SRH vs KKR, IPL 2021 Match 3 Result: ಮನೀಶ್ ಪಾಂಡೆ ಏಕಾಂಗಿ ಹೋರಾಟ ವ್ಯರ್ಥ; ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಗೆಲುವು

SRH vs KKR Result in Kannada: ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಾಟದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿವೆ.

  • TV9 Web Team
  • Published On - 23:05 PM, 11 Apr 2021
SRH vs KKR, IPL 2021 Match 3 Result: ಮನೀಶ್ ಪಾಂಡೆ ಏಕಾಂಗಿ ಹೋರಾಟ ವ್ಯರ್ಥ; ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಗೆಲುವು
ಮನೀಶ್ ಪಾಂಡೆ ಏಕಾಂಗಿ ಹೋರಾಟ

ಚೆನ್ನೈ: ಸನ್​ರೈಸರ್ಸ್ ವಿರುದ್ಧದ ಮೂರನೇ ಐಪಿಎಲ್ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 10 ರನ್​ಗಳ ಸುಲಭ ವಿಜಯ ದಾಖಲಿಸಿದೆ. ಹೈದರಾಬಾದ್ ಪರ ಮನೀಶ್ ಪಾಂಡೆ ಏಕಾಂಗಿ ಹೋರಾಟ ವ್ಯರ್ಥವಾಗಿದೆ. ಕೋಲ್ಕತ್ತಾದ ಸಂತುಲಿತ ಆಟ ನೈಟ್ ರೈಡರ್ಸ್​ಗೆ ಗೆಲುವು ತಂದುಕೊಟ್ಟಿದೆ. ಕೋಲ್ಕತ್ತಾ ಪರ ಪ್ರಸಿದ್ಧ್ ಕೃಷ್ಣ 2, ಶಕೀಬ್, ಕಮಿನ್ಸ್, ರಸೆಲ್ ತಲಾ 1 ವಿಕೆಟ್ ಉರುಳಿಸಿದ್ದಾರೆ. ಹೈದರಾಬಾದ್ ಪರ ಮನೀಶ್ ಪಾಂಡೆ ಔಟಾಗದೆ 61 ರನ್ ಗಳಿಸಿದ್ದಾರೆ. ಬೇರ್​ಸ್ಟೋ 55 ರನ್ ಮೂಲಕ ನೆರವಾಗಿದ್ದಾರೆ. ಇವರಿಬ್ಬರ ಹೊರತಾಗಿ ಇತರರು ಗೆಲ್ಲುವ ಪ್ರದರ್ಶನ ನೀಡಲಿಲ್ಲ.

ಇದಕ್ಕೂ ಮೊದಲು, ಟಾಸ್ ಸೋತು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಆರಂಭ ಪಡೆದುಕೊಂಡಿತ್ತು. ಕೆಕೆಆರ್ ಪರ ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದಿದ್ದರು. ಆದರೆ, ಅವರ ಜೊತೆಯಾಟ ಬಳಿಕ ಕ್ರೀಸ್​ಗಿಳಿದ ದಾಂಡಿಗರು ಮೊದಲ ವೇಗವನ್ನು ಉಳಿಸಿಕೊಳ್ಳಲಿಲ್ಲ. ರಾಣಾ, ಮೋರ್ಗನ್, ರಸೆಲ್ ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಇಷ್ಟಾದರೂ ತಂಡ 187 ರನ್​ಗಳ ಉತ್ತಮ ಮೊತ್ತವನ್ನು ದಾಖಲಿಸಲು ಯಶಸ್ವಿಯಾಗಿತ್ತು. 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 187 ರನ್ ದಾಖಲಿಸಿತ್ತು.

ಕಳೆದ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ, ಪ್ಲೇ ಆಫ್ ಪ್ರವೇಶಿಸಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡ ಇಂದು (ಏಪ್ರಿಲ್ 11) ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚೆನ್ನೈನ ಎಮ್​.ಎ. ಚಿಂದಂಬರಂ ಮೈದಾನದಲ್ಲಿ ಎದುರಿಸಿತು.

LIVE Cricket Score & Updates

The liveblog has ended.
  • 11 Apr 2021 23:05 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್​ಗೆ 10 ರನ್ ಗೆಲುವು

    ಸನ್​ರೈಸರ್ಸ್ ವಿರುದ್ಧದ ಮೂರನೇ ಐಪಿಎಲ್ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 10 ರನ್​ಗಳ ಸುಲಭ ವಿಜಯ ದಾಖಲಿಸಿದೆ. ಹೈದರಾಬಾದ್ ಪರ ಮನೀಶ್ ಪಾಂಡೆ ಏಕಾಂಗಿ ಹೋರಾಟ ವ್ಯರ್ಥವಾಗಿದೆ. ಕೋಲ್ಕತ್ತಾದ ಸಂತುಲಿತ ಆಟ ನೈಟ್ ರೈಡರ್ಸ್​ಗೆ ಗೆಲುವು ತಂದುಕೊಟ್ಟಿದೆ.

  • 11 Apr 2021 23:00 PM (IST)

    ಸನ್​ರೈಸರ್ಸ್ ಗೆಲ್ಲಲು 6 ಬಾಲ್​ಗೆ 22 ರನ್ ಬೇಕು

    ಅಂತಿಮ ಓವರ್​ನಲ್ಲಿ ಸನ್​ರೈಸರ್ಸ್ ಸೆಣೆಸಾಟ

  • 11 Apr 2021 22:57 PM (IST)

    ಸನ್​ರೈಸರ್ಸ್ ಗೆಲ್ಲಲು 7 ಬಾಲ್​ಗೆ 22 ರನ್ ಬೇಕು

    img

    ಸನ್​ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ವಿರುದ್ಧ ಗೆಲ್ಲಲು 7 ಬಾಲ್​ಗೆ 22 ರನ್ ಬೇಕಾಗಿದೆ. ಕಮಿನ್ಸ್ ಎಸೆತವನ್ನು ಸಮದ್ ಎರಡು ಬಾರಿ ಸಿಕ್ಸರ್​ಗೆ ಅಟ್ಟಿದ್ದಾರೆ. ಈ ಮೂಲಕ ಸನ್​ರೈಸರ್ಸ್​ಗೆ ಗೆಲ್ಲುವ ಭರವಸೆ ನೀಡಿದ್ದಾರೆ.

  • 11 Apr 2021 22:56 PM (IST)

    ವಿಜಯ್ ಶಂಕರ್ ಔಟ್

    img

    ಸನ್​ರೈಸರ್ಸ್ ಪರ ದಾಂಡಿಗರು ಪೆವಿಲಿಯಬ್ ನಡಿಗೆ ಕೈಗೊಂಡಿದ್ದಾರೆ. ಒಬ್ಬರ ಹಿಂದೊಬ್ಬರು ವಿಕೆಟ್ ಒಪ್ಪಿಸಿ ತೆರಳುತ್ತಿದ್ದಾರೆ. ವಿಜಯ್ ಶಂಕರ್ ಕೂಡ 7 ಬಾಲ್​ಗೆ 11 ರನ್ ಪೇರಿಸುವಷ್ಟರಲ್ಲಿ ಸುಸ್ತಾಗಿದ್ದಾರೆ. ಅಬ್ದುಲ್ ಸಮದ್ ಈಗ ಪಾಂಡೆ ಜೊತೆಯಾಗಿದ್ದಾರೆ.

  • 11 Apr 2021 22:49 PM (IST)

    ಹೈದರಾಬಾದ್ ಗೆಲುವಿಗೆ 18 ಬಾಲ್​ಗೆ 44 ರನ್ ಬೇಕು

    ಸನ್​ರೈಸರ್ಸ್ ತಂಡ ಗೆಲ್ಲಲು 18 ಎಸೆತಗಳು ಉಳಿದಿರುವಂತೆ 44 ರನ್ ಬೇಕಾಗಿದೆ. ಈಗ 17 ಓವರ್​ಗಳನ್ನು ಪೂರೈಸಿರುವ ಕೋಲ್ಕತ್ತಾ ತಂಡ 4 ವಿಕೆಟ್ ಕಸಿದು 144 ರನ್ ಬಿಟ್ಟುಕೊಟ್ಟಿದೆ.

  • 11 Apr 2021 22:47 PM (IST)

    ಮನೀಶ್ ಪಾಂಡೆ ಅರ್ಧಶತಕ

    ಸನ್​ರೈಸರ್ಸ್ ಪರವಾಗಿ ಕನ್ನಡಿಗ ಮನೀಶ್ ಪಾಂಡೆ ಅರ್ಧಶತಕ ಪೂರೈಸಿದ್ದಾರೆ. 37 ಬಾಲ್​ಗೆ 2 ಬೌಂಡರಿ, 2 ಸಿಕ್ಸರ್​ ಸಹಿತ 50 ರನ್ ದಾಖಲಿಸಿದ್ದಾರೆ. ನಬಿ ವಿಕೆಟ್ ಒಪ್ಪಿಸಿದ ಬಳಿಕ ವಿಜಯ್ ಶಂಕರ್ ಮನೀಶ್ ಪಾಂಡೆಗೆ ಜೊತೆಯಾಗಿದ್ದಾರೆ.

  • 11 Apr 2021 22:45 PM (IST)

    ಸಿಕ್ಸರ್ ಬಳಿಕ, ನಬಿ ಔಟ್

    img

    ಸನ್​ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಬೇರ್​ಸ್ಟೋ ಬಳಿಕ, ಪಾಂಡೆ ಏಕಾಂಗಿ ಹೋರಾಟ ನಡೆಸುತ್ತಿದ್ದು, ಮತ್ತೊಂದೆಡೆ ದಾಂಡಿಗರು ವಿಕೆಟ್ ಒಪ್ಪಿಸಿ ನಿರ್ಗಮಿಸುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣ ಬಾಲ್​ಗೆ ಒಂದು ಸಿಕ್ಸರ್ ಬಾರಿಸಿದ ನಬಿ ನಂತರದ ಎಸೆತವನ್ನು ಎತ್ತರಕ್ಕೆ ಬಾರಿಸಿ ಮೋರ್ಗನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ.

  • 11 Apr 2021 22:36 PM (IST)

    ಸನ್​ರೈಸರ್ಸ್ ಹೈದರಾಬಾದ್ 119/3 (15 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 15 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿದೆ. ಗೆಲುವಿಗೆ ಇನ್ನಷ್ಟು ವೇಗದ ಆಟ ಬೇಕಾಗಿದೆ.

  • 11 Apr 2021 22:30 PM (IST)

    ಮನೀಶ್ ಪಾಂಡೆ ಸಿಕ್ಸರ್

    img

    ಮನೀಶ್ ಪಾಂಡೆ ಶಕೀಬ್ ಅಲ್ ಹಸನ್ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ್ದಾರೆ. ಪಾಂಡೆಗೆ ಈಗಷ್ಟೇ ಕ್ರೀಸ್​ಗೆ ಬಂದ ನಬಿ ಜೊತೆಯಾಗಿದ್ದಾರೆ. ತಂಡದ ಮೊತ್ತ 14 ಓವರ್​ಗೆ 3 ವಿಕೆಟ್ ನಷ್ಟಕ್ಕೆ 113 ರನ್ ಆಗಿದೆ. ಗೆಲ್ಲಲು 36 ಬಾಲ್​ಗೆ 75 ರನ್ ಬೇಕಿದೆ.

