ರೈಲ್ವೇಸ್ ವಿರುದ್ಧ ಕಣಕ್ಕಿಳಿಯದ ವಿರಾಟ್ ಕೊಹ್ಲಿ
Virat Kohli: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಗೂ ಮುನ್ನ ದೇಶೀಯ ಅಂಗಳದಲ್ಲಿ ಮತ್ತೊಂದು ಪಂದ್ಯವಾಡಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದರು. ಆದರೆ ಈ ನಿರ್ಧಾರದಿಂದ ಕಿಂಗ್ ಕೊಹ್ಲಿ ಹಿಂದೆ ಸರಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಏಕದಿನ ಸರಣಿ.

ವಿಜಯ ಹಝಾರೆ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಕಣಕ್ಕಿಳಿದಿಲ್ಲ. ಇದಕ್ಕೂ ಮುನ್ನ ಜನವರಿ 6 ರಂದು ನಡೆಯಲಿರುವ ರೈಲ್ವೇಸ್ ವಿರುದ್ಧದ ಮ್ಯಾಚ್ನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿತ್ತು. ಆದರೆ ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ರೈಲ್ವೇಸ್ ವಿರುದ್ಧದ ಮ್ಯಾಚ್ನಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಎರಡು ಪಂದ್ಯಗಳನ್ನಾಡಿದ್ದಾರೆ. ಬೆಂಗಳೂರಿನ ಸಿಇಒ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಆಂಧ್ರ ಪ್ರದೇಶ್ ವಿರುದ್ಧ 131 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಮ್ಯಾಚ್ನಲ್ಲಿ ಗುಜರಾತ್ ವಿರುದ್ಧ 77 ರನ್ ಕಲೆಹಾಕಿದ್ದರು.
ಈ ಪಂದ್ಯದ ಬಳಿಕ ಮುಂಬೈಗೆ ತೆರಳಿದ್ದ ವಿರಾಟ್ ಕೊಹ್ಲಿ ಜನವರಿ 6 ರೊಳಗೆ ಮತ್ತೆ ದೆಹಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ದೆಹಲಿ ತಂಡದ ಕೋಚ್ ಸರಣ್‌ದೀಪ್ ಸಿಂಗ್ ತಿಳಿಸಿದ್ದರು. ಆದರೆ ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿಲ್ಲ.
ಇದಕ್ಕೆ ಮುಖ್ಯ ಕಾರಣ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿ ಎನ್ನಲಾಗಿದೆ. ಅಂದರೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಜನವರಿ 7 ರಂದು ಬರೋಡಾದಲ್ಲಿ ಭಾರತೀಯ ಆಟಗಾರರು ಕೂಡಿಕೊಳ್ಳಲಿದ್ದಾರೆ. ಹೀಗಾಗಿಯೇ ರೈಲ್ವೇಸ್ ವಿರುದ್ಧದ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
ರಿಷಭ್ ಪಂತ್ ನಾಯಕ:
ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ರಿಷಭ್ ಪಂತ್ ರೈಲ್ವೇಸ್ ವಿರುದ್ಧದ ಪಂದ್ಯದಲ್ಲೂ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಅಂದರೆ ಈ ಮ್ಯಾಚ್ ಮುಗಿದ ಬಳಿಕವಷ್ಟೇ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅದರಂತೆ ದೆಹಲಿ ಹಾಗೂ ರೈಲ್ವೇಸ್ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
ರೈಲ್ವೇಸ್ (ಪ್ಲೇಯಿಂಗ್ XI): ಅಂಶ್ ಯಾದವ್, ಪ್ರಥಮ್ ಸಿಂಗ್, ಸಾಹಬ್ ಯುವರಾಜ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ರಾಜ್ ಚೌಧರಿ, ಅಶುತೋಷ್ ಶರ್ಮಾ, ಕುಶ್ ಮರಾಠೆ, ಜುಬೇರ್ ಅಲಿ ಖಾನ್, ಕರ್ಣ್ ಶರ್ಮಾ (ನಾಯಕ), ಕುನಾಲ್ ಯಾದವ್, ರಾಹುಲ್ ಶರ್ಮಾ.
ಇದನ್ನೂ ಓದಿ: ದಿಢೀರ್ ನಿವೃತ್ತಿ ಘೋಷಿಸಿದ ನ್ಯೂಝಿಲೆಂಡ್ ಆಟಗಾರ
ದೆಹಲಿ (ಪ್ಲೇಯಿಂಗ್ XI): ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ನಿತೀಶ್ ರಾಣಾ, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ತೇಜಸ್ವಿ ದಹಿಯಾ, ಹರ್ಷ್ ತ್ಯಾಗಿ, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಇಶಾಂತ್ ಶರ್ಮಾ, ನವದೀಪ್ ಸೈನಿ.
Published On - 9:54 am, Tue, 6 January 26
