Virat Kohli: ಏಕದಿನ ಸರಣಿಗೆ ಸಿದ್ಧ, ರೋಹಿತ್ ಶರ್ಮಾ ಮತ್ತು ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ: ವಿರಾಟ್ ಕೊಹ್ಲಿ

Virat Kohli: ಏಕದಿನ ಸರಣಿಗೆ ಸಿದ್ಧ, ರೋಹಿತ್ ಶರ್ಮಾ ಮತ್ತು ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

Indian Cricket Team: ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ತಾವು ಸಿದ್ಧರಿರುವುದಾಗಿ ಭಾರತ ತಂಡದ ಮಾಜಿ ಕಪ್ತಾನ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಅಲ್ಲದೇ ರೋಹಿತ್ ಶರ್ಮಾ ಮತ್ತು ತಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

TV9kannada Web Team

| Edited By: shivaprasad.hs

Dec 15, 2021 | 2:06 PM

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಏಕದಿನ ಸರಣಿ ಆಡಲು ತಾನು ಸಿದ್ಧನಿದ್ದೇನೆ ಎಂದು ಘೋಷಿಸಿದ್ದಾರೆ. ಅಲ್ಲದೇ ವಿಶ್ರಾಂತಿ ಪಡೆಯಲು ಮನವಿ ಮಾಡಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಬಿಸಿಸಿಐನಿಂದ ವಿಶ್ರಾಂತಿ ನೀಡಲು ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ. ಅಲ್ಲದೇ ಏಕದಿನ ಸರಣಿಗೆ ಹೊಸ ನಾಯಕನನ್ನು ಘೋಷಿಸುವ ಮುನ್ನ ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ರೋಹಿತ್ ಶರ್ಮಾ ಹಾಗೂ ತಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಏಕದಿನ ತಂಡದಿಂದ ನಾಯಕ ಸ್ಥಾನ ಬದಲಿಸುವ ನಿರ್ಧಾರವನ್ನು ಟೆಸ್ಟ್ ಸರಣಿಗೆ ಆಯ್ಕೆ ಸಮಿತಿ ಸಭೆ ಸೇರುವ ಒಂದೂವರೆ ಗಂಟೆ ಮುನ್ನ ತಿಳಿಸಲಾಯಿತು ಎಂದು ಹೇಳಿದ್ದಾರೆ. ಅಲ್ಲದೇ ತಂಡಕ್ಕೆ ಎಂದೆಂದಿಗೂ ತಾವು ಲಭ್ಯರಿರುವುದಾಗಿ ಅವರು ಘೋಷಿಸಿದ್ದು, ಮುಂದೆಯೂ ಇರುತ್ತೇನೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿರಾಟ್ ಹಲವು ವಿಚಾರಗಳನ್ನು ಹೊರಹಾಕಿದ್ದಾರೆ. ಅವರು ಟಿ20 ನಾಯಕತ್ವ ತ್ಯಜಿಸುವ ಮುನ್ನ ಮಂಡಳಿಗೆ ಏಕದಿನ ಹಾಗೂ ಟೆಸ್ಟ್​ಗೆ ನಾಯಕನಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದ್ದರಂತೆ. ಆದರೆ ಏಕದಿನ ನಾಯಕತ್ವ ತ್ಯಜಿಸುವ ಮುನ್ನ ಚರ್ಚೆಗಳು ನಡೆದಿರಲಿಲ್ಲ. ನನಗೆ ವಿಶ್ರಾಂತಿ ಬೇಕಿತ್ತು. ಒಂದೂವರೆ ಗಂಟೆಯ ಮೊದಲು ಆಯ್ಕೆ ಮಂಡಳಿಯ ಐವರು ಸದಸ್ಯರು ನಾಯಕ ಸ್ಥಾನ ಬದಲಿಸಿದ್ದರ ಕುರಿತು ತಿಳಿಸಿದ್ದರು. ಅದು ತೊಂದರೆಯಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:

ICC Women’s World Cup 2022: ವಿಶ್ವಕಪ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ ಭಾರತ- ಪಾಕಿಸ್ತಾನ; ಪಂದ್ಯಾವಳಿಯ ವೇಳಾಪಟ್ಟಿ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada