IPL 2021​: ಮತ್ತಿಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್​,​ ವೃದ್ಧಿಮಾನ್​ ಸಹಾ, ಅಮಿತ್​​ ಮಿಶ್ರಾಗೆ ಸೋಂಕು

IPL 2021 | Wriddhiman Saha, Amit Mishra: ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಹಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಮಿತ್​ ಮಿಶ್ರಾ ಅವರಿಗೆ ಕೊವಿಡ್​ 19 ದೃಢಪಟ್ಟಿರುವುದಾಗಿ ತಿಳಿದುಬಂದಿದೆ.

  • TV9 Web Team
  • Published On - 12:53 PM, 4 May 2021
IPL 2021​: ಮತ್ತಿಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್​,​ ವೃದ್ಧಿಮಾನ್​ ಸಹಾ, ಅಮಿತ್​​ ಮಿಶ್ರಾಗೆ ಸೋಂಕು
ವೃದ್ಧಿಮಾನ್​ ಸಹಾ

ಮುಂಬೈ: ಐಪಿಎಲ್​ 14ನೇ ಆವೃತ್ತಿ ಸುಗಮವಾಗಿ ಸಾಗುತ್ತಿದೆ ಎಂದು ಭಾವಿಸಿಕೊಂಡಿದ್ದಾಗಲೇ ಏಕಾಏಕಿ ಕೊರೊನಾ ಕಾರ್ಮೋಡ ಕವಿದಿದೆ. ಈ ಬಾರಿ ಸರಣಿಯಲ್ಲಿ ಪಾಲ್ಗೊಂಡಿದ್ದ ಕೆಲ ಆಟಗಾರರಲ್ಲಿ ಒಬ್ಬರಾದ ಮೇಲೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳಲಾರಂಭಿಸಿದ್ದು, ಇದೀಗ ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಹಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಮಿತ್​ ಮಿಶ್ರಾ ಅವರಿಗೆ ಕೊವಿಡ್​ 19 ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ವೃದ್ಧಿಮಾನ್​ ಹಾಗೂ ಅಮಿತ್​ ಮಿಶ್ರಾಗೆ ಸೋಂಕು ಇರುವುದು ಖಾತರಿಯಾಗುತ್ತಿದ್ದಂತೆಯೇ ಎರಡೂ ತಂಡಗಳ ಎಲ್ಲಾ ಆಟಗಾರರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ.