PBKS vs CSK, IPL 2021 Match 8 Result: ಸುಲಭ ಗೆಲುವು ದಾಖಲಿಸಿದ ಧೋನಿ ಪಡೆ; ಮೊನ್ನೆ ಅಬ್ಬರಿಸಿದ್ದ ಪಂಜಾಬ್ ಆಟ ಇಂದು ಸಪ್ಪೆಸಪ್ಪೆ!

PBKS vs CSK Result in Kannada: ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ ಎಂಟನೇ ಪಂದ್ಯಾಟದ ಓವರ್ ಟು ಓವರ್ ಅಪ್ಡೇಟ್ ಇಲ್ಲಿ ಸಿಗಲಿದೆ.

 • TV9 Web Team
 • Published On - 22:41 PM, 16 Apr 2021
PBKS vs CSK, IPL 2021 Match 8 Result: ಸುಲಭ ಗೆಲುವು ದಾಖಲಿಸಿದ ಧೋನಿ ಪಡೆ; ಮೊನ್ನೆ ಅಬ್ಬರಿಸಿದ್ದ ಪಂಜಾಬ್ ಆಟ ಇಂದು ಸಪ್ಪೆಸಪ್ಪೆ!
ಮೊಯೀನ್ ಅಲಿ- ಡು ಪ್ಲೆಸಿಸ್ ಬ್ಯಾಟಿಂಗ್

ಮುಂಬೈ: ಐಪಿಎಲ್ 2021 ಟೂರ್ನಿಯ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಚೆನ್ನೈ ಬೌಲರ್​ಗಳ ಅದ್ಭುತ ದಾಳಿ ಹಾಗೂ ದಾಂಡಿಗರ ಶಿಸ್ತುಬದ್ಧ ಬ್ಯಾಟಿಂಗ್ ಮೂಲಕ ಪಂದ್ಯವನ್ನು ತಂಡ ತನ್ನ ವಶವಾಗಿಸಿದೆ. ಚೆನ್ನೈ ಪರ ಮೊಯೀನ್ ಅಲಿ 46 (31) ಹಾಗೂ ಡು ಪ್ಲೆಸಿಸ್ 36 (33)* ದಾಖಲಿಸಿದ್ದಾರೆ. ಪಂಜಾಬ್ ಪರ ಶಮಿ 2, ಅರ್ಶ್​ದೀಪ್ ಹಾಗೂ ಮುರುಗನ್ 1 ವಿಕೆಟ್ ಪಡೆದಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 106 ರನ್ ದಾಖಲಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್​ಗೆ ಗೆಲ್ಲಲು 107 ರನ್ ಟಾರ್ಗೆಟ್ ನೀಡಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನ ತೋರಿತ್ತು. ತಂಡದ ಪರ ದೀಪಕ್ ಚಹರ್ 4 ಓವರ್​ಗೆ ಕೇವಲ 13 ರನ್ ನೀಡಿ, ಮುಖ್ಯ 4 ವಿಕೆಟ್ ಪಡೆದು ಮಿಂಚಿದ್ದರು. ಮೊಯೀನ್ ಅಲಿ ಹಾಗೂ ಡ್ವೇನ್ ಬ್ರಾವೊ ತಲಾ 1 ವಿಕೆಟ್ ಪಡೆದಿದ್ದರು.

ಪಂಜಾಬ್ ಕಿಂಗ್ಸ್ ಪರ ಶಾರುಖ್ ಖಾನ್ ಏಕಾಂಗಿ ಪ್ರದರ್ಶನ ನೀಡಿದ್ದರು. ಅವರ 47 (36) ರನ್ ಇನ್ನಿಂಗ್ಸ್, ತಂಡ 100 ರನ್ ಗಡಿ ದಾಟಲು ಸಹಕಾರಿಯಾಗಿತ್ತು. ಉಳಿದಂತೆ, ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕದ ದಾಂಡಿಗರು 10 ರನ್ ಕೂಡ ದಾಟದೆ ವೈಫಲ್ಯ ಎದುರಿಸಿದ್ದರು. ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದ್ದರು.

LIVE Cricket Score & Updates

The liveblog has ended.
 • 16 Apr 2021 22:41 PM (IST)

  6 ವಿಕೆಟ್​ಗಳ ಗೆಲುವು ದಾಖಲಿಸಿದ ಚೆನ್ನೈ

  ಪಂಜಾಬ್ ಕಿಂಗ್ಸ್​ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿದೆ. 107 ರನ್ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ, 15.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದೆ.

 • 16 Apr 2021 22:36 PM (IST)

  ಚೆನ್ನೈ ಸೂಪರ್ ಕಿಂಗ್ಸ್ 102/4 (15 ಓವರ್)

  ಚೆನ್ನೈ ಸೂಪರ್ ಕಿಂಗ್ಸ್ 15 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 102 ರನ್ ಕಲೆಹಾಕಿದೆ. ತಂಡ ಗೆಲ್ಲಲು 30 ಬಾಲ್​ಗೆ 5 ರನ್ ಬೇಕಿದೆ.

 • 16 Apr 2021 22:34 PM (IST)

  ಶಮಿಗೆ ವಿಕೆಟ್ ಒಪ್ಪಿಸಿದ ರೈನಾ, ರಾಯುಡು!

  img

  ಉತ್ತಮ ಬ್ಯಾಟಿಂಗ್ ತೋರುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸನಿಹದಲ್ಲಿ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದೆ. ಮೊಹಮ್ಮದ್ ಶಮಿಗೆ ಸುರೇಶ್ ರೈನಾ (8) ಹಾಗೂ ಅಂಬಟಿ ರಾಯುಡು (0) ವಿಕೆಟ್ ಒಪ್ಪಿಸಿದ್ದಾರೆ. ಕುರ್ರನ್ ಹಾಗೂ ಡು ಪ್ಲೆಸಿಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 16 Apr 2021 22:31 PM (IST)

  ಚೆನ್ನೈ ಗೆಲ್ಲಲು 34 ಬಾಲ್​ಗೆ 8

  ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು 34 ಬಾಲ್​ಗೆ 8 ರನ್ ಬೇಕಾಗಿದೆ.

 • 16 Apr 2021 22:20 PM (IST)

  ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು 42 ಬಾಲ್​ಗೆ 12 ರನ್ ಬೇಕು

  ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು 42 ಬಾಲ್​ಗೆ 12 ರನ್ ಬೇಕಿದೆ. ತಂಡ 13 ಓವರ್​ಗಳ ಅಂತ್ಯಕ್ಕೆ 95 ರನ್ ಗಳಿಸಿ ಕೇವಲ 2 ವಿಕೆಟ್ ಕಳೆದುಕೊಂಡಿದೆ. ಡು ಪ್ಲೆಸಿಸ್ ಹಾಗೂ ಸುರೇಶ್ ರೈನಾ ಕ್ರೀಸ್​ನಲ್ಲಿದ್ದಾರೆ.

 • 16 Apr 2021 22:18 PM (IST)

  ಮೊಯೀನ್ ಅಲಿ ಔಟ್

  img

  ಮೊಯೀನ್ ಅಲಿ 31 ಬಾಲ್​ಗೆ 1 ಸಿಕ್ಸರ್ ಹಾಗೂ 7 ಬೌಂಡರಿ ಮೂಲಕ 46 ರನ್ ದಾಖಲಿಸಿ ಮುರುಗನ್ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡು ಪ್ಲೆಸಿಸ್​ಗೆ ರೈನಾ ಜೊತೆಯಾಗಿದ್ಧಾರೆ. ಈ ಮೂಲಕ ಡು ಪ್ಲೆಸಿಸ್- ಮೊಯೀನ್ ಅಲಿ 50 ರನ್ ಪಾರ್ಟ್​ನರ್​ಶಿಪ್ ಅಂತ್ಯವಾಗಿದೆ.

 • 16 Apr 2021 22:11 PM (IST)

  ಚೆನ್ನೈ ಸೂಪರ್ ಕಿಂಗ್ಸ್ 74/1 (11 ಓವರ್)

  11 ಓವರ್​ಗಳ ಆಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಕಳೆದುಕೊಂಡು 74 ರನ್ ದಾಖಲಿಸಿದೆ.

  ಮೊಯೀನ್ ಅಲಿ- ಡು ಪ್ಲೆಸಿಸ್ ಬ್ಯಾಟಿಂಗ್

 • 16 Apr 2021 22:05 PM (IST)

  ಚೆನ್ನೈ ಗೆಲ್ಲೋಕೆ 60 ಬಾಲ್​ಗೆ 43 ರನ್ ಬೇಕು

  ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 60 ಬಾಲ್​ಗೆ 43 ರನ್ ಬೇಕಿದೆ. ತಂಡದ ಮೊತ್ತ 10 ಓವರ್​ಗೆ 64/1 ಆಗಿದೆ. ಡು ಪ್ಲೆಸಿಸ್ ಹಾಗೂ ಮೊಯೀನ್ ಅಲಿ ಶಿಸ್ತುಬದ್ಧ ಆಟ ಪ್ರದರ್ಶಿಸುತ್ತಿದ್ದಾರೆ.

 • 16 Apr 2021 22:00 PM (IST)

  ಚೆನ್ನೈ ಸೂಪರ್ ಕಿಂಗ್ಸ್ 53/1 (9 ಓವರ್)

  9 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಕಳೆದುಕೊಂಡು 53 ರನ್ ದಾಖಲಿಸಿದೆ. ಚೆನ್ನೈ ಗೆಲ್ಲಲು 66 ಬಾಲ್​ಗೆ 54 ರನ್ ಬೇಕಿದೆ.

 • 16 Apr 2021 21:51 PM (IST)

  ಚೆನ್ನೈ ಗೆಲ್ಲಲು 78 ಬಾಲ್​ಗೆ 70 ರನ್ ಬೇಕು

  ಚೆನ್ನೈ ಸೂಪರ್ ಕಿಂಗ್ಸ್ 7 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 37 ರನ್ ದಾಖಲಿಸಿದೆ. ಚೆನ್ನೈ ಗೆಲುವಿಗೆ 70 ಬಾಲ್​ಗೆ 78 ರನ್ ಬೇಕಿದೆ. ಡು ಪ್ಲೆಸಿಸ್ ಹಾಗೂ ಮೊಯೀನ್ ಅಲಿ ಕ್ರೀಸ್​ನಲ್ಲಿದ್ದಾರೆ. ರೈನಾ, ರಾಯುಡು, ಧೋನಿ ಮುಂದಿನ ಕ್ರಮಾಂಕದಲ್ಲಿ ಆಡಲು ಬಾಕಿ ಇದ್ದಾರೆ.

 • 16 Apr 2021 21:45 PM (IST)

  ಚೆನ್ನೈ ಸೂಪರ್ ಕಿಂಗ್ಸ್ 32/1 (6 ಓವರ್)

  ಪವರ್​ಪ್ಲೇ ಅಂತ್ಯಕ್ಕೆ ಚೆನ್ನೈ ತಂಡ 1 ವಿಕೆಟ್ ಕಳೆದುಕೊಂಡು 32 ರನ್ ದಾಖಲಿಸಿದೆ. ಚೆನ್ನೈ ಪರ ಡು ಪ್ಲೆಸಿಸ್ ಹಾಗೂ ಮೊಯೀನ್ ಅಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಂಜಾಬ್ ಪರ ಶಮಿ ಹಾಗೂ ರಿಚರ್ಡ್​ಸನ್ ತಲಾ 2 ಓವರ್ ಬಾಲ್ ಮಾಡಿದ್ದಾರೆ. ಅರ್ಶ್​ದೀಪ್ ಮತ್ತು ಮೆರೆಡಿತ್ ತಲಾ 1 ಓವರ್ ಬೌಲಿಂಗ್ ಮಾಡಿದ್ದಾರೆ. ರನ್ ಕಂಟ್ರೋಲ್ ಆಗುತ್ತಿದ್ದರೂ ವಿಕೆಟ್ ಕಬಳಿಸುವತ್ತ ಪಂಜಾಬ್ ಗಮನಹರಿಸಬೇಕಿದೆ.

 • 16 Apr 2021 21:40 PM (IST)

  ಚೆನ್ನೈ ಸೂಪರ್ ಕಿಂಗ್ಸ್ 24/1 (5 ಓವರ್)

  img

  ಚೆನ್ನೈ ಸೂಪರ್ ಕಿಂಗ್ಸ್ 5 ಓವರ್ ಕೊನೆಯಲ್ಲಿ 24 ರನ್ ಪೇರಿಸಿ 1 ವಿಕೆಟ್ ಕಳೆದುಕೊಂಡಿದೆ. ಅರ್ಶ್​ದೀಪ್ ಎಸೆತವನ್ನು ಸಿಕ್ಸರ್​ಗೆ ಎತ್ತಿದ ಋತುರಾಜ್ ಗಾಯಕ್ವಾಡ್ 5 (16) ದೀಪಕ್ ಹೂಡಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಚೆನ್ನೈ ಜಾಗರೂಕತೆಯ, ನಿಧಾನಗತಿಯ ಆಟವನ್ನು ತೋರುತ್ತಿತ್ತು. ಈ ನಡುವೆ ತಂಡದ ಮೊದಲ ವಿಕೆಟ್ ಪತನವಾಗಿದೆ. ಚೆನ್ನೈ ಗೆಲ್ಲಲು 84 ಬಾಲ್​ಗೆ 90 ರನ್ ಬೇಕಿದೆ.

 • 16 Apr 2021 21:35 PM (IST)

  ಚೆನ್ನೈ ಸೂಪರ್ ಕಿಂಗ್ಸ್ 22/0 (4 ಓವರ್)

  ಚೆನ್ನೈ ಸೂಪರ್ ಕಿಂಗ್ಸ್ 4 ಓವರ್​ಗಳ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 22 ರನ್ ಪೇರಿಸಿದ್ದಾರೆ. ಪಂಜಾಬ್ ಬೌಲರ್​ಗಳು ಚೆನ್ನೈ ದಾಂಡಿಗರ ವಿಕೆಟ್ ಕೀಳಲು ಪ್ರಯತ್ನಿಸುತ್ತಿದ್ದಾರೆ. ಚೆನ್ನೈ ಪರ ಡು ಪ್ಲೆಸಿಸ್ 13 ಬಾಲ್​ಗೆ 1 ಸಿಕ್ಸ್ ಸಹಿತ 13 ರನ್ ದಾಖಲಿಸಿದ್ದಾರೆ. ಋತುರಾಜ್ ಗಾಯಕ್ವಾಡ್ 11 ಬಾಲ್​ಗೆ 4 ರನ್ ಕೂಡಿಸಿದ್ದಾರೆ.

 • 16 Apr 2021 21:27 PM (IST)

  ಚೆನ್ನೈ ಸೂಪರ್ ಕಿಂಗ್ಸ್ 4/0 (2 ಓವರ್)

  ಮೊದಲ ಎರಡು ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮೊತ್ತ ವಿಕೆಟ್ ನಷ್ಟವಿಲ್ಲದೆ 4 ರನ್ ಕಲೆಹಾಕಿದೆ. ತಂಡದ ಪರ ಡು ಪ್ಲೆಸಿಸ್ ಹಾಗೂ ಗಾಯಕ್ವಾಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 16 Apr 2021 21:02 PM (IST)

  ಪಂಜಾಬ್ ಕಿಂಗ್ಸ್ 106/8 (20 ಓವರ್)

  ನಿಗದಿತ 20 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ ಕಳೆದುಕೊಂಡು 106 ರನ್ ದಾಖಲಿಸಿದೆ. ಚೆನ್ನೈ ಸೂಪರ್ ಕಿಂಗ್ಸ್​ಗೆ ಗೆಲ್ಲಲು 107 ರನ್ ಟಾರ್ಗೆಟ್ ನೀಡಿದೆ.

 • 16 Apr 2021 20:56 PM (IST)

  ಶಾರುಖ್ ಖಾನ್ ಔಟ್

  img

  ಅರ್ಧಶತಕ್ದ ಅಂಚಿನಲ್ಲಿದ್ದ ಶಾರುಖ್ ಖಾನ್ 36 ಬಾಲ್​ಗೆ 47 ರನ್ ಬಾರಿಸಿ ನಿರ್ಗಮಿಸಿದ್ದಾರೆ. ಪಂಜಾಬ್ ಪರ ಶಾರುಖ್ ಒಬ್ಬರೇ ಕೊಂಚ ಜವಾಬ್ದಾರಿಯುತ ಆಟ ಆಡಿದ್ದರು. ಉಳಿದ ದಾಂಡಿಗರ ವೈಫಲ್ಯವನ್ನು ಮೀರಿ ತಂಡ ಉತ್ತಮ ಮೊತ್ತ ಕಲೆಹಾಕಲು ಸಹಕರಿಸಿದ್ದರು. ಈಗ ಶಮಿ ಹಾಗೂ ಮೆರೆಡಿತ್ ಕ್ರೀಸ್​ನಲ್ಲಿದ್ದಾರೆ.

 • 16 Apr 2021 20:52 PM (IST)

  ಪಂಜಾಬ್ ಕಿಂಗ್ಸ್ 100/7 (19 ಓವರ್)

  19 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 7 ವಿಕೆಟ್ ಕಳೆದುಕೊಂಡು 100 ರನ್ ದಾಖಲಿಸಿದೆ. ಆರಂಭಿಕ ಆಘಾತ ಎದುರಿಸಿ, ಬ್ಯಾಟಿಂಗ್ ವಿಭಾಗ ವೈಫಲ್ಯ ಎದುರಿಸಿದರೂ 100 ರನ್ ಗಡಿ ತಲುಪಲು ತಂಡ ಯಶಸ್ವಿಯಾಗಿದೆ.

