ನಡೆಯದ ರಶೀದ್ ಚಮತ್ಕಾರ: 25 ರ ಹರೆಯದ ಬ್ಯಾಟರ್ ದಾಳಿಗೆ ತಲೆಬಾಗಿದ ಅಫ್ಘಾನಿಸ್ತಾನ; ವಿಡಿಯೋ ನೋಡಿ

ಟಕ್ಕರ್ ತಮ್ಮ T20 ವೃತ್ತಿಜೀವನದಲ್ಲಿ ಒಟ್ಟು 34 ಇನ್ನಿಂಗ್ಸ್‌ಗಳನ್ನು ಆಡಿದ್ದು, ಅದರಲ್ಲಿ 15 ಸಿಕ್ಸರ್ ಮತ್ತು 54 ಬೌಂಡರಿಗಳನ್ನು ಬಾರಿಸಿದ್ದಾರೆ.

ನಡೆಯದ ರಶೀದ್ ಚಮತ್ಕಾರ: 25 ರ ಹರೆಯದ ಬ್ಯಾಟರ್ ದಾಳಿಗೆ ತಲೆಬಾಗಿದ ಅಫ್ಘಾನಿಸ್ತಾನ; ವಿಡಿಯೋ ನೋಡಿ
pruthvi Shankar

|

Aug 10, 2022 | 3:19 PM

ಏಷ್ಯಾಕಪ್‌ಗೆ (Asia Cup) ಕ್ಷಣಗಣನೆ ಆರಂಭವಾಗಿದೆ. ಇದರಲ್ಲಿ ಅಫ್ಘಾನಿಸ್ತಾನವೂ (Afghanistan) ಪಾಲ್ಗೊಳ್ಳಲಿದ್ದು, ಏಷ್ಯಾಕಪ್ ಆರಂಭಕ್ಕೂ ಮುನ್ನ ಅಫ್ಘನ್ ತಂಡ ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಹೀನಾಯ ಸೋಲು ಅನುಭವಿಸಿದೆ. ಅಫ್ಘನ್ ತಂಡದ ಪರವಾಗಿ ರಶೀದ್ ಖಾನ್ (Rashid Khan) ಅಥವಾ ಉಳಿದ ಬೌಲರ್‌ಗಳು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. 15 ಸಿಕ್ಸರ್‌ಗಳನ್ನು ಬಾರಿಸಿದ ಒಬ್ಬ ಆಟಗಾರ ಇಡೀ ಅಫ್ಘನ್ ತಂಡದ ಯೋಜನೆಯನ್ನೇ ಹಾಳುಗೆಡುವಿದನು. ಅಫ್ಘಾನಿಸ್ತಾನ ತಂಡ ಪ್ರಸ್ತುತ ಐರ್ಲೆಂಡ್ ಪ್ರವಾಸದಲ್ಲಿದ್ದು, ಈ ಪ್ರವಾಸದಲ್ಲಿ 5 T20 ಪಂದ್ಯಗಳನ್ನು ಆಡಲಾಗುವುದು. ಇದರ ಮೊದಲ ಪಂದ್ಯವು ಆಗಸ್ಟ್ 9 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಿತು. ಅದರಲ್ಲಿ ಅಫ್ಘಾನಿಸ್ತಾನ, ಐರ್ಲೆಂಡ್ ಎದುರು ತೋರಿದ ಪ್ರದರ್ಶನ ಆ ತಂಡದ ಏಷ್ಯಾಕಪ್‌ ಸಿದ್ಧತೆಗಳನ್ನು ತೆರೆದಿಟ್ಟಿದೆ.

ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಉಸ್ಮಾನ್ ಘನಿ ಅವರ 59 ರನ್‌ಗಳ ನೆರವಿನಿಂದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167 ರನ್ ಗಳಿಸಿತು. ಇದಕ್ಕುತ್ತರವಾಗಿ 168 ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ 19.5 ಓವರ್‌ಗಳಲ್ಲಿ 1 ಎಸೆತ ಬಾಕಿಯಿರುವಂತೆ 3 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು.

