RR vs PBKS, IPL 2021 Match 4 Result: ರೋಚಕ ಪಂದ್ಯದಲ್ಲಿ ಗೆದ್ದ ಪಂಜಾಬ್ ಕಿಂಗ್ಸ್; ಸಂಜು ಸ್ಯಾಮ್ಸನ್ ಶತಕ ವ್ಯರ್ಥ!

RR vs PBKS Scorecard in Kannada: ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಾಟದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿವೆ.

 • TV9 Web Team
 • Published On - 23:45 PM, 12 Apr 2021
RR vs PBKS, IPL 2021 Match 4 Result: ರೋಚಕ ಪಂದ್ಯದಲ್ಲಿ ಗೆದ್ದ ಪಂಜಾಬ್ ಕಿಂಗ್ಸ್; ಸಂಜು ಸ್ಯಾಮ್ಸನ್ ಶತಕ ವ್ಯರ್ಥ!
ಸಂಜು ಸ್ಯಾಮ್ಸನ್

ಮುಂಬೈ: ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯಾಟದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲುವು 4 ರನ್​ಗಳ ಗೆಲುವು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ಮಾಡಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿ, ನಿರಾಸೆ ಮೂಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಸ್ಫೋಟಕ ಆಟವಾಡಿ 221 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 222 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಹಾಗೂ ವೇಗದ ಆಟವನ್ನು ಆಡಿದ್ದಾರೆ. 50 ಬಾಲ್​ಗೆ 91 ರನ್ ಕಲೆಹಾಕಿದ್ದಾರೆ. ಹೂಡಾ ಸಿಕ್ಸರ್​ಗಳ ಸುರಿಮಳೆಗೈದು 64 ರನ್ ನೀಡಿದರೆ, ಗೈಲ್ ಕೂಡ 40 ರನ್​ಗಳ ಉತ್ತಮ ಮೊತ್ತ ಕೊಟ್ಟಿದ್ದಾರೆ. ರಾಜಸ್ಥಾನ್ ಪರ ಯಾವ ಬೌಲರ್​ಗಳೂ ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ರಾಹುಲ್ ಸಿಕ್ಸರ್​ನ್ನು ಸ್ವಲ್ಪದರಲ್ಲೇ ತಪ್ಪಿಸಿ ತೆವಾಟಿಯಾ ಹಿಡಿದ ಕ್ಯಾಚ್ ರಾಜಸ್ಥಾನ್ ಪರ ಕಂಡುಬಂದ ಅದ್ಭುತ ಪ್ರದರ್ಶನವಾಗಿತ್ತಷ್ಠೆ.

ಐಪಿಎಲ್ 2021ನೇ ಆವೃತ್ತಿಯ 4ನೇ ಪಂದ್ಯಾಟವು ಇಂದು (ಏಪ್ರಿಲ್ 12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ ಇಲೆವೆನ್ ಪಂಜಾಬ್) ತಂಡದ ವಿರುದ್ಧ ಆಟವಾಡಿತು. ಕಳೆದ ಪಂದ್ಯಾಟಗಳಲ್ಲೂ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ದುಕೊಂಡಿದ್ದವು. ಚೇಸಿಂಗ್​ನಲ್ಲಿ ಯಶಸ್ವಿ ಕಂಡಿದ್ದವು. ಅದಲ್ಲದೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಚೇಸಿಂಗ್​ಗೆ ಉತ್ತಮ ಪಿಚ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿತ್ತು.

LIVE Cricket Score & Updates

The liveblog has ended.
 • 12 Apr 2021 23:45 PM (IST)

  ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

  ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ 4 ರನ್​ಗಳ ರೋಚಕ ಗೆಲುವು ದಾಖಲಿಸಿದೆ. 222 ರನ್ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 217 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.

 • 12 Apr 2021 23:40 PM (IST)

  ಸಂಜು ಸ್ಯಾಮ್ಸನ್ ಔಟ್!

  img

  ಸಂಜು ಸ್ಯಾಮ್ಸನ್ ಕೊನೆಯ ಎಸೆತದಲ್ಲಿ ವಿಕೆಟ್ ಬಿಟ್ಟುಕೊಟ್ಟಿದ್ದಾರೆ. ರೋಚಕ ಪಂದ್ಯದಲ್ಲಿ ಪಂಜಾಬ್ ಗೆಲುವು ಕಂಡಿದೆ.

 • 12 Apr 2021 23:39 PM (IST)

  1 ಬಾಲ್​ಗೆ 5 ರನ್!

  ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 1 ಬಾಲ್​ಗೆ 5 ರನ್ ಬೇಕು. ಸಂಜು ಸ್ಯಾಮ್ಸನ್ ಕ್ರೀಸ್​ನಲ್ಲಿ ಇದ್ದಾರೆ!!

 • 12 Apr 2021 23:34 PM (IST)

  ರಾಜಸ್ಥಾನ್ ಗೆಲ್ಲಲು 6 ಬಾಲ್​ಗೆ 12 ರನ್!

  ರಾಜಸ್ಥಾನ್ ರಾಯಲ್ಸ್ ಗೆಲ್ಲಲು 6 ಬಾಲ್​ಗೆ 12 ರನ್ ಬೇಕಾಗಿದೆ. ತಂಡದ ಪರ ನಾಯಕ ಸಂಜು ಸ್ಯಾಮ್ಸನ್ ಹಾಗೂ ಕ್ರಿಸ್ ಮಾರಿಸ್ ಬ್ಯಾಟಿಂಗ್ ಮಾಡುತ್ತಿದ್ಧಾರೆ. ಕೊನೆಯ ಓವರ್​ನಲ್ಲಿ ಗೆಲುವು ಯಾರ ಪಾಲು ಎಂದು ಕುತೂಹಲ ಹೆಚ್ಚಿದೆ. ಆರ್​ಆರ್ ತಂಡ 19 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 209 ರನ್ ದಾಖಲಿಸಿದೆ.

 • 12 Apr 2021 23:29 PM (IST)

  ತೆವಾಟಿಯಾ ಔಟ್!

  img

  ರಾಜಸ್ಥಾನ್ ರಾಯಲ್ಸ್​ಗೆ ಮತ್ತೊಂದು ಆಘಾತ ಎದುರಾಗಿದೆ. ರಾಹುಲ್ ತೆವಾಟಿಯಾ ಮೆರೆಡಿತ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕ್ರಿಸ್ ಮಾರಿಸ್ ಈಗ ಕ್ರೀಸ್​ಗೆ ಇಳಿದಿದ್ದಾರೆ.

 • 12 Apr 2021 23:27 PM (IST)

  ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 12 ಬಾಲ್​ಗೆ 21 ರನ್

  ರಾಜಸ್ಥಾನ್ ರಾಯಲ್ಸ್ ಕೊನೆಯ 2 ಓವರ್ ಬಾಕಿ ಇರುವಂತೆ 21 ರನ್ ಗಳಿಸಬೇಕಾಗಿದೆ. ಸಂಜು ಸ್ಯಾಮ್ಸನ್ ಹಾಗೂ ತೆವಾಟಿಯಾ ಕ್ರೀಸ್​ನಲ್ಲಿ ಇದ್ದಾರೆ. 18 ಓವರ್ ಅಂತ್ಯಕ್ಕೆ ತಂಡ 5 ವಿಕೆಟ್ ಕಳೆದುಕೊಂಡು 201 ರನ್ ಕೂಡಿಸಿದೆ.

 • 12 Apr 2021 23:25 PM (IST)

  ಸಂಜು ಸ್ಯಾಮ್ಸನ್ ಶತಕ!

  ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ ಶತಕ ಸಿಡಿಸಿದ್ದಾರೆ. ಇದು ಅವರ 3ನೇ ಐಪಿಎಲ್ ಸೆಂಚುರಿ ಆಗಿದೆ. ಸಂಜು ಸ್ಯಾಮ್ಸನ್ 54 ಬಾಲ್​ಗೆ 102 ರನ್ ಬಾರಿಸಿದ್ದಾರೆ. ಇದರಲ್ಲಿ 5 ಸಿಕ್ಸರ್, 12 ಬೌಂಡರಿ ಸೇರಿದೆ. ತಂಡಕ್ಕೆ ಗೆಲ್ಲಲು ಇನ್ನು 15 ಬಾಲ್​ಗೆ 26 ರನ್ ಬೇಕಾಗಿದೆ. ಇದು ಸೀಸನ್​ನ ಮೊದಲ ಶತವಾಗಿದೆ.

 • 12 Apr 2021 23:22 PM (IST)

  ರಾಜಸ್ಥಾನ್ ಗೆಲ್ಲಲು 18 ಬಾಲ್​ಗೆ 40 ರನ್ ಬೇಕು

  ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಾಟ ರೋಚಕ ಹಂತದತ್ತ ಸಾಗುತ್ತಿದೆ. ತಂಡಕ್ಕೆ ಗೆಲ್ಲಲು 18 ಬಾಲ್​ಗೆ 40 ರನ್ ಬೇಕಾಗಿದೆ.

 • 12 Apr 2021 23:15 PM (IST)

  ಪರಾಗ್ ಔಟ್

  img

  ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ಗೆ ಉತ್ತಮ ಜೊತೆಯಾಟ ನೀಡಿ, ಸ್ಫೋಟಕ ಆಟದಿಂದ ರನ್ ವೇಗ ಹೆಚ್ಚಿಸಿದ್ದ ರಿಯಾನ್ ಪರಾಗ್, ಮೊಹಮದ್ ಶಮಿಗೆ ವಿಕೆಟ್ ನೀಡಿ ನಿರ್ಗಮಿಸಿದ್ದಾರೆ. ಪರಾಗ್, 11 ಬಾಲ್​ಗೆ 25 ರನ್ ನೀಡಿ ಔಟ್ ಆಗಿದ್ದಾರೆ.

 • 12 Apr 2021 23:13 PM (IST)

  ರಾಜಸ್ಥಾನ್ ಗೆಲ್ಲಲು 24 ಬಾಲ್​ಗೆ 48 ರನ್ ಬೇಕು

  ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿಗೆ 24 ಬಾಲ್​ಗೆ 48 ರನ್ ಬೇಕಾಗಿದೆ. 16 ಓವರ್ ಅಂತ್ಯಕ್ಕೆ 174 ರನ್ ಗಳಿಸಿ, 4 ವಿಕೆಟ್ ಕಳೆದುಕೊಂಡಿರುವ ರಾಯಲ್ಸ್ ಗೆಲುವಿನ ಉತ್ಸಾಹದಲ್ಲಿದೆ. ಪಂಜಾಬ್ ಗೆಲ್ಲಲು ಸ್ಯಾಮ್ಸನ್ ವಿಕೆಟ್ ಅವಶ್ಯವಾಗಿದೆ.

 • 12 Apr 2021 23:11 PM (IST)

  ಶತಕದತ್ತ ಸಂಜು ಸ್ಯಾಮ್ಸನ್; ಪರಾಗ್ ಸಿಕ್ಸರ್ ಆಟ

  ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಅದ್ಭುತ ಆಟ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದೆ. 222 ರನ್​ಗಳ ಬೃಹತ್ ಮೊತ್ತವನ್ನು ಕೂಡ ರಾಯಲ್ಸ್ ಬಗ್ಗುಬಡಿಯುವ ಸೂಚನೆ ನೀಡುತ್ತಿದ್ದಾರೆ. ಪರಾಗ್ 9 ಬಾಲ್​ಗೆ 25 ರನ್ ಕಲೆಹಾಕಿದ್ದಾರೆ. 3 ಸಿಕ್ಸರ್, 1 ಬೌಂಡರಿ ಸಿಡಿಸಿದ್ದಾರೆ. ಮತ್ತೊಂದೆಡೆ ನಾಯಕ ಸಂಜು, 49 ಬಾಲ್​ಗೆ 83 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. ಅವರು 4 ಸಿಕ್ಸ್, 9 ಬೌಂಡರಿ ಬಾರಿಸಿದ್ದಾರೆ.

 • 12 Apr 2021 23:05 PM (IST)

  ಸಂಜು ಬೌಂಡರಿ- ಸಿಕ್ಸರ್

  img

  ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಆಟ ತಂಡಕ್ಕೆ ನೆರವಾಗುವ ನಿರೀಕ್ಷೆ ಇದೆ. ರಾಜಸ್ಥಾನ್ ರಾಯಲ್ಸ್ ಕೂಡ ಗೆಲ್ಲುವ ವಿಶ್ವಾಸ ಉಳಿಸಿಕೊಂಡಿದೆ. ತಂಡದ ಪರ ಸಂಜು ಬೌಂಡರಿ-ಸಿಕ್ಸರ್​ಗಳನ್ನು ಬಾರಿಸುತ್ತಿದ್ದಾರೆ. 3 ಸಿಕ್ಸರ್, 9 ಬೌಂಡರಿ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್​ಗೆ 30 ಬಾಲ್​ಗೆ 68 ರನ್ ಬೇಕಿದೆ.

 • 12 Apr 2021 23:03 PM (IST)

  ರಾಜಸ್ಥಾನ್ ರಾಯಲ್ಸ್ 141/4 (14 ಓವರ್)

  ರಾಜಸ್ಥಾನ್ ರಾಯಲ್ಸ್ ತಂಡ 14 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 141 ರನ್ ದಾಖಲಿಸಿದೆ. ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಬೌಂಡರಿ-ಸಿಕ್ಸರ್ ಸುರಿಮಳೆಗೈಯ್ಯುತ್ತಿದ್ದಾರೆ. ಪಂದ್ಯ ರೋಚಕ ಹಂತದತ್ತ ಸಾಗುತ್ತಿದೆ. ಸಂಜು ಸ್ಯಾಮ್ಸನ್ 44 ಬಾಲ್​ಗೆ 65 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 12 Apr 2021 22:58 PM (IST)

  ದುಬೆ ಔಟ್

  img

  ರಾಜಸ್ಥಾನ್ ಮತ್ತೊಬ್ಬ ದಾಂಡಿಗೆ ಶಿವಮ್ ದುಬೆ ಔಟ್ ಆಗಿದ್ದಾರೆ. ಅರ್ಶ್​ದೀಪ್ ಸಿಂಗ್​ಗೆ ದುಬೆ ವಿಕೆಟ್ ಒಪ್ಪಿಸಿದ್ದಾರೆ. 15 ಬಾಲ್​ಗೆ 23 ರನ್ ಗಳಿಸಿದ್ದ ಅವರು ಪೆವಿಲಿಯನ್​ನತ್ತ ಹೆಜ್ಜೆ ಹಾಕಿದ್ದಾರೆ. ಸಂಜು ಸ್ಯಾಮ್ಸನ್ ಆಟ ಮುಂದುವರಿದಿದೆ.

 • 12 Apr 2021 22:48 PM (IST)

  ರಾಜಸ್ಥಾನ್ ರಾಯಲ್ಸ್ 109/3 (11 ಓವರ್)

  ರಾಜಸ್ಥಾನ್ ರಾಯಲ್ಸ್ ತಂಡ 11 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ. ಅಂದರೆ, ಇನ್ನು 54 ಬಾಲ್​ಗೆ 113 ರನ್ ಬೇಕಾಗಿದೆ. ಈ ಮಧ್ಯೆ ಸಂಜು ಸ್ಯಾಮ್ಸನ್ ಅರ್ಧಶತಕ ಸಿಡಿಸಿದ್ದಾರೆ. ಅವರು 36 ಬಾಲ್​ಗೆ 55 ರನ್ ಗಳಿಸಿ, 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಕ್ರೀಸ್​ನಲ್ಲಿದ್ದಾರೆ.

 • 12 Apr 2021 22:45 PM (IST)

  ಸಂಜು ಸ್ಯಾಮ್ಸನ್ ನಾಟ್ ಔಟ್

  ಸಂಜು ಸ್ಯಾಮ್ಸನ್ 10.5ನೇ ಎಸೆತದಲ್ಲಿ ಎಲ್​ಬಿಡ್ಬ್ಲ್ಯೂ ಎಂದು ಘೋಷಿಸಲಾಯಿತು. ಬಳಿಕ, ಡಿಆರ್​ಎಸ್ ಮೂಲಕ ನಾಟೌಟ್ ಎಂದು ತಿಳಿದುಬಂತು. ನಾಯಕ ಸ್ಯಾಮ್ಸನ್ ರಾಯಲ್ಸ್ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದು, ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಹಾಗಾಗಿ, ಈ ವಿಕೆಟ್ ಮುಖ್ಯವಾಗಿತ್ತು.

 • 12 Apr 2021 22:40 PM (IST)

  ರಾಜಸ್ಥಾನ್ ರಾಯಲ್ಸ್ 95/3 (10 ಓವರ್)

  ರಾಜಸ್ಥಾನ್ ರಾಯಲ್ಸ್ ತಂಡ 10 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದ್ದಾರೆ. ವಿಕೆಟ್ ಪತನದ ಬೆನ್ನಲ್ಲೂ ಉತ್ತಮ ಮೊತ್ತ ದಾಖಲಿಸುವಲ್ಲಿ ಸಂಜು ಸ್ಯಾಮ್ಸನ್ ಹೋರಾಟ ನಡೆಸುತ್ತಿದ್ದಾರೆ. ನಾಯಕ ಸಂಜು 30 ಬಾಲ್​ಗೆ 41 ರನ್ ದಾಖಲಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾರೆ.

 • 12 Apr 2021 22:31 PM (IST)

  ರಾಜಸ್ಥಾನ್ ರಾಯಲ್ಸ್ 78/3 (8 ಓವರ್)

  ರಾಜಸ್ಥಾನ್ ರಾಯಲ್ಸ್ ತಂಡ 8 ಓವರ್​ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 78 ರನ್ ದಾಖಲಿಸಿದೆ. ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

 • 12 Apr 2021 22:27 PM (IST)

  ಬಟ್ಲರ್ ಔಟ್

  ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಆಘಾತ ಎದುರಾಗಿದೆ. ರಾಯಲ್ಸ್ ಪರ ದಾಂಡಿಗ ಬಟ್ಲರ್ ಜೈ ರಿಚರ್ಡ್​ಸನ್ ಎಸೆತಕ್ಕೆ ಬೋಲ್ಡ್ ಆಗಿದ್ದಾರೆ. 5 ಬೌಂಡರಿ ಸಹಿತ 13 ಬಾಲ್​ಗೆ 25 ರನ್ ಕಲೆಹಾಕಿದ್ದ ಬಟ್ಲರ್, ಸ್ಯಾಮ್ಸನ್​ಗೆ ಜೊತೆಯಾಗುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಸ್ಯಾಮ್ಸನ್​ಗೆ ದುಬೆ ಜೊತೆಯಾಗಿದ್ದಾರೆ.

 • 12 Apr 2021 22:17 PM (IST)

  ರಾಜಸ್ಥಾನ್ ರಾಯಲ್ಸ್ 59/2 (6 ಓವರ್)

  ರಾಜಸ್ಥಾನ್ ರಾಯಲ್ಸ್ 2 ವಿಕೆಟ್ ನಷ್ಟ ಅನುಭವಿಸಿ ಆರಂಭಿಕ ಆಘಾತ ಎದುರಿಸಿದ ಬಳಿಕವೂ ವೇಗದ ಆಟ ಆಡುತ್ತಿದೆ. ಗುರಿ ಬೆನ್ನತ್ತಲು ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಮೂಲಕ ತಂಡದ ಮೊತ್ತ 6 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 59 ಆಗಿದೆ.

 • 12 Apr 2021 22:10 PM (IST)

  ಸ್ಯಾಮ್ಸನ್ ಸಾಲು ಸಾಲು ಬೌಂಡರಿ!

  img

  ಮೆರೆಡಿತ್ ಬೌಲಿಂಗ್​ನ 4ನೇ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಕಪ್ತಾನ ಸಂಜು ಸ್ಯಾಮ್ಸನ್ ಬೆನ್ನುಬೆನ್ನಿಗೆ ಫೋರ್ ಬಾರಿಸಿದ್ದಾರೆ. ಮೊದಲ ನಾಲ್ಉ ಎಸೆತವನ್ನು ಬೌಂಡರಿಗೆ ಅಟ್ಟಿದ್ದಾರೆ. ಈ ಮೂಲಕ ತಂಡದ ಮೊತ್ತ ಈಗ 5 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 48 ಆಗಿದೆ.

 • 12 Apr 2021 22:02 PM (IST)

  2ನೇ ವಿಕೆಟ್ ಪತನ; ವೋಹ್ರಾ ಔಟ್

  img

  ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಆಘಾತ ಉಂಟಾಗಿದೆ. ಮತ್ತೋರ್ವ ಆರಂಭಿಕ ದಾಂಡಿಗ ಮನನ್ ವೋಹ್ರಾ 8 ಬಾಲ್ 12 ರನ್ ಗಳಿಸಿ ಔಟ್ ಆಗಿದ್ದಾರೆ. ಅರ್ಶ್​ದೀಪ್​ ಬಾಲ್​ನ್ನು ಅವರ ಕೈಗೇ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್​ಗೆ ಬಟ್ಲರ್ ಜೊತೆಯಾಗಿದ್ದಾರೆ.

 • 12 Apr 2021 22:00 PM (IST)

  ರಾಜಸ್ಥಾನ್ ರಾಯಲ್ಸ್ 25/1 (3 ಓವರ್)

  ರಾಜಸ್ಥಾನ್ ರಾಯಲ್ಸ್ ತಂಡ 3 ಓವರ್​ಗೆ 25 ರನ್​ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ನಾಯಕ ಸ್ಯಾಮ್ಸನ್ ಉತ್ತಮ ಆಟ ಆಡುತ್ತಿದ್ದಾರೆ.

 • 12 Apr 2021 21:59 PM (IST)

  ಶೂನ್ಯಕ್ಕೆ ಔಟಾದ ಸ್ಟೋಕ್ಸ್; ರಾಯಲ್ಸ್​ಗೆ ಆರಂಭಿಕ ಆಘಾತ

  222 ರನ್​ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಶಮಿ ಎಸೆದ ಬಾಲ್​ಗೆ ಬೆನ್ ಸ್ಟೋಕ್ಸ್ ಔಟ್ ಆಗಿದ್ದಾರೆ. ಈಗ ಮನನ್ ವೋಹ್ರಾಗೆ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಗಿದ್ದಾರೆ.

 • 12 Apr 2021 21:29 PM (IST)

  ಪಂಜಾಬ್ ಕಿಂಗ್ಸ್ 221/6 (20 ಓವರ್)

  ಭರ್ಜರಿ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್ 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್​ಗೆ 222 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ್ದಾರೆ. ರಾಉಲ್ ಪ್ರದರ್ಶನ ಮೊದಲ ಇನ್ನಿಂಗ್ಸ್​ನ್ನು ಸ್ಮರಣೀಯವಾಗಿಸಿದೆ.

 • 12 Apr 2021 21:26 PM (IST)

  ಶತಕವಂಚಿತ ರಾಹುಲ್; ಸೂಪರ್ ಕ್ಯಾಚ್​ಗೆ ಔಟ್

  img

  ಕೆ.ಎಲ್. ರಾಹುಲ್ ಸಕಾರಿಯಾ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೊರಟು ವಿಕೆಟ್ ಒಪ್ಪಿಸಿದ್ದಾರೆ. ಬೌಂಡರಿ ಬಳಿಯಲ್ಲಿ ಸಿಕ್ಸರ್ ತಡೆದ ರಾಹುಲ್ ತೆವಾಟಿಯಾ ರಾಹುಲ್​ರನ್ನು ಔಟ್ ಮಾಡಿದ್ದಾರೆ. ರಾಹುಲ್ 50 ಬಾಲ್​ಗೆ 91 ರನ್ ಗಳಿಸಿ ನಿರ್ಗಮಿಸಿದ್ದಾರೆ.

 • 12 Apr 2021 21:23 PM (IST)

  ಪಂಜಾಬ್ ಕಿಂಗ್ಸ್ 216/4 (19 ಓವರ್)

  ಪಂಜಾಬ್ ಕಿಂಗ್ಸ್ ತಂಡ 19 ಓವರ್​ಗಳ ಅಂತ್ಯಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು 216 ರನ್ ದಾಖಲಿಸಿದೆ. ಕೆ.ಎಲ್. ರಾಹುಲ್ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ.

 • 12 Apr 2021 21:16 PM (IST)

  ಶೂನ್ಯ ಸುತ್ತಿದ ಪೂರನ್

  img

  ದೀಪಕ್ ಹೂಡಾ ಬಳಿಕ ಕ್ರೀಸ್​ಗೆ ಇಳಿದ ಪೂರನ್ ಸೊನ್ನೆ ಸುತ್ತಿದ್ದಾರೆ. ಮಾರಿಸ್ ಎಸೆತಕ್ಕೆ ಸಕಾರಿಯಾಗೆ ಕ್ಯಾಚ್ ನೀಡಿ ಬಂದಂತೆ ಹಿಂತಿರುಗಿದ್ದಾರೆ. ಶಾರುಖ್ ಖಾನ್ ಈಗ ಕೆ.ಎಲ್. ರಾಹುಲ್​ಗೆ ಜೊತೆಯಾಗಿದ್ದಾರೆ.

 • 12 Apr 2021 21:15 PM (IST)

  200 ರನ್ ದಾಟಿದ ಪಂಜಾಬ್ ಕಿಂಗ್ಸ್

  ವಾಂಖೆಡೆ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ 200 ರನ್ ಗಡಿ ದಾಟಿದೆ. ಪಂಜಾಬ್ ತಂಡ 18 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿದೆ. ಈ ಮಧ್ಯೆ ಕೆ.ಎಲ್. ರಾಹುಲ್ 2000 ಐಪಿಎಲ್ ರನ್ ಪೂರೈಸಿದ್ದಾರೆ.

 • 12 Apr 2021 21:11 PM (IST)

  ಅಬ್ಬರಿಸಿ ಔಟಾದ ಹೂಡಾ

  img

  ಪಂಜಾಬ್ ಕಿಂಗ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಹೂಡಾ, ಕ್ರಿಸ್ ಮಾರಿಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. 28 ಬಾಲ್​ಗೆ 64 ಗಳಿಸಿ ಅವರು ನಿರ್ಗಮಿಸಿದ್ದಾರೆ. ಹೂಡಾ ಬಳಿಕ ಪೂರನ್ ಕ್ರೀಸ್​ಗೆ ಇಳಿದಿದ್ದಾರೆ.

 • 12 Apr 2021 21:06 PM (IST)

  ಫೋರ್ ಮೇಲೆ ಫೋರ್

  img

  ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಸಕಾರಿಯಾ ಓವರ್​ಗೆ ಹ್ಯಾಟ್ರಿಕ್ ಫೋರ್ ಬಾರಿಸಿದ್ದಾರೆ. 27 ಬಾಲ್​ಗೆ 64 ರನ್ ಕಲೆಹಾಕಿ ಕ್ರೀಸ್​ನಲ್ಲಿದ್ದಾರೆ. ಈ ಮೂಲಕ ತಂಡದ ಮೊತ್ತ 17 ಓವರ್​ಗೆ 187/2 ಆಗಿದೆ.

 • 12 Apr 2021 20:58 PM (IST)

  ದೀಪಕ್ ಹೂಡಾ 20 ಬಾಲ್​ಗೆ 50 ರನ್!

  ಸ್ಫೋಟಕ ಆಟವಾಡಿದ ದೀಪಕ್ ಹೂಡಾ 20 ಬಾಲ್​ಗೆ 50 ರನ್ ದಾಖಲಿಸಿದ್ದಾರೆ. 6 ಸಿಕ್ಸರ್, 1 ಬೌಂಡರಿ ಸಹಿತ ಟೀಂ ಬೃಹತ್ ಮೊತ್ತ ತಲುಪುವಲ್ಲಿ ಸಹಕಾರಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 16 ಓವರ್​ಗೆ 172 ರನ್ ಗಳಿಸಿದ್ದು, 2 ವಿಕೆಟ್ ಕಳೆದುಕೊಂಡಿದ್ದಾರೆ. ರಾಜಸ್ಥಾನ್ ಬೌಲರ್ಸ್​ ಪಂಜಾಬ್ ಆಟಕ್ಕೆ ಸುಸ್ತಾಗಿದ್ದಾರೆ.

 • 12 Apr 2021 20:53 PM (IST)

  ಪಂಜಾಬ್ ಕಿಂಗ್ಸ್ 161/2 (15 ಓವರ್)

  ಪಂಜಾಬ್ ಕಿಂಗ್ಸ್ ತಂಡ 15 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದ್ದಾರೆ. ರಾಹುಲ್ ಹಾಗೂ ಹೂಡಾ ಸ್ಫೋಟಕ ಆಟ ಆಡುತ್ತಿದ್ದಾರೆ. ಸಿಕ್ಸರ್​ಗಳ ಸುರಿಮಳೆಗೈಯುತ್ತಿದ್ದಾರೆ. ಹೂಡಾ ಅರ್ಧಶತಕದ ಅಂಚಿನಲ್ಲಿದ್ದರೆ, ರಾಹುಲ್ ಶತಕದ ನಿರೀಕ್ಷೆ ಇದೆ.

 • 12 Apr 2021 20:47 PM (IST)

  ಪಂಜಾಬ್ ಕಿಂಗ್ಸ್ 150/2 (14 ಓವರ್)

  ದೀಪಕ್ ಹೂಡಾ ಆಗಮನದ ಬಳಿಕ ಪಂಜಾಬ್ ರನ್ ಗತಿ ವೇಗ ಪಡೆದುಕೊಂಡಿದೆ. ಪಂಜಾಬ್ ಪರ ರಾಹುಲ್ ಹಾಗೂ ಹೂಡಾ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. 14 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 150 ರನ್ ಭರ್ಜರಿ ಮೊತ್ತ ದಾಖಲಿಸಿದ್ದಾರೆ.

 • 12 Apr 2021 20:44 PM (IST)

  ದುಬೆ ಓವರ್ ಚಿಂದಿ

  img

  ಪಂಜಾಬ್ ದಾಂಡಿಗರು ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದಾರೆ. ದುಬೆ ಹಾಗೂ ಕೆ.ಎಲ್ ರಾಹುಲ್ ದುಬೆ ಎಸೆದ ಕೊನೆಯ ಓವರ್​ನಲ್ಲಿ ಸಿಕ್ಸರ್ ಸುರಿಮಳೆಗೈದಿದ್ದಾರೆ. ದೀಪಕ್ ಹೂಡಾ ವೇಗದ ಆಟಕ್ಕೆ ಇಳಿದಿದ್ದಾರೆ. 13 ಎಸೆತಗಳಲ್ಲಿ 32 ರನ್ ಕಲೆಹಾಕಿದ್ದಾರೆ.

 • 12 Apr 2021 20:39 PM (IST)

  ಸಿಕ್ಸರ್ ಮೂಲಕ ಅರ್ಧಶತಕ ಸಿಡಿಸಿದ ರಾಹುಲ್

  img

  ಪಂಜಾಬ್ ತಂಡದ ಪರ ನಾಯಕ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ದುಬೆ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ್ದಾರೆ. ಪಂಜಾಬ್ ಮೊತ್ತ 12.4 ಓವರ್​ಗೆ 124/2 ಆಗಿದೆ. ರಾಹುಲ್ 31 ಬಾಲ್​ಗೆ 53 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 12 Apr 2021 20:36 PM (IST)

  ಕಿಂಗ್ಸ್ ಪಂಜಾಬ್ 110/2 (12 ಓವರ್)

  12 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 110 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದಾರೆ. ಪಂಜಾಬ್ ಪರ ರಾಹುಲ್ ಉತ್ತಮ ಆಟ ಆಡುತ್ತಿದ್ದಾರೆ. ಅರ್ಧಶತಕದ ಅಂಚಿನಲ್ಲಿದ್ದಾರೆ.

 • 12 Apr 2021 20:33 PM (IST)

  ಪಂಜಾಬ್ ಕಿಂಗ್ಸ್ 102/2 (11 ಓವರ್)

  ಪಂಜಾಬ್ ಕಿಂಗ್ಸ್ 11 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 102 ಕಲೆಹಾಕಿ ಉತ್ತಮ ಆಟ ಆಡುತ್ತಿದ್ದಾರೆ. ಪಂಜಾಬ್ ಪರ ದೀಪಕ್ ಹೂಡಾ ಹಾಗೂ ಕೆ.ಎಲ್. ರಾಹುಲ್ ಬ್ಯಾಟ್ ಬೀಸುತ್ತಿದ್ದಾರೆ. ಕೊನೆಯ ಓವರ್​ನಲ್ಲಿ ರಾಹುಲ್ ಸ್ಟ್ರೈಟ್ ಲಾಂಗ್​ನತ್ತ ಸಿಕ್ಸರ್ ಬಾರಿಸಿದ್ದು, ರನ್ ವೇಗ ಹೆಚ್ಚಿಸಿದ್ದಾರೆ.

 • 12 Apr 2021 20:29 PM (IST)

  ಕ್ರಿಸ್ ಗೈಲ್ ಔಟ್

  img

  ಪಂಜಾಬ್ ಪರ ಅಬ್ಬರಿಸುತ್ತಿದ್ದ ಕ್ರಿಸ್ ಗೈಲ್ ಔಟ್ ಆಗಿದ್ದಾರೆ. 28 ಬಾಲ್​ಗೆ 4 ಬೌಂಡರಿ 2 ಸಿಕ್ಸರ್ ಸಹಿತ 40 ರನ್​ಗಳಿಸಿ ನಿರ್ಗಮಿಸಿದ್ದಾರೆ. ರಿಯಾನ್ ಪರಾಗ್ ಬಾಲ್​ನ್ನು ದಂಡಿಸಲು ಹೊರಟ ಗೈಲ್ ಸ್ಟೋಕ್ಸ್ ಕೈಗೆ ಕ್ಯಾಚ್ ನೀಡಿದ್ದಾರೆ. ತಂಡದ ಮೊತ್ತ 10 ಓವರ್​​ ಅಂತ್ಯಕ್ಕೆ 89 ಆಗಿದೆ. 2 ವಿಕೆಟ್ ಹೋಗಿದೆ. ಗೈಲ್ ಬಳಿಕ ಹೂಡ ಕಣಕ್ಕಿಳಿದಿದ್ದಾರೆ. ನಾಯಕ ರಾಹುಲ್ ಕ್ರೀಸ್​ನಲ್ಲಿದ್ದಾರೆ.

