IPL 2021 Auction KKR Players List | ಐಪಿಎಲ್ 2021: ಶಾರೂಖ್​ ತಂಡದಲ್ಲಿ ಉಳಿದುಕೊಂಡವರು, ಹೊರನಡೆದವರು ಇವರು

IPL 2021 Auction Kolkata Knight Riders Players List: ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಐಪಿಎಲ್ ಟ್ರೋಫಿಯನ್ನು ಈ ತಂಡ ಎತ್ತಿ ಹಿಡಿದಿದೆ. 2020 ರ ಹರಾಜಿನಲ್ಲಿ, ಕೆಕೆಆರ್ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು 15.5 ಕೋಟಿ ರೂ. ಕೊಟ್ಟು ಖರೀದಿಸಿತ್ತು. ಹೀಗಾಗಿ ಕಮ್ಮಿನ್ಸ್ ಕಳೆದ ಆವೃತ್ತಿಯ ಅತ್ಯಂತ ದುಬಾರಿ ಆಟಗಾರರಾದರು.

  • TV9 Web Team
  • Published On - 22:14 PM, 17 Feb 2021
IPL 2021 Auction KKR Players List | ಐಪಿಎಲ್ 2021: ಶಾರೂಖ್​ ತಂಡದಲ್ಲಿ ಉಳಿದುಕೊಂಡವರು, ಹೊರನಡೆದವರು ಇವರು
ಕೋಲ್ಕತಾ ನೈಟ್ ರೈಡರ್ಸ್

ಚೆನ್ನೈ: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಶಾರುಖ್ ಖಾನ್ ಅವರ ಸಹ-ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಆಗಿದೆ. ಜುಹಿ ಚಾವ್ಲಾ ಮತ್ತು ಇತರರು ಸಹ ಕೆಕೆಆರ್ ಮಾಲೀಕರಾಗಿದ್ದಾರೆ. ಸೆಲೆಬ್ರಿಟಿ ಮಾಲೀಕರೊಂದಿಗಿನ ಒಡನಾಟದಿಂದಾಗಿ ತಂಡವು ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಐಪಿಎಲ್ ಟ್ರೋಫಿಯನ್ನು ಈ ತಂಡ ಎತ್ತಿ ಹಿಡಿದಿದೆ.

ಐಪಿಎಲ್ 2018ರಲ್ಲಿ ಕೆಕೆಆರ್ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಸೋಲುವ ಮೂಲಕ ತಂಡದ ಫೈನಲ್​ ಕನಸು ನುಚ್ಚುನೂರಾಯಿತು. 2020 ರ ಹರಾಜಿನಲ್ಲಿ, ಕೆಕೆಆರ್ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು 15.5 ಕೋಟಿ ರೂ. ಕೊಟ್ಟು ಖರೀದಿಸಿತ್ತು. ಹೀಗಾಗಿ ಕಮ್ಮಿನ್ಸ್ ಕಳೆದ ಆವೃತ್ತಿಯ ಅತ್ಯಂತ ದುಬಾರಿ ಆಟಗಾರರಾದರು. ಕೆಕೆಆರ್ ತಂಡದಲ್ಲಿ ಇತರ ಗಮನಾರ್ಹ ಆಟಗಾರರೆಂದರೆ ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯೊನ್ ಮೋರ್ಗಾನ್ ಮತ್ತು ಹೊಡಿಬಡಿ ಆಟಗಾರ ಆಂಡ್ರೆ ರಸ್ಸೆಲ್​.

ಕೋಲ್ಕತಾ ನೈಟ್ ರೈಡರ್ಸ್..
ಉಳಿಸಿಕೊಂಡಿರುವ ಆಟಗಾರರು
: ಇಯೊನ್ ಮೋರ್ಗಾನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಬ್​ಮನ್​ ಗಿಲ್, ರಿಂಕು ಸಿಂಗ್, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ಪ್ಯಾಟ್ ಕಮ್ಮಿನ್ಸ್, ಪ್ರಸಾದ್ ಕೃಷ್ಣ, ಸಂದೀಪ್ ವಾರಿಯರ್, ಶಿವಂ ಚಾರಿಲ್, ಟಿಮ್ ಸೀಫರ್ಟ್.

ತಂಡದಿಂದ ಕೈಬಿಟ್ಟ ಆಟಗಾರರು: ಟಾಮ್ ಬಾಂಟನ್, ಕ್ರಿಸ್ ಗ್ರೀನ್, ನಿಖಿಲ್ ನಾಯಕ್, ಸಿದ್ಧಾರ್ಥ್ ಎಂ ಮತ್ತು ಸಿದ್ಧೇಶ್ ಲಾಡ್.

ಇದನ್ನೂ ಓದಿ: ಐಪಿಎಲ್ 2021 ಧೋನಿ ಬಳಗದಲ್ಲಿ ಉಳಿದುಕೊಂಡವರು, ಹೊರನಡೆದವರ ಡೀಟೈಲ್ಸ್