MI vs CSK IPL 2021 Match Prediction: ಎರಡು ಚಾಂಪಿಯನ್​ ತಂಡಗಳ ನಡುವೆ ಹೈವೋಲ್ಟೆಜ್ ಪಂದ್ಯ, ಗೆಲುವು ಯಾರಿಗೆ?

IPL 2021: ಒಟ್ಟಾರೆ ಉಭಯ ತಂಡಗಳು 32 ಪಂದ್ಯಗಳನ್ನು ಆಡಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 19 ಪಂದ್ಯಗಳನ್ನು ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳನ್ನು ಗೆದ್ದಿದೆ.

  • TV9 Web Team
  • Published On - 8:42 AM, 1 May 2021
MI vs CSK IPL 2021 Match Prediction: ಎರಡು ಚಾಂಪಿಯನ್​ ತಂಡಗಳ ನಡುವೆ ಹೈವೋಲ್ಟೆಜ್ ಪಂದ್ಯ, ಗೆಲುವು ಯಾರಿಗೆ?
ರೋಹಿತ್ ಶರ್ಮಾ, ಎಂ ಎಸ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ​) ಕನಸಿನ ಓಟದಲ್ಲಿದೆ. ತಂಡದ ನೆಟ್​ ರನ್​ರೇಟ್​ 1.475 ರಷ್ಟಿದ್ದು, ಧೋನಿ ನೇತೃತ್ವದ ತಂಡವು ಆರು ಪಂದ್ಯಗಳಿಂದ 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ ಮೇಲೆ ಭದ್ರವಾಗಿ ಕುಳಿತಿದೆ. ಚೆನ್ನೈನ ಮುಂದಿನ ಪಂದ್ಯ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಇಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಎಂ.ಎಸ್. ಧೋನಿ ಮತ್ತು ತಂಡ ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದಾರೆ.

ಮತ್ತೊಂದೆಡೆ, ಎಂಐ ತಮ್ಮ ಮೊದಲ ಆರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದೆ ಮತ್ತು ಟೇಬಲ್​ನ ಮಧ್ಯದಲ್ಲಿದೆ. ಆದರೆ ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡವನ್ನು ಏಳು ವಿಕೆಟ್​ಗಳಿಂದ ಸೋಲಿಸಿದ ನಂತರ, ಅವರು ತಮ್ಮ ದಾರಿಯನ್ನು ಕಂಡುಕೊಂಡಿದ್ದಾರೆ. ಮತ್ತೊಂದು ಗೆಲುವು ಮುಂಬೈ ತಂಡಕ್ಕೆ ಸಿಕ್ಕರೆ ಅದು ನಾಲ್ಕನೇ ಸ್ಥಾನದಲ್ಲಿ ಅವರ ಹಿಡಿತವನ್ನು ಬಿಗಿಗೊಳಿಸಲು ಸಹಾಯ ಮಾಡಲಿದೆ.

ಪಿಚ್ ವರದಿ
ನವದೆಹಲಿಯ ಪಿಚ್ ಬ್ಯಾಟಿಂಗ್‌ಗೆ ಅತ್ಯುತ್ತಮವಾದುದು. ಬೌಲರ್‌ಗಳಿಗೆ ಹೆಚ್ಚು ನೆರವು ದೊರಕುವುದಿಲ್ಲ. 170 ಕ್ಕೂ ಹೆಚ್ಚು ಸ್ಕೋರ್‌ ತಂಡವನ್ನು ರಕ್ಷಿಸಲು ಸುರಕ್ಷಿತವಾಗಿಲ್ಲ. ಎರಡನೇ ಬ್ಯಾಟಿಂಗ್ ಮಾಡುವವರಿಗೆ ಪ್ರಾಶಸ್ತ್ಯ. ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಳೆಯಾಗುವ ಸಾಧ್ಯತೆಗಳಿಲ್ಲ.

ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್: 171

ಬೆನ್ನಟ್ಟುವ ತಂಡಗಳ ದಾಖಲೆ: ಗೆಲುವು – 2, ಸೋಲು – 0

ಸಂಭವನೀಯ ಇಲೆವನ್
ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ

ಬೆಂಚ್: ಅನ್ಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಅನುಕುಲ್ ರಾಯ್, ಜೇಮ್ಸ್ ನೀಶಮ್, ಅರ್ಜುನ್ ತೆಂಡೂಲ್ಕರ್, ಪಿಯೂಷ್ ಚಾವ್ಲಾ, ಆದಿತ್ಯ ತಾರೆ, ಯುಧ್ವೀರ್ ಸಿಂಗ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಕ್ರಿಸ್ ಲಿನ್, ಮಾರ್ಕೊ ಜಾನ್ಸೆನ್, ಆಡಮ್ ಮಿಲ್ನೆ, ಇಶಾನ್ ಕಿಶನ್

