MI vs SRH, IPL 2021 Match 9 Result: ಮತ್ತೆ ಸೋತ ಹೈದರಾಬಾದ್; ಗೆದ್ದು ಟಾಪ್ ಸ್ಥಾನಕ್ಕೇರಿದ ಮುಂಬೈ!

MI vs SRH IPL 2021 Result: ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2021 ಟೂರ್ನಿಯ 9ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

 • TV9 Web Team
 • Published On - 23:14 PM, 17 Apr 2021
MI vs SRH, IPL 2021 Match 9 Result: ಮತ್ತೆ ಸೋತ ಹೈದರಾಬಾದ್; ಗೆದ್ದು ಟಾಪ್ ಸ್ಥಾನಕ್ಕೇರಿದ ಮುಂಬೈ!
ಬೌಲಿಂಗ್​ನಲ್ಲಿ ಮಿಂಚಿದ ಚಹರ್

ಚೆನ್ನೈ: ಮುಂಬೈ ಇಂಡಿಯನ್ಸ್ ನೀಡಿದ ಸುಲಭ ಟಾರ್ಗೆಟ್ ಬೆನ್ನತ್ತಿದ ಸನ್​ರೈಸರ್ಸ್ ಗುರಿ ತಲುಪಲಾಗದೆ ಆಲೌಟ್ ಆಗಿದೆ. ಈ ಮೂಲಕ ಐಪಿಎಲ್ 2021ರ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 13 ರನ್​ಗಳ ಗೆಲುವು ದಾಖಲಿಸಿದೆ. ಸನ್​ರೈಸರ್ಸ್ ಪರ ಉತ್ತಮ ಆರಂಭ ನೀಡಿದ ವಾರ್ನರ್ 36 (34) ಹಾಗೂ ಬೇರ್​ಸ್ಟೋ 43 (22) ಆಟ ವ್ಯರ್ಥವಾಗಿದೆ. ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ವಿಜಯ್ ಶಂಕರ್ 28 (25) ಹೊರತಾಗಿ ಉಳಿದೆಲ್ಲರೂ 10 ರನ್ ಬಾರಿಸಲು ಪರದಾಡಿದ್ದಾರೆ.

ಮುಂಬೈ ಪರ ಚಹರ್ ಮತ್ತೆ ಮಿಂಚಿದ್ದಾರೆ. 4 ಓವರ್​ಗೆ 19 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಬುಮ್ರಾ 4 ಓವರ್​ಗೆ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದ್ದಾರೆ. ಬೋಲ್ಟ್ 3 ವಿಕೆಟ್ ಕಿತ್ತಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 150 ರನ್ ದಾಖಲಿಸಿತ್ತು. ಈ ಮೂಲಕ, ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 151 ರನ್ ಟಾರ್ಗೆಟ್ ನೀಡಿತ್ತು. ಮುಂಬೈ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಆದರೆ, ರೋಹಿತ್ ಶರ್ಮಾ 32 (25), ಕ್ವಿಂಟನ್ ಡಿ ಕಾಕ್ 40 (39) ವಿಕೆಟ್ ಪತನದ ಬಳಿಕ ಮುಂಬೈ ಆಟ ಸೊರಗಿತ್ತು. ಕೊನೆಯಲ್ಲಿ ಪೊಲಾರ್ಡ್ 35 (22) ಅಬ್ಬರಿಸಿದ್ದರು. ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗೆ ಲಭ್ಯವಿದೆ.

LIVE Cricket Score & Updates

The liveblog has ended.
 • 17 Apr 2021 23:14 PM (IST)

  ಮುಂಬೈ ಇಂಡಿಯನ್ಸ್​ಗೆ 13 ರನ್ ಗೆಲುವು!

  ಸನ್​ರೈಸರ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 13 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯ ಎರಡನೇ ಗೆಲುವನ್ನು ಮುಂಬೈ ಕಂಡಿದೆ. ಸನ್​ರೈಸರ್ಸ್ ಹೈದರಾಬಾದ್ ಸತತವಾಗಿ 3 ಪಂದ್ಯ ಸೋತು ಹಿಂದೆ ಉಳಿದುಕೊಂಡಿದೆ.

 • 17 Apr 2021 23:12 PM (IST)

  ಖಲೀಲ್ ಬೌಲ್ಡ್; ಬೋಲ್ಟ್​ಗೆ ಮತ್ತೊಂದು ವಿಕೆಟ್!

  img

  ಬೋಲ್ಟ್ ಬಾಲ್​ಗೆ ಖಲೀಲ್ ಬೌಲ್ಡ್ ಆಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿದೆ.

 • 17 Apr 2021 23:11 PM (IST)

  ಭುವನೇಶ್ವರ್ ಬೌಲ್ಡ್!

  img

  ಬೋಲ್ಟ್ ಬಾಲ್​ಗೆ ಭುವನೇಶ್ವರ್ ಕುಮಾರ್ ಬೌಲ್ಡ್ ಆಗಿದ್ದಾರೆ. 2 ಬಾಲ್​ಗೆ 1 ರನ್ ನೀಡಿ ಭುವಿ ನಿರ್ಗಮಿಸಿದ್ದಾರೆ.

