಾಡಿಸಿದಂತಿದೆ. ಹಾಗಾಗಿ, ಇಂದು ಆರ್​ಸಿಬಿ ವಿರುದ್ಧ ಸನ್​ ರೈಸರ್ಸ್​ ತಂಡಕ್ಕೆ ರಶೀದ್​ ಖಾನ್​ ಪ್ರಮುಖ ಅಸ್ತ್ರವಾಗಲಿದ್ದಾರೆ. ಅಣ್ಣಾ ಡಿ ವಿಲಿಯ್ಸ್​ಗೂ ಗೊತ್ತು ತಮ್ಮ ತಂಡಕ್ಕೆ ತಾವೆಷ್ಟು ಅನಿವಾರ್ಯ ಎಂಬುದು. ಹಾಗಾಗಿ, ರಶೀದ್​ ಖಾನ್​ ವಿರುದ್ಧ ಸೆಟೆದು ನಿಂತು ತಂಡಕ್ಕೆ ಆಸರೆಯಾಗುವುದಕ್ಕೆ ಡಿ ವಿಲಿಯ್ಸ್ ಮನಸ್ಸು ಮಾಡಿದರೆ ಪ್ರೇಕ್ಷಕರಿಗೆ ಆಟ ಬೊಂಬಾಟವಾಗಲಿದೆ.

IPL Stats: ಎಬಿ ಡಿ ವಿಲಿಯರ್ಸ್ ವರ್ಸಸ್ ರಶೀದ್​ ಖಾನ್
ರಶೀದ್​ ಖಾನ್​: ಮ್ಯಾಚ್​ಗಳು – 63, ವಿಕೆಟ್​ಗಳು – 77, ಸರಾಸರಿ – 20.27, ಎಕಾನಮಿ – 6.24
ಎಬಿ ಡಿ ವಿಲಿಯರ್ಸ್: ಇನ್ನಿಂಗ್ಸ್​- 157, ರನ್​ – 4897, ಸರಾಸರಿ – 40.47 ಸ್ಟ್ರೈಕ್​ ರೇಟ್​ – 152.13

ಮೊಹಮದ್​ ಸಿರಾಜ್​ ವರ್ಸಸ್​ ಡೇವಿಡ್​ ವಾರ್ನರ್: ಮೊಹಮದ್​ ಸಿರಾಜ್​ ಬೌಲಿಂಗ್​ನಲ್ಲಿ ಡೇವಿಡ್​ ವಾರ್ನರ್ 15 ಬಾಲ್​ಗಳಲ್ಲಿ 25 ರನ್​ ಬಾರಿಸಿದ್ದಾರೆ. ಒಮ್ಮೆ ಮಾತ್ರ ಸಿರಾಜ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಸರಣಿಯಲ್ಲಿ ಡೇವಿಡ್​ ವಾರ್ನರ್ ಅವರನ್ನು ಆರಂಭದಲ್ಲಿಯೇ ಮೊಹಮದ್​ ಸಿರಾಜ್​ ಮನೆಗೆ ಕಳಿಸುತ್ತಿದ್ದರು.

ಡೇವಿಡ್​ ವಾರ್ನರ್ ವಿರುದ್ಧ ಆಫ್​ ಸ್ಟಂಪ್​ ಮೇಲೆ ಬಾಲ್​ ಎಸೆದು ಔಟ್​ಸೈಡ್​ ಎಡ್ಜ್​ ಆಗುವಂತೆ ನೋಡಿಕೊಳ್ಳುವಲ್ಲಿ ಸಿರಾಜ್​ ಯಶಸ್ವಿಯಾಗಿದ್ದರು. ಮೊಹಮದ್​ ಸಿರಾಜ್​ ಇಂದು ಸಹ ಅದೇ ತಂತ್ರಗಾರಿಕೆ ಪ್ರಯೋಗಿಸಿದರೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಬ್ಯಾಟ್ಸ್​ಮನ್​ಗಳು ಎಡವುವುದು ಸಹಜವಾದೀತು. ಉತ್ತಮ ಸ್ಕೋರ್​ ಗಳಿಸುವುದಾಗಲಿ ಅಥವಾ ಉತ್ತಮ ಮೊತ್ತದ ಸವಾಲು ಒಡ್ಡುವುದಕ್ಕೂ ಪರದಾಡಬೇಕಾದೀತು.

IPL Stats: ಮೊಹಮದ್​ ಸಿರಾಜ್​ ವರ್ಸಸ್​ ಡೇವಿಡ್​ ವಾರ್ನರ್:
ಮೊಹಮದ್​ ಸಿರಾಜ್​: ಮ್ಯಾಚ್​ಗಳು – 36, ವಿಕೆಟ್​ಗಳು – 39, ಸರಾಸರಿ – 28.36, ಎಕಾನಮಿ – 8.97
ಡೇವಿಡ್​ ವಾರ್ನರ್: ಇನ್ನಿಂಗ್ಸ್​- 143, ರನ್​ – 5257, ಸರಾಸರಿ – 42.4, ಸ್ಟ್ರೈಕ್​ ರೇಟ್​ – 141.47

ಏಕದಿನ ಪಂದ್ಯಗಳಲ್ಲಿ ಓಪನರ್​ ಆಗಿ ಜಾನ್ಸನ್​ ಬೇಯರ್​ಸ್ಟೋ ಗುಣಮಟ್ಟದ ಪೇಸರ್​​ಗಳ ಎದುರು ಪರದಾಡುತ್ತಾರೆ. ಆದರೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರ ಆಡುವಾಗ ಕೆಳಹಂತದಲ್ಲಿ ಬ್ಯಾಟಿಂಗ್​ಗೆ ಬರುವ ಜ್ಯಾಮಿಸನ್, ನ್ಯೂಜಿಲ್ಯಾಂಡ್​ನ ಎತ್ತರದ ಬೌಲರ್​ ಜಾನ್ಸನ್​ ಬೇಯರ್​ಸ್ಟೋ ವಿರುದ್ಧ ಆಡಬೇಕಿದೆ.

ಜಾನ್ಸನ್​ ಬೇಯರ್​ಸ್ಟೋ ಅದಾಗಲೇ ತಮ್ಮ ನ್ಯೂಜಿಲ್ಯಾಂಡ್​ ತಂಡದ ಪರ ಅತ್ಯುತ್ತಮವಾಗಿ ಬೌಲ್​ ಮಾಡುತ್ತಿದ್ದಾರೆ. ಇದೀಗ ಐಪಿಎಲ್​ನಲ್ಲಿಯೂ ಅದೇ ವರಸೆ ತೋರುವ ಹುಮ್ಮಸ್ಸಿನಲ್ಲಿದ್ದಾರೆ. ಆರ್​ಸಿಬಿ ತಂಡವೂ ಭಾರೀ ಮೊತ್ತವನ್ನು ಚೆಲ್ಲಿಯೇ ಜಾನ್ಸನ್​ ಬೇಯರ್​ಸ್ಟೋರನ್ನು ಖರೀದಿ ಮಾಡಿದೆ.

IPL Stats: ಜಾನ್ಸನ್​ ಬೇಯರ್​ಸ್ಟೋ ವರ್ಸಸ್​ ಕೇಯ್ಲ್​ ಜ್ಯಾಮಿಸನ್:
ಕೇಯ್ಲ್​ ಜ್ಯಾಮಿಸನ್: ಮ್ಯಾಚ್ – 1, ವಿಕೆಟ್ – 1, ಸರಾಸರಿ – 27, ಎಕಾನಮಿ – 6.75

ಜಾನ್ಸನ್​ ಬೇಯರ್​ಸ್ಟೋ: ಇನ್ನಿಂಗ್ಸ್​- 22, ರನ್​ – 845, ಸರಾಸರಿ – 42.25, ಸ್ಟ್ರೈಕ್​ ರೇಟ್​ – 142.02

ಹರ್ಷಲ್​ ಪಟೇಲ್​ ವರ್ಸಸ್​ ಮನೀಶ್​ ಪಾಂಡೆ: ಬೌಲರ್​ ಹರ್ಷಲ್​ ಪಟೇಲ್​ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್​ ಕಬಳಿಸಿದ್ದಾರೆ. ಇದರಿಂದ ಆತನಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿದೆ. ಇನ್ನು, ಮನೀಶ್​ ಪಾಂಡೆ ಸಹ ಉತ್ತಮ ಇನ್ನಿಂಗ್​ ಆಡಿದ್ದಾರಾದರೂ ಅವರ ತಂಡ ದಡ ಸೇರುವಲ್ಲಿ ಎಡವಿತು ಅಷ್ಟೇ.

ಇದನ್ನೂ ಓದಿ: IPL 2021: ಟೂರ್ನಿಯಿಂದ ಬೆನ್ ಸ್ಟೋಕ್ಸ್ ಹೊರಕ್ಕೆ; ಆರ್​ಆರ್​ನಲ್ಲಿ ಸ್ಟೋಕ್ಸ್ ಸ್ಥಾನ ತುಂಬುವ ಆಟಗಾರರು ಇವರೇನಾ?

ಇದನ್ನೂ ಓದಿ: KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು