Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ತಂಡ ಚೆನ್ನೈನಲ್ಲಿ ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಎಸ್​ಆರ್​ಎಚ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ.

  • TV9 Web Team
  • Published On - 21:34 PM, 14 Apr 2021
Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​
ಚೇರ್​ಗಳನ್ನು ತಳ್ಳಿ ಹಾಕಿದ ಕೊಹ್ಲಿ

ವಿರಾಟ್​ ಕೊಹ್ಲಿ ತಮ್ಮ ಯಶಸ್ವಿ ನಾಯಕತ್ವ ಹಾಗೂ ಅದ್ಭುತ ಬ್ಯಾಟಿಂಗ್​ ಮೂಲಕ ಹೆಸರಾದವರು. ಅಷ್ಟೇ ಅಲ್ಲ, ಆಗಾಗ ತಮ್ಮ ಸಿಟ್ಟಿನ ಮೂಲಕ ಕೊಹ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತುಂಬಾನೇ ಕಾಮ್​ ಆಗಿದ್ದ ಅವರು, ಇಂದು ಮತ್ತೆ ತಮ್ಮ ರೌದ್ರರೂಪ ತೋರಿದ್ದಾರೆ. ಬಹುಬೇಗ ಔಟ್​ ಆಗಿದ್ದಕ್ಕೆ ಪೆವಿಲಿಯನ್​ ಚೇರ್​ಗಳನ್ನು ಬ್ಯಾಟ್​ ಮೂಲಕ ಚೆಲ್ಲಾಪಿಲ್ಲಿ ಮಾಡಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ತಂಡ ಚೆನ್ನೈನಲ್ಲಿ ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಎಸ್​ಆರ್​ಎಚ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 19 ರನ್​ ಆದಾಗ ದೇವದತ್​ ಪಡಿಕ್ಕಲ್​ ಕ್ಯಾಚ್​ಕೊಟ್ಟು ಪೆವಿಲಿಯನ್​ ಸೇರಿದರು. ಶಹಬಾಜ್​ ಅಹ್ಮದ್​ ಕೂಡ ಹೆಚ್ಚು ಹೊತ್ತು ಕ್ರೀಜ್​ನಲ್ಲಿ ನಿಲ್ಲಲಿಲ್ಲ.

ಎರಡು ವಿಕೆಟ್ ಪತನದ​ ನಂತರ ಆರ್​ಸಿಬಿ ಉತ್ತಮ ಲಯಕಂಡುಕೊಳ್ಳುತ್ತಿತ್ತು. ಆದರೆ, ಹೋಲ್ಡರ್​ ಬೌಲಿಂಗ್​ ವೇಳೆ ಕೊಹ್ಲಿ ಸಿಕ್ಸ್​ ಹೊಡೆಯುವ ಪ್ರಯತ್ನ ಮಾಡಿದರು. ಎಡ್ಜ್​ ಆಗಿ ಅದು ಕ್ಯಾಚ್​ ಆಗಿತ್ತು. ಈ ಮೂಲಕ ಕೊಹ್ಲಿ ಕೇವಲ 33 ರನ್​ಗಳಿಗೆ ನಿರ್ಗಮಿಸಿದರು.

ಇಂದು ಕೊಹ್ಲಿ ಅದ್ಭುತವಾಗಿ ಆಡುವ ಸೂಚನೆ ನೀಡಿದ್ದರು. ನಾಲ್ಕು ಬೌಂಡರಿಗಳು ಕೂಡ ಅವರ ಬ್ಯಾಟ್​ನಿಂದ ಸಿಡಿದಿದ್ದವು. ಆದರೆ, 33 ರನ್​ಗೆ ಔಟ್​ ಆಗಿದ್ದು, ಅವರಿಗೇ ಖುಷಿ ನೀಡಲಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಕೊಹ್ಲಿ ತುಂಬಾನೇ ಸಿಟ್ಟಾಗಿದ್ದರು. ಗ್ರೌಂಡ್​ನಿಂದ ನಿರ್ಗಮಿಸುವವರೆಗೆ ತುಂಬಾನೇ ಕಾಮ್​ ಆಗಿದ್ದಂತೆ ತೋರ್ಪಡಿಸಿದ ಅವರು, ಪೆವಿಲಿಯನ್​ ಸೇರುತ್ತಿದ್ದಂತೆ ಅಲ್ಲಿದ್ದ ಕೂರ್ಚಿಗಳನ್ನು ಬ್ಯಾಟ್​ನಿಂದ ಚೆಲ್ಲಾಪಿಲ್ಲಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇನ್ನು, ಕೊಹ್ಲಿ ಔಟ್​ ಆದ ವಿಚಾರ ಕೂಡ ತುಂಬಾ ಚರ್ಚೆ ಆಗುತ್ತಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 29 ಬಾಲ್​ಗಳಲ್ಲಿ 33 ರನ್​ ಗಳಿಸಿದ್ದರು. ಅವರ ಬ್ಯಾಟ್​ನಿಂದ ನಾಲ್ಕು ಬೌಂಡರಿ ಕೂಡ ಬಂದಿತ್ತು. ಅವರು ಔಟ್​ ಆಗಿದ್ದು 13ನೇ ಓವರ್​ನ ಮೊದಲ ಬಾಲ್​ನಲ್ಲಿ. ಇಂದು ಕೂಡ ಸೇಮ್​ ಪ್ಯಾಟರ್ನ್​ ರಿಪೀಟ್​ ಆಗಿದೆ.

ಇದನ್ನೂ ಓದಿ: Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್​ ಕೊಹ್ಲಿ ಕಣ್ಣು; ಟಾಸ್​ ವೇಳೆ ಬಹಿರಂಗವಾಯ್ತು ವಿಚಾರ