ಕಿಸಾನ್ ಮೇಳದಲ್ಲಿ ಧೋನಿ ಹಸುಗಳದ್ದೇ ಕಾರುಬಾರು.. ಅತ್ಯುತ್ತಮ ಗೋಪಾಲಕ ಪ್ರಶಸ್ತಿ ಪಡೆದ ಕ್ಯಾಪ್ಟನ್​ ಕೂಲ್​, ಫೋಟೋ ನೋಡಿ!

ಬಿರ್ಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಪೂರ್ವ ಭಾರತದ ಪಶುಸಂಗೋಪನಾ ಕ್ಷೇತ್ರದಲ್ಲಿ ಮಹೋನ್ನತ ಕೆಲಸಕ್ಕಾಗಿ ಮತ್ತು ಕೊಡುಗೆಗಾಗಿ ಧೋನಿ ಅತ್ಯುತ್ತಮ ಗೋಪಾಲಕ್ ಪ್ರಶಸ್ತಿಯನ್ನು ಪಡೆದಿದ್ದಾರೆ.

  • TV9 Web Team
  • Published On - 18:22 PM, 7 Mar 2021
1/5
ಟೀಂ ಇಂಡಿಯಾದ ಕ್ರಿಕೆಟ್ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಕೇವಲ ಒಬ್ಬ ಕ್ರಿಕೆಟಿಗನಲ್ಲ. ಬದಲಿಗೆ ಧೋನಿ ಒಬ್ಬ ಅತ್ಯುತ್ತಮ ಕೃಷಿಕ ಸಹ ಆಗಿದ್ದಾರೆ. ಬಿರ್ಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಪೂರ್ವ ಭಾರತದ ಪಶುಸಂಗೋಪನಾ ಕ್ಷೇತ್ರದಲ್ಲಿ ಮಹೋನ್ನತ ಕೆಲಸಕ್ಕಾಗಿ ಮತ್ತು ಕೊಡುಗೆಗಾಗಿ ಧೋನಿ ಅತ್ಯುತ್ತಮ ಗೋಪಾಲಕ್ ಪ್ರಶಸ್ತಿಯನ್ನು ಪಡೆದಿದ್ದಾರೆ.
2/5
ಮಹೇಂದ್ರ ಸಿಂಗ್ ಧೋನಿ 43 ಎಕರೆ ಜಮೀನಿನಲ್ಲಿ ಡೈರಿ ಫಾರ್ಮ್ ನಡೆಸುತ್ತಿದ್ದು, ಈ ಪಾರ್ಮ್​ ಹೌಸ್​ನಲ್ಲಿ ತರಕಾರಿಗಳು, ಹಣ್ಣುಗಳನ್ನು ಸಹ ಬೆಳೆದು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ ಧೋನಿ. ಬಿರ್ಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಅಗ್ರೊಟೆಕ್ ಕಿಸಾನ್ ಮೇಳದಲ್ಲಿ ಧೋನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
3/5
ಈ ಕಿಸಾನ್ ಮೇಳದಲ್ಲಿ ಪ್ರಾಣಿಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿದ್ದು, ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿ ಅವರ ಡೈರಿ ಫಾರ್ಮ್​ನಲ್ಲಿರುವ ಎರಡು ಹಸುಗಳು ಸಹ ಪ್ರದರ್ಶನದಲ್ಲಿ ಹಾಜರಿದ್ದವು.
4/5
ಆಯ್ಕೆ ಪ್ರಕ್ರಿಯೆಯಲ್ಲಿ, ಹಸುವಿನ ಅಂಗರಚನಾಶಾಸ್ತ್ರ, ಹಾಲಿನ ಸಾಮರ್ಥ್ಯ ಇತ್ಯಾದಿಗಳನ್ನು ಪರೀಕ್ಷಿಸಲಾಯಿತು. ಈ ಪರೀಕ್ಷೆಯಲ್ಲಿ ಧೋನಿ ಒಡೆತನದ ಹಸುಗಳನ್ನು ಸಂಘಟಕರು ಅತ್ಯುತ್ತಮವೆಂದು ಪರಿಗಣಿಸಿದರು.
5/5
ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಫಾರ್ಮ್ ಹೌಸ್​ನಲ್ಲಿ 104 ಹಸುಗಳಿದ್ದು, ಪ್ರತ್ಯೇಕ ಡೈರಿ ಫಾರ್ಮ್ ಅನ್ನು ಸಹ ತೆರೆಯಲಾಗಿದೆ.