India Open 2022: ಫೈನಲ್ ತಲುಪಿದ ಲಕ್ಷ್ಯ ಸೇನ್: ಪಿವಿ ಸಿಂಧು ಔಟ್

Lakshya Sen: ಮೂರನೇ ಶ್ರೇಯಾಂಕದ ಲಕ್ಷ್ಯ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೀನ್ ಯೂ ಅವರನ್ನು ಎದುರಿಸಲಿದ್ದಾರೆ.

India Open 2022: ಫೈನಲ್ ತಲುಪಿದ ಲಕ್ಷ್ಯ ಸೇನ್: ಪಿವಿ ಸಿಂಧು ಔಟ್
Lakshya Sen

ವಿಶ್ವ ಚಾಂಪಿಯನ್‌ಶಿಪ್ (BWF World Championship)ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಶನಿವಾರ ನಡೆದ ಯೋನೆಕ್ಸ್-ಸನ್‌ರೈಸ್ ಇಂಡಿಯಾ ಓಪನ್‌ನ (India Open 2022) ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವ ಶ್ರೇಯಾಂಕದ 60ನೇ ಶ್ರೇಯಾಂಕದ ಯೋಂಗ್‌ರನ್ನು 19-21 21-16 21-12 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಮೊದಲ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಮತ್ತೊಂದೆಡೆ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು ಸೋಲನ್ನು ಎದುರಿಸಬೇಕಾಯಿತು. ಆರನೇ ಶ್ರೇಯಾಂಕದ ಥಾಯ್ಲೆಂಡ್‌ನ ಸುಪಾನಿದಾ ಕಟೆಹಾಂಗ್ ಸಿಂಧು ಅವರನ್ನು ಸೆಮಿಫೈನಲ್‌ನಲ್ಲಿ 21-14, 13-21, 21-10 ಸೆಟ್​ಗಳಿಂದ ಸೋಲಿಸಿದರು.

ಈ ಗೆಲುವಿನ ಬಳಿಕ ಮಾತನಾಡಿದ ಲಕ್ಷ್ಯ ಸೇನ್ ‘ನಿಮ್ಮ ದೇಶದಲ್ಲಿ ನಿಮ್ಮ ಮೊದಲ ಸೂಪರ್ 500 ಫೈನಲ್‌ನಲ್ಲಿ ಆಡುವುದು ಉತ್ತಮ ಭಾವನೆಯಾಗಿದೆ. ಆರಂಭಿಕ ಪಂದ್ಯವು ತುಂಬಾ ಹತ್ತಿರವಾಗಿತ್ತು, ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ಸಂಯಮ ಕಾಪಾಡಿಕೊಂಡು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ. ಮೂರನೇ ಶ್ರೇಯಾಂಕದ ಲಕ್ಷ್ಯ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೀನ್ ಯೂ ಅವರನ್ನು ಎದುರಿಸಲಿದ್ದಾರೆ. ಕೆನಡಾದ ಬ್ರಿಯಾನ್ ಯಾಂಗ್ ತಲೆನೋವಿನ ಕಾರಣ ಸೆಮಿ-ಫೈನಲ್‌ನಿಂದ ಹಿಂದೆ ಸರಿದಿದ್ದರಿಂದ ಲೋಹ್ ಅವರಿಗೆ ವಾಕ್‌ಓವರ್ ನೀಡಲಾಯಿತು.

ಫೈನಲ್ ಕಬ್ಬಿಣದ ಕಡಲೆ: ಇಬ್ಬರು ಆಟಗಾರರ ನಡುವಿನ ನಾಲ್ಕು ಪಂದ್ಯಗಳಲ್ಲಿ ಲಕ್ಷ್ಯ ಎರಡು ಪಂದ್ಯಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ಡಚ್ ಓಪನ್‌ನ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಲೋಹ್ ಮೇಲುಗೈ ಸಾಧಿಸಿದ್ದರು. ನಾವಿಬ್ಬರೂ ಉತ್ತಮವಾಗಿ ಆಡುತ್ತಿದ್ದೇವೆ, ನಾಳೆ (ಭಾನುವಾರ) ಉತ್ತಮ ಪಂದ್ಯವಾಗಲಿದೆ. ನಾನು ಅವರ ವಿರುದ್ಧ ಆಡಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ’ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.

ಮೊದಲ ಗೇಮ್ ಗೆದ್ದುಕೊಂಡ ಯೋಂಗ್ ಎರಡನೇ ಸೆಟ್ ನಲ್ಲಿ 4-1ರ ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದರು. ಲಕ್ಷ್ಯ ಪುನರಾಗಮನ ಮಾಡಿದರು, ಇದು ಯೋಂಗ್ ಮೇಲೆ ಒತ್ತಡ ಹೇರಿತು. 13-13ರಲ್ಲಿ ಸಮಬಲ ಸಾಧಿಸಿದ ಬಳಿಕ 19-16ರಲ್ಲಿ ಮುನ್ನಡೆ ಸಾಧಿಸಿ ನಂತರ ಗೇಮ್ ಗೆದ್ದುಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ವೇಗವನ್ನು ಮುಂದುವರಿಸಿದ ಲಕ್ಷ್ಯ ಆರಂಭದಿಂದ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡರು. ಲಕ್ಷ್ಯ ಡಚ್ ಓಪನ್ ಮತ್ತು ಸಾರ್ಲೋರ್ಲಕ್ಸ್ ಓಪನ್ ಸೇರಿದಂತೆ ಎರಡು ಸೂಪರ್ 100 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ, ಯುವ ಆಟಗಾರ ಹೈಲೋದಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೊದಲು ಅವರು ವಿಶ್ವ ಟೂರ್ ಫೈನಲ್‌ನಲ್ಲಿ ನಾಕೌಟ್ ಹಂತವನ್ನು ತಲುಪಿದರು.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Lakshya Sen Enters India Open Final With Thrilling Win In Semi Final PV Sindhu bows out)

Click on your DTH Provider to Add TV9 Kannada