PKL 2021: ಪ್ರೊ ಕಬಡ್ಡಿ ಲೀಗ್ ಡೇಟ್ ಫಿಕ್ಸ್: ಕಂಠೀವರ ಕ್ರೀಡಾಂಗಣದಲ್ಲಿ ಕಬಡ್ಡಿ ಕಲರವ

PKL 2021 Starting date: ಈ ಲೀಗ್‌ನಲ್ಲಿ ಭಾಗವಹಿಸುವ ಎಲ್ಲಾ ಆಟಗಾರರು ಕೊರೋನಾ ಲಸಿಕೆಯನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ ಎಲ್ಲಾ ಆಟಗಾರರಿಗೆ ಪಂದ್ಯ ಆರಂಭಕ್ಕೆ ಕನಿಷ್ಠ 14 ದಿನಗಳ ಮೊದಲು ಬೆಂಗಳೂರಿನಲ್ಲಿ ಕ್ವಾರಂಟೈನ್ ಇರಲಿದೆ.

PKL 2021: ಪ್ರೊ ಕಬಡ್ಡಿ ಲೀಗ್ ಡೇಟ್ ಫಿಕ್ಸ್: ಕಂಠೀವರ ಕ್ರೀಡಾಂಗಣದಲ್ಲಿ ಕಬಡ್ಡಿ ಕಲರವ
pro kabaddi league

ದೇಶದ ಎರಡನೇ ಅತ್ಯಂತ ಜನಪ್ರಿಯ ಕ್ರೀಡಾ ಲೀಗ್ ಪ್ರೊ ಕಬಡ್ಡಿ ಲೀಗ್ (PKL 2021) ಸೀಸನ್​ 8 ಡಿಸೆಂಬರ್ 22 ರಿಂದ ಶುರುವಾಗಲಿದೆ. ಕೊರೋನಾಂತಕದ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ಪಂದ್ಯಗಳನ್ನು ಬೆಂಗಳೂರಿನ ಕಂಠೀವರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಡಿ.22 ರಿಂದ ಕಂಠೀವರ ಕ್ರೀಡಾಂಗಣದಲ್ಲಿ ಕಬಡ್ಡಿ ಕಲರವ ಶುರುವಾಗುವುದು ಬಹುತೇಕ ಖಚಿತವಾಗಿದೆ. ಕೊರೋನಾ ಕಾರಣದಿಂದ ಪ್ರೋ ಕಬಡ್ಡಿ ಲೀಗ್​ ಅನ್ನು ಕಳೆದ ಬಾರಿ ಆಯೋಜಿಸಿರಲಿಲ್ಲ. ಈ ಬಾರಿ ಜುಲೈನಲ್ಲಿ​ ನಡೆಯಬೇಕಿದ್ದ ಟೂರ್ನಿ ಇದೀಗ ಡಿ.22 ರಿಂದ ಶುರು ಮಾಡಲು ನಿರ್ಧರಿಸಲಾಗಿದೆ. ಇದಾಗ್ಯೂ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಕೊರೋನಾ ಸಾಂಕ್ರಾಮಿಕದ ನಂತರ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಇದೇ ಮೊದಲು. ಸ್ಪೋರ್ಟ್ಸ್ ಸ್ಟಾರ್ ಸುದ್ದಿಯ ಪ್ರಕಾರ, ಈ ಲೀಗ್‌ನಲ್ಲಿ ಭಾಗವಹಿಸುವ ಎಲ್ಲಾ ಆಟಗಾರರು ಕೊರೋನಾ ಲಸಿಕೆಯನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ ಎಲ್ಲಾ ಆಟಗಾರರಿಗೆ ಪಂದ್ಯ ಆರಂಭಕ್ಕೆ ಕನಿಷ್ಠ 14 ದಿನಗಳ ಮೊದಲು ಬೆಂಗಳೂರಿನಲ್ಲಿ ಕ್ವಾರಂಟೈನ್ ಇರಲಿದೆ.

ಪ್ರೀ ಸೀಸನ್ ಕ್ಯಾಂಪ್​ಗೆ ಸಿದ್ದತೆ:
ಜೈಪುರ ಪಿಂಕ್ ಪ್ಯಾಂಥರ್ಸ್ ಅಕ್ಟೋಬರ್ 16 ರಿಂದ ಡೆಹ್ರಾಡೂನ್ ನಲ್ಲಿ ತನ್ನ ಪೂರ್ವ-ಸೀಸನ್ ಶಿಬಿರವನ್ನು ಆರಂಭಿಸಲಿದೆ.
ತೆಲುಗು ಟೈಟಾನ್ಸ್ ತನ್ನ ಪೂರ್ವ ಸೀಸನ್ ಶಿಬಿರವನ್ನು ಅಕ್ಟೋಬರ್ 7 ರಿಂದ ಹೈದರಾಬಾದ್ ನಲ್ಲಿ ಶುರು ಮಾಡಲಿದ್ದು, ಹಾಗೆಯೇ ಬೆಂಗಳೂರು ಬುಲ್ಸ್ ಕೂಡ ತಮ್ಮ ಪೂರ್ವ ಸೀಸನ್ ಶಿಬಿರವನ್ನು ಅಕ್ಟೋಬರ್ 7 ರಿಂದ ಬೆಂಗಳೂರಿನಲ್ಲಿ ಆರಂಭಿಸಲಿದೆ.

ಹೊಸ ಆಟಗಾರರ ದಂಡು:
ಆಗಸ್ಟ್ 29-31 ರಂದು ಮುಂಬೈನಲ್ಲಿ ಪ್ರೊಕಬಡ್ಡಿ ಲೀಗ್ ಆಟಗಾರರ ಹರಾಜು ನಡೆಸಲಾಗಿತ್ತು. ಯುಪಿ ಯೋಧ ಫ್ರಾಂಚೈಸಿ ಪ್ರದೀಪ್ ನರ್ವಾಲ್ ಅನ್ನು 1.65 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಈ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ಪ್ರದೀಪ್ ನರ್ವಾಲ್ ಪಾಲಾಯಿತು. ಇನ್ನು ಲೀಗ್​ನ ಸ್ಟಾರ್ ಆಟಗಾರರಾದ ಇರಾನ್‌ನ ಫಜಲ್ ಅತ್ರಾಚಲಿಯನ್ನು ಯು ಮುಂಬಾ ಉಳಿಸಿಕೊಂಡರೆ, ಮೊಹಮ್ಮದ್ ಇಸ್ಮಾಯಿಲ್ ಅವರನ್ನು ಬೆಂಗಾಲ್ ವಾರಿಯರ್ಸ್ ಮತ್ತು ಹದಿ ತಾಜಿಕ್ ಅವರನ್ನು ಪುನೇರಿ ಪಲ್ಟಾನ್ ಉಳಿಸಿಕೊಂಡಿತು.

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

(PKL 2021: Pro Kabaddi League begins on December 22)

Read Full Article

Click on your DTH Provider to Add TV9 Kannada