ಹಿರಿಯ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಪೋಸ್ಟ್ನಿಂದ ವಿವಾದದ ಕಿಡಿ ಹೊತ್ತಿಕೊಂಡಿದೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಳಿಕ ಅವರು ಕ್ಷಮೆಯಾಚಿಸಿದ್ದಾರೆ. ಕುಖ್ಯಾತ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ ಅವರ ಫೋಟೋವನ್ನು ಹರ್ಭಜನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ‘ಹುತಾತ್ಮರಿಗೆ ನಮಸ್ಕಾರ’ ಎಂಬ ಶೀರ್ಷಿಕೆಯನ್ನೂ ನೀಡಿದ್ದರು. ಈ ಪೋಸ್ಟ್ ಹರ್ಭಜನ್ ಅವರನ್ನು ಟೀಕೆಗೆ ಗುರಿಯಾಗಿಸಿತು. ನಂತರ ಜೂನ್ 7 ರ ಸೋಮವಾರ ಹರ್ಭಜನ್ ಕ್ಷಮೆಯಾಚಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಬ್ಲೂ ಸ್ಟಾರ್ ಜೂನ್ 1 ಮತ್ತು ಜೂನ್ 8, 1984 ರ ನಡುವೆ, ಅಮೃತಸರದಲ್ಲಿರುವ ಪವಿತ್ರ ಹರ್ಮಿಂದರ್ ಸಿಂಗ್ ಗುರುದ್ವಾರ, ಸುವರ್ಣ ದೇವಾಲಯವನ್ನು ಖಲಿಸ್ತಾನಿ ಭಯೋತ್ಪಾದಕರು ವಶಪಡಿಸಿಕೊಂಡಿದ್ದರು. ಈ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತೀಯ ಸೇನೆಯು ‘ಆಪರೇಷನ್ ಬ್ಲೂ ಸ್ಟಾರ್’ ಹೆಸರಿನಲ್ಲಿ ಆಪರೇಷನ್ ಪ್ರಾರಂಭಿಸಿತ್ತು. ಭಿಂದ್ರವಾಲಾ ಮತ್ತು ಅವರ ಸಹಚರರು ಭಾರತೀಯ ಸೇನೆಯಿಂದ ಕೊಲ್ಲಲ್ಪಟ್ಟರು. 37 ವರ್ಷಗಳ ನಂತರ ಇದನ್ನು ಪೋಸ್ಟ್ ಮಾಡಿದ ಹರ್ಭಜನ್ ಭಿಂದರ್ವಾಲಾ ಮತ್ತು ಅವರ ಸಹ ಭಯೋತ್ಪಾದಕರನ್ನು ಹುತಾತ್ಮರೆಂದು ಕರೆದು ಗೌರವ ಸಲ್ಲಿಸಿದ್ದರು.
ವಿವಾದಾತ್ಮಕ ಪೋಸ್ಟ್ ಜೂನ್ 1 ರಿಂದ ಜೂನ್ 6, 1984 ರವರೆಗೆ ಶ್ರೀ ಹರ್ಮಿಂದರ್ ಸಾಹಿಬ್ ಗುರುದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೃತಪಟ್ಟವರಿಗೆ ಹೃತ್ಪೂರ್ವಕ ಗೌರವ ಎಂದು ಹರ್ಭಜನ್ ಸಿಂಗ್ ಅವರು ಪಂಜಾಬಿ ಭಾಷೆಯಲ್ಲಿ ಬರೆದು ಭಿಂದ್ರವಾಲಾ ಮತ್ತು ಇತರ ಭಯೋತ್ಪಾದಕರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಶೀಘ್ರದಲ್ಲೇ ಈ ಪೋಸ್ಟ್ ವೈರಲ್ ಆಗಿ ಹರ್ಭಜನ್ ಅವರನ್ನು ಅನೇಕರು ಟೀಕಿಸಿದರು.
ಹರ್ಭಜನ್ ವಿವಾದಾತ್ಮಕ ಪೋಸ್ಟ್
ಹರ್ಭಜನ್ ಕ್ಷಮೆಯಾಚಿಸಬೇಕಾಯಿತು ವಿವಾದ ಉಲ್ಬಣಗೊಂಡ ನಂತರ, ಹರ್ಭಜನ್ ಕ್ಷಮೆಯಾಚಿಸಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ನಿನ್ನೆ ನನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ ಪೋಸ್ಟ್ಗಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಆ ಫೋಟೋವನ್ನು ವಾಟ್ಸಾಪ್ನಲ್ಲಿ ನೋಡಿದ್ದೇ. ಆದರೆ ನಾನು ಅದನ್ನು ನೋಡದೆ ಪೋಸ್ಟ್ ಮಾಡಿದ್ದೇನೆ ಎಂದಿದ್ದಾರೆ. ಜೊತೆಗೆ ಆ ಘಟನೆಗೆ ಸಂಬಂಧಪಟ್ಟ ವ್ಯಕ್ತಿ ಮತ್ತು ಅವರ ಅಭಿಪ್ರಾಯಗಳನ್ನು ಬೆಂಬಲಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
My heartfelt apology to my people..🙏🙏 pic.twitter.com/S44cszY7lh
— Harbhajan Turbanator (@harbhajan_singh) June 7, 2021