 • 12 Apr 2021 20:20 PM (IST)

  ಗೈಲ್ ಸೂಪರ್ ಸಿಕ್ಸ್

  img

  ತೆವಾಟಿಯಾ ಬಾಲ್​ಗೆ ಗೈಲ್ ಮತ್ತೊಂದು ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಪಂಜಾಬ್ ತಂಡದ ಮೊತ್ತ 9 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 82 ರನ್ ಆಗಿದೆ. ಗೈಲ್ 26 ಬಾಲ್​ಗೆ 4 ಫೋರ್, 2 ಸಿಕ್ಸ್ ಸಹಿತ 39 ರನ್ ಗಳಿಸಿ ಕ್ರೀಸ್​ನಲ್ಲಿ ಇದ್ದಾರೆ. ರಾಹುಲ್ 19 ಬಾಲ್​ಗೆ 4 ಬೌಂಡರಿ ಸಹಿತ 26 ರನ್ ಗಳಿಸಿದ್ದಾರೆ.

 • 12 Apr 2021 20:17 PM (IST)

  ಪಂಜಾಬ್​ ಕಿಂಗ್ಸ್ 70/1 (8 ಓವರ್)

  ಪಂಜಾಬ್ ತಂಡ 8 ಓವರ್​ಗೆ 1 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ಟೀಂ ಪರ ಗೈಲ್ 21 ಬಾಲ್​ಗೆ 28 ಹಾಗೂ ರಾಹುಲ್ 18 ಬಾಲ್​ಗೆ 25 ರನ್ ಸೇರಿಸಿದ್ದಾರೆ. ಕಳೆದ ಓವರ್​ನಲ್ಲಿ ಸ್ಟೋಕ್ಸ್ ಬಾಲ್​ಗೆ ಗೈಲ್ ಬಾರಿಸಿದ ಸಿಕ್ಸರ್ ವಿಂಡೀಸ್ ಬಲಾಢ್ಯನ 350ನೇ ಸಿಕ್ಸರ್ ಆಗಿದೆ.

 • 12 Apr 2021 20:13 PM (IST)

  ಗೈಲ್ ಸಿಕ್ಸರ್

  img

  ಸ್ಟೋಕ್ಸ್​ ಓವರ್​ನ 3ನೇ ಎಸೆತವನ್ನು ಕ್ರಿಸ್ ಗೈಲ್ ಸಿಕ್ಸರ್​ಗೆ ಅಟ್ಟಿದ್ದಾರೆ. ಗೈಲ್ ಈ ಪಂದ್ಯದ ಹಾಗೂ ಟೂರ್ನಿಯ ಮೊದಲ ಸಿಕ್ಸ್ ಬಾರಿಸಿದ್ದಾರೆ.

 • 12 Apr 2021 20:10 PM (IST)

  ಗೈಲ್-ರಾಹುಲ್ ಬೌಂಡರಿ ಆಟ

  img

  ಪವರ್​ಪ್ಲೇ ಬಳಿಕ ರಾಜಸ್ಥಾನ್ ಪರ ಸ್ಪಿನ್ನರ್​ಗಳು ದಾಳಿಗೆ ಇಳಿದಿದ್ದಾರೆ. ಶ್ರೇಯಸ್ ಗೋಪಾಲ್ ಬೌಲ್ ಮಾಡಿದ್ದಾರೆ. ಕೊನೆಯ ಓವರ್​ನಲ್ಲಿ 2 ಬೌಂಡರಿ ಸಿಡಿಸಿರುವ ಬ್ಯಾಟಿಂಗ್ ಜೋಡಿ ತಂಡದ ಮೊತ್ತವನ್ನು 7 ಓವರ್​ಗೆ 58ಕ್ಕೆ ಏರಿಸಿಕೊಂಡಿದೆ.

 • 12 Apr 2021 20:05 PM (IST)

  ಪವರ್​ಪ್ಲೇ ಅಂತ್ಯಕ್ಕೆ 46/1 (6 ಓವರ್)

  6 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕಿಂಗ್ಸ್ ತಂಡ 46 ರನ್ ಕಲೆಹಾಕಿದೆ.

 • 12 Apr 2021 20:02 PM (IST)

  ಪಂಜಾಬ್ ಕಿಂಗ್ಸ್ 39/1 (5 ಓವರ್)

  ಪಂಜಾಬ್ ಕಿಂಗ್ಸ್ ತಂಡ 5 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 39 ರನ್ ಪೇರಿಸಿದ್ದಾರೆ. ಗೇಲ್ ಹಾಗೂ ರಾಹುಲ್ ಕ್ರೀಸ್​ನಲ್ಲಿದ್ದಾರೆ. ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡದ ಸರಾಸರಿ ಮೊತ್ತ 166 ಆಗಿದೆ.

 • 12 Apr 2021 19:57 PM (IST)

  ಪಂಜಾಬ್​ ಕಿಂಗ್ಸ್ 31/1 (4 ಓವರ್)

  ರಾಜಸ್ಥಾನ್ ರಾಯಲ್ಸ್ ಪರ ಕ್ರಿಸ್ ಮಾರಿಸ್ 4ನೇ ಓವರ್ ಬೌಲ್ ಮಾಡಿದ್ದಾರೆ. 4 ಓವರ್ ಅಂತ್ಯಕ್ಕೆ 31 ರನ್ ದಾಖಲಿಸಿರುವ ಗೇಲ್ 1 ವಿಕೆಟ್ ಕಳೆದುಕೊಂಡಿದ್ದಾರೆ. ಗೇಲ್ ಆಟದ ಮೇಲೆ ಭಾರೀ ನಿರೀಕ್ಷೆ ಇದೆ.

 • 12 Apr 2021 19:48 PM (IST)

  ಪಂಜಾಬ್ ಕಿಂಗ್ಸ್ 22/1 (3 ಓವರ್)

  ಮೊದಲ ಎರಡು ಓವರ್​ಗಳಲ್ಲಿ ವೇಗದ ಆಟವಾಡಿದ್ದ ಪಂಜಾಬ್ ಕಿಂಗ್ಸ್ ಒಂದು ವಿಕೆಟ್ ಕಳೆದುಕೊಂಡು ನಿಧಾನವಾಗಿದೆ. ಮಯಾಂಕ್ ಅಗರ್​ವಾಲ್ ಔಟ್ ಆಗಿದ್ದಾರೆ. ಕ್ರಿಸ್ ಗೇಲ್ ಕಣಕ್ಕಿಳಿದಿದ್ದಾರೆ. ಪಂಜಾಬ್ ತಂಡ 3 ಓವರ್​ಗೆ 1 ವಿಕೆಟ್ ಕಳೆದುಕೊಂಡು 22 ರನ್ ಸೇರಿಸಿದೆ. ಸಕಾರಿಯಾ ತಾವು ಎಸೆದ ಎರಡನೇ ಓವರ್ ಕಂಟ್ರೋಲ್ ಮಾಡಿದ್ದಾರೆ.

 • 12 Apr 2021 19:45 PM (IST)

  ಮಯಾಂಕ್ ಅಗರ್​ವಾಲ್ ಔಟ್

  img

  ಪಂಜಾಬ್ ಪರ ಅಬ್ಬರಿಸುತ್ತಿದ್ದ ಮಯಾಂಕ್ ಅಗರ್​ವಾಲ್ ಆಟ 14 ರನ್​ಗಳಿಗಷ್ಟೇ ಸೀಮಿತವಾಗಿದೆ. 9 ಬಾಲ್​ಗೆ 14 ರನ್ ಗಳಿಸಿದ ಮಯಾಂಕ್ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದ್ದಾರೆ. ಕೆ.ಎಲ್. ರಾಹುಲ್ ಕ್ರೀಸ್​ನಲ್ಲಿದ್ದಾರೆ.

 • 12 Apr 2021 19:42 PM (IST)

  ಮಯಾಂಕ್ ಬೌಂಡರಿ ಆಟ

  img

  ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್​ವಾಲ್ ವೇಗದ ಆಟ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ 1 ಫೋರ್ ಬಾರಿಸಿದ್ದ ಮಯಾಂಕ್, ಮುಸ್ತಫಿಜುರ್ ರಹಮಾನ್ ಎಸೆದ 2ನೇ ಓವರ್​ನಲ್ಲಿ ಮತ್ತೆ ನಾಲ್ಕು ರನ್ ಕಲೆಹಾಕಿದ್ದಾರೆ. ತಂಡದ ಮೊತ್ತ 2 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 21 ರನ್ ಕೂಡಿಸಿದೆ.

 • 12 Apr 2021 19:36 PM (IST)

  ಇನ್ನಿಂಗ್ಸ್ ಆರಂಭಿಸಿದ ಪಂಜಾಬ್

  ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್​ವಾಲ್ ಹಾಗೂ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 1 ಓವರ್ ಅಂತ್ಯಕ್ಕೆ ಪಂಜಾಬ್ ತಂಡ 10 ರನ್ ಕಲೆಹಾಕಿದೆ. ಮೊದಲ ಓವರ್ ಬೌಲಿಂಗ್ ಮಾಡಿದ ಚೇತನ್ ಸಕಾರಿಯಾ ಎರಡು ಬೌಂಡರಿ ಸಹಿತ 10 ರನ್ ಬಿಟ್ಟುಕೊಟ್ಟಿದ್ದಾರೆ.

 • 12 Apr 2021 19:11 PM (IST)

  ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

  ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಜೈ ರಿಚರ್ಡ್ಸನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್

 • 12 Apr 2021 19:10 PM (IST)

  ರಾಜಸ್ಥಾನ್ ಪ್ಲೇಯಿಂಗ್ ಇಲೆವೆನ್

  ಜೋಸ್ ಬಟ್ಲರ್, ಮನನ್ ವೊಹ್ರಾ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿವಮ್ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್

 • 12 Apr 2021 19:06 PM (IST)

  ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ

  ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯಾಟಗಳಲ್ಲೂ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ದುಕೊಂಡಿದ್ದವು. ಚೇಸಿಂಗ್​ನಲ್ಲಿ ಯಶಸ್ವಿ ಕಂಡಿದ್ದವು. ಅದಲ್ಲದೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಚೇಸಿಂಗ್​ಗೆ ಉತ್ತಮ ಪಿಚ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

 • 12 Apr 2021 18:52 PM (IST)

  RR-PBKS ಮುಖಾಮುಖಿ

  ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾದ ಪಂದ್ಯಗಳ ಪೈಕಿ, ರಾಜಸ್ಥಾನ್ 12 ಮ್ಯಾಚ್ ಗೆದ್ದಿದೆ. ಪಂಜಾಬ್ ತಂಡ 9 ಪಂದ್ಯಗಳನ್ನು ಜಯಿಸಿದೆ. ಇಂದಿನ ಪಂದ್ಯದಲ್ಲಿ ಗೆಲ್ಲೋರು ಯಾರು ಎಂದು ಕಾದುನೋಡಬೇಕಿದೆ.

 • 12 Apr 2021 18:49 PM (IST)

  ಪಂಜಾಬ್ ಕಿಂಗ್ಸ್ ನಾಯಕನ ಮಾತು

  ಐಪಿಎಲ್ ಘಟಾನುಘಟಿಗಳನ್ನು ಹೊಂದಿರುವ ತಂಡ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಹೀಗೆ ಮಾತನಾಡಿದ್ದಾರೆ..

 • 12 Apr 2021 18:46 PM (IST)

  ರಾಜಸ್ಥಾನ್ ರಾಯಲ್ಸ್ ಹಲ್ಲಾ ಬೋಲ್!

  ಐಪಿಎಲ್ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ತಂಡ ನಂತರ ಇದುವರೆಗೂ ಗೆಲುವು ಪಡೆಯಲಾಗಲಿಲ್ಲ. ಈ ಬಾರಿ ಟೂರ್ನಿ ಶುಭಾರಂಭ ನಿರೀಕ್ಷೆಯಲ್ಲಿ ಆರ್​ಆರ್ ತಂಡ