AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವ ಕಳೆದುಕೊಂಡ ರೋಹಿತ್​ರನ್ನ ಅಣಕಿಸಿದ್ರಾ ಕೊಹ್ಲಿ? ವೈರಲ್ ಪೋಸ್ಟ್​ನ ಸತ್ಯಾಂಶವೇನು?

Virat Kohli karma post: ರೋಹಿತ್ ಶರ್ಮಾ ಬದಲಿಗೆ ಶುಭ್​ಮನ್ ಗಿಲ್ ಏಕದಿನ ತಂಡದ ನಾಯಕರಾಗಿ ನೇಮಕರಾಗಿದ್ದಾರೆ. ಈ ನಡುವೆ, ನಾಯಕತ್ವ ಕಳೆದುಕೊಂಡ ರೋಹಿತ್ ಬಗ್ಗೆ ವಿರಾಟ್ ಕೊಹ್ಲಿ 'ಕರ್ಮ' ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಪೋಸ್ಟ್ AI ಸೃಷ್ಟಿ; ಕೊಹ್ಲಿಯ ಅಧಿಕೃತ ಖಾತೆಯಿಂದ ಬಂದಿದ್ದಲ್ಲ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ.

ನಾಯಕತ್ವ ಕಳೆದುಕೊಂಡ ರೋಹಿತ್​ರನ್ನ ಅಣಕಿಸಿದ್ರಾ ಕೊಹ್ಲಿ? ವೈರಲ್ ಪೋಸ್ಟ್​ನ ಸತ್ಯಾಂಶವೇನು?
Rohit, Kohli
ಪೃಥ್ವಿಶಂಕರ
|

Updated on:Oct 05, 2025 | 8:43 PM

Share

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಬಿಸಿಸಿಐ (BCCI), ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರೋಹಿತ್ ಶರ್ಮಾ (Rohit Sharma) ಬದಲಿಗೆ ಶುಭ್​ಮನ್ ಗಿಲ್ ಅವರನ್ನು ಏಕದಿನ ತಂಡಕ್ಕೆ ಹೊಸ ನಾಯಕನನ್ನಾಗಿ ನೇಮಿಸಿದೆ. ಹೀಗಾಗಿ ರೋಹಿತ್ ಶರ್ಮಾ ಈಗ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಆಡಲಿದ್ದಾರೆ. 2021 ರಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಇದೀಗ ರೋಹಿತ್​ರನ್ನು ಕೆಳಗಿಳಿಸಿ ಶುಭ್​ಮನ್ ಗಿಲ್​ಗೆ (Shubman Gill) ನೀಡಲಾಗಿದೆ. ಈ ನಡುವೆ ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮಾ ಬಗ್ಗೆ ವ್ಯಂಗ್ಯವಾಡಿ ವಿರಾಟ್ ಕೊಹ್ಲಿ (Virat Kohli), ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸುದ್ದಿ ಗಾಳಿಯಂತೆ ಹರಿದಾಡುತ್ತಿದೆ.

ಕೊಹ್ಲಿ, ರೋಹಿತ್ ಅವರನ್ನು ಟೀಕಿಸಿದ್ರಾ?

ಟೀಂ ಇಂಡಿಯಾದ ಇಬ್ಬರು ಲೆಜೆಂಡರಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಬಿರುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವದಂತಿಗಳು ಹರಿದಾಡುತ್ತಿರುತ್ತವೆ. ಈ ಬಾರಿ, ವೈರಲ್ ಆಗಿರುವ ಪೋಸ್ಟ್ ಮತ್ತೊಂದು ಕೋಲಾಹಲಕ್ಕೆ ಕಾರಣವಾಗಿದ್ದು, ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿದ ನಂತರ, ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಅವರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೇಳಿಕೆಯ ಪ್ರಕಾರ, ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ‘ಜೀವನವು ಒಂದು ಚಕ್ರವಿದಂತೆ, ನೀವು ಏನು ಕೊಡುತ್ತೀರೋ ಅದು ನಿಮಗೆ ವಾಪಸ್ ಸಿಗುತ್ತದೆ’ ಎಂದು “ಕರ್ಮ” ಎಂಬ ಪದದೊಂದಿಗೆ ಬರೆದಿದ್ದಾರೆ.

ವಿರಾಟ್

ಆದಾಗ್ಯೂ, ಈ ಪೋಸ್ಟ್​​ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಈ ಪೋಸ್ಟ್ ಸತ್ಯಕ್ಕೆ ದೂರವಾಗಿದೆ. ಅಂದರೆ ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆಯಿಂದ ಈ ರೀತಿಯ ಯಾವುದೇ ಪೋಸ್ಟ್​ ಅನ್ನು ಹಂಚಿಕೊಳ್ಳಲಾಗಿಲ್ಲ. ಬದಲಿಗೆ ಈ ಪೋಸ್ಟ್ ಅನ್ನು AI ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದೆ.

IND vs AUS: ಶುಭ್​ಮನ್ ಗಿಲ್​ಗೆ ಏಕದಿನ ನಾಯಕತ್ವ; ವಿಶ್ವಕಪ್ ಆಡ್ತಾರಾ ರೋಹಿತ್, ಕೊಹ್ಲಿ?

ಬಹಳ ದಿನಗಳ ನಂತರ ಕಣದಲ್ಲಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದ ಏಕದಿನ ತಂಡದ ಭಾಗವಾಗಿದ್ದಾರೆ. ಇಬ್ಬರೂ ಆಟಗಾರರು ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪರ ಆಡಿದ್ದರು. ಇದರರ್ಥ ಅವರು ಸುಮಾರು ಏಳು ತಿಂಗಳ ನಂತರ ಟೀಂ ಇಂಡಿಯಾ ಪರ ಮತ್ತೆ ಆಡಲಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡದ ಮೊದಲ ಏಕದಿನ ಸರಣಿ ಇದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 pm, Sun, 5 October 25

ತಂಟೆಗೆ ಬಂದ ಧ್ರುವಂತ್​​ ಮೇಲೆ ಜಂಟಿಯಾಗಿ ಹರಿಹಾಯ್ದ ಗಿಲ್ಲಿ-ಕಾವ್ಯಾ
ತಂಟೆಗೆ ಬಂದ ಧ್ರುವಂತ್​​ ಮೇಲೆ ಜಂಟಿಯಾಗಿ ಹರಿಹಾಯ್ದ ಗಿಲ್ಲಿ-ಕಾವ್ಯಾ
ಕೇವಲ 12 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದ ಅಫ್ರಿದಿ
ಕೇವಲ 12 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದ ಅಫ್ರಿದಿ
ಕಬ್ಬು ಬೆಳೆಗಾರರ ಹೋರಾಟ: ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದ್ದೇನು?
ಕಬ್ಬು ಬೆಳೆಗಾರರ ಹೋರಾಟ: ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದ್ದೇನು?
ಪ್ರಧಾನಿಗೆ ಲೆಟರ್​ ಬರೆದ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್​ ಜೋಶಿ ಟಕ್ಕರ್​
ಪ್ರಧಾನಿಗೆ ಲೆಟರ್​ ಬರೆದ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್​ ಜೋಶಿ ಟಕ್ಕರ್​
ಅಥಣಿ: ರಸ್ತೆಯಲ್ಲೇ ಉರುಳು ಸೇವೆ ಮಾಡಿ ರೈತರಿಂದ ವಿಭಿನ್ನ ಪ್ರತಿಭಟನೆ
ಅಥಣಿ: ರಸ್ತೆಯಲ್ಲೇ ಉರುಳು ಸೇವೆ ಮಾಡಿ ರೈತರಿಂದ ವಿಭಿನ್ನ ಪ್ರತಿಭಟನೆ
‘ಮಹಾನಟಿ’ ಶೋಗೆ ಫಿನಾಲೆ; ಪರ್ಫಾರ್ಮೆನ್ಸ್ ನೋಡಿ ಜಡ್ಜ್​​ಗಳು ಫಿದಾ
‘ಮಹಾನಟಿ’ ಶೋಗೆ ಫಿನಾಲೆ; ಪರ್ಫಾರ್ಮೆನ್ಸ್ ನೋಡಿ ಜಡ್ಜ್​​ಗಳು ಫಿದಾ
GBIT ಯೋಜನೆಗೆ ವಿರೋಧ: ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ
GBIT ಯೋಜನೆಗೆ ವಿರೋಧ: ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ
ಸಿಎಂ ಸಿದ್ದರಾಮಯ್ಯಗೆ ರಾಜಣ್ಣ ಆತಿಥ್ಯ: ಮಾಜಿ ಸಚಿವರ ಪ್ಲ್ಯಾನ್​ ಏನು?
ಸಿಎಂ ಸಿದ್ದರಾಮಯ್ಯಗೆ ರಾಜಣ್ಣ ಆತಿಥ್ಯ: ಮಾಜಿ ಸಚಿವರ ಪ್ಲ್ಯಾನ್​ ಏನು?
ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು!
ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು!
ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬ
ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