  • 11 Apr 2021 22:28 PM (IST)

    ಬೇರ್​ಸ್ಟೋ ಔಟ್

    img

    ಸನ್​ರೈಸರ್ಸ್ ಹೈದರಾಬಾದ್​ ಪರ ಉತ್ತಮ ಆಟ ಆಡುತ್ತಿದ್ದ ಬೇರ್​ಸ್ಟೋ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೇರ್​ಸ್ಟೋ 40 ಬಾಲ್​ಗೆ 55 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ಹೈದರಾಬಾದ್ ತಂಡದ ಮೊತ್ತ 13 ಓವರ್​ಗೆ 3 ವಿಕೆಟ್ ಕಳೆದುಕೊಂಡು 102 ರನ್ ಆಗಿದೆ.

  • 11 Apr 2021 22:21 PM (IST)

    ಬೇರ್​ಸ್ಟೋ 50! ಸನ್​ರೈಸರ್ಸ್ ಸಂಭ್ರಮ

    ಬೇರ್​​ಸ್ಟೋ ಅರ್ಧಶತಕವನ್ನು ಸನ್​ರೈಸರ್ಸ್ ತಂಡ ಸಂಭ್ರಮಿಸಿದ್ದು ಹೀಗೆ

  • 11 Apr 2021 22:20 PM (IST)

    ಬೇರ್​ಸ್ಟೋ ಅರ್ಧಶತಕ

    ಸನ್​ರೈಸರ್ಸ್ ಪರ ಭರ್ಜರಿ ಪ್ರದರ್ಶನ ತೋರುತ್ತಿರುವ ಬೇರ್​ಸ್ಟೋ ಅರ್ಧಶತಕ ಪೂರೈಸಿದ್ದಾರೆ. ಇದು ಅವರ 6ನೇ ಐಪಿಎಲ್ ಅರ್ಧಶತಕವಾಗಿದೆ. 3 ಸಿಕ್ಸರ್, 5 ಬೌಂಡರಿ ಸಹಿತ ಆಟ ಮುಂದುವರಿಸಿದ್ದಾರೆ.

  • 11 Apr 2021 22:17 PM (IST)

    ಸನ್​ರೈಸರ್ಸ್ ಹೈದರಾಬಾದ್ 89/2 (11 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 11 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 89 ರನ್ ದಾಖಲಿಸಿದೆ. ತಂಡದ ಪರ ಬೇರ್​ಸ್ಟೋ, ಮನೀಶ್ ಪಾಂಡೆ ಯಶಸ್ವಿ ಪ್ರದರ್ಶನ ತೋರುತ್ತಿದ್ದಾರೆ. ತಂಡಕ್ಕೆ ಗೆಲ್ಲಲು 54 ಬಾಲ್​ಗೆ 99 ರನ್ ಬೇಕಾಗಿದೆ.

  • 11 Apr 2021 22:06 PM (IST)

    ಸನ್​ರೈಸರ್ಸ್ ಹೈದರಾಬಾದ್ 69/2 (9 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 9 ಓವರ್ ಬಳಿಕ 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಲು ಯಶಸ್ವಿಯಾಗಿದೆ. ಹೈದರಾಬಾದ್ ತಂಡ ಗೆಲ್ಲಲು 66 ಬಾಲ್​ಗೆ 119 ರನ್ ಬೇಕಿದೆ. ಬೇರ್​ಸ್ಟೋ ಹಾಗೂ ಮನೀಶ್ ಜೊತೆಯಾಟ ಶಿಸ್ತಾಗಿ ಸಾಗುತ್ತಿದ್ದು, ಸನ್​ರೈಸರ್ಸ್ ಗೆಲುವಿನ ನಿರೀಕ್ಷೆ ಉಳಿದುಕೊಂಡಿದೆ. ಕೋಲ್ಕತ್ತಾ ವಿಕೆಟ್ ಕಿತ್ತು ಗೆಲುವಿನ ಸಂಭ್ರಮಕ್ಕೆ ಪ್ರಯತ್ನಿಸುತ್ತಿದೆ.

  • 11 Apr 2021 22:00 PM (IST)

    ಸನ್​ರೈಸರ್ಸ್ ಹೈದರಾಬಾದ್ 60/2 (8 ಓವರ್)

    8 ಓವರ್ ಮುಕ್ತಾಯಕ್ಕೆ ಸನ್​ರೈಸರ್ಸ್ 2 ವಿಕೆಟ್ ಕಳೆದುಕೊಂಡು 60 ರನ್ ಸಂಪಾದಿಸಿದ್ದಾರೆ. ಬೇರ್​ಸ್ಟೋ 21 ಬಾಲ್​ಗೆ 32 ಹಾಗೂ ಮನೀಶ್ ಪಾಂಡೆ 17 ಬಾಲ್ 20 ರನ್ ಪೇರಿಸಿದ್ದಾರೆ. ಸನ್​ರೈಸರ್ಸ್ ಗೆಲುವಿಗೆ ಇನ್ನು 72 ಬಾಲ್​ಗೆ 128 ರನ್ ಬೇಕಾಗಿದೆ.

  • 11 Apr 2021 21:58 PM (IST)

    ಬೇರ್​ಸ್ಟೋ ಸಿಕ್ಸರ್

    img

    ಎರಡು ವಿಕೆಟ್ ಪತನವಾದ ಬಳಿಕ ನಿಧಾನಗತಿಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಸನ್​ರೈಸರ್ಸ್ ತಂಡದ ಪರವಾಗಿ ಬೇರ್​ಸ್ಟೋ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಸೆಲ್ ಬಾಲ್​ಗೆ ಸಿಕ್ಸರ್, ಬೌಂಡರಿ ಬಾರಿಸುತ್ತಿದ್ದಾರೆ. 20 ಬಾಲ್​ಗೆ 29 ರನ್ ಕಲೆಹಾಕಿ ತಂಡದ ಪರ ಮಿಂಚುತ್ತಿದ್ದಾರೆ.

  • 11 Apr 2021 21:55 PM (IST)

    ಸನ್​ರೈಸರ್ಸ್ ಗೆಲ್ಲಲು 78 ಬಾಲ್​ಗೆ 143 ರನ್ ಬೇಕು

    ಸನ್​ರೈಸರ್ಸ್ ತಂಡ ಗೆಲುವಿಗೆ 78 ಬಾಲ್ ಉಳಿದಿರುವಂತೆ 143 ರನ್ ಬೇಕಾಗಿದೆ. ಹೈದರಾಬಾದ್ ತಂಡ 7 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿದೆ.

  • 11 Apr 2021 21:54 PM (IST)

    ಸನ್​ರೈಸರ್ಸ್ ಹೈದರಾಬಾದ್ 35/2 (6 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ ಪವರ್​ಪ್ಲೇ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 35 ರನ್ ಕಲೆಹಾಕಿದೆ. ಮನೀಶ್ ಪಾಂಡೆ, ಜಾನಿ ಬೇರ್​ಸ್ಟೋ ಜೊತೆಯಾಟ ತಂಡಕ್ಕೆ ಆಸರೆಯಾಗಬೇಕಿದೆ.

  • 11 Apr 2021 21:46 PM (IST)

    ಸನ್​ರೈಸರ್ಸ್ ಹೈದರಾಬಾದ್ 20/2 (4 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 4 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಲಷ್ಟೇ ಶಕ್ತವಾಗಿದೆ. ಗೆಲ್ಲಲು ಹೈದರಾಬಾದ್​ಗೆ 168 ರನ್ ಬೇಕಾಗಿದೆ. ಬೇರ್​ಸ್ಟೋ ಹಾಗೂ ಮನೀಶ್ ಪಾಂಡೆ ಕಣದಲ್ಲಿದ್ದಾರೆ.

  • 11 Apr 2021 21:43 PM (IST)

    ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಔಟ್

    img

    ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. 188 ರನ್ ಬೆನ್ನತ್ತಿದ ಎಸ್​ಆರ್​ಹೆಚ್ ತಂಡ 2 ಮುಖ್ಯ ವಿಕೆಟ್ ಕಳೆದುಕೊಂಡಿದೆ. ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಹಾ ಒಂದಂಕಿ ದಾಟುವ ಮುನ್ನ ವಿಕೆಟ್ ಶಕೀಬ್ ಹಾಗೂ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ದಾರೆ.

  • 11 Apr 2021 21:11 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 187/6 (20 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ಹಲವು ಏರಿಳಿತಗಳ ನಡುವೆ ಗಟ್ಟಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ. 20 ಓವರ್​ಗಳ ಅಂತ್ಯಕ್ಕೆ ಕೆಕೆಆರ್ 5 ವಿಕೆಟ್ ಕಳೆದುಕೊಂಡು — ಮೊತ್ತ ಕೂಡಿಸಿದ್ದಾರೆ. ನೈಟ್ ರೈಡರ್ಸ್ ಪರ ತ್ರಿಪಾಠಿ ಹಾಗೂ ರಾಣಾ ಉತ್ತಮ ಆಟವಾಡಿದ್ದಾರೆ. ಕೊನೆಯ ಎಸೆತವನ್ನು ಸಿಕ್ಸರ್​ಗೆ ಎತ್ತಲು ಹೋಗಿ ಶಕೀಬ್ ಅಲ್ ಹಸನ್ ವಿಕೆಟ್ ಒಪ್ಪಿಸಿದ್ದಾರೆ.

  • 11 Apr 2021 21:06 PM (IST)

    ದಿನೇಶ್ ಕಾರ್ತಿಕ್ ಸಿಕ್ಸ್!

    img

    ಕೊನೆಯ ಓವರ್ ಆಟವಾಡುತ್ತಿರುವ ಕೆಕೆಆರ್ ತಂಡ ಸ್ಫೋಟಕ ಆಟಕ್ಕೆ ಮುಂದಾಗಿದೆ. ದಿನೇಶ್ ಕಾರ್ತಿಕ್ ಭುವನೇಶ್ವರ್ ಕುಮಾರ್ ಎಸೆತವನ್ನು ಬೌಂಡರಿ, ಸಿಕ್ಸರ್​ಗೆ ಅಟ್ಟುತ್ತಿದ್ದಾರೆ.

  • 11 Apr 2021 21:05 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 171/5 (19 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡು ಕೊಂಚ ನಿಧಾನಗತಿಯ ಆಟವಾಡುತ್ತಿದೆ. ದಿನೇಶ್ ಕಾರ್ತಿಕ್ ಹಾಗೂ ಶಕೀಬ್ ಅಲ್ ಹಸನ್ ಕ್ರೀಸ್​ನಲ್ಲಿದ್ದಾರೆ.

  • 11 Apr 2021 21:01 PM (IST)

    ರಾಣಾ ಬೆನ್ನಲ್ಲೇ ಔಟಾದ ನಾಯಕ ಮೋರ್ಗನ್

    img

    ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಕೂಡ ರಾಣಾ ಬೆನ್ನಲ್ಲೇ ಔಟ್ ಆಗಿದ್ದಾರೆ. 3 ಬಾಲ್​ಗೆ 2 ರನ್ ಆಡಿ ನಬಿಗೆ ವಿಕೆಟ್ ಒಪ್ಪಿಸಿದ್ದಾರೆ.

  • 11 Apr 2021 20:56 PM (IST)

    ಸನ್​ರೈಸರ್ಸ್​ಗೆ ತಲೆನೋವಾಗಿದ್ದ ರಾಣಾ ಔಟ್

    img

    ಇನ್ನಿಂಗ್ಸ್ ಆರಂಭದಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಕಾಡಿದ್ದ ನಿತೀಶ್ ರಾಣಾ 80 ರನ್ ಗಳಿಸಿ ನಿರ್ಗಮಿಸಿದ್ದಾರೆ. ಭರ್ಜರಿ ಇನ್ನಿಂಗ್ಸ್ ಕಟ್ಟಿದ ಅವರು 54 ಬಾಲ್​ಗೆ 80 ರನ್ ಬಾರಿಸಿ ಔಟ್ ಆಗಿದ್ದಾರೆ.

  • 11 Apr 2021 20:54 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 159/3 (17 ಓವರ್)

    ಕೋಲ್ಕತ್ತಾ ತಂಡ 17 ಓವರ್​ಗೆ 3 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದೆ. ತಂಡದ ಪರ ರಾಣಾ 80 ರನ್ ಗಳಿಸಿ ಆಡುತ್ತಿದ್ದಾರೆ. ಮತ್ತೊಂದೆಡೆ ಕೆಕೆಆರ್ ನಾಯಕ ಇಯಾಣ್ ಮೋರ್ಗನ್ ಆಟವಾಡುತ್ತಿದ್ದಾರೆ.

  • 11 Apr 2021 20:52 PM (IST)

    ರಸೆಲ್ ಔಟ್

    img

    ತ್ರಿಪಾಠಿ ಬಳಿಕ ಕಣಕ್ಕಿಳಿದ ರಸೆಲ್ ಸಣ್ಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ರಶೀದ್ ಖಾನ್​ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರಸೆಲ್ 5 ಬಾಲ್​ಗೆ 5 ರನ್ ಕೊಡುಗೆ ನೀಡಿದ್ದಾರೆ. ಇದೀಗ, ನಾಯಕ ಮೋರ್ಗನ್ ಕಣಕ್ಕಿಳಿದಿದ್ದಾರೆ.

  • 11 Apr 2021 20:47 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 152/2 (16 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 16 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ರಾಣಾ ಹಾಗೂ ಈಗ ಬಂದಿರುವ ರಸೆಲ್ ಆಡುತ್ತಿದ್ದಾರೆ.

  • 11 Apr 2021 20:46 PM (IST)

    ಅರ್ಧಶತಕದ ಬೆನ್ನಲ್ಲೇ ಔಟಾದ ತ್ರಿಪಾಠಿ

    img

    ಕೋಲ್ಕತ್ತಾ ಪರ ಅರ್ಧಶತಕ ಬಾರಿಸಿ ಮಿಂಚುತ್ತಿದ್ದ ತ್ರಿಪಾಠಿ ಕೆಟ್ಟ ಹೊಡೆತಕ್ಕೆ ಸಿಲುಕಿ, ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ನಟರಾಜನ್ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 29 ಬಾಲ್​ಗೆ 5 ಬೌಂಡರಿ, 2 ಸಿಕ್ಸರ್ ಸಹಿತ 53 ರನ್ ಬಾರಿಸಿ ನಿರ್ಗಮಿಸಿದ್ದಾರೆ. ತ್ರಿಪಾಠಿ ಬಳಿಕ ರಸೆಲ್ ಕ್ರೀಸ್​ಗೆ ಆಗಮಿಸಿದ್ದಾರೆ.

  • 11 Apr 2021 20:42 PM (IST)

    ತ್ರಿಪಾಠಿ ಸೂಪರ್ ಸಿಕ್ಸ್!

    img

    ಭುವನೇಶ್ವರ್ ಕುಮಾರ್ ಬೌಲಿಂಗ್​ಗೆ ತ್ರಿಪಾಠಿ ಸಿಕ್ಸರ್ ಬಾರಿಸಿದ್ದಾರೆ. ಭುವನೇಶ್ವರ್ ಕುಮಾರ್ ಕೂಡ ನಿರೀಕ್ಷೆಯ ಪ್ರದರ್ಶನ ತೋರುತ್ತಿಲ್ಲ. 3 ಬೌಂಡರಿ, 1 ಸಿಕ್ಸರ್ ಸಹಿತ 19 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ತಂಡದ ಒಟ್ಟು ಮೊತ್ತ 15 ಓವರ್​ಗೆ 1 ವಿಕೆಟ್ ಕಳೆದುಕೊಂಡು 145 ರನ್ ಆಗಿದೆ.

  • 11 Apr 2021 20:37 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 126/1 (14 ಓವರ್)

    ಕೋಲ್ಕತ್ತಾ ತಂಡ 14 ಓವರ್​ಗೆ 1 ವಿಕೆಟ್ ಕಳೆದುಕೊಂಡು 126 ರನ್ ದಾಖಲಿಸಿದೆ. ತಂಡದ ಪರ ನಿತೀಶ್ ರಾಣಾ- ತ್ರಿಪಾಠಿ ಆಡುತ್ತಿದ್ದಾರೆ. ರಾಣಾ 47 ಬಾಲ್​ಗೆ 4 ಸಿಕ್ಸರ್, 8 ಬೌಂಡರಿ ಸಹಿತ 72 ರನ್ ಕಲೆಹಾಕಿದ್ದಾರೆ. ತ್ರಿಪಾಠಿ 24 ಬಾಲ್​ಗೆ 1 ಸಿಕ್ಸರ್ 3 ಬೌಂಡರಿ ಸಹಿತ 39 ರನ್ ಕೂಡಿಸಿದ್ದಾರೆ.

  • 11 Apr 2021 20:34 PM (IST)

    ರಾಣಾ ಸಿಕ್ಸರ್!

    img

    ಕೆಕೆಆರ್ ಪರ ಅದ್ಭುತ ಆಟ ಆಡುತ್ತಿರುವ ನಿತೀಶ್ ರಾಣಾ ಸಂದೀಪ್ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ್ದಾರೆ. 154 ಸ್ಟ್ರೈಕ್ ರೇಟ್​ನಲ್ಲಿ ರಾಣಾ ಬ್ಯಾಟ್ ಬೀಸುತ್ತಿದ್ದಾರೆ.

  • 11 Apr 2021 20:32 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 114/1 (13 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 13 ಓವರ್​ಗೆ 1 ವಿಕೆಟ್ ಕಳೆದುಕೊಂಡು 114 ರನ್ ಕಲೆಹಾಕಿದೆ. ತಂಡದ ಪರ ನಿತೀಶ್ ರಾಣಾ ಸ್ಫೋಟಕ ಆಟವಾಡಿ 44 ಬಾಲ್​ಗೆ 65 ರನ್ ಕೂಡಿಸಿದ್ದಾರೆ. ತ್ರಿಪಾಠಿ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ರಶೀದ್ ಖಾನ್ 1 ವಿಕೆಟ್ ಪಡೆದ ಹೊರತಾಗಿ, ಉಳಿದ ಬೌಲರ್​ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

  • 11 Apr 2021 20:25 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 92/1 (11 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 11 ಓವರ್​ಗಳ ಅಂತ್ಯಕ್ಕೆ 92 ರನ್ ಕಲೆಹಾಕಿದೆ. ತ್ರಿಪಾಠಿ ಹಾಗೂ ರಾಣಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈಯುತ್ತಿದ್ದಾರೆ. ಗಿಲ್ ಬಳಿಕ ಕಣಕ್ಕಿಳಿದ ತ್ರಿಪಾಠಿ 15 ಬಾಲ್​ಗೆ 25 ರನ್ ದಾಖಲಿಸಿ ಆಡುತ್ತಿದ್ದಾರೆ.

  • 11 Apr 2021 20:21 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 83/1 (10 ಓವರ್)

    ಇನ್ನಿಂಗ್ಸ್​ನ ಪ್ರಥಮಾರ್ಧದ ಅಂತ್ಯಕ್ಕೆ ಕೋಲ್ಕತ್ತಾ ತಂಡ 1 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಿದೆ. ತಂಡದ ಪರ ನಿತೀಶ್ ರಾಣಾ ಅರ್ಧ ಶತಕ ಬಾರಿಸಿದ್ದಾರೆ. ತ್ರಿಪಾಠಿ ಕ್ರೀಸ್​ನಲ್ಲಿದ್ದಾರೆ.

  • 11 Apr 2021 20:19 PM (IST)

    ಸಿಕ್ಸರ್ ಮೂಲಕ 50 ಪೂರೈಸಿದ ರಾಣಾ

    img

    ಕೋಲ್ಕತ್ತಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟ ನಿತೀಶ್ ರಾಣಾ ಸಿಕ್ಸರ್ ಸಿಡಿಸುವ ಮೂಲಕ 50 ರನ್ ಪೂರೈಸಿದ್ದಾರೆ. ಅವರು 37 ಬಾಲ್​ಗೆ 8 ಬೌಂಡರಿ, 1 ಸಿಕ್ಸರ್ ಸಹಿತ 50 ರನ್ ಕಲೆಹಾಕಿದ್ದಾರೆ.

  • 11 Apr 2021 20:13 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 69/1 (9 ಓವರ್)

    ಭರ್ಜರಿ ಆರಂಭ ಪಡೆದಿದ್ದ ಕೋಲ್ಕತ್ತಾ ತಂಡದ ರನ್ ಗಳಿಕೆಯ ಗತಿ, ಪವರ್ ಪ್ಲೇ ಬಳಿಕ ನಿಧಾನವಾಗಿದೆ. ಸ್ಪಿನ್ನರ್​​ಗಳ ಎಸೆತವನ್ನು ಜಾಗರೂಕವಾಗಿ ಎದುರಿಸುತ್ತಿದ್ದಾರೆ. 9 ಓವರ್ ಅಂತ್ಯಕ್ಕೆ ಕೆಕೆಆರ್ ಸ್ಕೋರ್ 69 ರನ್​ಗೆ 1 ವಿಕೆಟ್ ಆಗಿದೆ. ರಾಣಾ ಹಾಗೂ ತ್ರಿಪಾಠಿ ಕ್ರೀಸ್​ನಲ್ಲಿ ಇದ್ದಾರೆ.

  • 11 Apr 2021 20:07 PM (IST)

    ತ್ರಿಪಾಠಿ ಸಿಕ್ಸರ್

    img

    ಗಿಲ್ ಬಳಿಕ ಕ್ರೀಸ್​ಗೆ ಇಳಿದಿರುವ ತ್ರಿಪಾಠಿ ಮೊಹಮದ್ ನಬಿ ಬಾಲ್​ನ್ನು ಸಿಕ್ಸರ್​ಗೆ ಅಟ್ಟಿದ್ದಾರೆ. 8 ಓವರ್​ಗಳ ಅಂತ್ಯಕ್ಕೆ ಕೆಕೆಆರ್ ತಂಡದ ಮೊತ್ತ 1 ವಿಕೆಟ್ ನಷ್ಟಕ್ಕೆ 64 ಆಗಿದೆ.

  • 11 Apr 2021 20:05 PM (IST)

    ಶುಬ್​ಮನ್​ ಔಟ್

    img

    ಉತ್ತಮ ಆರಂಭಿಕ ಜೊತೆಯಾಟ ನೀಡುತ್ತಿದ್ದ ಶುಬ್​ಮನ್ ಗಿಲ್- ನಿತೀಶ್ ರಾಣಾ ಜೋಡಿ ಬೇರ್ಪಟ್ಟಿದೆ. ಗಿಲ್ ರಶೀದ್ ಖಾನ್​ಗೆ ಬೌಲ್ಡ್ ಆಗಿದ್ದಾರೆ. 13 ಬಾಲ್​ಗೆ 1 ಬೌಂಡರಿ, 1 ಸಿಕ್ಸರ್ ಸಹಿತ 15 ರನ್ ದಾಖಲಿಸಿ ನಿರ್ಗಮಿಸಿದ್ದಾರೆ.

  • 11 Apr 2021 20:00 PM (IST)

    ಅರ್ಧಶತಕ ಪೂರೈಸಿದ ಕೆಕೆಆರ್

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ಓವರ್​ಗಳ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 50 ರನ್ ದಾಖಲಿಸಿದ್ದಾರೆ. ಗಿಲ್ ಹಾಗೂ ರಾಣಾ ಕ್ರೀಸ್​ನಲ್ಲಿದ್ದಾರೆ. ಪವರ್​ಪ್ಲೇ ಅಂತ್ಯಕ್ಕೆ 50 ರನ್ ಕಲೆಹಾಕಿರುವ ಕೆಕೆಆರ್ ಮುಂದಿನ ಆಟ ಹೇಗೆ ಸಾಗುತ್ತದೆ ಎಂದು ಕಾದುನೋಡಬೇಕಿದೆ.

  • 11 Apr 2021 19:56 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 45/0 (5 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್​ಮನ್​ಗಳು ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ತಂಡದ ಮೊತ್ತ 5 ಓವರ್​ಗೆ ವಿಕೆಟ್ ನಷ್ವಿಲ್ಲದೆ 45 ರನ್ ಆಗಿದೆ. ರಾಣಾ 21 ಬಾಲ್​ಗೆ 31 ರನ್ ಕಲೆಹಾಕಿದ್ದರೆ, ಗಿಲ್ 9 ಬಾಲ್​ಗೆ 14 ರನ್ ಕೂಡಿಸಿದ್ದಾರೆ. ನೈಟ್ ರೈಡರ್ಸ್ ಓಟಕ್ಕೆ ಕಡಿವಾಣ ಹಾಕಲು ಸನ್​ರೈಸರ್ಸ್​ ಬೌಲಿಂಗ್​ಗೆ ವಿಕೆಟ್ ಬೀಳಬೇಕಿದೆ.

  • 11 Apr 2021 19:50 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 33/0 (4 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 4 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 33 ರನ್ ಪೇರಿಸಿದೆ. ತಂಡದ ಪರ ರಾಣಾ ಹಾಗೂ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 11 Apr 2021 19:47 PM (IST)

    ರಾಣಾ ಅಬ್ಬರದ ಆಟ; ಹ್ಯಾಟ್ರಿಕ್ ಫೋರ್!

    img

    ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಿತೀಶ್ ರಾಣಾ ಫೋರ್ ಮೇಲೆ ಫೋರ್ ಬಾರಿಸಿದ್ದಾರೆ. ಸಂದೀಪ್ ಶರ್ಮಾ ಬೌಲ್ ಮಾಡುತ್ತಿರುವ ನಾಲ್ಕನೇ ಓವರ್​ನಲ್ಲಿ ನಿತೀಶ್ ರಾಣಾ ಹ್ಯಾಟ್ರಿಕ್ ಫೋರ್ ದಾಖಲಿಸಿದ್ದಾರೆ. 8.73 ರನ್​ ರೇಟ್​ನಲ್ಲಿ ಹೈದರಾಬಾದ್ ದಾಂಡಿಗರು ಬ್ಯಾಟ್ ಬೀಸುತ್ತಿದ್ದಾರೆ. ರಾಣಾ 17 ಬಾಲ್​ಗೆ 26 ರನ್ ಕಲೆಹಾಕಿದ್ದಾರೆ.

  • 11 Apr 2021 19:41 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 13/0 (2 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2 ಓವರ್​ಗಳ ಅಂತ್ಯಕ್ಕೆ 13 ರನ್ ದಾಖಲಿಸಿದೆ. ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಆರಂಭ ಪಡೆದುಕೊಂಡಿದೆ. ಕೋಲ್ಕತ್ತಾ ಆಟಗಾರರು ಬೌಂಡರಿ ಸಿಡಿಸುತ್ತಿದ್ದಾರೆ. ಭುವನೇಶ್ವರ್ ಹಾಗೂ ಸಂದೀಪ್ ಸನ್​ರೈಸರ್ಸ್ ಪರ ಬಾಲ್ ಮಾಡಿದ್ದಾರೆ. ವಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಹೈದರಾಬಾದ್ ತಂಡವಿದೆ.

  • 11 Apr 2021 19:39 PM (IST)

    ರಾಣಾ ಮತ್ತೊಂದು ಫೋರ್

    img

    ಮೊದಲ ಓವರ್​ನಲ್ಲಿ ಭುವನೇಶ್ವರ್ ಕುಮಾರ್​ ಬಾಲ್​ಗೆ ಫೋರ್ ದಾಖಲಿಸಿದ್ದ ರಾಣಾ, ಸಂದೀಪ್ ಶರ್ಮಾ ಬೌಲ್ ಮಾಡುತ್ತಿರುವ ಎರಡನೇ ಓವರ್​ನಲ್ಲಿ ಕೂಡ ಮತ್ತೆ 2 ಬೌಂಡರಿ ಬಾರಿಸಿದ್ದಾರೆ. ಈ ಮೂಲಕ 9 ಬಾಲ್​ಗೆ 12 ರನ್ ಪೇರಿಸಿ ಆಡುತ್ತಿದ್ದಾರೆ.

  • 11 Apr 2021 19:36 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 4/0 (1 ಓವರ್)

    ಮೊದಲ ಓವರ್​ನಲ್ಲಿ ಕೋಲ್ಕತ್ತಾ ತಂಡ ವಿಕೆ್ಟ್ ನಷ್ಟವಿಲ್ಲದೆ 4 ರನ್ ಕಲೆಹಾಕಿದೆ. ನೈಟ್ ರೈಡರ್ಸ್ ಪರ ಗಿಲ್ ಮತ್ತು ರಾಣಾ ಬ್ಯಾಟ್ ಮಾಡುತ್ತಿದ್ದಾರೆ. ಮೊದಲ ಓವರ್​ನ್ನು ಭುವನೇಶ್ವರ್ ಕುಮಾರ್ ಮಾಡಿದ್ದು, 1 ಬೌಂಡರಿ ಮೂಲಕ 4 ರನ್ ಬಿಟ್ಟುಕೊಟ್ಟಿದ್ದಾರೆ.

  • 11 Apr 2021 19:32 PM (IST)

    ಮೊದಲ ಬಾಲ್​ಗೆ ಬೌಂಡರಿ

    img

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ದಾಂಡಿಗ ನಿತೀಶ್ ರಾಣಾ ಮೊದಲ ಬಾಲ್​ನ್ನು ಬೌಂಡರಿಗೆ ಅಟ್ಟಿದ್ದಾರೆ. ಭುವನೇಶ್ವರ್ ಕುಮಾರ್ ಮೊದಲ ಓವರ್​ನ, ಮೊದಲ ಎಸೆತಕ್ಕೆ ನಾಲ್ಕು ರನ್ ಕಲೆಹಾಕಿದ್ದಾರೆ. ನಾನ್​ಸ್ಟೃಕ್​ನಲ್ಲಿ ಶುಬ್​ಮನ್ ಗಿಲ್ ಬ್ಯಾಟಿಂಗ್​ಗೆ ಇಳಿದಿದ್ದಾರೆ.

  • 11 Apr 2021 19:20 PM (IST)

    ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

    ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮನೀಶ್ ಪಾಂಡೆ, ವಿಜಯ್ ಶಂಕರ್, ಅಬ್ದುಲ್ ಸಮದ್, ಮೊಹಮ್ಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಸಂದೀಪ್ ಶರ್ಮಾ

  • 11 Apr 2021 19:19 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ಶುಬ್​ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೊನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಶಕೀಬ್ ಅಲ್ ಹಸನ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ

  • 11 Apr 2021 19:08 PM (IST)

    ಟಾಸ್ ಗೆದ್ದ ಸನ್​ರೈಸರ್ಸ್ ಬೌಲಿಂಗ್ ಆಯ್ಕೆ

    ಸನ್​ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಮಾಡಲಿದೆ.

  • 11 Apr 2021 19:03 PM (IST)

    ಕಳೆದ ಬಾರಿ SRH vs KKR ಪಂದ್ಯಾಟ ಸೂಪರ್ ಓವರ್​ವರೆಗೂ ಹೋಗಿತ್ತು!

    ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯಾಟ ಸೂಪರ್ ಓವರ್​ವರೆಗೂ ಹೋಗಿತ್ತು. ರೋಚಕ ಪಂದ್ಯದಲ್ಲಿ ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿತ್ತು. ಆ ಪಂದ್ಯದ ನೆನಪನ್ನು ಐಪಿಎಲ್ ಟ್ವಿಟರ್ ನಮಗೆ ನೀಡಿದೆ.

  • 11 Apr 2021 18:58 PM (IST)

    ನಟರಾಜನ್ ಬೌಲಿಂಗ್ ಕಮಾಲ್ ಮಾಡುವ ನಿರೀಕ್ಷೆ

    ಭಾರತದ ಯುವ ಬೌಲರ್ ಟಿ. ನಟರಾಜನ್ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದರು. ನಟರಾಜನ್ ಬೌಲಿಂಗ್ ಭಾರತ ತಂಡದ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಇದೀಗ ಸನ್​ರೈಸರ್ಸ್ ತಂಡದಲ್ಲಿ ನಟರಾಜನ್ ಬೌಲಿಂಗ್ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ.

  • 11 Apr 2021 18:54 PM (IST)

    ಪಂದ್ಯಕ್ಕೂ ಮೊದಲು ಉಭಯ ತಂಡಗಳ ತಯಾರಿ

    ಕೋಲ್ಕತ್ತಾ ಪ್ರಿ ಮ್ಯಾಚ್ ಡ್ರಿಲ್ ಫೊಟೊಗಳನ್ನು ಹಂಚಿಕೊಂಡ ಕುಲ್ದೀಪ್ ಯಾದವ್

    ಮೊದಲ ಪಂದ್ಯದ ಗೆಲುವಿಗೆ ಸನ್​ರೈಸರ್ಸ್ ತಂಡದ ತಯಾರಿ