 • 17 Apr 2021 23:09 PM (IST)

  ಸನ್​ರೈಸರ್ಸ್ ಗೆಲ್ಲಲು 6 ಬಾಲ್​ಗೆ 16 ಬೇಕು

  ಸನ್​ರೈಸರ್ಸ್ ಹೈದರಾಬಾದ್ ಗೆಲುವಿಗೆ 6 ಬಾಲ್ ಉಳಿದಿರುವಂತೆ 16 ರನ್ ಬೇಕಾಗಿದೆ. ತಂಡದ ಪರ ಭುವನೇಶ್ವರ್ ಕುಮಾರ್ ಹಾಗೂ ಮುಜೀಬ್ ಉರ್ ರಹಮಾನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸನ್​ರೈಸರ್ಸ್ ಸ್ಕೋರ್ 19 ಓವರ್ ಅಂತ್ಯಕ್ಕೆ 135/8 ಆಗಿದೆ.

 • 17 Apr 2021 23:08 PM (IST)

  ವಿಜಯ್ ಶಂಕರ್ ಔಟ್

  img

  25 ಬಾಲ್​ಗೆ 28 ರನ್ ಗಳಿಸಿ ವಿಜಯ್ ಶಂಕರ್ ಔಟ್ ಆಗಿದ್ದಾರೆ. ಬುಮ್ರಾ ಬಾಲ್​ನ್ನು ಹೊಡೆಯಲು ಹೋಗಿ ಸೂರ್ಯಕುಮಾರ್​ಗೆ ಕ್ಯಾಚ್ ನೀಡಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ಗೆಲ್ಲಲು 7 ಬಾಲ್​ಗೆ 17 ರನ್ ಬೇಕಿದೆ.

 • 17 Apr 2021 23:03 PM (IST)

  ರಶೀದ್ ಖಾನ್ ಸೊನ್ನೆಗೆ ಔಟ್

  img

  ಬೋಲ್ಟ್ ಬಾಲ್​ಗೆ ರಶೀದ್ ಖಾನ್ ಎಲ್​ಬಿಡಬ್ಲ್ಯು ಆಗಿದ್ದಾರೆ. ಒಂದೂ ರನ್ ಗಳಿಸದೆ ಬಂದಂತೆ ಹಿಂದೆ ಹೋಗಿದ್ದಾರೆ. 18 ಓವರ್ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ 130/7 ಆಗಿದೆ. ಗೆಲ್ಲಲು 12 ಬಾಲ್​ಗೆ 21 ರನ್ ಬೇಕಿದೆ.

 • 17 Apr 2021 23:00 PM (IST)

  ಸಮದ್ ರನೌಟ್

  img

  ಪಂದ್ಯದ ಕೊನೆಯ ಹಂತದಲ್ಲಿ ಅವಸರದ ರನ್​ಗೆ ಮುಂದಾಗಿ ಸಮದ್ ರನೌಟ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಡೈರೆಕ್ಟ್ ಹಿಟ್​ಗೆ 8 ಬಾಲ್​ಗೆ 7 ರನ್ ಗಳಿಸಿ ಆಡುತ್ತಿದ್ದ ಅಬ್ದುಲ್ ಸಮದ್ ವಿಕೆಟ್ ಒಪ್ಪಿಸಿದ್ದಾರೆ.

 • 17 Apr 2021 22:56 PM (IST)

  ಸನ್​ರೈಸರ್ಸ್ ಹೈದರಾಬಾದ್ 124/5 (17 ಓವರ್)

  ಸನ್​ರೈಸರ್ಸ್ ಹೈದರಾಬಾದ್ 17 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿದೆ. ತಂಡದ ಪರ ವಿಜಯ್ ಶಂಕರ್ ಹಾಗೂ ಸಮದ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 18 ಬಾಲ್​ಗೆ 27 ರನ್ ಬೇಕಿದೆ.

 • 17 Apr 2021 22:49 PM (IST)

  ಸನ್​ರೈಸರ್ಸ್ ಹೈದರಾಬಾದ್ 120/5 (16 ಓವರ್)

  16 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ಕಳೆದುಕೊಂಡು 120 ರನ್ ದಾಖಲಿಸಿದೆ. ಹೈದರಾಬಾದ್ ಗೆಲುವಿಗೆ 24 ಬಾಲ್​ಗೆ 31 ರನ್ ಬೇಕಿದೆ. ವಿಜಯ್ ಶಂಕರ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 17 Apr 2021 22:47 PM (IST)

  ವಿಜಯ್ ಶಂಕರ್ ಸಿಕ್ಸರ್ ಆಟ

  img

  ಸನ್​ರೈಸರ್ಸ್ ಹೈದರಾಬಾದ್ ಪರ ವಿಜಯ್ ಶಂಕರ್ ಬೆನ್ನುಬೆನ್ನಿಗೆ 2 ಸಿಕ್ಸರ್ ಬಾರಿಸಿದ್ದಾರೆ. ಕೃನಾಲ್ ಪಾಂಡ್ಯ ಬಾಲ್​ನ್ನು ಸಿಕ್ಸ್​ಗೆ ಅಟ್ಟಿದ್ದಾರೆ. ವಿಜಯ್ ಶಂಕರ್ 14 ಬಾಲ್​ಗೆ 19 ರನ್ ಗಳಿಸಿ ಆಡುತ್ತಿದ್ದಾರೆ. ಎರಡು ಸಿಕ್ಸರ್​ಗಳ ಬಳಿಕ ತಂಡ ಚೇತರಿಕೆ ಕಂಡಿದೆ.

