ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯ ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ತಂಡ: ಶೇನ್ ವಾರ್ನ್

ಗೆಲವು ಸಾಮೂಹಿಕ ಪ್ರಯತ್ನದಿಂದ ದಕ್ಕಿರುವುದು ನಿಜವಾದರೂ, ರೋಹಿತ್​ ಶರ್ಮ ಮತ್ತು ಶಾರ್ದುಲ್ ಠಾಕೂರ್ ಐತಿಹಾಸಿಕ ಗೆಲುವಿನ ಕೇಂದ್ರಬಿಂದುವಾಗಿದ್ದರು.

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯ ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ತಂಡ: ಶೇನ್ ವಾರ್ನ್
ಶಾರ್ದುಲ್​ ಠಾಕೂರ್
TV9kannada Web Team

| Edited By: Arun Belly

Sep 08, 2021 | 2:08 AM

ದಿ ಓವಲ್ ಮೈದಾನದಲ್ಲಿ ಭಾರತ ಅವಿಸ್ಮರಣಿಯ 157 ರನ್ಗಳ ಗೆಲುವು ಸಾಧಿಸಿ 5-ಪಂದ್ಯಗಳ ಸರಣಿಯಲ್ಲಿ 2-1 ಲೀಡ್ ಸಾಧಿಸಿದೆ. ಸರಣಿಯ ಕೊನೆಯ ಟೆಸ್ಟ್ ಸೆಪ್ಟೆಂಬರ್ 10 ರಿಂದ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಭಾರತ ಪೂರ್ತಿ 50 ವರ್ಷಗಳ ನಂತರ ಗೆಲುವು ಸಾಧಿಸಿದೆ. ಹಾಗೇಯೇ ವಿದೇಶಗಳಲ್ಲಿ ಆಡಿದ ಟೆಸ್ಟ್ಗಳಲ್ಲಿ ಭಾರತವು ಮೊದಲ ಇನ್ನಿಂಗ್ಸ್ನಲ್ಲಿ 200 ಕ್ಕಿಂತ ಕಡಿಮೆ ರನ್ ಗಳಿಸಿ ಟೆಸ್ಟ್ ಗೆದ್ದಿರುವುದು ಇದು ಕೇವಲ ಎರಡನೇ ಸಲ. ಭಾರತದ ಗೆಲುವಿನಲ್ಲಿ ಇಬ್ಬರು ಮುಂಬೈ ಆಟಗಾರರ ಕಾಣಿಕೆ ಮಹತ್ತರವಾಗಿತ್ತು-ರೋಹಿತ್ ಶರ್ಮ ಮತ್ತು ಶಾರ್ದುಲ್ ಠಾಕೂರ್. ಹಾಗೆ ನೋಡಿದೆ, ಭಾರತದ ಗೆಲುವು ಒಂದು ಟೀಮ್ ಎಫರ್ಟ್ ಆಗಿತ್ತು. ಪಂದ್ಯದ ಕೊನೆಯ ದಿನ ಎಲ್ಲ ಬೌಲರ್ಗಳು ಆಧ್ಭುತವಾಗಿ ಬೌಲ್ ಮಾಡಿದರು. ಭಾರತದ ಅಮೋಘ ಗೆಲುವಿನ ನಂತರ ಟ್ವೀಟ್ ಮೂಲಕ ಅಭಿನಂದನೆಗಳ ಸುರಿಮಳೆಗೈದಿರುವ ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಶೇನ್ ವಾರ್ನ್ ಟೀಮ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ತಂಡ ಹೇಳಿದ್ದಾರೆ.

‘ಅಮೋಘ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಮತ್ತು ಅವರ ಇಡೀ ತಂಡಕ್ಕೆ ಆಭಿನಂದನೆಗಳು. ಕಳೆದ 12 ತಿಂಗಳಲ್ಲಿ ಒಂದು ಟೀಮ್ ಆಗಿ ನೀವು ಮಾಡಿರುವ ಸಾಧನೆ ಉತ್ಕೃಷ್ಟವಾದದ್ದು. ನಿಸ್ಸಂದೇಹವಾಗಿ ಇದು ವಿಶ್ವದ ಅತ್ಯುತ್ತಮ ಕ್ರಿಕೆಟ್ ತಂಡ ಮತ್ತು ಆ ಪಟ್ಟಕ್ಕೆ ನೀವು ಎಲ್ಲ ರೀತಿಯಿಂದಲೂ ಅರ್ಹರು. ಟೆಸ್ಟ್ ಕ್ರಿಕೆಟ್ ಚಿರಾಯುವಾಗಲಿ,’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.

ಗೆಲವು ಸಾಮೂಹಿಕ ಪ್ರಯತ್ನದಿಂದ ದಕ್ಕಿರುವುದು ನಿಜವಾದರೂ, ಶರ್ಮ ಮತ್ತು ಠಾಕೂರ್ ಐತಿಹಾಸಿಕ ಗೆಲುವಿನ ಕೇಂದ್ರಬಿಂದುವಾಗಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಅತ್ಯಾಕರ್ಷಕ ಶತಕ ಬಾರಿಸಿದರು. ವಿದೇಶದ ನೆಲದ ಮೇಲೆ ಇದು ಅವರು ಮೊದಲ ಶತಕವಾಗಿದೆ. ಅವರ ಶತಕದ ನೆರವಿನಿಂದಾಗಿ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 466 ರನ್ಗಳ ಮೊತ್ತ ಪೇರಿಸುವುದು ಸಾಧ್ಯವಾಗಿ ಇಂಗ್ಗೆಂಡ್ ಎದುರು 368 ರನ್ಗಳ ಕಠಿಣ ಸವಾಲು ಇಡಲು ನೆರವಾಯಿತು.

ಗೆಲುವಿನಲ್ಲಿ ಠಾಕೂರ್ ಕಾಣಿಕೆ ಅಪ್ರತಿಮವಾದದ್ದು. ಮೊದಲ ದಿನ ಭಾರತ 121 ಮೊತ್ತಕ್ಕೆ 7 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಠಾಕೂರ್ ಬಿರುಸಿನ ಅರ್ಧ ಶತಕ ಬಾರಿಸಿ ಟೀಮನ್ನು ಅಪಾಯದಿಂದ ಪಾರು ಮಾಡಿದರು. ಅವರ ವೇಗದ ಫಿಫ್ಟಿ ಭಾರತ ಗೌರವಾನ್ವಿತ ಮೊತ್ತ ಗಳಿಸುವುದು ನೆರವಾಯಿತು.

ಎರಡನೇ ಇನ್ನಿಂಗ್ಸ್ನಲ್ಲೂ ಠಾಕೂರ್ ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿ 60 ರನ್ ಬಾರಿಸಿದರು. ಬೌಲಿಂಗ್ನಲ್ಲೂ ಮಿಂಚಿದ ಠಾಕೂರ್ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ರೋರಿ ಬರ್ನ್ಸ್ ಅವರನ್ನು ಔಟ್ ಮಾಡುವ ಮೂಲಕ ಬಾರತಕ್ಕೆ ಮೊದಲ ವಿಕೆಟ್ ಪಡೆದರು. ಆನಂತರ ಮತ್ತೇ ದಾಳಿಗೆ ಬಂದು ಜೋ ರೂಟ್ ಅವರನ್ನು ಔಟ್ ಮಾಡಿ ಭಾರತಕ್ಕೆ ಅತ್ಯಮೂಲ್ಯ ವಿಕೆಟ್ ಕೊಡಿಸಿದರು. ಅವರ ಈ ವಿಕೆಟ್ ಭಾರತದ ಗೆಲುವನ್ನು ಖಚಿತಪಡಿಸಿತು.

ಇದನ್ನೂ ಓದಿ: Virushka: ಓವಲ್ ಟೆಸ್ಟ್​ನಲ್ಲಿ ಭಾರತದ ಭರ್ಜರಿ ಗೆಲುವಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ಅನುಷ್ಕಾ ಶರ್ಮ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada