RR vs PBKS, IPL 2021: ಬೌಂಡರಿ ಬಳಿ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್; ವಿಡಿಯೋ ನೋಡಿ

ಚೇತನ್ ಸಕಾರಿಯಾ ಎರಡನೇ ಎಸೆತವನ್ನು ಸಿಕ್ಸರ್​ಗೆ ಎತ್ತಿದ ರಾಹುಲ್ ಸ್ವಲ್ಪದರಲ್ಲೇ ಸಿಕ್ಸ್ ತಪ್ಪಿಸಿಕೊಂಡರು. ಬೌಂಡರಿ ಬಳಿ ಇದ್ದ ರಾಹುಲ್ ತೆವಾಟಿಯಾ ಸಿಕ್ಸ್ ತಡೆದು, ಚೆಂಡನ್ನು ಮೈದಾನದ ಒಳಗೆ ತಳ್ಳಿ, ಬಳಿಕ ಮತ್ತೆ ತಾವೂ ಒಳ ಬಂದು ಕ್ಯಾಚ್ ಹಿಡಿದುಕೊಂಡರು.

  • TV9 Web Team
  • Published On - 22:55 PM, 12 Apr 2021
RR vs PBKS, IPL 2021: ಬೌಂಡರಿ ಬಳಿ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್; ವಿಡಿಯೋ ನೋಡಿ
ರಾಹುಲ್ ತೆವಾಟಿಯಾ ಕ್ಯಾಚ್ ಹಿಡಿದ ಪರಿ

ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಪಂಜಾಬ್ ಪರ ಭರ್ಜರಿ ಪ್ರದರ್ಶನ ತೋರುತ್ತಿದ್ದ ನಾಯಕ ಕೆ.ಎಲ್. ರಾಹುಲ್ ವಿಕೆಟ್ ಕಿತ್ತ ಈ ಕ್ಯಾಚ್ಅ​ನ್ನು ಈ ಸೀಸನ್​ನ, ಇಲ್ಲಿಯವರೆಗಿನ ಸೂಪರ್ ಕ್ಯಾಚ್ ಎಂದು ಹೇಳಲಾಗುತ್ತಿದೆ.

ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್, 50 ಬಾಲ್​ಗೆ 91 ರನ್ ಗಳಿಸಿ ಶತಕದ ಅಂಚಿನಲ್ಲಿದ್ದರು. 5 ಸಿಕ್ಸರ್, 7 ಬೌಂಡರಿ ಬಾರಿಸಿ ರಾಯಲ್ಸ್ ಬೌಲರ್ಸ್​ಗೆ ತಲೆನೋವಾಗಿದ್ದರು. ಯಾವ ಬೌಲರ್ ಎಂದು ನೋಡದೆ, ಎಲ್ಲಾ ಎಸೆತಗಳಿಗೂ ಸಿಕ್ಸರ್, ಬೌಂಡರಿ ಸುರಿಮಳೆಗೈಯುತ್ತಿದ್ದರು. ಇನ್ನೇನು ಶತಕ ತಲುಪುತ್ತಾರೆ ರಾಹುಲ್ ಎಂದೇ ಎಲ್ಲರೂ ಊಹಿಸಿದ್ದರು. ಆದರೆ, ಅಂತಿಮ ಓವರ್​ನಲ್ಲಿ ರಾಹುಲ್ ಸಿಕ್ಸರ್​ಗೆ ಎತ್ತಿದ ಚೆಂಡು ಅಚ್ಚರಿಯ ರೂಪದಲ್ಲಿ ರಾಹುಲ್ ತೆವಾಟಿಯಾ ಕೈ ಸೇರಿತು.

ಚೇತನ್ ಸಕಾರಿಯಾ ಎರಡನೇ ಎಸೆತವನ್ನು ಸಿಕ್ಸರ್​ಗೆ ಎತ್ತಿದ ರಾಹುಲ್ ಸ್ವಲ್ಪದರಲ್ಲೇ ಸಿಕ್ಸ್ ತಪ್ಪಿಸಿಕೊಂಡರು. ಬೌಂಡರಿ ಬಳಿ ಇದ್ದ ರಾಹುಲ್ ತೆವಾಟಿಯಾ ಸಿಕ್ಸ್ ತಡೆದು, ಚೆಂಡನ್ನು ಮೈದಾನದ ಒಳಗೆ ತಳ್ಳಿ, ಬಳಿಕ ಮತ್ತೆ ತಾವೂ ಒಳ ಬಂದು ಕ್ಯಾಚ್ ಹಿಡಿದುಕೊಂಡರು. ಬಾಲ್ ತೆವಾಟಿಯಾ ಕೈಯಲ್ಲಿ ಸೇಫ್ ಆಗಿ ಸೇರಿಕೊಂಡಿತು. ಈ ಮೂಲಕ ರಾಹುಲ್ ಶತಕ ಸಿಡಿಸಬಹುದಾಗಿದ್ದ ಸಖತ್ ಆಟ ಕೊನೆಗೊಂಡಿತು.

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಸ್ಫೋಟಕ ಆಟವಾಡಿ 221 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 222 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಹಾಗೂ ವೇಗದ ಆಟವನ್ನು ಆಡಿದ್ದಾರೆ. 50 ಬಾಲ್​ಗೆ 91 ರನ್ ಕಲೆಹಾಕಿದ್ದಾರೆ. ಹೂಡಾ ಸಿಕ್ಸರ್​ಗಳ ಸುರಿಮಳೆಗೈದು 64 ರನ್ ನೀಡಿದರೆ, ಗೈಲ್ ಕೂಡ 40 ರನ್​ಗಳ ಉತ್ತಮ ಮೊತ್ತ ಕೊಟ್ಟಿದ್ದಾರೆ. ರಾಜಸ್ಥಾನ್ ಪರ ಯಾವ ಬೌಲರ್​ಗಳೂ ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ರಾಹುಲ್ ಸಿಕ್ಸರ್​ನ್ನು ಸ್ವಲ್ಪದರಲ್ಲೇ ತಪ್ಪಿಸಿ ತೆವಾಟಿಯಾ ಹಿಡಿದ ಕ್ಯಾಚ್ ರಾಜಸ್ಥಾನ್ ಪರ ಕಂಡುಬಂದ ಅದ್ಭುತ ಪ್ರದರ್ಶನವಾಗಿತ್ತಷ್ಠೆ.

ಇದನ್ನೂ ಓದಿ: RR vs PBKS Live Score, IPL 2021: ವಾಂಖೆಡೆಯಲ್ಲಿ ಪಂಜಾಬ್ ಕಿಂಗ್ಸ್ ದರ್ಬಾರ್; ರಾಜಸ್ಥಾನ್ ರಾಯಲ್ಸ್​ ಪರ ನಾಯಕ ಸಂಜು ಸ್ಯಾಮ್ಸನ್ ಹೋರಾಟ

ಇದನ್ನೂ ಓದಿ: IPL 2021: ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ತಾನು ಕಿಂಗ್ ಅಂತ ಮತ್ತೊಮ್ಮೆ ನಿರೂಪಿಸಿದ ಪಂಜಾಬ್​ ಕಿಂಗ್ಸ್ ನಾಯಕ ರಾಹುಲ್