ಕ್ರಿಕೆಟ್ನಲ್ಲಿ ಏನು ಬೇಕಾದರೂ ನಡೆಯಬಹುದು. ಒಂದು ಬಾಲ್ ಇಡೀ ಪಂದ್ಯದ ಗತಿಯನ್ನೇ ಬದಲಿಸಬಲ್ಲದು ಅಥವಾ ಒಂದು ಅತ್ಯುತ್ತಮ ಫೀಲ್ಡಿಂಗ್ ಪಂದ್ಯದ ಫಲಿತಾಂಶವನ್ನು ಬದಲಿಸಿಬಹುದು. ಹಾಗೆಯೇ ಒಂದು ಕೆಟ್ಟ ಯೋಚನೆ ಕೂಡ ಪಂದ್ಯದ ಸೋಲಿಗೆ ಕಾರಣವಾಗಬಹುದು. ಇದಕ್ಕೆ ಸಾಕ್ಷಿಯೇ ಈ ಪಂದ್ಯ. ಸ್ಥಳೀಯ ಟೂರ್ನಿಯ ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲುವಿಗೆ 5 ರನ್ಗಳ ಅಗತ್ಯವಿತ್ತು. ಬೌಂಡರಿ ಬಾರಿಸದೇ ಗೆಲುವು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿತ್ತು. ಹೀಗಾಗಿಯೇ ನಾಯಕ ಎಲ್ಲಾ ಫೀಲ್ಡರ್ಗಳನ್ನು ಬೌಂಡರಿಯಲ್ಲಿ ಸೆಟ್ ಮಾಡಿದ್ದರು.
ಉಭಯ ತಂಡಗಳ ನಡುವಿನ ತೀವ್ರ ಹೋರಾಟವು ಕೊನೆಯ ಎಸೆತಕ್ಕೆ ಬಂದು ನಿಂತಿತು. ಪಂದ್ಯ ವೀಕ್ಷಿಸುತ್ತಿದ್ದವರಲ್ಲಿ ರೋಚಕತೆ ಉತ್ತುಂಗಕ್ಕೇರಿತು. ಕೊನೆಯ ಎಸೆತಯಲ್ಲಿ 5 ರನ್ಗಳ ಅವಶ್ಯಕತೆ. ಎಲ್ಲರೂ ಸಿಕ್ಸರ್ ನಿರೀಕ್ಷೆಯಲ್ಲಿದ್ದರು. ಆದರೆ ಆದರೆ ಸಿಕ್ಸ್ ಅಥವಾ ಫೋರ್ ಬಾರಿಸಲಾಗಲಿಲ್ಲ. ಇದಾಗ್ಯೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬ್ಯಾಟ್ಸ್ಮನ್ಗಳು ಓಟದ ಮೂಲಕ ಗೆಲುವು ಪಡೆದರು.
ಬೌಲರ್ನ ಕೊನೆಯ ಎಸೆತದಲ್ಲಿ ಬ್ಯಾಟ್ಸ್ಮನ್ ಹೊಡೆದ ಶಾಟ್ ನೇರವಾಗಿ ಫೀಲ್ಡರ್ ಕೈಗೆ ಸೇರಿತ್ತು. ಅಷ್ಟರಲ್ಲಾಗಲೇ ಬ್ಯಾಟ್ಸ್ಮನ್ಗಳು 2 ರನ್ ಪೂರ್ಣಗೊಳಿಸಿದ್ದರು. ಆದರೆ ಬ್ಯಾಟ್ಸ್ಮನ್ಗಳು ಹೆಚ್ಚು ರನ್ ಕದಿಯುವುದನ್ನು ತಡೆಯಲು, ಫೀಲ್ಡರ್ ದೊಡ್ಡ ತಪ್ಪು ಮಾಡಿದರು. ಚೆಂಡು ಹಿಡಿದು ನೇರವಾಗಿ ವಿಕೆಟ್ ಹತ್ತಿರ ಓಡಿ ಬಂದರು. ಈ ವೇಳೆ ಬ್ಯಾಟ್ಸ್ ಮನ್ ರನ್ ಔಟ್ ಮಾಡಲು ಚೆಂಡು ಎಸೆದರೂ ಚೆಂಡು ಸ್ಟಂಪ್ ಗೆ ತಾಗಲಿಲ್ಲ. ಓವರ್ ಥ್ರೋ ಸಿಕ್ಕ ಅವಕಾಶವನ್ನು ಬಳಸಿಕೊಂಡ ಬ್ಯಾಟ್ಸ್ಮನ್ಗಳು ಉಳಿದ ರನ್ ಪೂರೈಸುವ ಮೂಲಕ 5 ರನ್ ಕಲೆಹಾಕಿತು. ಈ ಮೂಲಕ ಕೊನೆಯ ಎಸೆತದಲ್ಲಿ 5 ರನ್ ಓಡುವ ಮೂಲಕ ಗೆಲುವು ದಾಖಲಿಸಿತು. ಇದೀಗ ಈ ಪಂದ್ಯದ ವಿಡಿಯೋ ವೈರಲ್ ಆಗಿದೆ.
How to score 5 runs off the last ball to win without hitting a boundary… @ThatsSoVillage pic.twitter.com/0nIyl5xbxi
— The ACC (@TheACCnz) February 1, 2022
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(VIDEO: Batsman score 5 runs off the last ball to win without hitting a boundary)