 • 16 Apr 2021 20:48 PM (IST)

  ಪಂಜಾಬ್ ಕಿಂಗ್ಸ್ 96/7 (18 ಓವರ್)

  ಪಂಜಾಬ್ ಕಿಂಗ್ಸ್ ತಂಡ 18 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 96 ರನ್ ಕಲೆಹಾಕಿದೆ. ಶಾರುಖ್ ಖಾನ್ 34 ಬಾಲ್​ಗೆ 46 ಬಾರಿಸಿ ಜವಾಬ್ದಾರಿಯುತ ಪ್ರದರ್ಶನ ನೀಡುತ್ತಿದ್ದಾರೆ.

 • 16 Apr 2021 20:44 PM (IST)

  ಮುರುಗನ್ ಅಶ್ವಿನ್ ಔಟ್

  img

  ಪಂಜಾಬ್ ಕಿಂಗ್ಸ್ ಆಟಗಾರ ಮುರುಗನ್ ಅಶ್ವಿನ್ 14 ಬಾಲ್​ಗೆ 6 ರನ್ ನೀಡಿ ಬ್ರಾವೋಗೆ ವಿಕೆಟ್ ಒಪ್ಪಿಸಿದ್ದಾರೆ. ಸರಿಯಾದ ನಿರ್ಧಾರವಿಲ್ಲದೆ, ಚೆಂಡನ್ನು ಮೇಲಕ್ಕೆ ಬಾರಿಸಿದ ಅಶ್ವಿನ್ ಡುಪ್ಲೆಸಿಸ್ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಪಂಜಾಬ್ ಕಿಂಗ್ಸ್ ಮೊತ್ತ 17 ಓವರ್​ಗೆ 7 ವಿಕೆಟ್ ಕಳೆದುಕೊಂಡು 87 ರನ್ ಆಗಿದೆ. ಶಾರುಖ್ ಖಾನ್ ಹಾಗೂ ಮೊಹಮದ್ ಶಮಿ ಕ್ರೀಸ್​ನಲ್ಲಿದ್ದಾರೆ.

 • 16 Apr 2021 20:36 PM (IST)

  ಪಂಜಾಬ್ ಕಿಂಗ್ಸ್ 81/6 (16 ಓವರ್)

  16 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 6 ವಿಕೆಟ್ ಕಳೆದುಕೊಂಡು 81 ರನ್ ಪೇರಿಸಿದೆ. ಪಂಜಾಬ್ ಪರ ಶಾರುಖ್ ಖಾನ್ ಉತ್ತಮ ಆಟ ಆಡುತ್ತಿದ್ದಾರೆ. ಅವರು 26 ಬಾಲ್​ಗೆ 34 ರನ್ ಕಲೆಹಾಕಿ ಕ್ರೀಸ್​ನಲ್ಲಿದ್ದಾರೆ.

 • 16 Apr 2021 20:30 PM (IST)

  ಶಾರುಖ್ ಖಾನ್ ಸಿಕ್ಸರ್

  img

  ಪಂಜಾಬ್ ಕಿಂಗ್ಸ್ ಪರ ಶಾರುಖ್ ಖಾನ್, ಮೊಯೀನ್ ಅಲಿ ಬಾಲ್​ಗೆ ಸಿಕ್ಸರ್ ಸಿಡಿಸಿದ್ದಾರೆ. ಪಂಜಾಬ್ ಕಿಂಗ್ಸ್ 14.2 ಓವರ್​ಗೆ 71 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ.

 • 16 Apr 2021 20:27 PM (IST)

  ಪಂಜಾಬ್ ಕಿಂಗ್ಸ್ 61/6 (13 ಓವರ್)

  13 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 6 ವಿಕೆಟ್ ಕಳೆದುಕೊಂಡು 61 ರನ್ ದಾಖಲಿಸಿದೆ. ಶಾರುಖ್ ಖಾನ್ 19 ಬಾಲ್​ಗೆ 18 ರನ್ ನೀಡಿ, ಆಟ ಮುಂದುವರಿಸಿದ್ದಾರೆ.

 • 16 Apr 2021 20:26 PM (IST)

  ಪಂಜಾಬ್ ಕಿಂಗ್ಸ್ 57/6- ರಿಚರ್ಡ್​ಸನ್ ಬೌಲ್ಡ್

  img

  22 ಬಾಲ್​ಗೆ 15 ರನ್ ಗಳಿಸಿ ಆಡುತ್ತಿದ್ದ ಜೈ ರಿಚರ್ಡ್​ಸನ್ ಮೊಯೀನ್ ಅಲಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಪಂಜಾಬ್ ತಂಡದ ಮೊತ್ತ, 12.2 ಓವರ್​ಗೆ 57/6 ಆಗಿದೆ. ಶಾರುಖ್ ಖಾನ್ ಜೊತೆ ಮುರುಗನ್ ಅಶ್ವಿನ್ ಬ್ಯಾಟಿಂಗ್​ನಲ್ಲಿ ಇದ್ದಾರೆ.

 • 16 Apr 2021 20:19 PM (IST)

  ಪಂಜಾಬ್ ಕಿಂಗ್ಸ್ 48/5 (10 ಓವರ್)

  ಪಂಜಾಬ್ ಕಿಂಗ್ಸ್ ತಂಡ 10 ಓವರ್​ಗೆ 5 ವಿಕೆಟ್ ಕಳೆದುಕೊಂಡು 48 ರನ್ ಕಲೆಹಾಕಿದೆ. ಚೆನ್ನೈ ಪರ ದೀಪಕ್ ಚಹರ್ 4 ಓವರ್ ಪೂರೈಸಿದ್ದಾರೆ. ಕುರ್ರನ್, ಠಾಕುರ್ ಹಾಗೂ ಜಡೇಜಾ ತಲಾ 2 ಓವರ್ ಬೌಲಿಂಗ್ ಮಾಡಿದ್ದಾರೆ.

 • 16 Apr 2021 20:16 PM (IST)

  ಪಂಜಾಬ್ ಕಿಂಗ್ಸ್ 45/5 (9 ಓವರ್)

  ಆರಂಭಿಕ ಆಘಾತ ಎದುರಿಸಿದ ಪಂಜಾಬ್ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ಕುಸಿದಿದೆ. 9 ಓವರ್​ಗಳ ಅಂತ್ಯಕ್ಕೆ ಪಂಜಾಬ್ ತಂಡ 5 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿದೆ. ಪಂಜಾಬ್ ಪರ ಶಾರುಖ್ ಖಾನ್ 10 ಬಾಲ್​ಗೆ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 12 ರನ್ ಗಳಿಸಿದ್ದಾರೆ. ಜೈ ರಿಚರ್ಡ್​ಸನ್ 8 ಬಾಲ್​ಗೆ 1 ಬೌಂಡರಿ ಸಹಿತ 7 ರನ್ ನೀಡಿದ್ದಾರೆ.

 • 16 Apr 2021 20:12 PM (IST)

  ಪಂಜಾಬ್ ಕಿಂಗ್ಸ್ 34/5 (8 ಓವರ್)

  ಪಂಜಾಬ್ ಕಿಂಗ್ಸ್ ತಂಡ 8 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 34 ರನ್ ಕಲೆಹಾಕಿದೆ. ಪಂಜಾಬ್ ಪರ ರಿಚರ್ಡ್​ಸನ್ ಹಾಗೂ ಶಾರುಖ್ ಖಾನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಚಹರ್ ಭರ್ಜರಿ 4 ವಿಕೆಟ್ ಕಳೆದುಕೊಂಡು ಮಿಂಚಿದ್ದಾರೆ.

 • 16 Apr 2021 20:05 PM (IST)

  ಚಹರ್​ಗೆ ಮತ್ತೊಂದು ವಿಕೆಟ್

  img

  ದೀಪಕ್ ಹೂಡಾ 15 ಬಾಲ್​ಗೆ 10 ರನ್ ಗಳಿಸಿ ನಿರ್ಗಮಿಸಿದ್ದಾರೆ. ಚಹರ್​ ಬಾಲ್​ನ್ನು ಡು ಪ್ಲೆಸಿಸ್ ಕ್ಯಾಚ್ ಹಿಡಿದಿದ್ದಾರೆ. ತಂಡದ ಮೊತ್ತ 26/5 ಆಗಿದೆ.

 • 16 Apr 2021 20:02 PM (IST)

  ಪಂಜಾಬ್ ಕಿಂಗ್ಸ್ 26/4 (6 ಓವರ್)

  ಪಂಜಾಬ್ ಕಿಂಗ್ಸ್ 6 ಓವರ್​ಗಳ ಅಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸುಸ್ತಾಗಿದೆ. ಪ್ಲೇ ಆಫ್ ಅಂತ್ಯಕ್ಕೆ ತಂಡ ಕೇಔಲ 26 ರನ್ ದಾಖಲಿಸಿದೆ. ದೀಪಕ್ ಹೂಡಾ ಹಾಗೂ ಶಾರುಖ್ ಖಾನ್ ಬ್ಯಾಟ್ ಬೀಸುತ್ತಿದ್ದಾರೆ.

 • 16 Apr 2021 19:57 PM (IST)

  ಸೊನ್ನೆ ಸುತ್ತಿದ ಪೂರನ್

  img

  ಚಹರ್​ ದಾಳಿಗೆ ಮತ್ತೊಂದು ವಿಕೆಟ್ ಬಿದ್ದಿದೆ. ನಿಕೊಲಸ್ ಪೂರನ್ 2 ಬಾಲ್​ಗೆ ರನ್ ಗಳಿಸದೇ ಔಟ್ ಆಗಿದ್ದಾರೆ. ಠಾಕುರ್ ಕ್ಯಾಚ್ ಪಡೆದಿದ್ದಾರೆ. ದೀಪಕ್ ಹೂಡಾ ಜೊತೆಗೆ ಶಾರುಖ್ ಖಾನ್ ಕ್ರೀಸ್​ನಲ್ಲಿದ್ದಾರೆ.

 • 16 Apr 2021 19:54 PM (IST)

  ಕ್ರಿಸ್ ಗೈಲ್ ಔಟ್!

  img

  ಕ್ರಿಸ್ ಗೈಲ್ 10 ಬಾಲ್​ಗೆ 10 ರನ್ ಗಳಿಸಿ ಚಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಗೈಲ್ ಹೊಡೆತವನ್ನು ಜಡೇಜಾ ಕ್ಯಾಚ್ ಹಿಡಿದಿದ್ದಾರೆ. ತಂಡ ಮೊತ್ತ 19 ರನ್​ ಆಗಿದ್ದು, ಅಷ್ಟರಲ್ಲೇ 3 ಮುಖ್ಯ ವಿಕೆಟ್ ಕಳೆದುಕೊಂಡು ಸೊರಗಿದೆ.

 • 16 Apr 2021 19:52 PM (IST)

  ಪಂಜಾಬ್ ಕಿಂಗ್ಸ್ 18/2 (4 ಓವರ್)

  ಪಂಜಾಬ್ ಕಿಂಗ್ಸ್ ತಂಡ 4 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 18 ರನ್ ದಾಖಲಿಸಿದೆ. ದೀಪಕ್ ಹೂಡಾ ಹಾಗೂ ಕ್ರಿಸ್ ಗೈಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 16 Apr 2021 19:49 PM (IST)

  ಕೆ.ಎಲ್. ರಾಹುಲ್ ರನೌಟ್

  img

  ಅಗರ್​ವಾಲ್ ಬೆನ್ನಲ್ಲೇ ಕೆ.ಎಲ್. ರಾಹುಲ್ ಆತುರದ ಓಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ದಾರೆ. ಜಡೇಜಾ ಎಸೆದ ಚೆಂಡು ನೇರವಾಗಿ ವಿಕೆಟ್ ಮೇಲೆ ಬಿದ್ದಿದೆ. ರಾಹುಲ್ 7 ಬಾಲ್​ಗೆ 5 ರನ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ತಂಡ 3 ಓವರ್​ಗೆ 17 ರನ್ ಕಲೆಹಾಕಿ 2 ವಿಕೆಟ್ ಕಳೆದುಕೊಂಡಿದೆ.

 • 16 Apr 2021 19:44 PM (IST)

  ಚಹರ್ ಬಾಲ್​ಗೆ 2 ಫೋರ್

  img

  ಯುನಿವರ್ಸಲ್ ಬಾಸ್ ಕ್ರಿಸ್ ಗೈಲ್ ಚಹರ್ ಎಸೆದ 1 ಮತ್ತು 2ನೇ ಬಾಲ್​ನ್ನು ಬೌಂಡರಿಗೆ ಅಟ್ಟಿದ್ದಾರೆ. 2.4 ಓವರ್​​ಗೆ ಪಂಜಾಬ್ 15 ರನ್ ಗಳಿಸಿದೆ. ವಿಕೆಟ್ ಕಳೆದುಕೊಂಡ ಪಂಜಾಬ್​ಗೆ ಫೋರ್ ಚೇತರಿಕೆ ನೀಡಿದೆ.

 • 16 Apr 2021 19:42 PM (IST)

  ಪಂಜಾಬ್ ಕಿಂಗ್ಸ್ 7/1 (2 ಓವರ್)

  2 ಓವರ್​ನ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 7 ರನ್ ಗಳಿಸಿದೆ. ಸ್ಯಾಮ್ ಕುರ್ರನ್ ಬೌಲಿಂಗ್ ಮಾಡಿದ 2ನೇ ಓವರ್​ನ 5ನೇ ಎಸೆತದಲ್ಲಿ ಕೆ.ಎಲ್. ರಾಹುಲ್ ಫೋರ್ ಬಾರಿಸಿದ್ದಾರೆ. ರಾಹುಲ್ ಜೊತೆಗೆ ಕ್ರಿಸ್ ಗೈಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 16 Apr 2021 19:36 PM (IST)

  ಮಯಾಂಕ್ ಅಗರ್​ವಾಲ್ ಔಟ್

  img

  ಪಂಜಾಬ್ ಕಿಂಗ್ಸ್ ಮೊದಲನೇ ಓವರ್​ನ 4ನೇ ಬಾಲ್​ನಲ್ಲೇ ಮಯಾಂಕ್ ಅಗರ್​ವಾಲ್ ವಿಕೆಟ್ ಪಡೆದುಕೊಂಡಿದೆ. ಮಯಾಂಕ್ 2 ಬಾಲ್​ಗೆ 0 ಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಓವರ್ ಬೌಲಿಂಗ್ ಮಾಡಿದ, ದೀಪಕ್ ಚಹರ್​ಗೆ ಮೊದಲನೇ ವಿಕೆಟ್ ಬಿದ್ದಿದೆ. ಪಂಜಾಬ್ ಸ್ಕೋರ್ 1/1 ಆಗಿದೆ.

 • 16 Apr 2021 19:33 PM (IST)

  ಚೆನ್ನೈ- ಪಂಜಾಬ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

  ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಶಾರುಖ್ ಖಾನ್, ಜೈ ರಿಚರ್ಡ್ಸನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್

  ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಫಫ್ ಡು ಪ್ಲೆಸಿಸ್, ಸುರೇಶ್ ರೈನಾ, ಮೊಯೀನ್ ಅಲಿ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ/ ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್

  ಎರಡೂ ತಂಡಗಳು ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.

 • 16 Apr 2021 19:28 PM (IST)

  ಚೆನ್ನೈ ಪರ ಧೋನಿ 200ನೇ ಪಂದ್ಯ

  ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ ಇಂದು 200ನೇ ಪಂದ್ಯವನ್ನು ಆಡುತ್ತಿದ್ದಾರೆ.

 • 16 Apr 2021 19:06 PM (IST)

  ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್

  ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

 • 16 Apr 2021 19:00 PM (IST)

  ಮಾಸ್ಕ್ ಧರಿಸಿ, ಮ್ಯಾಚ್ ಸಂಭ್ರಮಿಸಿ!

  ಪಂದ್ಯ ಆನಂದಿಸಿ ಮಾಸ್ಕ್ ಧರಿಸಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಜನರನ್ನು ಕೇಳಿಕೊಂಡಿದೆ. ವಿಸಲ್ ಪೋಡು, ಜೊತೆಗೆ ಮುಖ್ಯವಾಗಿ ಮಾಸ್ಕ್ ಪೋಡು ಎಂದು ಸಿಎಸ್​ಕೆ ಟ್ವೀಟ್ ಮಾಡಿದೆ.

 • 16 Apr 2021 18:57 PM (IST)

  ಪಂಜಾಬ್ ದಾಂಡಿಗರು ಅಬ್ಬರಿಸಲು ತಯಾರು

  ಕಳೆದ ಪಂದ್ಯದಲ್ಲಿ ಭರ್ಜರಿ 221 ರನ್ ಬಾರಿಸಿ ಗೆದ್ದ ಪಂಜಾಬ್ ತಂಡ ಇಂದು ಮತ್ತೆ ಚೆನ್ನೈ ವಿರುದ್ಧ ಅಬ್ಬರಿಸಲು ತಯಾರಾಗಿದ್ದಾರೆ. ವಾಂಖೆಡೆ ಕ್ರೀಡಾಂಗಣ ಮುಂಬೈ ಇಲ್ಲಿಗೆ ಆಗಮಿಸಿದ್ದಾರೆ.

 • 16 Apr 2021 18:54 PM (IST)

  ಚೆನ್ನೈ- ಪಂಜಾಬ್ ಬಲಾಬಲ

  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಈ ವರೆಗಿನ ಪಂದ್ಯಗಳ ಪೈಕಿ ಸಿಎಸ್​ಕೆ 14 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ ಕಿಂಗ್ಸ್ ತಂಡ 9 ಪಂದ್ಯಗಳನ್ನು ಜಯಶಾಲಿಯಾಗಿದೆ.