ಚೆನ್ನೈ ಸೂಪರ್ ಕಿಂಗ್ಸ್
ಋತುರಾಜ್ ಗಾಯಕ್​ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎನ್‌ಜಿಡಿ

ಬೆಂಚ್: ರಾಬಿನ್ ಉತ್ತಪ್ಪ, ಕೆ.ಎಂ.ಆಸಿಫ್, ಭಗತ್ ವರ್ಮಾ, ಸಿ ಹರಿ ನಿಶಾಂತ್, ನಾರಾಯಣ್ ಜಗದೀಸನ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಸಾಯಿ ಕಿಶೋರ್, ಮಿಚೆಲ್ ಸ್ಯಾಂಟ್ನರ್, ಕರ್ನ್ ಶರ್ಮಾ, ಡ್ವೇನ್ ಬ್ರಾವೋ, ಜೇಸನ್ ಬೆಹ್ರೆಂಡೋರ್ಫ್, ಇಮ್ರಾನ್ ತಾಹಿರ್

ಮುಖಾಮುಖಿ
ಒಟ್ಟಾರೆ ಉಭಯ ತಂಡಗಳು 32 ಪಂದ್ಯಗಳನ್ನು ಆಡಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 19 ಪಂದ್ಯಗಳನ್ನು ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳನ್ನು ಗೆದ್ದಿದೆ.

ಪಂದ್ಯದ ಅತ್ಯುತ್ತಮ ಬ್ಯಾಟ್ಸ್‌ಮನ್
ಫಾಫ್ ಡು ಪ್ಲೆಸಿಸ್- ಚೆನ್ನೈ ಸೂಪರ್ ಕಿಂಗ್ಸ್

ನಡೆಯುತ್ತಿರುವ ಟಿ 20 ಪಂದ್ಯಾವಳಿಯಲ್ಲಿ ಫಾಫ್ ಡು ಪ್ಲೆಸಿಸ್ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಆರು ಪಂದ್ಯಗಳಲ್ಲಿ, ಬಲಗೈ ಆಟಗಾರ ಸರಾಸರಿ 270 ರನ್​ಗಳನ್ನು ಹೊಡೆದಿದ್ದಾರೆ ಮತ್ತು ಸ್ಟ್ರೈಕ್ ರೇಟ್ ಕ್ರಮವಾಗಿ 67.50 ಮತ್ತು 140.62. ಆಗಿದೆ. ಮೂರು ಅರ್ಧಶತಕಗಳನ್ನು ಹೊಂದಿದ್ದಾರೆ. ಮುಂಬೈ ತಂಡದ ವಿರುದ್ಧ, ಅವರು ಕೇವಲ 22.85 ರ ಸರಾಸರಿಯಲ್ಲಿದ್ದರೂ, ಡು ಪ್ಲೆಸಿಸ್ ಅಬ್ಬರಿಸುವ ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ- ಮುಂಬೈ ಇಂಡಿಯನ್ಸ್
ಜಸ್ಪ್ರೀತ್ ಬುಮ್ರಾ ಅವರು ಈವರೆಗೆ ಆಡಿದ ಆರು ಪಂದ್ಯಗಳಲ್ಲಿ ಕೇವಲ ಐದು ವಿಕೆಟ್​ಗಳನ್ನು ಮಾತ್ರ ಪಡೆದಿದ್ದಾರೆ. ಅವರು ಸಾಕಷ್ಟು ವಿಕೆಟ್‌ಗಳನ್ನು ಗಳಿಸದಿದ್ದರೂ, ನಿಖರವಾದ ಬೌಲಿಂಗ್‌ನೊಂದಿಗೆ ಬ್ಯಾಟ್ಸ್​ಮನ್​ಗಳು ಅಬ್ಬರಿಸದಂತೆ ನೋಡಿಕೊಂಡಿದ್ದಾರೆ. 23 ಓವರ್‌ಗಳಲ್ಲಿ ವೇಗಿ 5.91 ರ ಆರ್ಥಿಕ ದರವನ್ನು ಕಾಯ್ದುಕೊಂಡಿದ್ದಾರೆ. ಸೂಪರ್ ಕಿಂಗ್ಸ್ ವಿರುದ್ಧ, ವೇಗದ ಬೌಲರ್ 38.4 ಓವರ್‌ಗಳಿಂದ ಎಂಟು ವಿಕೆಟ್‌ಗಳನ್ನು 7.37 ರ ಯೋಗ್ಯ ಆರ್ಥಿಕ ದರದಲ್ಲಿ ಎತ್ತಿದ್ದಾರೆ.