25ರ ಹರೆಯದ ಬ್ಯಾಟ್ಸ್‌ಮನ್‌ ಅಬ್ಬರ

ಐರ್ಲೆಂಡ್ ತಂಡದ 25 ವರ್ಷದ ಬ್ಯಾಟ್ಸ್‌ಮನ್ ಲೋರ್ಕನ್ ಟಕರ್ ಐರ್ಲೆಂಡ್ ಗೆಲುವಿಗೆ ಸಹಾಯ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಅವರು ಅಫ್ಘಾನಿಸ್ತಾನ ವಿರುದ್ಧ 32 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 50 ರನ್‌ಗಳ ಬಿರುಸಿನ ಇನ್ನಿಂಗ್ಸ್‌ ಆಡಿದರು.

ಇದು ಟಿ20 ಕ್ರಿಕೆಟ್‌ನ ಕೊನೆಯ 3 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಟಕ್ಕರ್ ಅವರ ಎರಡನೇ ಅರ್ಧಶತಕವಾಗಿದೆ. ಅವರು ತಮ್ಮ T20 ವೃತ್ತಿಜೀವನದಲ್ಲಿ ಒಟ್ಟು 34 ಇನ್ನಿಂಗ್ಸ್‌ಗಳನ್ನು ಆಡಿದ್ದು, ಅದರಲ್ಲಿ 15 ಸಿಕ್ಸರ್ ಮತ್ತು 54 ಬೌಂಡರಿಗಳನ್ನು ಬಾರಿಸಿದ್ದಾರೆ.

ನಾಯಕನ ಸಮಯೋಜಿತ ಆಟ

ಲೋರ್ಕನ್ ಟಕ್ಕರ್ ಹೊರತಾಗಿ ನಾಯಕ ಆಂಡಿ ಬಲ್ಬಿರಿನ್ ಕೂಡ ಐರ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 51 ರನ್ ಗಳಿಸಿದರು. ಇದರ ಫಲವಾಗಿ ಐರಿಶ್ ನಾಯಕನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಸೋಲಿಗೆ ಪ್ರಮುಖ ಕಾರಣ ತಂಡದ ಬ್ಯಾಟಿಂಗ್. ಅದೇ ಸಮಯದಲ್ಲಿ, ಅವರ ಬೌಲಿಂಗ್ನ ದೊಡ್ಡ ಶಕ್ತಿಯು ರನ್​ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ರಶೀದ್ ಖಾನ್ 4 ಓವರ್‌ಗಳಲ್ಲಿ 25 ರನ್ ನೀಡಿದರೂ ಯಾವುದೇ ವಿಕೆಟ್ ಪಡೆಯಲಿಲ್ಲ. ಇವರನ್ನು ಬಿಟ್ಟರೆ ಉಳಿದ ಬೌಲರ್‌ಗಳು ಪ್ರಭಾವ ಬೀರಲು ವಿಫಲರಾದರು.

ಏಷ್ಯಾಕಪ್‌ಗೆ ಮುನ್ನ ಅಫ್ಘಾನಿಸ್ತಾನಕ್ಕೆ ಆಘಾತ

ಇದನ್ನೂ ಓದಿ

ಅಫ್ಘಾನಿಸ್ತಾನ ವಿರುದ್ಧ ಐರ್ಲೆಂಡ್ ಮೊದಲ T20 ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನ ಬಳಿಕ 5 ಟಿ20 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಏಷ್ಯಾಕಪ್‌ಗೆ ಮುನ್ನ ಅಫ್ಘಾನಿಸ್ತಾನ ಈ ಸರಣಿಯನ್ನು ಗೆದ್ದರೆ, ಅದು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಆದರೆ ಐರ್ಲೆಂಡ್ ಆಡುತ್ತಿರುವ ರೀತಿಯಲ್ಲಿ ಈ ಕಾರ್ಯವು ಅವರಿಗೆ ಸುಲಭವಾಗುವುದಿಲ್ಲ ಎಂದು ತೋರುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada