Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ

New Zealand-Australia: ಉಭಯ ದೇಶಗಳ ಮತ್ತೊಂದು ಚರ್ಚಾ ವಿಷಯವೆಂದರೆ ಪಾವ್ಲೋವಾ ಕೇಕ್. ಇದನ್ನು ಕಂಡು ಹಿಡಿದದ್ದು ನಾವು ಎಂದು ನ್ಯೂಜಿಲೆಂಡ್​ನವರು ವಾದಿಸಿದರೆ, ಅದು ನಮ್ಮ ತಿಂಡಿ ಎಂದು ಆಸ್ಟ್ರೇಲಿಯನ್ನರ ವಾದ.

Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್...ಆದರೆ
New Zealand-Australia
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 13, 2021 | 5:11 PM

ಟಿ20 ವಿಶ್ವಕಪ್​ ಫೈನಲ್​ನಲ್ಲಿ (T20 World Cup 2021 Final) ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ (New Zealand vs Australia Final) ಮುಖಾಮುಖಿಯಾಗುತ್ತಿದೆ. ಇದರೊಂದಿಗೆ ಅಂತಿಮ ಹಣಾಹಣಿ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ. ಏಕೆಂದರೆ ಟ್ಯಾಸ್ಮನ್ ಸಮುದ್ರದಿಂದ ಬೇರ್ಪಟ್ಟ ಎರಡು ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ಸಾಮಾನ್ಯವಾಗಿ ದಾಯಾದಿಗಳ ಕದನ ಎಂದೇ ಬಿಂಬಿಸಲಾಗುತ್ತದೆ. ಇದಕ್ಕೆ ಒಂದು ಕಾರಣ ಉಭಯ ದೇಶಗಳ ಜನರ ನಡುವಣ ಪ್ರತಿಷ್ಠೆ. ಈ ಹಿಂದಿನಿಂದಲೂ ಎರಡೂ ದೇಶಗಳ ಜನರಲ್ಲಿ ಅವರಿಗಿಂತ ನಾವು ಮೇಲು ಎಂಬ ಭಾವನೆ ಇದೆ. ಇಲ್ಲಿ ನ್ಯೂಜಿಲೆಂಡ್ ಜನರನ್ನು ಆಸ್ಟ್ರೇಲಿಯನ್ನರು ಹಿಂದುಳಿದವರು (ಲೇಟ್ ಅಥವಾ ಸ್ಪೀಡ್ ಇಲ್ಲದವರು) ಎಂದು ಹೀಯಾಳಿಸಿದರೆ, ನ್ಯೂಜಿಲೆಂಡ್​ನವರು ಆಸ್ಟ್ರೇಲಿಯಾದವರನ್ನು ಅಸಭ್ಯರೆಂದು ಪರಿಗಣಿಸುತ್ತಾರೆ. ಇದು ಉಭಯ ದೇಶಗಳ ಜನರ ಯಾವುದೇ ಚರ್ಚೆಯಲ್ಲೂ ತಮಾಷೆಯಾಗಿ ಬಂದು ಹೋಗುವ ಸಾಮಾನ್ಯ ವಿಷಯ. ಅದು ಕ್ರೀಡಾ ಕ್ಷೇತ್ರಕ್ಕೂ ವ್ಯಾಪಿಸಿ ಶತಮಾನಗಳೇ ಕಳೆದಿವೆ.

ಹೀಗಾಗಿ ಎರಡೂ ದೇಶಗಳ ನಡುವಣ ಪೈಪೋಟಿಯನ್ನು ಜನರು ಪ್ರತಿಷ್ಠೆಯಾಗಿ ಸ್ವೀಕರಿಸುತ್ತಾರೆ. ಅದು ಕ್ರಿಕೆಟ್ ಆಗಿರಲಿ, ನೆಟ್​ಬಾಲ್ ಆಗಿರಲಿ. ಇಲ್ಲಾ ರಗ್ಬಿ ಯೂನಿಯನ್, ರಗ್ಬಿ ಲೀಗ್, ಫುಟ್‌ಬಾಲ್ ಮತ್ತು ಇನ್ನಿತರ ಕ್ರೀಡೆಗಳಲ್ಲೂ ಕಾಣಬಹುದು. ಇದೇ ಕಾರಣಗಳಿಂದ ಪ್ರತಿ ಬಾರಿ ಮುಖಾಮುಖಿಯಾದಾಗ ನಾವಾ-ನೀವಾ ಎಂಬ ಚರ್ಚೆಗಳು ಉಭಯ ದೇಶಗಳಲ್ಲೂ ಕಂಡು ಬರುತ್ತವೆ. ಇದೀಗ ಟಿ20 ವಿಶ್ವಕಪ್​ ಫೈನಲ್​ ಮೂಲಕ ಮತ್ತೆ ಕೇಳಿ ಬರಲಾರಂಭಿಸಿದೆ.

ಆದರೆ ಕಳೆದ 3 ದಶಕಗಳಿಂದ ಕ್ರಿಕೆಟ್​ ಕ್ಷೇತ್ರದಲ್ಲಿನ ಪೈಪೋಟಿ ಉಭಯ ದೇಶಗಳ ಪ್ರಮುಖ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ ಎಂಬುದು ಇಲ್ಲಿ ವಿಶೇಷ. ಏಕೆಂದರೆ 1981 ರ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ಅನ್ನು ಅಂಡರ್​ ಆರ್ಮ್​ ಬೌಲಿಂಗ್ ಮೂಲಕ ಸೋಲಿಸಿತ್ತು. ಬೆನ್ಸನ್-ಹೆಡ್ಜಸ್ ಏಕದಿನ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್​ಗೆ ಗೆಲ್ಲಲು ಕೊನೆಯ ಎಸೆತದಲ್ಲಿ 6 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ ಆಸ್ಟ್ರೇಲಿಯಾ ನಾಯಕ ಗ್ರೇಗ್ ಚಾಪೆಲ್ ತನ್ನ ಸಹೋದರ ಟ್ರೆವೊರ್ ಚಾಪೆಲ್​ಗೆ ಅಂಡರ್​​ ಆರ್ಮ್ (ಚೆಂಡನ್ನು ನೆಲದಲ್ಲೇ ಉರುಳಿಸುವುದು)​ ಬೌಲಿಂಗ್ ಮಾಡುವಂತೆ ತಿಳಿಸಿದ್ದರು. ಅತ್ತ ಕ್ರೀಸ್​ನಲ್ಲಿದ್ದ ಬ್ಯಾಟರ್ ಏನಾಗ್ತಿದೆ ಅನ್ನುವಷ್ಟರಲ್ಲಿ ಪಂದ್ಯ ಮುಗಿದಿತ್ತು. ಅಂದರೆ ಅಂದು ಕ್ರಿಕೆಟ್​​ನಲ್ಲಿ ಅಂಡರ್​ ಆರ್ಮ್​ ಬೌಲಿಂಗ್​​ಗೆ ನಿಷೇಧವಿರಲಿಲ್ಲ. ಆ ಕುತಂತ್ರವನ್ನೇ ಬಳಸಿಕೊಂಡು ಗ್ರೇಗ್ ಚಾಪೆಲ್ 2-1 ಅಂತರದಿಂದ​ ಸರಣಿಯನ್ನು ಗೆದ್ದುಕೊಂಡಿದ್ದರು. ಇದು ನ್ಯೂಜಿಲೆಂಡ್ ಕ್ರಿಕೆಟ್​ ಲೋಕದ ಅನ್ಯಾಯದ ಪಂದ್ಯ ಎಂದು ಬಿಂಬಿತವಾಗಿದೆ. ಹೀಗಾಗಿ ಆ ಬಳಿಕ ಉಭಯ ತಂಡಗಳು ಮುಖಾಮುಖಿಯಾದರೆ ನ್ಯೂಜಿಲೆಂಡ್ ಕ್ರಿಕೆಟ್​ ಪ್ರೇಮಿಗಳಿಗೆ ಅದು ಅತ್ಯಂತ ಪ್ರತಿಷ್ಠಿತ ಮ್ಯಾಚ್ ಆಗಿರುತ್ತದೆ. ಅತ್ತ ನಾವು ನ್ಯೂಜಿಲೆಂಡ್​ಗಿಂತ ಎಲ್ಲದರಲ್ಲೂ ನಾವು ಮೇಲು ಎಂದು ಭಾವಿಸುವ ಆಸ್ಟ್ರೇಲಿಯನ್ನರಿಗೆ ಅವರ ವಿರುದ್ದ ಸೋತರೆ ಅದಕ್ಕಿಂತ ಹೀನಾಯ ಸೋಲು ಮತ್ತೊಂದಿಲ್ಲ ಎಂಬ ಭಾವನೆ ಇದೆ.

ಇನ್ನು ಮತ್ತೊಂದು ಪೈಪೋಟಿ ನೆಟ್‌ಬಾಲ್‌ನಲ್ಲಿದೆ. ಆಸ್ಟ್ರೇಲಿಯನ್ ಡೈಮಂಡ್ಸ್ ಮತ್ತು ನ್ಯೂಜಿಲೆಂಡ್ ಬ್ಲ್ಯಾಕ್ ಫರ್ನ್ಸ್ ತಂಡಗಳು ನೆಟ್‌ಬಾಲ್ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿದ ಸುದೀರ್ಘ ಇತಿಹಾಸವನ್ನು ಹೊಂದಿವೆ. ಎರಡು ರಾಷ್ಟ್ರಗಳ ನಡುವಿನ ಅನೇಕ ಆಟಗಳು “ರಕ್ತಸಿಕ್ತ” ವಾಗಿ ಕೊನೆಗೊಂಡ ಉದಾಹರಣೆ ಕೂಡ ಇದೆ. 2003 ರಲ್ಲಿ, ಆಸ್ಟ್ರೇಲಿಯನ್ ತರಬೇತುದಾರರು ನ್ಯೂಜಿಲೆಂಡ್​ ತಂಡವನ್ನು “ಸ್ಕ್ರಬ್ಬರ್​ಗಳ ಗುಂಪು” ಎಂದು ಕರೆದಿದ್ದರು. ಇದಾದ ಬಳಿಕ ನೆಟ್​ಬಾಲ್ ಆಟ ಕೂಡ ಮತ್ತೊಂದು ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿತು. ಹಾಗೆಯೇ ರಗ್ಬಿ ಕ್ರೀಡೆಯಲ್ಲೂ ಉಭಯ ತಂಡಗಳು ಬಲಿಷ್ಠವಾಗಿದೆ. ಇದು ಕೂಡ ದಾಯಾದಿ ದೇಶಗಳ ನಡುವಣ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಇಲ್ಲಿ ಉಭಯ ದೇಶಗಳ ಮತ್ತೊಂದು ಚರ್ಚಾ ವಿಷಯವೆಂದರೆ ಪಾವ್ಲೋವಾ ಕೇಕ್. ಇದನ್ನು ಕಂಡು ಹಿಡಿದದ್ದು ನಾವು ಎಂದು ನ್ಯೂಜಿಲೆಂಡ್​ನವರು ವಾದಿಸಿದರೆ, ಅದು ನಮ್ಮ ತಿಂಡಿ ಎಂದು ಆಸ್ಟ್ರೇಲಿಯನ್ನರ ವಾದ. ಹೀಗಾಗಿ ಸೋಲು-ಗೆಲುವುಗಳ ನಡುವೆ ಪಾವ್ಲೋವಾವನ್ನು ಕಂಡು ಹಿಡಿದದ್ದು ಯಾರು ಎಂಬ ತರ್ಕಗಳು ಕೂಡ ಕೇಳಿ ಬರುತ್ತವೆ.

ಇನ್ನು ರಾಜತಾಂತ್ರಿಕ ದೃಷ್ಟಿಯಿಂದಲೂ ಎರಡೂ ದೇಶಗಳು ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ. ನ್ಯೂಜಿಲೆಂಡ್​ ರಾಜಕೀಯವು ಇಂಗ್ಲೆಂಡ್​ ಅನ್ನು ಹೆಚ್ಚು ಅವಲಂಭಿತವಾಗಿದ್ದರೆ, ಆಸ್ಟ್ರೇಲಿಯಾ ಯುಎಸ್​ಎ ಜೊತೆ ಉತ್ತಮ ಸಂಬಂಧ ಹೊಂದಿದೆ. ಇದು ಕೂಡ ಎರಡೂ ದೇಶಗಳ ರಾಜಕೀಯ ವಿಷಯದಲ್ಲೂ ಆಗಾಗ್ಗೆ ಚರ್ಚೆಗೆ ಕಾರಣವಾಗುತ್ತದೆ. ಇಷ್ಟೆಲ್ಲಾ ಭಿನ್ನ ನಿಲುವು ಹಾಗೂ ಪ್ರತಿಷ್ಠೆಗಳನ್ನು ಹೊಂದಿದ್ದರೂ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಿಜವಾಗಿಯೂ ವೈರತ್ವ ಇದೆಯೇ? ಎಂದು ಕೇಳಿದ್ರೆ ಖಂಡಿತ ಇಲ್ಲ ಎಂದೇ ಹೇಳಬಹುದು.

ಏಕೆಂದರೆ ಎರಡೂ ದೇಶಗಳ ಜನರು ಎಲ್ಲದರಲ್ಲೂ ಸ್ಪರ್ಧೆಗಳಿದರೂ ನ್ಯೂಜಿಲೆಂಡ್-ಆಸ್ಟ್ರೇಲಿಯಾ ನಡುವೆ ಉತ್ತಮ ಸಂಬಂಧವಿದೆ. ಇದನ್ನು ಟ್ರಾನ್ಸ್-ಟ್ಯಾಸ್ಮನ್ ರಿಲೇಷನ್ಸ್ ಎಂದು ಕರೆಯಲಾಗುತ್ತದೆ. ಮಿಲಿಟರಿಗೆ ವಿಷಯದಲ್ಲೂ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಿಕಟ ಇತಿಹಾಸವನ್ನು ಹೊಂದಿವೆ. ಜೊತೆಗೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ವಲಸೆ ನಿಯಮ, ಪ್ರಯಾಣ ಮತ್ತು ಉಭಯ ದೇಶಗಳ ನಾಗರಿಕರಿಗೆ ಕೆಲಸದ ವಿಷಯದಲ್ಲಿ ಅನುಕೂಲವಾಗುವಂತಹ ಕಾನೂನುಗಳನ್ನು ರಚಿಸಲಾಗಿದೆ. ಅಂದರೆ ಇಲ್ಲಿ ಉಭಯ ದೇಶಗಳ ಪ್ರತಿಷ್ಠೆಯು ಮೂಲಭೂತವಾಗಿ ಪರಸ್ಪರ ಕೀಟಲೆ ಮಾಡಲು ಅಥವಾ ಸಾಮಾನ್ಯವಾಗಿ ಸ್ಟೀರಿಯೊಟೈಪ್ ಮಾದರಿಯಲ್ಲಿದೆ. ಇದರ ಹೊರತಾಗಿ ಎರಡೂ ದೇಶಗಳು ವೈರತ್ವವನ್ನು ಬೆಳೆಸಿಕೊಂಡಿಲ್ಲ. ಹೀಗಾಗಿಯೇ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ ವೈರಿಗಳಲ್ಲ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ

(The New Zealand-Australia Rivalry: What You Need to Know)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