 • 17 Apr 2021 22:43 PM (IST)

  ಸನ್​ರೈಸರ್ಸ್ ಹೈದರಾಬಾದ್ 104/5 (15 ಓವರ್)

  ಸನ್​ರೈಸರ್ಸ್ ಹೈದರಾಬಾದ್ ತಂಡ 15 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ಸನ್​ರೈಸರ್ಸ್ ಗೆಲ್ಲಲು 30 ಬಾಲ್​ಗೆ 47 ರನ್ ಬೇಕಿದೆ. ತಂಡದ ಪರ ವಿಜಯ್ ಶಂಕರ್, ಅಬ್ದುಲ್ ಸಮದ್ ಆಡುತ್ತಿದ್ದಾರೆ.

 • 17 Apr 2021 22:42 PM (IST)

  ಚಹರ್​ಗೆ ಮತ್ತೊಂದು ವಿಕೆಟ್

  img

  ಅಭಿಷೇಕ್ ಶರ್ಮಾ 4 ಬಾಲ್​ಗೆ 2 ರನ್ ಗಳಿಸಿ ನಿರ್ಗಮಿಸಿದ್ದಾರೆ. ಚಹರ್ ಮತ್ತೊಂದು ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ತೋರಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 31 ಬಾಲ್​ಗೆ 47 ರನ್ ಬೇಕಿದೆ.

 • 17 Apr 2021 22:39 PM (IST)

  ವಿರಾಟ್ ಸಿಂಗ್ ಔಟ್

  img

  12 ಬಾಲ್​ಗೆ 11 ರನ್ ಗಳಿಸಿ ವಿರಾಟ್ ಸಿಂಗ್ ಔಟ್ ಆಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ 4ನೇ ವಿಕೆಟ್ ಪತನವಾಗಿದೆ. ರಾಹುಲ್ ಚಹರ್ ಬೌಲಿಂಗ್​ಗೆ ಸೂರ್ಯಕುಮಾರ್ ಯಾದವ್ ಕ್ಯಾಚ್ ಹಿಡಿದು, ವಿರಾಟ್ ಸಿಂಗ್ ವಿಕೆಟ್ ಕಿತ್ತಿದ್ದಾರೆ. ರಾಹುಲ್ ಚಹರ್​ಗೆ ಇದು ಇಂದಿನ ಪಂದ್ಯದ 2ನೇ ವಿಕೆಟ್ ಆಗಿದೆ.

 • 17 Apr 2021 22:36 PM (IST)

  ಸನ್​ರೈಸರ್ಸ್ ಹೈದರಾಬಾದ್ 102/3 (14 ಓವರ್)

  ಸನ್​ರೈಸರ್ಸ್ ಹೈದರಾಬಾದ್, 14 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿದೆ. ಗೆಲ್ಲಲು 36 ಬಾಲ್​ಗೆ 49 ರನ್ ಬೇಕಿದೆ. ವಿರಾಟ್ ಸಿಂಗ್ 11 (11) ಹಾಗೂ ವಿಜಯ್ ಶಂಕರ್ 5 (10) ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 17 Apr 2021 22:32 PM (IST)

  ಸನ್​ರೈಸರ್ಸ್ ಹೈದರಾಬಾದ್ 96/3 (13 ಓವರ್)

  13 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ. ವಾರ್ನರ್ ಹಾಗೂ ಬೇರ್​ಸ್ಟೋ ವಿಕೆಟ್ ಒಪ್ಪಿಸಿದ ಬಳಿಕ ತಂಡದ ರನ್ ಗತಿ ಕುಸಿದಿದೆ. ವಿರಾಟ್ ಸಿಂಗ್ ಮತ್ತು ವಿಜಯ್ ಶಂಕರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 17 Apr 2021 22:23 PM (IST)

  ವಾರ್ನರ್ ರನೌಟ್!

  img

  ಡೇವಿಡ್ ವಾರ್ನರ್ 34 ಬಾಲ್​ಗೆ 36 ರನ್ ಗಳಿಸಿ ರನೌಟ್​ಗೆ ಬಲಿಯಾಗಿದ್ದಾರೆ. ಅವಸರದ ಓಟಕ್ಕೆ ಮುಂದಾಗಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ನೀಡಿದ್ದಾರೆ.

 • 17 Apr 2021 22:21 PM (IST)

  ಸನ್​ರೈಸರ್ಸ್ ಹೈದರಾಬಾದ್ 85/2 (11 ಓವರ್)

  ಸನ್​ರೈಸರ್ಸ್ ಹೈದರಾಬಾದ್ ತಂಡ 11 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 85 ರನ್ ಕಲೆಹಾಕಿದೆ. ಸನ್​ರೈಸರ್ಸ್ ಗೆಲ್ಲಲು 54 ಬಾಲ್​ಗೆ 66 ರನ್ ಬೇಕಾಗಿದೆ. ಡೇವಿಡ್ ವಾರ್ನರ್ 36 (34) ಹಾಗೂ ವಿರಾಟ್ ಸಿಂಗ್ 2 (4) ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 17 Apr 2021 22:16 PM (IST)

  ಸನ್​ರೈಸರ್ಸ್​ ಗೆಲ್ಲಲು 60 ಬಾಲ್​ಗೆ 77 ರನ್ ಬೇಕು

  ಸನ್​ರೈಸರ್ಸ್ ಹೈದರಾಬಾದ್ ಗೆಲುವಿಗೆ 77 ರನ್ ಬೇಕಾಗಿದೆ. ಎಸ್​ಆರ್​ಎಚ್ ತಂಡ 10 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 74 ರನ್ ದಾಖಲಿಸಿದೆ.

 • 17 Apr 2021 22:13 PM (IST)

  ಸನ್​ರೈಸರ್ಸ್ ಹೈದರಾಬಾದ್ 71/2 (9 ಓವರ್)

  9 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡು 72 ರನ್ ದಾಖಲಿಸಿದೆ. ಹೈದರಾಬಾದ್ ಪರ ನಾಯಕ ಡೇವಿಡ್ ವಾರ್ನರ್ ಹಾಗೂ ವಿರಾಟ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 17 Apr 2021 22:11 PM (IST)

  ಮನೀಶ್ ಪಾಂಡೆ ಔಟ್

  img

  ಬೇರ್​ಸ್ಟೋ ಬಳಿಕ ಬ್ಯಾಟಿಂಗ್​ಗೆ ಬಂದ ಮನೀಶ್ ಪಾಂಡೆ ಕೂಡ ವಿಕೆಟ್ ಒಪ್ಪಿಸಿದ್ದಾರೆ. 7 ಬಾಲ್​ಗೆ 2 ರನ್ ಗಳಿಸಿ ರಾಹುಲ್ ಚಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ.

 • 17 Apr 2021 22:04 PM (IST)

  ಬೇರ್​ಸ್ಟೋ ಔಟ್

  ಸನ್​ರೈಸರ್ಸ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಬೇರ್​ಸ್ಟೋ ಹಿಟ್ ವಿಕೆಟ್ ಆಗಿ ಔಟ್ ಆಗಿದ್ದಾರೆ. ಕೃನಾಲ್ ಪಾಂಡ್ಯ ಬಾಲ್​ಗೆ ನಿರ್ಗಮಿಸಿದ್ದಾರೆ. 22 ಬಾಲ್​ಗೆ 4 ಸಿಕ್ಸರ್, 3 ಫೋರ್ ಸಹಿತ 43 ಗಳಿಸಿ ಔಟ್ ಆಗಿದ್ದಾರೆ. ವಾರ್ನರ್ ಜೊತೆಗೆ ಮನೀಶ್ ಪಾಂಡೆ ಆಡುತ್ತಿದ್ದಾರೆ.

 • 17 Apr 2021 22:01 PM (IST)

  ಸನ್​ರೈಸರ್ಸ್ ಹೈದರಾಬಾದ್ 67/0 (7 ಓವರ್)

  ಸನ್​ರೈಸರ್ಸ್ ಹೈದರಾಬಾದ್ 7 ಓವರ್​​ಗೆ ವಿಕೆಟ್ ಕಳೆದುಕೊಳ್ಳದೆ 67 ರನ್ ಕಲೆಹಾಕಿದೆ. ತಂಡದ ಪರ ಬೇರ್​ಸ್ಟೋ ಹಾಗೂ ವಾರ್ನರ್ ಆಡುತ್ತಿದ್ದಾರೆ.

 • 17 Apr 2021 21:54 PM (IST)

  ಸನ್​ರೈಸರ್ಸ್ ಹೈದರಾಬಾದ್ 57/0 (6 ಓವರ್)

  ಪವರ್​ಪ್ಲೇ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ನಷ್ಟವಿಲ್ಲದೆ 57 ರನ್ ದಾಖಲಿಸಿದೆ. ಹೈದರಾಬಾದ್​ ಗೆಲುವಿಗೆ 84 ಬಾಲ್​ಗೆ 94 ರನ್ ಬೇಕಾಗಿದೆ. ಬೇರ್​ಸ್ಟೋ ಹಾಗೂ ವಾರ್ನರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 17 Apr 2021 21:49 PM (IST)

  ಸನ್​ರೈಸರ್ಸ್ ಹೈದರಾಬಾದ್ 55/0 (5 ಓವರ್)

  5 ಓವರ್​ಗಳ ಅಂತ್ಯಕ್ಕೆ ಹೈದರಾಬಾದ್ ತಂಡ ವಿಕೆಟ್ ಕಳೆದುಕೊಳ್ಳದೆ 55 ರನ್ ದಾಖಲಿಸಿದೆ. ಸನ್​ರೈಸರ್ಸ್ ಗೆಲ್ಲಲು 90 ಬಾಲ್​ಗೆ 96 ರನ್ ಬೇಕಾಗಿದೆ.

 • 17 Apr 2021 21:45 PM (IST)

  ಸನ್​ರೈಸರ್ಸ್ ಹೈದರಾಬಾದ್ 42/0 (4 ಓವರ್)

  ಸನ್​ರೈಸರ್ಸ್ ಹೈದರಾಬಾದ್ ಅದ್ಭುತ ಆರಂಭ ಪಡೆದುಕೊಂಡಿದೆ. 4 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಕಲೆಹಾಕಿದೆ. ಸನ್​ರೈಸರ್ಸ್ ಪರ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಬೇರ್​ಸ್ಟೋ ಕ್ರೀಸ್​ನಲ್ಲಿದ್ದಾರೆ. ಬೇರ್​​ಸ್ಟೋ ಅಬ್ಬರದ ಬ್ಯಾಟಿಂಗ್​ಗೆ ಮುಂದಾಗಿದ್ದಾರೆ. 12 ಬಾಲ್​ಗೆ 3 ಬೌಂಡರಿ, 3 ಸಿಕ್ಸರ್ ಸಹಿತ 33 ರನ್ ಗಳಿಸಿದ್ದಾರೆ. ವಾರ್ನರ್ 12 ಬಾಲ್​ಗೆ 8 ರನ್ ಗಳಿಸಿದ್ದಾರೆ.

 • 17 Apr 2021 21:12 PM (IST)

  ಮುಂಬೈ ಇಂಡಿಯನ್ಸ್ 150/5 (20 ಓವರ್)

  ಮುಂಬೈ ಇಂಡಿಯನ್ಸ್ ತಂಡ 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿದೆ. ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 151 ರನ್ ಟಾರ್ಗೆಟ್ ನೀಡಿದೆ. ಪೊಲಾರ್ಡ್ ಕೊನೆಯ ಓವರ್​ನಲ್ಲಿ ಅಬ್ಬರಿಸಿ ತಂಡದ ಮೊತ್ತ 150 ತಲುಪುವಲ್ಲಿ ಸಹಕಾರಿಯಾಗಿದ್ದಾರೆ.

 • 17 Apr 2021 21:02 PM (IST)

  ಹಾರ್ದಿಕ್ ವಿಕೆಟ್ ಪತನ

  img

  ಮುಂಬೈ ಇಂಡಿಯನ್ಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಖಲೀಲ್ ಅಹ್ಮದ್ ಬಾಲ್​ನ್ನು ಸಿಕ್ಸರ್​ಗೆ ಬಾರಿಸಿದ ಹಾರ್ದಿಕ್ ಪಾಂಡ್ಯ ವಿರಾಟ್ ಸಿಂಗ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮೊತ್ತ 19 ಓವರ್​ಗಳ ಅಂತ್ಯಕ್ಕೆ 133/5 ಆಗಿದೆ. ಕೃನಾಲ್ ಪಾಂದ್ಯ ಹಾಗೂ ಪೊಲಾರ್ಡ್ ಕ್ರೀಸ್​ನಲ್ಲಿದ್ದಾರೆ.

 • 17 Apr 2021 20:57 PM (IST)

  ಮುಂಬೈ ಇಂಡಿಯನ್ಸ್ 126/4 (18 ಓವರ್)

  ಮುಂಬೈ ಇಂಡಿಯನ್ಸ್ ತಂಡ 18 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ. ಕೀರನ್ ಪೊಲಾರ್ಡ್ 14 ಬಾಲ್​ಗೆ 14 ಹಾಗೂ ಹಾರ್ದಿಕ್ ಪಾಂಡ್ಯ 4 ಬಾಲ್​ಗೆ 7 ರನ್ ಗಳಿಸಿ ಆಡುತ್ತಿದ್ದಾರೆ.

 • 17 Apr 2021 20:51 PM (IST)

  ಇಶಾನ್ ಕಿಶನ್ ಔಟ್!

  img

  ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ, ಸನ್​ರೈಸರ್ಸ್ ಬೌಲಿಂಗ್ ದಾಳಿಗೆ ಸೊರಗಿದೆ. ಇಶಾನ್ ಕಿಶನ್ 21 ಬಾಲ್​ಗೆ 12 ರನ್ ಗಳಿಸಿ ಮುಜಿಬ್ ಉರ್ ರಹಮಾನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೈರ್​ಸ್ಟೋಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್ 17 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿದೆ. ಮುಂಬೈ ಪರ ಹಾರ್ದಿಕ್ ಪಾಂಡ್ಯ ಹಾಗೂ ಪೊಲಾರ್ಡ್ ಬ್ಯಾಟ್ ಬೀಸುತ್ತಿದ್ದಾರೆ.

 • 17 Apr 2021 20:46 PM (IST)

  ಮುಂಬೈ ಇಂಡಿಯನ್ಸ್ 107/3 (16 ಓವರ್)

  ಮುಂಬೈ ಇಂಡಿಯನ್ಸ್ ತಂಡ 16 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ದಾಖಲಿಸಿದೆ. ಮುಂಬೈ ಪರ ಪೊಲಾರ್ಡ್ 7 ಬಾಲ್​ಗೆ 3 ಹಾಗೂ ಇಶಾನ್ ಕಿಶನ್ 19 ಬಾಲ್​ಗೆ 12 ರನ್ ಮಾಡಿ ಆಡುತ್ತಿದ್ದಾರೆ. ಸನ್​ರೈಸರ್ಸ್ ಪರ ರಶೀದ್ ಖಾನ್ 4 ಓವರ್​ಗಳನ್ನು ಮುಗಿಸಿದ್ದಾರೆ. ಕೇವಲ 22 ರನ್ ಬಿಟ್ಟುಕೊಟ್ಟಿದ್ದಾರೆ.

 • 17 Apr 2021 20:36 PM (IST)

  ಮುಂಬೈ ಇಂಡಿಯನ್ಸ್ 98/3 (14 ಓವರ್)

  14 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 3 ಮುಖ್ಯ ವಿಕೆಟ್ ಕಳೆದುಕೊಂಡು 98 ರನ್ ಕಲೆಹಾಕಿದೆ. ಕ್ವಿಂಟನ್ ಡಿ ಕಾಕ್ ಔಟ್ ಆಗಿದ್ದು, ಈಗ ಇಶಾನ್ ಕಿಶನ್ 8 (15) ಹಾಗೂ ಕಿರನ್ ಪೊಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 3 ವಿಕೆಟ್ ಪತನದಿಂದಾಗಿ ಮುಂಬೈ ರನ್ ಗಳಿಕೆಯ ವೇಗ ಕುಸಿದಿದೆ.

 • 17 Apr 2021 20:34 PM (IST)

  ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಡಿ ಕಾಕ್

  img

  ಮುಂಬೈ ಪರ ಶಿಸ್ತುಬದ್ಧ ಆಟವಾಡುತ್ತಿದ್ದ ಕ್ವಿಂಟನ್ ಡಿ ಕಾಕ್ ಔಟ್ ಆಗಿದ್ದಾರೆ. 39 ಬಾಲ್​ಗೆ 5 ಬೌಂಡರಿ ಸಹಿತ 40 ರನ್ ಗಳಿಸಿ ಮುಜೀಬ್ ಉರ್ ರಹಮಾನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇದಕ್ಕೂ ಮೊದಲು ಡಿ ಕಾಕ್ ಐಪಿಎಲ್​ನಲ್ಲಿ 2000 ರನ್ ದಾಖಲಿಸಿದ ದಾಖಲೆ ಮಾಡಿದ್ದರು.

 • 17 Apr 2021 20:32 PM (IST)

  ಮುಂಬೈ ಇಂಡಿಯನ್ಸ್ 94/2 (13 ಓವರ್)

  ಮುಂಬೈ ಇಂಡಿಯನ್ಸ್ ತಂಡ 13 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿದೆ. ಈಗಿನ ವೇಗದಲ್ಲಿ ರನ್ ಸಾಗಿದರೆ, ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್​ಗಳ ಅಂತ್ಯಕ್ಕೆ 144 ರನ್ ದಾಖಲಿಸಲಿದೆ.

 • 17 Apr 2021 20:28 PM (IST)

  ಮುಂಬೈ ಇಂಡಿಯನ್ಸ್ 89/2 (12 ಓವರ್)

  12 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 2 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದೆ. ಕ್ವಿಂಟನ್ ಡಿ ಕಾಕ್ 32 ಬಾಲ್​ಗೆ 36 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ 11 ಬಾಲ್​ಗೆ 5 ರನ್ ಕಲೆಹಾಕಿದ್ದಾರೆ. ಅಭಿಷೇಕ್ ಶರ್ಮಾ, ರಶೀದ್ ಖಾನ್, ವಿಜಯ್ ಶಂಕರ್ ಹೈದರಾಬಾದ್ ಪರ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.

 • 17 Apr 2021 20:21 PM (IST)

  ಮುಂಬೈ ಇಂಡಿಯನ್ಸ್ 75/2 (10 ಓವರ್)

  10 ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ಸ್ಕೋರ್ 75/2 ಆಗಿದೆ. ಡಿ ಕಾಕ್ 24 ಬಾಲ್​ಗೆ 24 ರನ್ ಗಳಿಸಿ ಆಡುತ್ತಿದ್ದಾರೆ. ಇಶಾನ್ ಕಿಶನ್ 7 ಬಾಲ್​ಗೆ 3 ರನ್ ಮೂಲಕ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 17 Apr 2021 20:18 PM (IST)

  ಮುಂಬೈ ಇಂಡಿಯನ್ಸ್ 72/2 (9 ಓವರ್)

  9 ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 2 ವಿಕೆಟ್ ಕಳೆದುಕೊಂಡು 72 ರನ್ ದಾಖಲಿಸಿದೆ. ಮುಂಬೈ ಪರ ಡಿ ಕಾಕ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 2 ವಿಕೆಟ್ ಪತನದ ಬಳಿಕ ಮುಂಬೈ ರನ್ ವೇಗ ಕಡಿಮೆಯಾಗಿದೆ.

 • 17 Apr 2021 20:13 PM (IST)

  ಸೂರ್ಯಕುಮಾರ್ ಯಾದವ್ ಔಟ್

  img

  ಮುಂಬೈ ತಂಡದ ಎರಡನೇ ವಿಕೆಟ್ ಪತನವಾಗಿದೆ. ಸೂರ್ಯಕುಮಾರ್ ಯಾದವ್ 6 ಬಾಲ್​ಗೆ 10 ರನ್ ನೀಡಿ ನಿರ್ಗಮಿಸಿದ್ದಾರೆ. ವಿಜಯ್ ಶಂಕರ್ ಬಾಲ್​ಗೆ ಬೌಲರ್ ವಿಜಯ್ ಶಂಕರ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರೋಹಿತ್ ಶರ್ಮಾ ವಿಕೆಟ್​ನ್ನು ಕೂಡ ವಿಜಯ್ ಶಂಕರ್ ಪಡೆದಿದ್ದರು. ಇದೀಗ ಎರಡನೇ ವಿಕೆಟ್ ಕೂಡ ಅವರ ಪಾಲಾಗಿದೆ.

 • 17 Apr 2021 20:10 PM (IST)

  ಮುಂಬೈ ಇಂಡಿಯನ್ಸ್ 64/1 (8 ಓವರ್)

  8 ಓವರ್​ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ಕಳೆದುಕೊಂಡು 64 ರನ್ ಕಲೆಹಾಕಿದೆ. ಸನ್​ರೈಸರ್ಸ್ ಪರ ಸ್ಪಿನ್ನರ್ ರಶೀದ್ ಖಾನ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. ಈಗಿನ ವೇಗದಲ್ಲಿ ರನ್ ಗಳಿಸಿದರೆ, 8 ರನ್ ಸರಾಸರಿಯಂತೆ ಮುಂಬೈ ತಂಡ 160 ರನ್ ದಾಖಲಿಸುವ ಸಾಧ್ಯತೆ ಇದೆ.

 • 17 Apr 2021 20:05 PM (IST)

  ಮುಂಬೈ ಇಂಡಿಯನ್ಸ್ 59/1 ( 7 ಓವರ್)

  7 ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ಕಳೆದುಕೊಂಡು 59 ರನ್ ಕಲೆಹಾಕಿದೆ. ತಂಡದ ಪರ ಕ್ವಿಂಟನ್ ಡಿ ಕಾಕ್ 17 (15) ಹಾಗೂ ಸೂರ್ಯಕುಮಾರ್ ಯಾದವ್ 4 (2) ಬ್ಯಾಟ್ ಬೀಸುತ್ತಿದ್ದಾರೆ.

 • 17 Apr 2021 20:03 PM (IST)

  ರೋಹಿತ್ ಶರ್ಮಾ ಔಟ್!

  img

  ಮುಂಬೈ ಇಂಡಿಯನ್ಸ್ ತಂಡದ ನಾಯಕ, ಇನ್ನಿಂಗ್ಸ್​ಗೆ ಉತ್ತಮ ಆರಂಭ ನೀಡಿದ್ದ ರೋಹಿತ್ ಶರ್ಮಾ ವಿಜಯ್ ಶಂಕರ್​ಗೆ ವಿಕೆಟ್ ಒಪ್ಪಿಸಿದ್ದಾರೆ. 25 ಬಾಲ್​ಗೆ 32 ರನ್ ಗಳಿಸಿದ್ದ ಅವರು ಸಿಕ್ಸರ್ ಬಾರಿಸಲು ಹೋಗಿ ವಿರಾಟ್ ಸಿಂಗ್​ಗೆ ಕ್ಯಾಚ್ ನೀಡಿದ್ದಾರೆ.

 • 17 Apr 2021 20:00 PM (IST)

  ಮುಂಬೈ ಇಂಡಿಯನ್ಸ್ 53/0 (6 ಓವರ್)

  ಪವರ್​ಪ್ಕೇ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ ವಿಕೆಟ್ ಕಳೆದುಕೊಳ್ಳದೆ 53 ರನ್ ದಾಖಲಿಸಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ 31 (23) ಹಾಗೂ ಕ್ವಿಂಟನ್ ಡಿ ಕಾಕ್ 16 (14) ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬೌಲರ್​ಗಳು ರನ್ ಕಂಟ್ರೋಲ್ ಮಾಡಲು, ವಿಕೆಟ್ ಕಬಳಿಸಲು ಪ್ರಯತ್ನ ನಡೆಸುತ್ತಿದ್ದಾರೆ.

 • 17 Apr 2021 19:51 PM (IST)

  ರೋಹಿತ್ ಸಿಕ್ಸರ್

  img

  ಭುವನೇಶ್ವರ್ ಕುಮಾರ್ ಓವರ್​ನಲ್ಲಿ ರೋಹಿತ್ ಶರ್ಮಾ ಮತ್ತೊಂದು ಸಿಕ್ಸರ್ ಬಾರಿಸಿದ್ದಾರೆ. ತಂಡದ ಮೊತ್ತ 4 ಓವರ್ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 38 ರನ್ ದಾಖಲಿಸಿದೆ. ರೋಹಿತ್ ಶರ್ಮಾ 22 (14) ಹಾಗೂ ಕ್ವಿಂಟನ್ ಡಿ ಕಾಕ್ 11 (11) ರನ್ ಪೇರಿಸಿದ್ದಾರೆ. ಭುವನೇಶ್ವರ್ ಕುಮಾರ್ 2, ಮುಜಿಬ್ ಉರ್ ರಹಮಾನ್ ಹಾಗೂ ಖಲೀಲ್ ಅಹ್ಮದ್ ತಲಾ 1 ಓವರ್ ಬೌಲಿಂಗ್ ಮಾಡಿದ್ದಾರೆ.

 • 17 Apr 2021 19:46 PM (IST)

  ಮುಂಬೈ ಇಂಡಿಯನ್ಸ್ 29/0 (3 ಓವರ್)

  ಮುಜೀಬ್ ಉರ್ ರಹಮಾನ್ ಬೌಲಿಂಗ್ ಮಾಡಿದ ಮೂರನೇ ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ ವಿಕೆಟ್ ಕಳೆದುಕೊಳ್ಳದೆ 29 ರನ್ ಪೇರಿಸಿದ್ದಾರೆ. ಕೊನೆಯ ಓವರ್​ನಲ್ಲಿ ರೋಹಿತ್ ಶರ್ಮಾ 1 ಫೋರ್ ಹಾಗೂ 1 ಸಿಕ್ಸರ್ ಬಾರಿಸಿದ್ದಾರೆ. ಉತ್ತಮ ಆರಂಭ ಪಡೆದಿರುವ ಮುಂಬೈ ರನ್ ವೇಗ ಹೆಚ್ಚಿಸಿಕೊಂಡಿದೆ. ರೋಹಿತ್ ಶರ್ಮಾ 14 (9) ಹಾಗೂ ಡಿ ಕಾಕ್ 10 (10) ಆಡುತ್ತಿದ್ದಾರೆ.

 • 17 Apr 2021 19:40 PM (IST)

  ಮುಂಬೈ ಇಂಡಿಯನ್ಸ್ 16/0 (2 ಓವರ್)

  ಸನ್​ರೈಸರ್ಸ್ ಪರ ಖಲೀಲ್ ಅಹ್ಮದ್ 2ನೇ ಓವರ್ ಬೌಲಿಂಗ್ ಮಾಡಿದ್ದಾರೆ. 2 ಓವರ್​ಗಳ ಅಂತ್ಯಕ್ಕೆ ಮುಂಬೈ ವಿಕೆಟ್ ನಷ್ಟವಿಲ್ಲದೆ 16 ರನ್ ಕಲೆಹಾಕಿದೆ. ಡಿ ಕಾಕ್ 9 ಮತ್ತು ರೋಹಿತ್ ಶರ್ಮಾ 2 ರನ್ ಗಳಿಸಿ ಕಣದಲ್ಲಿದ್ದಾರೆ.

 • 17 Apr 2021 19:36 PM (IST)

  ಮುಂಬೈ ಇಂಡಿಯನ್ಸ್ 8/0 (1 ಓವರ್)

  ಮೊದಲನೇ ಓವರ್ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ವಿಕೆಟ್ ನಷ್ಟವಿಲ್ಲದೆ 8 ರನ್ ದಾಖಲಿಸಿದೆ.ಮುಂಬೈ ಪರ ಡಿ ಕಾಕ್ ಹಾಗೂ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭುವನೇಶ್ವರ್ ಕುಮಾರ್ ಬೌಲಿಂಗ್ ಮಾಡಿದ ಮೊದಲ ಓವರ್​ನಲ್ಲಿ ಕ್ವಿಂಟನ್ ಡಿ ಕಾಕ್ 2 ಬೌಂಡರಿ ಸಿಡಿಸಿದ್ದಾರೆ.

 • 17 Apr 2021 19:22 PM (IST)

  ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

  ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ವಿರಾಟ್ ಸಿಂಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಮುಜೀಬ್ ಉರ್ ರಹಮಾನ್, ಖಲೀಲ್ ಅಹ್ಮದ್

 • 17 Apr 2021 19:20 PM (IST)

  ಮುಂಬೈ ಪ್ಲೇಯಿಂಗ್ ಇಲೆವೆನ್

  ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ

 • 17 Apr 2021 19:04 PM (IST)

  ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ

  ಚೆನ್ನೈ ಎಮ್.ಎ. ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್- ಸನ್​ರೈಸರ್ಸ್ ಹೈದರಾಬಾದ್ ಹಣಾಹಣಿಗೆ ಮುಂಬೈ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡ ಬೌಲಿಂಗ್ ಮಾಡಲಿದೆ.

 • 17 Apr 2021 19:02 PM (IST)

  ಸನ್​ರೈಸರ್ಸ್ ಹೈದರಾಬಾದ್- ಮುಂಬೈ ಇಂಡಿಯನ್ಸ್ ಬಲಾಬಲ

  ಸನ್​ರೈಸರ್ಸ್ ಹೈದರಾಬಾದ್- ಮುಂಬೈ ಇಂಡಿಯನ್ಸ್ ಇದುವರೆಗೆ ಮುಖಾಮುಖಿಯಾಗಿರುವ ಪಂದ್ಯಗಳಲ್ಲಿ ಸಮಬಲ ಸಾಧಿಸಿವೆ. 8 ಪಂದ್ಯಗಳನ್ನು ಮುಂಬೈ, 8 ಪಂದ್ಯಗಳನ್ನು ಸನ್​ರೈಸರ್ಸ್ ಗೆದ್ದಿದೆ.

 • 17 Apr 2021 19:00 PM (IST)

  ಮುಂಬೈ- ಹೈದರಾಬಾದ್ ಕ್ರಿಕೆಟ್ ಕದನ

  ಐಪಿಎಲ್ ಟೂರ್ನಿಯ 9ನೇ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ತಂಡದ ಆಟಗಾರರು ತಯಾರಿ ನಡೆಸಿದ್ದಾರೆ..